ಕೋಲನಾಡೇ ಲೋಲಾಕ್ಷಿ ಬಾರೆ ಪ.
ಕನ್ನಡಿಕದಪುಗಳ್ ಚೆನ್ನಾಗಿ ಪೊಳೆಯಲ್
ಚಿನ್ನದ ಕೋಲ್ಪಿಡಿದು ಚನ್ನೆ ನೀಂ ನಲಿದು 1
ಪಂಚಬಾಣನಶರ ಹೊಂಚಿಬೀಳುವ ತೆರೆ
ಚಂಚಲಾಕ್ಷಿಯೆ ಅರಸಂಚೆಗಮನದಿಂ2
ವಿಭವದೆÉೀಳಿಗೆಗಿದು ಶುಭದಿನವಹುದೆಂದು
ಇಂದು ಅಭಯವೀವನು ಬಂದು 3
ಶಾರದಾಗಮದಿಂದ ಸಾರವಾಂತಿರುವೆಮ್ಮ
ಭಾರತಾಂಬೆಗೆನಲವೇರೆ ಸಂಭ್ರಮದಿ 4
ಭಾರತಮಾತೆಗೆ ಭವ್ಯಮೂರುತಿಗೆ
ಭೋರೆನೆ ಜಯಭೇರಿ ಮೊರೆವುದು ಸಾರಿ 5
ತರಳೆಯರಾವೆಲ್ಲ ಪರಿಶುದ್ಧ ಭಾವದಿ
ವರಶೇಷಗಿರಿದೊರೆಗೆರಗಿ ಸಮ್ಮುದದಿ 6