ಭ್ರಮಮೂಲಮಿದಂ ಜಗತು ನೇಮದ ನಿಜಮಾತು ಧ್ರುವ
ಭ್ರಮೆಯಿಂದಲಿ ಭ್ರಮಣ್ಹತ್ಯದ ನೋಡಿ
ಭ್ರಮೆ ನೆಲೆಗೊಳಿಸದು ಮನ ಸ್ಥಿರಮಾಡಿ
ಭ್ರಮಿಸೇದನೇಕ ಜನ್ಮ ತಿರುಗಾಡಿ
ಭ್ರಮಿಯಲಿ ಬಾರದು ನಿಜ ಕೈಗೊಡಿ 1
ಭ್ರಮೆಯಕ ಭ್ರಮೆ ಹತ್ತೇದ ಬಲು ಬಹಳ
ಭ್ರಮಯು ಮಾಡೇದ ಸಂಸಾರದ ಮೇಳ
ಭ್ರಮೆ ಇಲ್ಲದ್ಯಾತಕೆ ಏನ್ಹೇಳ
ನೇಮದಿ ಹೊಳೆವುದು ವಸ್ತು ಅಚಲ 2
ನಾ ನೀನೆಂಬುದು ಭ್ರಮೆಯದ ಮೂಲ
ಅನುದಿನ ಬೆನ್ನಟ್ಟಿದೆ ಬಹುಕಾಲ
ಖೂನಕೆ ಬಾರದೆ ಆತ್ಮಾನುಕೂಲ
ತಾನೆ ಮುಸುಕ್ಯದೆ ಭ್ರಮಿ ಸಕಲ 3
ನಿಶ್ಚಲವಾಗದೆ ಜ್ಞಾನದ ಉಗಮವು
ಹೆಚ್ಚು ಕುಂದಿಗೆ ಹೊಡೆದಾಡುದು ಭ್ರಮೆಯು
ಹುಚ್ಚುಮಾಡೇದ ವಿಷಯ ಭ್ರಮೆಯು
ಎಚ್ಚರಿಸುವ ಸದ್ಗುರು ದಯಕ್ರಮವು 4
ನಾ ಮವನಿಷ್ಟರೊಳಾಡಿದ ಮಾತು
ನಿಮಿಷಾರ್ಧದಲಿ ಭ್ರಮೆಯಗಳೆಯಿತು
ಸ್ವಾಮಿಸದ್ಗುರು ಕೃಪೆಯಲಿ ತಿಳದೀತು
ನೇಮಿಸಿ ತಿಳಿಕೊ ಮಹಿಪತಿನಿವಾಂತು 5