ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯೆನ್ನ ನರಜನ್ಮ ವ್ಯರ್ಥವಾಯ್ತು ಪರಮ ಭಕ್ತಿಯೊಳಿನ್ನು ಭಜಿಸುವೆನು ಕಾಯೋ ಪ ತೊಡೆಯ ಮೇಲಾಡುತಿಹ ಶಿಶುವಿನಾನುಡಿ ಕೇಳಿ ಕಡು ಮೂರ್ಖತನದಿಂದ ಭ್ರಮೆಗೊಂಡೆನೋ ಸಡಗರದಿ ಕಿವಿಗೊಟ್ಟು ಕಿಂಕಿಣಿಯ ದ್ವನಿಗಳನು ಎಡಬಿಡದೆ ಕೇಳುತಿಹ ಹರಿಣನಂತಾದೇ 1 ತೊಡೆಗÀುಹ್ಯ ಕುಚಗಳಿಗೆ ಅನುದಿನವು ನಲಿಯುತ್ತ ಮಡದಿಯರ ಅಂಗ ಸಂಗದ ನಂಬುತಾ ಒಡಲ ಶಾಂತಿಯಗೊಳಿಸೆ ಬಡಿಗೋಲು ಕೆಡಹಿಕೊಂ ದಡಗುತಿಹ ಮೂಷಕನ ತೆರದಲ್ಲಿ ಕಳೆದೇ 2 ನಿರುತದಿಂ ಪರಸತಿಯ ಲಾವಣ್ಯವನು ನೋಡಿ ಚರಿಸಿತೆನ್ನಯ ಮನವು ಅವಳ ಕೂಟಕ್ಕೇ ಉರಿವ ದೀಪವ ಕಂಡು ಕನಕ ಮಣಿಯೇಯೆಂದ ಎರಗುತಿಹ ಹುಳದಂತೆ ಹಾಳಾದೆ ಬರಿದೇ 3 ಜರಿದು ನಿಜವೃತ್ತಿಯನು ಪರದಾಸ್ಯದಲಿ ಮುಳುಗಿ ಪೊರದೆ ಹೊಟ್ಟೆಯನಾ ಪರಾನ್ನ ಭಕ್ಷದಲೀ ಹರುಷದಿಂ ಬಲೆಯತುದಿ ಮಾಂಸಕ್ಕೆ ಮೆಚ್ಚಿದಾ ಮರುಳಾ ಮೀನಿನ ಗತಿಯು ಯನಗಾಯ್ತು ನಿಜದೀ4 ನಾರಿಯರ ಜಾಲಕ್ಕೆ ಪ್ರತಿದಿನವು ಸಿಲುಕುತ್ತ ಮಾರಿಯರ ಸಾಕಿ ನಾ ಫಲವ ತಿಂದೆ ಭ್ರಮರ ಸಂಪಿಗೆಯಸಳ ಸಾರಿ ಕೊಡಲೆ ಮೃತ್ಯುವಶವಾಗುವಂತೇ 5 ಮೂರಾರು ಶತ್ರುಗಳು ತರಿದೆನ್ನ ಮನವನ್ನು ಗಾರು ಮಾಡುತಲಿಹವು ತಿಳಿಯದಾ ಹರಿಯೇ ನರಸಿಂಹನೇ ಐದು ಇಂದ್ರಿಯವ ಗೆಲಲಾರೆ ಭೂರಿ ಭಕ್ತಿಯೊಳೆರಗಿ ಮರೆಹೊಕ್ಕೆ ಕಾಯೋ 6 ಪನ್ನಗಶಯನ ಶ್ರೀ ವೇಣುಗೋಪಾಲನೆ ಚನ್ನಿಗಕೇಶವನೇ ದೂರ್ವೇಶನೇ ನಿಂನನಾ ಬಿಡಲಾರೆ ಮಾರಮಣ ಪೊರೆಯಂನ ಯೋನಿ ಜನ್ಮಕೆ ಮುಂದೆ ಬರದಂತೆ ಮಾಡೋ 7
--------------
ಕರ್ಕಿ ಕೇಶವದಾಸ
ಕೊಡುವುದೆಂದು ಎನ್ನ ಕೊಂಬುದೆಂದು-ಕೈ-|ಪಿಡಿವುದೆಂದು ನೀ ಒಲಿವುದೆಂದು ಪಕೊಡುಕೊಂಬ ಮಹದನುಗ್ರಹದವನೆಂದು ನಿ-|ನ್ನಡಿಗೆ ಸೇರಿದೆನಯ್ಯ ಬಡತನಕೌಷಧ ಅ.ಪಶ್ವಾನಸೂಕರ ಜನ್ಮ ನಾನುಂಬೆ ನನ್ನಲ್ಲಿ |ನೀನೇ ತತ್ತದ್ರೂಪನಾದೆಯಲ್ಲ ||ಹೀನರೊಳ್ ನಾನತಿ ಹೀನನಾಗಿ-ಅಭಿ-|ಮಾನಿಯಾಗಿ ಕಾಲಕಳೆದೆನಲ್ಲ ||ವಾನರನಂಗೈಯ ಮಾಣಿಕ್ಯದಂತೆನ್ನ |ಮಾನದಂತರ್ಯಾಮಿ ಸಿಕ್ಕೆಯಲ್ಲ ||ಏನೇ ಆದರು ನಿನ್ನೊಳೆನಗೆ ಮುಂದೆ ಭಕ್ತಿ-|ಙ್ಞÕನ-ವೈರಾಗ್ಯ ಭಾಗ್ಯಗಳನು ದೇವ 1ಕಾಡಿನ ಮೃಗವು ತಾ ಹಾಡಿದರೆ ನಂಬಿ |ಆಡುವುದಲ್ಲದೆ ಓಡುವುದೆ? ||ಕಾಡುವ ಪಶುವಿನ ಬಾಲವ ಕಟ್ಟಿಸಿ |ಕೂಡೆ ಪಾಲ್ಗರೆಯಲು ಒದೆಯುವುದೆ? ||ಆಡುವ ಶಿಶು ತಪ್ಪಮಾಡಲು ಜನನಿ-ಕೊಂ-|ಡಾಡುವಳಲ್ಲದೆ ದೂಡುವಳೆ ||ಮೂಢ ಬುದ್ದಿಯೊಳು ಕೆಟ್ಟಿನೆಂದು-ಕೋಪ |ಮಾಡಬೇಡ ದಯೆಮಾಡಿ ನೀಡಿಷ್ಟವ 2ಹಣ್ಣಾದ ಹೊತ್ತು ಬಾಯ್ ಹುಣ್ಣಾದ ತೆರನಂತೆ |ನಿನ್ನ ಸೇರುವ ಯತ್ನ ಬಿಟ್ಟು ನಾನು ||ಹೆಣ್ಣು ಹೊನ್ನು ಮಣ್ಣಿಗಾಗಿಯೆ ಭ್ರಮೆಗೊಂಡೆ |ಸುಣ್ಣಕಿಕ್ಕಿದ ನೀರಿನಂತಾದೆನು ||ಎನ್ನಪರಾಧವನಂತ ಕ್ಷಮಿಸು ನೀನು |ಮನ್ನಿಸದಿರಲಾರಿಗೆ ಪೇಳ್ವೆನು ||ಓಂ ನಮೋ ಶ್ರೀಹರಿಎಂಬ ಪೂರ್ಣಙ್ಞÕನ-|ವನ್ನು ಪುರಂದರವಿಠಲನ ಎನ್ನಪ್ಪನೆ 3
--------------
ಪುರಂದರದಾಸರು