ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೊಡಕ ಹರವ ಮಾಡಿಕೊಳ್ಳಿರೊ ಹುಟ್ಟಿ ಬಾಹ್ವ ಮನುಜರೆಲ್ಲ ಧ್ರುವ ನಾನು ನನ್ನದೆಂದು ಜ್ಞಾನಹೀನನಾಗಿ ಬಾಳುತಿಹ್ಯ ಗಾಣ-ದೆತ್ತಿನಂತೆ ಮುಂದೆಗಾಣದಿಹ್ಯ ಭ್ರಮೆಯದ 1 ಜೀವ ಶಿವ ದಾವದೆಂದು ಠಾವಿಕಿಲ್ಲ ದಿಹ್ಯದಾಗಿ ನಾವು ನೀವು ಎಂದು ಹ್ಯಾವ ಹೊಮ್ಮಿ ಹೊಡೆದಾಡುವ 2 ಸಂಚಿತ ಪ್ರಾರಬ್ಧ ಕ್ರಿಯಮಾಣದೊಳು ಸಿಲ್ಕಿ ಪ್ರ ಪಂಚ ಪರಮಾರ್ಥ ದಾವದೆಂದು ಮುಂಚೆ ತಿಳಿಯದ 3 ತನವು ತಾನೆಂದು ಘನವು ಮರೆದು ದಣಿದು ತಿರುಗುತಿಹ್ಯ ಮನದ ಮಾಯದೊಳು ಸಿಲ್ಕಿ ತನಗೆ ತಾಂ ತಿಳಿಯದೆ 4 ತೊಡಕು ಹರವ ಮಾಡಿಗೊಳ್ಳಿ ಪಡದು ಙÁ್ಞನಭಕ್ತಿಯಿಂದ ಮೂಢ ಮಹಿಪತಿಯನ್ನೊಡೆಯ ಬಿಡದೆ ನೆಲೆಗೊಳ್ಳುವ್ಹಾಂಗೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭ್ರಮಮೂಲಮಿದಂ ಜಗತು ನೇಮದ ನಿಜಮಾತು ಧ್ರುವ ಭ್ರಮೆಯಿಂದಲಿ ಭ್ರಮಣ್ಹತ್ಯದ ನೋಡಿ ಭ್ರಮೆ ನೆಲೆಗೊಳಿಸದು ಮನ ಸ್ಥಿರಮಾಡಿ ಭ್ರಮಿಸೇದನೇಕ ಜನ್ಮ ತಿರುಗಾಡಿ ಭ್ರಮಿಯಲಿ ಬಾರದು ನಿಜ ಕೈಗೊಡಿ 1 ಭ್ರಮೆಯಕ ಭ್ರಮೆ ಹತ್ತೇದ ಬಲು ಬಹಳ ಭ್ರಮಯು ಮಾಡೇದ ಸಂಸಾರದ ಮೇಳ ಭ್ರಮೆ ಇಲ್ಲದ್ಯಾತಕೆ ಏನ್ಹೇಳ ನೇಮದಿ ಹೊಳೆವುದು ವಸ್ತು ಅಚಲ 2 ನಾ ನೀನೆಂಬುದು ಭ್ರಮೆಯದ ಮೂಲ ಅನುದಿನ ಬೆನ್ನಟ್ಟಿದೆ ಬಹುಕಾಲ ಖೂನಕೆ ಬಾರದೆ ಆತ್ಮಾನುಕೂಲ ತಾನೆ ಮುಸುಕ್ಯದೆ ಭ್ರಮಿ ಸಕಲ 3 ನಿಶ್ಚಲವಾಗದೆ ಜ್ಞಾನದ ಉಗಮವು ಹೆಚ್ಚು ಕುಂದಿಗೆ ಹೊಡೆದಾಡುದು ಭ್ರಮೆಯು ಹುಚ್ಚುಮಾಡೇದ ವಿಷಯ ಭ್ರಮೆಯು ಎಚ್ಚರಿಸುವ ಸದ್ಗುರು ದಯಕ್ರಮವು 4 ನಾ ಮವನಿಷ್ಟರೊಳಾಡಿದ ಮಾತು ನಿಮಿಷಾರ್ಧದಲಿ ಭ್ರಮೆಯಗಳೆಯಿತು ಸ್ವಾಮಿಸದ್ಗುರು ಕೃಪೆಯಲಿ ತಿಳದೀತು ನೇಮಿಸಿ ತಿಳಿಕೊ ಮಹಿಪತಿನಿವಾಂತು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು