ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಖಿ ಬಾರೆ ಬಾರೆ ಬೆಡಗತೋರೆ ನಡೆದು ಬಾರೆಲೆ ಸುಖದ ಸುಗ್ಗಿಯಿದೆಂದು ಸಾರೆ ಭ್ರಮರಕುಂತಲೆ ಪ. ಜಲಜಮುಖಿಯೆ ನಲಿದುಬಾರೆ ಕೋಲವಾಡುವ ಕಲಕೀರಕಂಠದಿಂದ ನಾವು ನಲಿದು ಪಾಡುವ 1 ಇಳೆಯ ಸುಖದ ಗೆಳೆಯ ಬಂದ ಬಳಿರೆ ಬಾಪುರೆ ಬೆಳಗುತಿರ್ಪ ದೀಪಾವಳಿಯೆ ಬಲಿಯ ಕೀರ್ತಿಯೆ 2 ವಿಜಯಯಾತ್ರೆಗೆಂದು ಹರಕೆಯೆತ್ತಿ ಭರದಲಿ ಅಜಸುರಾರ್ಚಿತಾಂಘ್ರಿಯುಗನ ಭಜಿಸಿಮುದದಲಿ 3 ನೀರನೆಮಗೆ ಮಾರತಾತನೆಂದು ಸಾರುವಾ ಶಾರದಾಗಮ ಸಮಯವಿದನು ಸಾರಿಯಾಡುವಾ 4 ಶೇಷಶೈಲಶಿಖರ ಧಾಮನೆಮ್ಮ ಮೆಚ್ಚುವೋಲ್ ಮೀಸಲೆತ್ತಿಯೊಸಗೆ ಪೇಳಿ ಪೊಸತಿದೆನ್ನುವೋಲ್ 5
--------------
ನಂಜನಗೂಡು ತಿರುಮಲಾಂಬಾ