ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಹೇಳಲಿ ನಿನಗ ಮನವೇ ನಾ ಇನ್ನೇನು ಹೇಳಲಿ ನಿನಗೆ ಶ್ರೀನಾಥನಂಘ್ರಿಯ ನೀನೋಲೈಸದಿಹುದೇನೋ ಪ ಮನುಷ್ಯದೇಹ ಧರಿಸಿ ಸದ್ಗತಿಯ | ಜ್ಞಾನದಾರಿ ತ್ಯಜಿಸಿ ನೀ ಭಕುತಿ ಸುಖ | ಖೂನವಿಲ್ಲದೆ ಚರಿಸಿ | ಏನೂ ಇಲ್ಲದೆ ವಿದ್ಯಾ ಮಾಟಕ ಭ್ರಮಿಸಿಹುದೇನಾ 1 ವಿಷಯ ಸುಖ ಹರಿದು ಸಂಸಾರದಿ | ನಿಶಿದಿನದಲಿ ಸವೆದು ತಾಪತ್ರಯ | ಘಸಣಿಯೊಳಗ ಕುದಿದು | ಪಶುವಿನ ಪರಿಯಲಿ ಯಚ್ಚರ ಮರೆದಿಹುದೇನಾ 2 ಇನ್ನಾರೆ ಹಿತವರಿಯೋ ಸದ್ಗುರುವಿನ | ಮನ್ನಿಸಿ ಗತಿ ಪಡಿಯೋ ಹರಿಯ ನಾಮವಾ | ಚನ್ನಾಗಿ ನಂಬಿ ನಡಿಯೋ | ಸನ್ನುತ ಮಹಿಪತಿ ಬೋಧಾಮೃತ ಸವಿಯದೇನಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು