ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಶ್ರೀ ವೇದವ್ಯಾಸರನ್ನು ನೆನೆದು) ವ್ಯಾಸರೂಪಿಯಾದ ಶ್ರೀನಿವಾಸನ ನಂಬಿ ಪ. ದ್ವಾಪರಾಂತದಿ ದೈತ್ಯಜನರ ಪ್ರತಾಪದಿಂದಲಿ ಜ್ಞಾನತತ್ವ ಪ್ರ- ದೀಪ ಮಾಲಿನ್ಯವನು ಪೊಂದಿರಲು ಕ್ಷೀರಾಬ್ಧಿ ತಡಿಯಲಿ ಅಜ ಬಂದು ಸ್ತುತಿಸಲು ತಾಪ ಶಮಿಸುವೆನೆಂಬಭಯವಿತ್ತಾಪರಾಶಗೊಲಿದು ಕರುಣಿಸಿ ಕೃಪಾಪಯೋನಿಧಿರೂಪ ತೋರಿದ 1 ಮಹಾಭಾರತಾಮೃತ ಸಹಿತ ವಿರಚಿಸಿ ತೋರ್ಪಂತೆ ಬಹು ಗಂ- ಭೀರ ಸಾರವನಿಟ್ಟು ಪರಿಜನವಾ ತತ್ವೋಕ್ತಿಯಿಂದ ಪ- ರೋರು ಭಾವವ ತಿಳಿಸಿ ದೈತ್ಯರ ಗಾರಗೊಳಿಸುತ ಅನವರತ ಸಂ- ಸಾರ ಚಕ್ರದಿ ತಿರುಗುವವರ ವಿಚಾರ ಭ್ರಮೆಗೊಂಬಂತೆ ತಿಳಿಸಿದ 2 ಶುದ್ಧ ಸಾತ್ವಿಕರಾದ ಜೀವರನುದ್ಧರಿಸಬೇಕೆಂದು ಶ್ರುತಿಗಣ ಬದ್ಧ ಸೂತ್ರವ ನಿರ್ಮಿಸುತ್ತದನು ಸಿದ್ಧಾಂತ ಮಾಡಲು ಮಧ್ವಮುನಿವರಗಿತ್ತು ನಿಯಮವನು ನಿರ್ನೈಸಿ ತಿಳಿಸುತ ಪಾತಾಳಕೆ ಸುರೋತ್ತಮ ಸಿದ್ಧ ಸೇವಿತ ಶೇಷಗಿರಿಯೊಳಗಿದ್ದು ಭಜಕರನುದ್ಧರಿಸುತಿಹ 3
--------------
ತುಪಾಕಿ ವೆಂಕಟರಮಣಾಚಾರ್ಯ
ತಪ್ಪು ತಪ್ಪು ತಪ್ಪು ತಪ್ಪಪರಾಧ ಕೋಟಿಯಸರ್ವಂ ತಪ್ಪನ್ನೆಲ್ಲಾ ಕ್ಷ'ುಸಿ ಒಪ್ಪಿಕೊಳ್ಳಯ್ಯ ಗುರುವೆ ಪದೇಹ ತನ್ನದೆಂಬ ಅಹಂಕಾರದ ತಪ್ಪು ತನ್ನಗೇಹ ಸತಿಸುತರ ಮಮತೆ ಪಾಶದ ತಪ್ಪುಮೋಹ ಮದ ಮಾತ್ಸರ್ಯವ ಭ್ರಮೆಗೊಂಬೊ ತಪ್ಪುಓಹೋ! ವ್ಯರ್ಥಕಾಲವ ಕಳೆದೆನಹುದಯ್ಯ 1ಬಕವೃತ್ತಿಯ ಸೇಮೆಂದ ಮುಕುತನೆಂಬೆನೋ ಹರಿ'ಕಳಮತಿಗಳ ಕೂಡಿ ಯೋಗ್ಯನೆಂಬೆನೋಸಕಲ 'ಷಯಸುಖವನುಂಡು ವೈರಾಗಿಯೆಂಬೆನೋ ಹರಿಭಕ್ತರ ಸಂಗವ ಬಿಟ್ಟು ಜ್ಞಾನಿಯೆಂಬೆನೋ 2ಬರಿಯ ಬ್ರಹ್ಮಜ್ಞಾನದಿಂದ ಮರುಳು ಮಾಡಿದೆಪರಿಪರಿಯ ಭಾವಭೇದಗಳನು ತೋರಿದೆಅರಿಯದ್ಹೋದೆನಯ್ಯ ಶ್ರೀಮದ್ಗುರುವೆ ವಾಸುದೇವಾರ್ಯ ನರಸಾರ್ಯ ಅಮರಗಿರಿನಿಲಯ ಸಕಲ ತಪ್ಪು ಮರೆಯಯ್ಯಾ * 3
--------------
ವೆಂಕಟದಾಸರು
ಸ್ವಾಮಿ ನೀ ಎನಗಿರೆ ಧೀನಬಂಧು ಭ್ರಮೆಗೊಂಬ ಸಾಯಾಸವ್ಯಾಕಿನ್ನೊಂದು ಧ್ರುವ ನೀನಿರಲು ನಿಧಾನದ ಸುರಾಶಿ ಹೆಣ್ಣು ಹೊನ್ನಿಗಿಡುವುದ್ಯಾಕಾಶಿ ಅನುಭವಿಸುತಿರೆ ನೀ ಕೊಟ್ಟ ಭಾಸಿ ಅನುಮಾನಿಸಲ್ಯಾಕೆ ಭ್ರಮಿಸಿ 1 ಎನ್ನ ಸ್ವಹಿತಕಿರಲು ನೀನೆ ಸಾಹ್ಯ ಇನ್ನೊಬ್ಬರಿಗೆದೆರುವದ್ಯಾಕೆ ಬಾಯಿ ಚೆನ್ನಾಗಿದೆ ನೀನೆ ಎನಗಾಯುರ್ದಾಯ ಇನ್ನೊಂದಕ ಯೋಚಿಸಲ್ಯಾಕುಪಾಯ 2 ನೀನಾಗಿರೆ ಕಾಮಧೇನು ಕಲ್ಪವೃಕ್ಷ ನನಗಿನ್ನೊಂದ್ಹಿಡಿಯಲ್ಯಾಕಪೇಕ್ಷ ಭಾನುಕೋಟಿತೇಜವೆನಗೆ ಅಪೇಕ್ಷ ಅನುದಿನ ಮಹಿಪತಿಗೆ ಸುಭಿಕ್ಷ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು