ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೆ ಗತಿಯು ಎನಗೆ ಎನ್ನಯ್ಯ ಶ್ರೀ ಪನ್ನಂಗಶಯನ ಕಾಯೋ ಪ ಹೀನ ಸಂಸಾರದೊಳು ಇನ್ನೆಲ್ಲಿತನಕ ನಾ ಬನ್ನಬಡಬೇಕಯ್ಯ ಜಾಹ್ನವೀಜನಕ ಅ.ಪ ಸನುಮತಿವಿನಿತಿಲ್ಲದೆ ಮನಸಿನೊಳು ಘನತರ ಭ್ರಮಿಪೆ ಬರಿದೇ ಶುನಕನ ಕನಸಿದು ಅನಿತ್ಯ ಜಗತ್ಸುಖ ಎನಗ್ಯಾಕೆ ಒಣಭ್ರಾಂತಿಯನು ತೋರ್ವೆ ಶ್ರೀಕಾಂತ 1 ಘಳಿಗೆಸಂತಸವಿಲ್ಲದೆ ಬಳಲುವೆ ಬಲು ಇಳೆ ಸುಖದಿ ಮನ ನಿಲ್ಲಿಸಿ ಘಳಿಗೆ ಮೊಕ್ಕಾಮಿಗಾಗಿ ಕಳವಳಸೀಪರಿ ಬಳಲುವೆನ್ಯಾಕೊ ತಿಳಿಯದಿದು ನಳಿನಾಕ್ಷ 2 ಎತ್ತ ನೋಡಲು ನೀನಿರ್ದು ಮಿಥ್ಯಜಗತ್ತಿನೋಳ್ ವ್ಯರ್ಥ ಬಳಲಿಪರೆ ಎನ್ನ ಭಕ್ತವತ್ಸಲನೆಂಬ ಹೊತ್ತಿರುವಿ ಬಿರುದುಗಳ್ ಚಿತ್ತಕ್ಕೆ ಸತ್ಸುಖವಿತ್ತು ಪೊರೆ ಶ್ರೀರಾಮ 3
--------------
ರಾಮದಾಸರು