ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೆರಳಿ ಪೋದರು ದಿವ್ಯ ನರಹರಿಯ ಪುರಕೆ ಶ್ರೀ ವರತಂದೆ ಮುದ್ದುಮೋಹನರೂ ಪ. ಕರಿಗಿರಿ ಕ್ಷೇತ್ರದಲಿ ತೊರದು ಭೌತಿಕ ದೇಹ ಪರಮ ಉಲ್ಲಾಸದಿಂದಾ ನಂದಾ ಅ. ಪರಿಪರೀ ಪೂಜಿಸಿದ ಪರಮ ಭಕ್ತರಿಗೆ ತಾವ್ ತೆರಳುವೋಪರಿ ತಿಳಿಸದೇ ಪರಮ ಕರುಣಾಳು ಹೆಂಗರುಳಿನಾ ಖಣಿ ಎಂಬ ತೆರವೆಲ್ಲರಿಗೆ ಮರೆಸದೇ ಪರಮಸುಜ್ಞಾನಿಯಾದಂಥ ಶಿಷ್ಯರಾ ಕರೆಸಿ ಅಗಲಿಸಿಕೊಳ್ಳದೇ ಪರಮ ಸಾಧ್ವೀಪತ್ನಿ ವರ ಪುತ್ರರಿರುತಿರಲು ಕಿರಿಶಿಷ್ಯನೊಬ್ಬನೆದುರೊಳ್ | ಜವದೊಳ್ 1 ಎಂಭತ್ತು ಮೇಲೆರಡು ವತ್ಸರವು ಧರಣಿಯೊಳು ಸಂಭ್ರಮದಿ ಧೃಡ ಕಾಯದೀ ತುಂಬಿ ತತ್ವಾಮೃತವು ಸುಜನರಾ ಹೃದಯದಲಿ ಕುಂಭಿಣಿಯೋಳ್ ದಾಸತ್ವದೀ ನಂಬಿಕೆಗಳಿತ್ತು ಸುಜ್ಞಾನಿಗಳಿಗಂಕಿತವು ಅಂಬುಜಾಕ್ಷನ ನಾಮದೀ ಒಂಭತ್ತು ವರ್ಷದಿಂ ಬೆಂಬಿಡದೆ ಕಾಯ್ದೆನ್ನ ಕುಂಭಿನಿಯ ತೊರೆದು ಈಗಾ | ಬೇಗಾ 2 ಶಾಲಿಶಕ ಸಾಹಸ್ರ ಅಷ್ಟ ಶತ ಅರವತ್ತು ಮೇಲೆರಡು ವಿಕ್ರಮದಲೀ ಕಾಲ ಮಧ್ಯಾಹ್ನ ಚೈತ್ರದ ಶುದ್ಧ ಶ್ರೀ ರಾಮ ನವಮಿ ಭೌಮವಾಸರದಲಿ ಆಲಿಸುತ ದಿವ್ಯ ಮಂತ್ರ ಶ್ರವಣ ಕೀರ್ತನವ ಶೀಲ ಶ್ರೀ ಗೋಪಾಲಕೃಷ್ಣವಿಠಲನ ಪುರಕೆ ಆಯಾಸಗೊಳದೆ ಮುದದೀ ತ್ವರದೀ 3
--------------
ಅಂಬಾಬಾಯಿ