ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇವನಾ ನೆಲೆಗಾಣೆ ನಮ್ಮಯ್ಯಾ ಸಣ್ಣವನೇ ಪ ಒರಳವನೆಳೆದೊಯ್ದು ಮರಗಳ ಕೆಡೆಹಿಡಿದ| ಭರದಿ ಪೂತನಿಯಸುವ ಹೀರಿದಾ ನಮ್ಮಯ್ಯಾ 1 ಬೇರಳಲಿ ಗಿರಿಯೆತ್ತಿ ತುರುಗಳ ಕಾಯ್ದಾ| ತೆರೆದು ಬಾಯೊಳು ಜಗವ ತೋರಿದ ನಮ್ಮಾಯ್ಯಾ 2 ವೇಣುನಾದ ಮಾಡಿ ತೃಣಪಶು ಮೊದಲಾದ| ಏಣಾಕ್ಷಿಯರ ಮನವಾ ಭ್ರಮಿಸಿದಾ ನಮ್ಮಯ್ಯಾ 3 ಕಾಳಿ ಮಡುವ ಹೊಕ್ಕು ಕಾಳಿಂಗನೆಳೆತಂದಾ| ಲೀಲೆ ತೋರಲು ಹರಿ ಉದಿಸಿದ ನಮ್ಮಯ್ಯಾ 4 ಗುರುಮಹಿಪತಿ ಸ್ವಾಮಿ ಸುರುತರು ಎನಗಾದಾ| ನರನೆಂಬವರ ಬಾಮಾ ಬಿಗಿಸಿದ ನಮ್ಮಯ್ಯಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು