ಹಿರಿಯ ಮಗಳಿಂದ ಶ್ರೀಕರನಪದ ಸೇರೊ
ಬರಿದೆ ಯೋಚನೆಯಿಂದ ಬೇಸರಗೊಳದಿರು ಪ.
ಕಾಮಕ್ರೋಧಗಳನ್ನು ಭೌಮಿಯಲಿ ದೂಡುವಳು
ವ್ಯಾಮೋಹ ಮದಲೋಭ ಮತ್ಸರಗಳಿಂ
ಸೀಮೆಯಿಂಧೊರಗ್ಹಾಕಿ ಡಂಭಹಿಂಸಾನೃತದ
ನಾಮವಡಗಿಸಿ ಪೂರ್ಣ ಕಾಮನನು ತೊರೆವ 1
ಭಾವ ಶುದ್ಧಿ ವಿವೇಕ ಬಾಲಕರನೆತ್ತುವಳು
ಪಾವನತ್ವವ ಮಾಡಿ ತೂಗುತಿಹಳು
ದಾವ ಕುಲಕು ದಶೇಂದ್ರಿಯ ದುಷ್ಟ ತುರಗಗಳ
ಭಾವ ಕೆಡದಂದದಲಿ ಕಾವ ಕಮಲಾನನದ 2
ತನುವೆಂಬ ಮನೆಯ ಶುದ್ಧಿಯ ಗೈದು ಸುಜ್ಞಾನ
ವೆನಿಸುತಿಹ ದೀವಿಗೆಯ ತೋರುತಿಹಳು
ಮೂರ್ತಿ ಮನದೊಳಗೆ ನೆಲೆತೋರ್ಪ
ವಿನಯ ವೆಂಕಟಪತಿಯ ನೆನವೆನಿಪ ಹರಿಭಕ್ತಿ 3