ಲಕುಮೀಶ ನಿನಗಾರತಿ ಭಕುತಿಯಿಂದೆತ್ತುವೆ
ಸಕಲರ ಸುಖಕರ ಭಕ್ತರಿಗೊಲಿಯುವ ರುಕ್ಮಿಣಿಯರಸನೆ ಪ.
ರಮಾಪತಿ ನಿನ್ನನು ನಮಿಸಿ ನುತಿಸುತ್ತಿರ್ಪೆನು
ಕಮಲಾಂಘ್ರಿಯ ಭ್ರಮರವೆಂದಮಲನೆ ಕೈಪಿಡಿ
ರಮಣನೆ ನುಡಿ ನುಡಿ1
ಇನಕುಲಮಂಡನ ವನರುಹಲೋಚನ
ಜನಕಜಾ ಸುಪ್ರೇಮನೆ ಚಿನ್ಮಯರೂಪನೆ
ಮನುಮುನಿ ಸೇವ್ಯನೆ 2
ಸುರನರ ಪೂಜಿತ ಸರಸಿಜ ಭವಪಿತ
ಕರುಣಾಕರ ನರಕೇಸಂ ಮರೆಹೊಕ್ಕೆನು ಪೊರೆ
ವರಶೇಷಗಿರಿದೊರೆ 3