ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಸಾರ ಸುಖವಿಲ್ಲ ನಾ ಹಿಂಸೆಯ ತಾಳಲಾರೆ ಪ ಮಾತೆಯ ಮಾಂಸದ ಹೇಸಿಗೆ ಕೋಶದೊಳ್ ಮಾಸ ಒಂಭತ್ತನು ಕ್ಲೇಶದಿಂದ ತಳ್ಳಿದೆ ಈಶ ಲಕ್ಷ್ಮೀಶನು ಕೋಪದಿಂದ ಬೀಸಲು ಕೂಸಾಗಿ ಭೂಮಿಗೆ ವಾಸಕ್ಕೆ ಬಂದೆನು 1 ನಡೆ ನುಡಿಯ ಕಲಿಯುತಲಿ ಹರುಷದಲಿ ಕುಣಿಯುತಲಿ ಹುಡುಗತನ ಕಳೆಯುತಿರೆ ಹರುಷಗಳು ತೊಲಗಿದವು ದುಡಿಕಿನಲಿ ಭ್ರಮಿಸಿದೆನು ಮಡದಿಯಳ ಸಡಗರಕೆ ಭವ ಕಡಲೊಳಗೆ ಮುಳುಗಿ 2 ಕಡುಬಡತನ ಕೊರೆಯುತಲಿದೆ ಕಿರಿಕಿರಿಗಳು ಉರಿಸುತಲಿವೆ ತನುಮನಗಳು ಜರಿಯುತಲಿವೆ ಅಣಕಿಸುವರು ನಿಜ ಜನಗಳು ಪರಮ ಪುರುಷ ಸಿರಿಯರಸನೆ ಮರೆಯದಿರುವೆ ಉಪಕೃತಿಗಳ ದಡಕೆಳೆಯೊ ಪ್ರಸನ್ನ ಹರೇ 3
--------------
ವಿದ್ಯಾಪ್ರಸನ್ನತೀರ್ಥರು