ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆ ಇಂದುವದನೇ ಸರಸಿಜಸದನೇ ನಿಂದಿತ ಜನಸೂದನೆ ಪ ವಂದಿಸುವೆನೆ ಅರವಿಂದಗಂಧಿನಿ ಮಂದಿರದಲಿ ಗೋವಿಂದನ ತೋರಿಸೆ ಅ.ಪ. ಮೂಲೋಕಮಾತೆ ವಿಖ್ಯಾತೆ ಕೈವಲ್ಯದಾತೆ ಕಾಲ ದೇಶದಿ ವ್ಯಾಪಿತೆ ಭಜಕರಪ್ರೀತೆ ಶೀಲೆ ಸಂಪೂರ್ಣ ಗುಣವ್ರಾತೇ ಫಾಲನಯನ ತ್ರಿದಶಾಲಯ ಪ್ರಮುಖರ ಪಾಲಿಸುತಿಹೆ ಮಂದಜಾಲಜನಕೆ ರಮೇ ಶ್ರೀಲತಾಂಗಿ ನಿನ್ನಾಳುಗಳೊಳು ಹರಿ ಲೀಲೆಯ ಮನದಲಿ ಅಲೋಚನೆ ಕೊಡೆ 1 ಲೋಕನಾಯಕಿ ಲಕುಮಿ ಶ್ರೀ ಸಾರ್ವ ಭೌಮೆ ಶೋಕರಹಿತ ಸುನಾಮೆ ನಾಕಜವನಧಿ ಸೋಮೆ ದೇವಲಲಾಮೆ ಸಾಕಾರವಂತೆ ಗುಣ ಸÉ್ತೂೀಮೆ ನೀ ಕರುಣಿಸಿ ಅವಲೋಕಿಸಿ ಎನ್ನಯ ಕಾಕುಮತಿಯ ಕಳೆದೇಕಾಂತದಿ ನಿತ್ಯ ಏಕ ಮನದಿ ಹರಿ ಶ್ರೀ ಕರಪದಧ್ಯಾನ ನೀ ಕರುಣಿಸು ನಿರಾಕರಿಸದಲೆ 2 ಜಾತರಹಿತ ಜಯವಂತೆ ದೈತ್ಯಕೃತಾಂತೆ ಸೀತಾಂಶುಕೋಟಿ ಮಿಗೆಕಾಂತೆ ಪಾತಕದೂರೆ ನಿಜಪಂಥೆ ನಿತ್ಯಾ ನಿಶ್ಚಿಂತೆ ನೀತದೂರಾದಿ ಮಧ್ಯಾಂತೆ ಪುರುಹೂತ ಮುಖಾವರ ವ್ರಾತ ವಿನುತೆ ಅತಿಪ್ರೀತಿಯಿಂದಲಿ ನಮ್ಮ ವಾತಜನಕ ಜಗನ್ನಾಥ ವಿಠಲನ ಮಾತು ಮಾತಿಗೆ ನೆನೆವಾತುರ ಮನ ಕೊಡೇ 3
--------------
ಜಗನ್ನಾಥದಾಸರು
ಶ್ರೀ ವನಿತೆ ವೈನತೇಯ ವಾರುತೆ ದೇವಾದಿ ವರವಿನುತೆ ಕಾವದು ಯೆನ್ನ ನೀ ವದಿಗಿ ಮುನ್ನೆ ಈವದು ವರ ಆವದುವಲ್ಲೆ ರಾಜೀವ ಚರಣದ ಸೇವೆಯ ಪಾಲಿಸು ಕೋವಿದರೊಡನೆ ಪ ಸಮಸ್ತಲೋಕ ವಂದಿತೆ ಸಂತತ ಮತ್ತೆ ತಾಮಸ ಜ್ಞಾನ ಹರತೆ ಸಾಮಗಾಯನ ಪ್ರೀತೆ ಸಕಲವಿದ್ಯಾತೀತೆ ರೋಮ ರೋಮ ಗುಣ ಭರಿತೆ ರಾಮನ್ನ ಪದ ನಾಮವನ್ನು ನಾ ಮರೆಯದಂತೆ ನೀ ಮನಸು ಕೊಡು ಹೇಮಾಂಬರೆ ಕಾಂಚಿದಾಮೆ ಅಮಮ ನಿ- ವನಧಿ ಸೋಮೆ ಕಾಮ ಜನನಿ ತ್ರಿಧಾಮೆ ಪುಣ್ಯನಾಮೆ ಕೋಮಲಾಂಗಿ ಸತ್ಯಭಾಮೆ ರಮೆ ಪೂರ್ಣ ಕಾಮೆ ಸುರಸಾರ್ವಭೌಮೆ 1 ಚಂದನ ಗಂಧಲೇಪಿನೀ ಚತುರವಾಣೀ ಮಂದಹಾಸಗಮನೀ ಗಂಧಕಸ್ತೂರಿ ಜಾಣಿ ಗಂಭೀರ ಗುಣಶ್ರೇಣಿ ಸಿಂಧುತನಯೇ ಕಲ್ಯಾಣಿ ಇಂದಿರೆ ಪದ್ಮಮಂದಿರೆ ಕಂಬು ಕಂಧರೆ ಸರ್ವಸುಂದರೆ ಮಾಯೆ ಬಂದೆನು ಕರುಣದಲಿಂದ ನೋಡು ಶತ - ಕಂಧರÀರಿಪು ಸುಖಸಾಂದ್ರ ನಿರಾಮಯೆ ಹಿಂದಣ ಕಲ್ಮಷ ವೃಂದಗಳೋಡಿಸಿ ನಿಂದೆ ನಮೋನಮೋ ಯೆಂದೆ 2 ನಿತ್ಯ ಸಲ್ಲಾಪೆ ಅನ್ನಂತಾನಂತ ರೂಪೆ ಕನ್ಯಾಮಣಿಯೆನಿಪೆ ನಿನ್ನ ಕಡೆಗಣ್ಣಿನ ನೋಟ- ವನ್ನು ಹರಹಿ ಹಿರಣ್ಯಗರ್ಭಾದಿ- ಅನುದಿನ ಧನ್ಯನ ಮಾಳ್ಪಳೆ ಅನ್ಯರಿಗೆ ಕಾರ್ಪಣ್ಯ ಬಡದಂತೆ ಚನ್ನ ವಿಜಯವಿಠ್ಠಲನ್ನ ಪೂಜಿಪ ಗುರು ರನ್ನೆ ಪುರಂದರರನ್ನ ಪೊಂದಿಸು ಸಂ-ಪನ್ನೆ ಯೆನ್ನ ಪ್ರಾಸನ್ನೆ 3
--------------
ವಿಜಯದಾಸ
ನಂಬಿದೆನು ಜಗದಂಬೆ ನಿನ್ನನು ಪಾಲಿಸು ಸರ್ವಾ-ರಂಭಸೂತ್ರಳೆ ಇಂಬುದೋರಿನ್ನು ಪ.ಅಂಬುಜಾಂಬಕಿ ಶುಂಭಮರ್ದಿನಿಕಂಬುಗ್ರೀವೆಹೇರಂಬಜನನಿಶೋ-ಣಾಂಬರಾವೃತೆ ಶಂಭುಪ್ರಿಯೆ ದಯಾ-ಲಂಬೆ ಸುರನಿಕುರುಂಬಸನ್ನುತೆ ಅ.ಪ.ಕ್ರೂರದೈತ್ಯವಿದಾರೆ ಮಹದಾಕಾರೆ ಮಂಗಲೇ ವಿಶ್ವಾ-ಧಾರೆ ಕಲ್ಮಷದೂರೆ ಕದನಕಠೋರೆ ನಿಶ್ಚಲೆ ಪಾರಾ-ವಾರ ಸಮಗಂಭೀರೆ ಸುಗುಣವಿಹಾರೆ ನಿರ್ಮಲೆ ರತಿಶೃಂ-ಗಾರೆ ರಿಪುಸಂಹಾರೆ ತುಂಬುರುನಾರದಾದಿಮುನೀಂದ್ರ ನುತಚರ-ಣಾರವಿಂದೆ ಮಯೂರಗಾಮಿನಿಸೂರಿಜನ ಸುಮನೋರಥಪ್ರದೆ 1ಮೂಲರೂಪೆ ದಯಾಲವಾಲೆವಿಶಾಲಸುಗುಣಯುತೆ ಮುನಿಜನ-ಲೋಲತರುಣಮರಾಳೆ ಸಚ್ಚರಿತೆ ನವಮಣಿಮಾಲೆ ಮನ್ಮಥಲೀಲೆ ರಿಪುಶಿರಶೂಲೆ ಸಚ್ಚರಿತೆ ಹಿಮಗಿರಿ-ಬಾಲೆ ನೀಲತಮಾಲವರ್ಣೆ ಕ-ರಾಳಸುರಗಿ ಕಪಾಲಧರೆ ಸುಜ-ನಾಳಿಪಾಲನಶೀಲೆ ಹಿಮಕರಮೌಳಿಶೋಭಿತೆ ಕಾಳಿಕಾಂಬಿಕೆÉ 2ಶೋಕಮೋಹಾನಾನೀಕದೂರೆ ಪಿನಾಕಿಸುಪ್ರೀತೆ ಕೋಟಿ ದಿ-ವಾಕರಾಭೆಪರಾಕುಶರಣಜನೈಕಹಿತದಾತೆ ಸುರನರ-ಲೋಕಮಾತೆ ನಿರಾಕುಲಿತೆ ಸುವಿವೇಕಗುಣವ್ರಾತೆ ಮಾನಸ-ವಾಕುಕಾಯದಿಂದ ಗೈದಾನೇಕ ದುರಿತವ ದೂರಗೈದು ರ-ಮಾಳಕಳತ್ರನ ಪಾದಭಕುತಿಯ ನೀ ಕರುಣಿಸು ಕೃಪಾಕರೇಶ್ವರಿ3ಈಶೆ ಪಾಪವಿನಾಶೆ ಮಣಿಗಣಭೂರಿಪ್ರದೆ ಶಕ್ತಿವಿ-ಲಾಸೆ ವಿಗತವಿಶೇಷೆ ಕೃತಜಯಘೋಷೆ ಸರ್ವವಿದೆ ಮನ್ಮನ-ದಾಸೆಗಳ ಪೂರೈಸು ಸಜನರ ಪೋಷೆ ಕುಂದರದೆ ಶಂಕರೋ-ಲ್ಲಾಸೆ ಯೋಗೀಶಾಶಯಸ್ಥಿತೆವಾಸವಾರ್ಚಿತೆ ಶ್ರೀಸರಸ್ವತಿದೋಷರಹಿತೆ ಮಹೇಶೆ ಸುಗುಣರಾಶಿ ಸುರತತಿದಾಸಜನಯುತೆ 4ಸಾಮಗಾನಪ್ರೇಮೆ ರಾಕ್ಷಸ ಭೀಮೆ ರುದ್ರಾಣಿ ಅರಳ-ಗ್ರಾಮದೇವತೆ ಕ್ಷೇಮದಾಯಿನಿ ತಾಮರಸಪಾಣಿ ಪಶುಪತಿ-ವಾಮಭಾಗಲಲಾಮೆ ಮಂಗಲಧಾಮೆ ಫಣಿವೇಣಿ ಜಯಜಯಶ್ರೀಮಹಾಲಕ್ಷ್ಮಿ ನಾರಾಯಣಿರಾಮನಾಮಾಸಕ್ತೆ ಕವಿಜನ-ಸ್ತೋಮಕೃತ ಪರಿಣಾಮೆ ಭೌಮೆ ಪುಲೋಮಜಾರ್ಚಿತೆಸೋಮಶೇಖರಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ