ಒಟ್ಟು 9 ಕಡೆಗಳಲ್ಲಿ , 6 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳಯ್ಯಾ ಏಳು ಕಂದಾ | ಏಳು ಪರಮಾನಂದಾ | ಏಳು ಈರೇಳು ಜಗದೊಡೆಯ ಶ್ರೀಮುಕುಂದಾ ಪ ಮೊರೆವದೊಂದೇಗಾಲಿ | ಪರಿವಹರಿವೇಗಮಂ | ಜರಿದು ಯೇಳು ಕುದುರೆಂಗಳದರಾ | ಪೋರವರುಣನಿಂದ ಭೋರ್ಗರೆವ ಸ್ಯಂದನದೊಳಗ | ಮೆರೆವ ದಿನಕರ ಉದಯವಾದ ಪೂರ್ವಾದ್ರಿಯಲಿ 1 ಬಿರಿಯೆ ಕಮಲದ ಮೋಗ್ಗೆ ಕರಿಯೆ ಗೋವತ್ಸಗಳು | ಪರಿಯೆ ನಕ್ಷತ್ರಗಳು ಗಗನದೊಳಗ || ಸರಿಯೆ ಚೋರ್ವಿರಹಿಗಳು ವರಿಯದಂತಾಲಯಕೆ | ದೆರಿಯ ಕಣ್ಣೆವಿಯಗಳು ನಿದ್ರೆಗೈದಿದ ಜನರು 2 ಓಡುತಿದೆ ಕತ್ತಲೆಯು ಬಾಡುತಿದೆ ಕುಮುದ ಮುಖ | ಕೂಡುತಿವೆ ಚಕ್ರವಾಕಂಗಳೀಗ | ಆಡುತೆಳೆದುಂಬಿ ಚಲ್ಯಾಡುತಿದೆ ಮಧುರನವ | ಪಾಡುತಿದೆ ಮಹೀಪತಿ ಸುತನಾಮ ಕೀರ್ತಿಯನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಮಧೇನುಗರವುತಲ್ಯದೆ ನಮ್ಮ ಮನಿಯಲಿ ನೋಡಿ ಬ್ರಹ್ಮಾನಂದದೋರುತದೆ ಪರಮಾಮೃತ ಸೂರ್ಯಾಡಿಧ್ರುವ ಭೋರ್ಗರೆವುತಲ್ಯದೆ ಇರುಳ ಹಗಲಿ ತಾ ಕರಕೊಳ್ಳಲಿ ವಶವಲ್ಲ ಅಮೃತ ದುರುಳರಿಗಿದು ಅರಿಕಿಲ್ಲ ಸುರಿ ಸುರಿದು ಸಾರಾಯ ಚಪ್ಪರಿದನುಭವ ನಿಜಸುಖ ತಾ ಬಲ್ಲ ಸುರಮುನಿಜನರಾನಂದದಿ ಸೇವಿಸಿ ಅರಹುತರಾದರು ಎಲ್ಲ 1 ಕಾಸಿ ಕಡಿಯದೇ ಭಾಸುತಲ್ಯದೆ ಲೇಸಾಗಿ ನವನೀತ ಮೋಸಹೋಗದನುಸರಿಸಿಕೊಂಬುದು ವಸುಧಿಯೊಳಗೆ ತ್ವರಿತ ಋಷಿಮುನಿಗಳು ಸ್ವಹಿತ ತುಸುಕೊರತಿಲ್ಲದೆ ಪಸರಿಸಿ ತುಂಬೆದ ವಿಶ್ವದೊಳಗೆ ಸನ್ಮತ2 ಅನುದಿನ ಮಹಿಪತಿಗಿದು ನಿಜ ನೋಡಿ ಮಹಾಮಹಿಮೆಯ ಸವಿಗೂಡಿ ಶಿರದಲಭಯವ ನೀಡಿ ಇಹಪರದೊಳು ಗುರುನಾಮವೆ ಕಾಮಧೇನುವಿದೆ ಕೊಂಡಾಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೇಳಿರೋ ಕೇಳಿರೋ ಆನಂದ ನುಡಿಗಳ | ಜಾಳಿಲಿ ದೋಷವ ಹರಿನಾಮ ನೆನೆಯುತ | ಕೇಳಿ ಕೇಳಿ ಕೇಳಿ ಕೇಳಿ ಪ ಯುಗದಂತಿಲಿ ಸರ್ವ ಮತವೆಲ್ಲ ಕೆಡಲಾಗಿ | ಜಗದೋದ್ಧಾರ ಜಗದೀಶ ಬರು ತಾನೆ 1 ಸ್ವ ಶಕ್ತಿ ಕುದುರೆಯ ನೇರಿ ರಾವುತನಾಗಿ | ಅಸಮ ಪೊನ್ನೀಟೆಯ ಹಿಡಕೊಂಡು ಬರುತಾನೆ2 ನಾಕು ವೇದಗಳೆಂಬಾ ಕುದುರೆಯ ಕಾಲವು | ಬೇಕಾದ ಅವಯವ ಆರು ಶಾಸ್ತ್ರಗಳಿವೆ3 ಮೂರು ಪೌರಾಣ ಶೃಂಗಾರಾಭರಣವು | ಶರಣವತ್ಸಲನೆಂಬ ಕಡಿವಾಣ ಕುದುರೆಗೆ4 ಬೋಧ ಹಕ್ಕರಿಕೆಯು | ಭಾವಿಸೆ ಭೂ ಭಾಗವೆಂಬುದು ಪಾವುಡವು5 ಈ ಪರಿಯಿಂದಲಿ ಭೋರ್ಗರೆವುತ ಬರೆ | ತಾಪವಡಗಿ ಸುಖ ತಂಗಾಳಿ ಬಂದೀತು 6 ತಾಯಿಯ ಧ್ವನಿ ಕೇಳಿ ಮಕ್ಕಳು ಬಹುಪರಿ | ಬಾಯ ದೆರವುತಲಿ ಜನಜಡಿ ಬಹುದು7 ಅವರಿ-ಗಭಯ ಕೊಟ್ಟು ಅಧರ್ಮವೇ ಕಿತ್ತಿ ಯವನರ ಹಂತಿಯ ಕಟ್ಟಿ ತಾ ತುಳಿಸುವ 8 ಹೊಟ್ಟವ ಹಾರಿಸಿ ಘಟ್ಟಿ ತಾ ಉಳಹುವ | ಸೃಷ್ಟಿಲಿ ಧರ್ಮ ಸಂ-ಸ್ಥಾಪನೆ ಮಾಡುವಾ 9 ಮೊದಲಂತೆ ಜಗವನು ಸುಖದಲಿ ಇಡುವನು | ಮುದದಿಂದ ಸಾರಿದ ಗುರುವರ ಮಹಿಪತಿ 10
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯ ಜಯ ಶ್ರೀ ಸದ್ಗುರುನಾಥ ದಯಗುಣದಲಿ ನಿಸ್ಸೀಮ ನೀ ಪ್ರಖ್ಯಾತ ಧ್ರುವ ಸ್ವಯಂಭು ಸ್ವತಂತ್ರ ಸ್ವಪ್ರಕಾಶ ಸ್ವಯಂಜ್ಯೋತಿಸ್ವರೂಪ ಸ್ವವಿಕಾಸ ದ್ವೈತಾದ್ವೈತಕೆ ಸಹಿತ ಸ್ವವಿಲಾಸ ಶ್ರೇಯ ಸುಖದಾಯಕನಹುದೋ ನೀ ಪರೇಶ 1 ಸ್ವಭಾವ ಸ್ವಸಿದ್ಧ ಸರ್ವಾಧಾರ ಸ್ವಭಾಸ ಸ್ವತೇಜ ಸಹಜ ನಿರ್ಧಾರ ಸ್ವಬೋಧ ಸ್ವಬ್ರಹ್ಮ ಸಾಕ್ಷಾತಾರ ಸ್ವಭಕ್ತಜನರಿಗೆ ನೀನೆ ಸಹಕಾರ 2 ಸ್ವಾನಂದ ಸದೋದಿತ ಸ್ವಯಂ ಭಾನು ಸ್ವಾನಭವಲಾದಯ್ಯ ತಾನೆ ತಾನು ಅನುದಿನ ಭೋರ್ಗರೆವ ನೀ ಕಾಮಧೇನು ದೀನಮಹಿಪತಿ ಸ್ವಾಮಿ ನೀನೆ ನೀನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ನಮ್ಮ ಕಾವ ಕರುಣನು ಶ್ರೀನಾಥ ಪೂರ್ಣ ನೀನೆ ನಮ್ಮ ಕಾವ ಕರುಣನು ಧ್ರುವ ನೀನೆ ನಮ್ಮ ಕಾವ ಕರುಣ ಭಾನುಕೋಟಿತೇಜಪೂರ್ಣ ದಾತ ಶ್ರೀನಾಥ ಸದ್ಗುರುರಾಯ ರನ್ನ 1 ನೇಮದಿಂದ ಭೋರ್ಗರೆವ ನಾಮ ನಿಮ್ಮ ಕಾಮಧೇನು ಕಾಮ್ಯ ಪೂರಿಸುವ ನಿಮ್ಮ ಕರುಣ ಕಲ್ಪವೃಕ್ಷವಯ್ಯ 2 ಹೇಮರೌಪ್ಯ ರತ್ನವಾದ ದಯವೆ ನಿಮ್ಮ ನವನಿಧಿಯ ನಿಮ್ಮ ಅಭಯಪೂರ್ಣವೆನಗೆ ಅಷ್ಟಮ ಸಿದ್ಧಿವಯ್ಯ3 ಸಂಜೀವ ನಮಗೆ ಸೌಖ್ಯನಿತ್ತು ಹೊರೆವ ನಿಮ್ಮ ಸ್ಮರಣೆ ಚಿಂತಾಮಣಿಯ 4 ತಂದೆಯಹುದೊ ಮಹಿಪತಿಯ ಚೆಂದಮಾಡುವ ಬಂದು ಜನ್ಮ ಬಂಧು ಬಳಗೆ ನೀನೆ ಅಯ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನವೆ ಎಲೆ ಮನವೆ ನೀನು ಯೋಚಿಸಿ ಕೆಡುವುದು ಅನುಚಿತವಲ್ಲೆ ಪ ನೀ ಮನನಮಾಡಿದ ಸಂಸಾರಿರದು ಕಾನನದ ಬೆಳದಿಂಗಳು ಇದು ಪರಿ ತಿಳಿದು ಹೀನಯೋಚನೆ ಬಿಟ್ಟು ಧ್ಯಾನಕವಚ ತೊಟ್ಟು ಜ್ಞಾನವೆಂಬಾಯುಧಪಾಣಿಯಾಗೆಲೊ ಬೇಗ 1 ಈ ದೇಹವೆಂಬುವ ಕಾಂತಾರ್ಹೊಕ್ಕು ಉಪಾ ಯುದ್ಹುಲಿಗಳ ತರಿದ್ಹಾಕು ಮಹಮಾಯ ಕೋಣಗಳೆಂಟು ನೂಕು ದಾಯಾದ್ಯೈವರ ಕೊಂದು ಜೀವಘಾತಕರಾದ ಮೂವರಂ ಭಂಜಿಸಿ ದ್ವಯಮಾರ್ಗ ಗೆಲಿಯೆಲೊ 2 ಕಂಟಕ ಬದಿಗಿಟ್ಟು ಬಹ ಆರೊಂದು ನದಿಗಳ ದಾಂಟು ಭೋರ್ಗರೆವ ಸರ್ಪನ ಹೆಡೆ ಮೆಟ್ಟು ಮಾರಾರಿ ವಿನಮಿತ ಧೀರ ಶ್ರೀರಾಮಪಾದ ವಾರಿಜಕ್ಕೆರಗಿ ಗಂಭೀರ ಸುಖದಿ ಮೆರಿ 3
--------------
ರಾಮದಾಸರು
ಮನಸು ನಿಲಿಸುವುದು ಬಹಳ ಕಷ್ಟ ಪ ಗುಣಿಸುವುದು ನಿಮ್ಮೊಳಗೆ ನೀವೆ ನೆಲೆ ಬಲ್ಲವರು ಅ.ಪ ಮುರಿದೋಡಿ ಬರುವ ರಣರಂಗ ನಿಲ್ಲಿಸಬಹುದು | ಹರಿಯುತಿಹ ನದಿಗಳನು ತಿರುಗಿ ಸಲಿಸಬಹುದು || ಕರಿ ಸೊಕ್ಕಿ ಬರುತಿರಲು ತಡೆದು ನಿಲ್ಲಿಸಬಹುದು | ದುರುಳಮನ ನಿಲಿಸುವುದು ಸುರರಿಗಳವಲ್ಲ 1 ಭೈರವ ದಾಡೆಯನು ಹಿಡಿದು ನಿಲ್ಲಿಸಬಹುದು | ಮಾರುತನ ಉರುಬೆಯನು ನಿಲ್ಲಿಸಲಿಬಹುದು || ಮಾರಿಗಳ ಮುಂಜೆರಗ ತುಡುಕಿ ನಿಲ್ಲಿಸಬಹುದು | ಹಾರಿ ಹಾರುವ ಮನಸು ನಿಲಿಸಲಳವಲ್ಲಿ 2 ಶರಧಿಗಳ ಭೋರ್ಗರೆವ ಧ್ವನಿಯ ನಿಲ್ಲಿಸಬಹುದು | ಸುರಿವ ಬಿರಮಳೆಯನು ನಿಲ್ಲಿಸಬಹುದು || ಹರಿದೋಡುವ ಮನಸು ನಿಲಿಸಲಾರಳವಲ್ಲ | ಸಿರಿಯರಸ ವಿಜಯವಿಠ್ಠಲ ತಾನೆ ಬಲ್ಲ3
--------------
ವಿಜಯದಾಸ
ಮಾರ್ಗವೇ ಕಾಣಿಸದು ವೈಕುಂಠಕೆ ಪೇರ್ಗಿರಿಗಳ ದಾಂಟಲಾರ್ಗಳವೋ ಕಾಣೆ ಪ ಭೋರ್ಗರೆವುದು ಬಲಮಾರ್ಗದಿ ಜಲನಿಧಿ ಕಾರ್ಗಡಲು ಎಡ ಮಾರ್ಗದಿ ಕಗ್ಗತ್ತಲೆ ಅ.ಪ ಹಿಂದೆ ಮೃಗಂಗಳ ಸಂದಣಿಯಾರ್ಭಟ ದಿಂದ ಮನದ ದೈರ್ಯಕುಂದಿದುದಕಟ ಮ ಹಾಂಧಕೂಪದೊಳೆನ್ನ ಎದೆ ಕುಸಿದು ಬಂಧಿಸಿತೆನ್ನ ಕಾವ ಬಂಧುಗಳಿಲ್ಲ 1 ಕೂಪದಿ ಕ್ರಿಮಿಗಳು ಕೋಪಿಸಿ ತನುವನು ಈ ಪರಿಯೆಲ್ಲವು ತಾಪತ್ರಯಂಗಳ ಧೂಪ ದೀಪಗಳ ಪಾಪದ ಫಲವೋ 2 ದಡವನು ಕಾಣದೆ ತಡಬಡಿಸುವೆನೋ ಮೃಡನು ತಾ ಮಾಂಗಿರಿಯೊಡೆಯ ಶ್ರೀರಂಗ ಕಡುಪಾತಕಿಯ ಕೈಹಿಡಿದೆತ್ತಿ ಕೃಪೆಯಿಂದ ತಡಿಗೆ ಸೇರಿಸಿ ನಿನ್ನ ಅಡಿಯಪಿಡಿಸೋ ದೇವಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೇವಿಯನೆತ್ತಿದನಾರೆಲಮ್ಮಾ ನಮ್ಮದೇವ ಸಿರಿಪತಿ ಕಾಣೆಲಮ್ಮಾದೇವಿ ನಮ್ಮ ದೇವರು ಬಂದರು ಕಾಣಮ್ಮ ಪ.ಕಣ್ಣೆವೆ ಇಕ್ಕದೆ ಮಾತಿಗೆ ಮನವಿಟ್ಟಸಣ್ಣದೊಡ್ಡನಾಹನಾರೆಲಮ್ಮಉನ್ಮತ್ತಖಳಸೋಮಕನವೈರಿಹೊಸ ಹೊನ್ನಬಣ್ಣದ ಮಚ್ಛವತಾರಿ ಅಲ್ಲೇನಮ್ಮ 1ಸಾರಿಸಾರಿಗೆ ಉಯ್ಯಾಲಿಡುತಲಿ ಮುಸುಡನುತೋರಿ ಜಾರಿದವನಾರೆಲಮ್ಮಆರಿಗು ಮೀರಿದಮಂದರಬೆನ್ನಲಿಭಾರಾಂತ ಶ್ರೀಕೂರ್ಮನಲ್ಲೇನಮ್ಮ 2ಘರ್ಘರಿಸುತ ಕಾಲಕೆದರಿ ಜಗದಗಲಭೋರ್ಗರೆವುತಲಿಹನಾರೆಲಮ್ಮದುರ್ಘಟ ದೈತ್ಯನ್ನ ದಂಷ್ಟ್ರದಿ ಚುಚ್ಚಿದನಘ್ರ್ಯವರಾಹದೇವನಲ್ಲೇನಮ್ಮ3ಕೂಗುತÀ ಕೊಲ್ಲುತ ಕಿಡಿಯನುಗುಳುತಲಗುಬಗೆದವನಾರೆಲಮ್ಮನೀಗಿದುಷ್ಟನ ಶರಣಾಗತ ಶಿಶುರಕ್ಷಯೋಗಿನರಹರಿ ಅಲ್ಲೇನಮ್ಮ4ಭೂಮಿ ಆಕಾಶಕೆ ಒಬ್ಬನೆ ಹಬ್ಬುತಸೀಮೆಯ ಮುಚ್ಚುವನಾರೆಲಮ್ಮಹೇಮಹೋಮದಿಮತ್ತಬಲಿಯನೊತ್ತ್ಯಾಳಿದಸಾಮದ ವಾಮನನಲ್ಲೇನಮ್ಮ 5ಸಾವಿರ ಕೈಯ್ಯವನಳಿದು ಕಡಿದು ತಾನೆಹೇವದಟ್ಟಿವನಾರೆಲಮ್ಮಈ ವಸುಧೆಯ ಭಾರವಿಳುಹಿದ ವೀರ ಭೂದೇವಕುಲದ ರಾಮನಲ್ಲೇನಮ್ಮ 6ಕರಡಿಕೋಡಗಕೊಂಡು ಕಡಲೊಳಗಾಡಿದಹುರುಡಿಲ್ಲದ ಬಿಲ್ಲನುಳ್ಳನಾರೆಲಮ್ಮಸರಕುಮಾಡಿ ರಕ್ಕಸರನೊದ್ದಸಮೀರಜವರದ ಸೀತಾರಾಮ ಅಲ್ಲೇನಮ್ಮ 7ಬಂಡಿ ಕುದುರಿ ಗೂಳಿ ಹಕ್ಕಿ ಸೀಳಿ ಗೊಲ್ಲಹೆಂಡಿರೊಳಾಡುವನಾರೆಲಮ್ಮಪಾಂಡವಪಾಲ ರುಕ್ಮಿಣಿ ವಿಜಯನುಬಂಡಿಕಾರ ಕೃಷ್ಣನಲ್ಲೇನಮ್ಮ 8ಉಡುಗೆಯನುಡದಂತರಾಟದಿ ಕದ ತಪ? ವಿದ್ದಮಡದೇರ ಕೆಡಿಸಿದನಾರೆಲಮ್ಮಮೃಡಸುರರುಬ್ಬಸಬಡಿಸುವ ಬೌದ್ಧರಕೆಡಿಪ ಮೋಹನ ಬುದ್ಧನಲ್ಲೇನಮ್ಮ 9ವಾಜಿಯನೇರಿ ಠೇವಿಡಿದು ಗಡಬಡಿಸಿಮೂಜಗ ಸುತ್ತುವನಾರೆಲಮ್ಮಮಾಜಿದ ಪುಣ್ಯವನೆತ್ತಿ ಕಲಿಯ ಕೊಂದಸೋಜಿಗದ ಕಲ್ಕಿ ಅಲ್ಲೇನಮ್ಮ 10ಮುಗ್ಧರಾಗಲಿ ಪ್ರೌಢ ಬಂಟರಾಗಲಿ ಕರೆದರೆದ್ದೋಡಿ ಬಂದವನಾರೆಲಮ್ಮಸಿದ್ಧಪುರುಷ ಪ್ರಸನ್ವೆಂಕಟಪತಿಸಾಧಿಸಿ ಪಾಡಿದಲ್ಲಿದ್ದನಮ್ಮ 11
--------------
ಪ್ರಸನ್ನವೆಂಕಟದಾಸರು