ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ರಾಹಿ ತ್ರಾಹಿ ತ್ರಾಹಿ ತ್ರಾಹಿಯೆನ್ನಿರೊ ತ್ರಾಹಿ ತಾರಕ ಬ್ರಹ್ಮಗೆನ್ನಿರೊ ಧ್ರುವ ತ್ರಾಹಿ ಮಚ್ಚ ಕೂರ್ಮಾವತಾರಗೆನ್ನಿರೊ ತ್ರಾಹಿ ವರಹ ನರಸಿಂಹಗೆನ್ನಿರೊ ತ್ರಾಹಿ ವಾಮನ ಭಾರ್ಗವಗೆನ್ನಿರೊ ತ್ರಾಹಿ ರಾಮಕೃಷ್ಣ ಗೋಪಾಲಗೆನ್ನಿರೊ 1 ತ್ರಾಹಿ ಭೌದ್ಧ ಕಲ್ಕ್ಯಾವತಾರಗೆನ್ನಿರೊ ತ್ರಾಹಿ ಸಗುಣ ನಿರ್ಗುಣಗೆನ್ನಿರೊ ತ್ರಾಹಿ ವಟಪತ್ರಶಯನಗೆನ್ನಿರೊ ತ್ರಾಹಿ ತ್ರೈಲೋಕ್ಯ ವಂದಿತಗೆನ್ನಿರೊ2 ತ್ರಾಹಿ ಹರಿಹರ ವಿರಂಚಿಗೆನ್ನಿರೊ ತ್ರಾಹಿ ಸುರವರ ನಿರಂಜನಗೆನ್ನಿರೊ ತ್ರಾಹಿ ಭಕ್ತಜನ ಸಹಕಾರಗೆನ್ನಿರೊ ತ್ರಾಹಿ ಮಹಿಪತಿ ಪಾಲಗೆನ್ನಿರೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಳ ಮಂಗಳ ಜಯಮಂಗಳ ಶುಭ ದೇವದೇವೋತ್ತಮಗೆ ಧ್ರುವ ಕೇಶವ ನಾರಾಯಣಗೆ ಮಂಗಳ ವಾಸುದೇವ ವಾಮನಗೆ ಮಂಗಳ ಹೃಷೀಕೇಶ ಪುರುಷೋತ್ತಮಗೆ ಮಂಗಳ ವಸುದೇವಸುತ ಶ್ರೀಕೃಷ್ಣಗೆ ಮಂಗಳ 1 ಅಚ್ಯುತ ಜನಾರ್ಧನಗೆ ಮಂಗಳ ಮತ್ಸ್ಯಕೂರ್ಮ ವರಾಹಿಗೆ ಮಂಗಳ ಸಚ್ಚಿದಾನಂದ ಶ್ರೀಧರಗೆ ಮಂಗಳ ಮುಚುಕುಂದವರದ ವಿಷ್ಣುಗೆ ಮಂಗಳ2 ಮಾಧವ ಮಧುಸೂದನಗೆ ಮಂಗಳ ಸಾಧು ಹೃದಯುವಾಸಗೆ ಮಂಗಳ ಅಧೋಕ್ಷಜ ಅನಿರುದ್ಧಗೆ ಮಂಗಳ ಪದ್ಮನಾಭ ಪ್ರದ್ಯುಮ್ನಗೆ ಮಂಗಳ 3 ಗರುಡವಾಹನ ಗೋವಿಂದಗೆ ಮಂಗಳ ಉರಗಶಯನ ಉಪೇಂದ್ರಗೆ ಮಂಗಳ ಹರಿ ದಾಮೋದರ ಸಂಕರುಷಣಿಗೆ ಮಂಗಳ ನಾರಸಿಂಹ ತ್ರಿವಿಕ್ರಮಗೆ ಮಂಗಳ 4 ಪರಮ ಪಾವನ ಭಾರ್ಗವಗೆ ಮಂಗಳ ಕರುಣಾಕರ ಶ್ರೀ ರಾಮಗೆ ಮಂಗಳ ಧರಿಯೊಳು ಭೌದ್ಧ ಕಲ್ಕಿಗೆ ಮಂಗಳ ತರಳ ಮಹಿಪತಿಸ್ವಾಮಿಗೆ ಮಂಗಳ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂದಗಮನೆ ಕರೆದುತಾರೆ ಇಂದಿರೇಶನ ಚಂದ್ರ ಸೂರ್ಯಕೋಟಿ ತೇಜದಿಂದ ಮೆರೆವನಾ ಪ ನಿಗಮ ಚೋರನ ಕೊಂದು ವೇದವತಂದ ಮತ್ಸ್ಯನಾ ನಗವ ಬೆನ್ನೊಳಾಂತ ಮಥನದೊಳಗೆ ಕೂರ್ಮನ ಜಗವ ಕದ್ದ ಖಳನ ಕೊಂದ ವರಹರೂಪನ ಮಗನ ಕೊಲಲು ಬಂದು ಕಾಯ್ದ ನಾರಸಿಂಹನ 1 ಬೆಡಗಿನಿಂದ ಬಲಿಯಬೇಡಿ ಧರೆಯ ನಳೆದನ ಬಿಡದೆ ಕ್ಷತ್ರಿಯರನು ಕೊಂದ ಪರಶುರಾಮನ ಮಡದಿಗಾಗಿ ಜಲಧಿಗಟ್ಟಿ ಸತಿಯ ತಂದನ ಕಡಲ ಮನೆಯ ಮಾಡಿನಿಂದ ವಾರಿಜಾಕ್ಷನ 2 ವರ ಪತಿವ್ರತೆಯ ಮಾನಗೊಂಡ ವರದ ಭೌದ್ಧನ ಹರಿಯನೇರಿ ಮ್ಲೇಂಛ ಕುಲವ ಕೊಂದ ಕಲ್ಕ್ಯನಾ ಮರುತ ಸುತನ ಕೋಣೆವಾಸ ಲಕ್ಷ್ಮೀ ರಮಣನ ಸರಿಸಿ ಜಾಕ್ಷಿ ತಂದು ತೋರೆ ಸುಜನರೊಡೆಯನ 3
--------------
ಕವಿ ಪರಮದೇವದಾಸರು
ಶ್ರೀದೇವಿಯಂ ಭಕ್ತರೊಡನೆ ಶುಭಕಾಯವೊಲಿದು ಆಡಿದನುಯ್ಯಾಲ ಪ ನೀಲಿಮಾಣಿಕದ ಮಂಟಪವ ಕಟ್ಟಿ ಮುತ್ತಿನ ಸರಪಣಿಗಳನೆ ಬಿಗಿಸಿ ಮೇಲುಕಟ್ಟುಗಳ ಹಾಸಿ ಮಲ್ಲಿಗೆಮಾಲೆಗಳ ಶೃಂಗರಿಸಿ 1 ಪಟಹ ನಿಸ್ಸಾಳ ಭೇರಿ ಕೊಳಲು ತಮಟವಾದ್ಯ ಮೊಳಗುತಿರಲು ಕುಟಿಲಕುಂತಲೆಯರೊಡನೆ ಆದಿಪತಿ ವಿಠಲನಾಡಿದ 2 ಚಂದ್ರಮನ ಪೋಲ್ವ ಮುಖದಿ ಫಣಿಯೊಳು ಶೌನಕಾದಿಗಳು ಸೇರಿ [ಅಂದದಿ] ಸ್ತುತಿಸೆ ಕ್ಷೀರಾಬ್ಧಿಶಯನನಾಡಿದ3 ಭೇರಿ ಶಂಖಗಳ ದ್ವನಿಯ ದುಂದುಭಿಯ ಭೋರಿಡುವ ಜಯರವಗಳ ನಾರಿಯರು ಶೋಭನಗಳ ಪಾಡುತ್ತಿರೆ ಧೀರನಾಡಿದ 4 ವೇದಚೋರನ ತರಿದು ಆದಿಮೂರುತಿ ವರದನ ವಿ- ನೋದದಿ ತೂಗಿದರು ರವಿಸೌಂದರಿಯನಾಡಿದ 5 ನೀಲವೇಣಿಯರು ಪಾಡುತ ತೂಗಿದರು ಗೋಪಾಲನಾಡಿದ 6 ಪರಶುಧರನೆನಿಸಿ ಹರನ ಶ್ರೀರಾಮಚಂದ್ರ ಕರುಣಾ ವಾರಿಧಿ ಕೃಷ್ಣನ ತೂಗಿದರು ವರಸತಿಯರು 7 ಚೋಜಿಗದಮತ್ಪುರದಸತಿಯರನುವೋಜಿಗಲಿಸಿದಭೌದ್ಧನಾ ತೇಜಿವಾಹನಕಲ್ಕ್ಯನಾ ತೂಗಿದರು ರಾಜೀವನೇತ್ರೆಯರು ಪಾಡುತ 8 ಚಿತ್ತಜೌಘ ಮನಮನದ ಚದುರೆಯರು ಮುತ್ತು ಸರಗಳನೆ ಧರಿಸಿ ದತ್ಯಂತ ಮೋಹದಿಂದ ತೂಗಿದರು ಹಸ್ತಿನೀಕಾಮಿನಿಯರು9 ಮತ್ತೆಸಾರಂಗವೆನಲುನಡೆಯುತಲಿವಿಸ್ತರಿಸಿಕುಚಯುಗಳದಿ ಕಸ್ತೂರಿಯ ಗಂಧವೆಸೆಯೆ ತೂಗಿದರು ಚಿತ್ತಿನೀಜಾತದವರು 10 ಕುಂಕುಮಾಂಕಿತ ಚದುರೆಯರಲಂಕರಿಸಿ ಭೂಷಣಗಳ ಶಂಕರನಸಖನ ಪಾಡಿ ತೂಗಿದರು ಶಂಖಿನೀಕಾಮಿನಿಯರು 11 ಕದಪುಗಳ ಕಾಂತಿಹೊಳೆಯೆ ಮೊಗಸಿರಿಯಪದುಮವನು ಪೋಲ್ವಂದ ಯದುವೀರನನು ಪಾಡುತತೂಗಿದರು ಕುಮುದಿನೀಕಾಮಿನಿಯರು 12 ಅಂಗನಮಣಿ ಪಾರ್ವತಿ ಸರಸ್ವತಿಯರು ರಂಗುಮಾಣಿಕರತ್ನದ ಮಂಗಳಾರತಿಯನೆತ್ತಿ ತೂಗಿದರು ಗಂಗೆಯನು ಪಡೆದಯ್ಯನ 13 ಚಿಂತಿತಾರ್ಥವ ಸಲಿಸುವ ಮುದ್ದುವೆಂಕಟೇಶನು ತಾನೆನಿಸುವ ಪಿತ ದೇವಪುರದ ಶ್ರೀಲಕ್ಷ್ಮೀಕಾಂತನಾಡಿದನುಯ್ಯಾಲಾ 14
--------------
ಕವಿ ಲಕ್ಷ್ಮೀಶ