ಕರ ಪಿಡಿಯೊ ಬೇಗಾ ಪ
ಸಿರಿ | ಮಾಧವನೆ ಭಿನ್ನವಿಪೆಕಾದುಕೊ ಬಿಡದಿವನ | ಹೇ ದಯಾಪೂರ್ಣ 1
ಪ್ರಾಚೀನ ಕರ್ಮಗಳ | ಯೋಚಿಸಲು ಯನ್ನಳವೆಮೋಚ ಕೇಚ್ಛೆಯ ತೋರೊ | ಕೀಚಕಾರಿ ಪ್ರೀಯನೀಚೋಚ್ಛ ತರತಮವ | ವಾಚಿಸಿವನಲಿ ನಿಂತುವಾಚಾಮ ಗೋಚರನೆ ಸಾಕ್ಷಿ ವೇದ್ಯಾ 2
ಭಾಗವತ ಪೀಯೂಷ | ವೇಗ ಉಣಿಸುತಲಿವನನೀಗೊ ಭವರೋಗವನು | ನಾಗಾರಿವಾಹಾಜಾಗರ ಸ್ವಪ್ನದಲಿ | ನೀಗಿ ಭ್ರಮವೆರಡನ್ನುಜಾಗು ಮಾಡದೆ ಸಲಹೋ ಭೊಗಿಶಯನಾ 3
ಭವ | ಅಂಬುಧಿಯ ದಾಂಟಿ ನೀ-ಲಾಂಬು ದಾಭ ಹರಿ ಹೃದಯಾಂಬರದಿ ತೋರಿಇಂಬಿಟ್ಟು ಭಕ್ತನ್ನ | ಸಲಹೆ ಬಿನ್ನವಿಪೆ ಕೃ-ಪಾಂಬುಧಿಯೆ ತವ ಪಾ | ದಾಂಬುಜದಲಿಡುವೆ 4
ಭಾವ ಕ್ರಿಯ ದ್ರವ್ಯದೊಳು | ಅದ್ವಯನು ನೀನೆಂಬಭಾವದನುಭವವಿತ್ತು | ಇವನ ಪಾಲಿಪುದುಕಾವ ಕರುಣಿಯೆ ಗುರು | ಗೋವಿಂದ ವಿಠ್ಠಲನೆಗೋವತ್ಸಧ್ವನಿದಾವು | ಧಾವಿಸೂವಂತೆ 5