ಒಟ್ಟು 11 ಕಡೆಗಳಲ್ಲಿ , 4 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದು ಮಧುರೆಗೆ ತಾ ಕೊಂದು ಮಾತುಳನ ಬಂಧನ ರಹಿತವಾಗಲು ಮಾತಾಪಿತರು 1 ಜರೆಯಸುತನ ಬಾಧೆಯು ಘನವಾಗುತಿರಲು ಜಲದೊಳು ದ್ವಾರಕಾಪುರವ ನಿರ್ಮಿಸಿದ 2 ಯದುನಂದನ ತನ್ನಗ್ರಜ ಬಲರಾಮನ ಕೂಡ ಮುದದಿಂದಾವಾಸ ಯಾದವರ ಸಹಿತಾಗಿ3 ಇರುತಿರೆ ರುಕುಮ ತನ್ನನುಜೆ ಸಹಿತಾಗಿ ಚೆಲುವ ಸುಂದರಿಗೆ ಬ್ಯಾಗ್ವಿವಾಹದುತ್ಸವವು 4 ಅಕ್ಕರದನುಜೆ ರುಕ್ಮಿಣೀದೇವಿಗಿನ್ನು ಚಿಕ್ಕ ಚೆನ್ನಿಗನಾದ ತಕ್ಕ ವರನ್ಯಾರು 5 ವಸುಧೆಪಾಲರ ಮಧ್ಯ ಶಿಶುಪಾಲನೀಗಧಿಕ ಕುಸುಮಗಂಧಿನಿಗೆ ನಿಶ್ಚಯವ ಮಾಡಿದರು 6 ಅಗ್ರಜನ್ವಾಕ್ಯವ ಕೇಳಿ ಮನದಲ್ಯೋಚಿಸುತ ಘನಮಹಿಮಗೆ ಓಲೆ ಬರೆದಳು ಲಿಖಿತ 7 ಹರಿ ನೀನೆ ಮುರವೈರಿ ಸರುವಾಂತರಯಾಮಿ ನಿನ್ನ ಸ್ಮರಣೆ ದರುಶನ ಮಾತ್ರಕೆ ಪರಮಲಾಭೆನಗೆ 8 ಎಂದೆಂದಿಗೆನ ಕೂಡಾನಂದವ ಬಟ್ಟು ಇಂದೆ ಕೈಬಿಟ್ಟು ದೂರಿಂದ ನೋಡುವರೆ 9 ಪ್ರಾಣಪತಿ ನೀ ಪಾಣಿಗ್ರಾಣ (ಗ್ರಹಣ?) ಮಾಡದಲೆ ಇರೆ ಪ್ರಾಣ ಉಳಿಯದು ಕೇಳೆನ್ನಾಸೆ ಹುಸಿಯಲ್ಲ 10 ಸರ್ವರ್ವಂದಿತ ನಿನ್ನ ಅರಮನೆದ್ವಾರ ಕಾದಿರುವೋ ಭೃತ್ಯರಿಗೊಪ್ಪಿಸಿಕೊಡದೆ ಕರುಣಾಳು 11 ದೇಶಕಾಲಕೆ ನಾ ನಿನ್ನ ಸಮಳ್ವಾಸುದೇವ ಗುಣಕಸಮಳೆಂದು ಉದಾಸೀನ ಮಾಡಬ್ಯಾಡ 12 ವಕ್ಷಸ್ಥಳದ ವಾಸಿಯ ತುಚ್ಛಮಾಡದಲೆ ಲಕ್ಷೀಲೆ ಕರೆದೊಯ್ಯೊ ಪಕ್ಷಿವಾಹನನೆ 13 ಎನ್ನ ಬಿನ್ನಪ ಕೇಳಿ ಮನ್ನಿಸೊ ಕೃಷ್ಣ ಪನ್ನಂಗಶಯನ ನಿನ್ನ ಪಾದಕ್ಕೆರಗುವೆನು 14 ಪಾದ ಉರಗ ಮೆಟ್ಟಿದ ಪಾದ ನಿನ್ನ ಧ್ವಜವಜ್ರಾಂಕುಶ ಪಾದಕ್ಕೆರಗಿ ನಮಿಸುವೆನು 15 ಬರೆದ ಓಲೆಗೆ ಹಚ್ಚಿ ಅರೆದರಿಷಿಣವ ಕರವ ಜೋಡಿಸಿ ಕೊಟ್ಟು ಕಳುಹೆ ದ್ವಾರಕೆಗೆ16 ಜಗದೀಶಗೆ ಪತ್ರವ ಜಾಣೆ ತಾ ಬರೆದು ದ್ವಿಜನ ಕೈಯಲಿ ಕೊಟ್ಟು ಕಳುಹೆ ದ್ವಾರಕೆಗೆ 17 ವ್ಯಾಳ್ಯ ಮೀರುವುದೆಂದು ಎದ್ದಾಗ ರುಕುಮ ಭೇರಿ ತಾಡನ ಮಾಡಿಸೆ ಭೋರೆಂಬೊ ರಭಸ 18 ಎರೆದು ಮುಡಿಯನ್ಹಿಕ್ಕಿ ಜಡೆಯಬಂಗಾರ ಚೌರಿ ರಾಗಟೆ ಗೊಂಡ್ಯ ಧರೆಗೆ ಮುಟ್ಟುತಿರೆ 19 ಅಚ್ಚ ಜರತಾರಿ ಹೊಳೆವಷ್ಟಪತ್ರಿಕೆಯು ಮ್ಯಾಲೊಪ್ಪುವೊ ಪಟ್ಟೀನೊಡ್ಯಾಣ ಸರಿಸಿಟ್ಟು 20 ಕಂಕಣ ಚೂಡ್ಯ ದ್ವಾರ್ಯ ್ಹರಡಿ ಕೈಕಟ್ಟು ಮ್ಯಾ- ಕಂಚುಕ ತೊಟ್ಟು 21 ಹರಳು ಮಾಣಿಕ್ಯದ್ವಾಲೆ ಬುಗುಡಿ ಬಾವುಲಿಯು ಹೊಳೆವೊ ಮುತ್ತಿನ ಮೂಗುತಿ ಥಳಥಳಸುತಲಿ 22 ಹಾರ ಪದಕದ ಮಧ್ಯ ಮೇಲಾದೇಕಾವಳಿಯು ತೋರ ಮುತ್ತಿನ ದಂಡೆ ಲೋಲ್ಯಾಡುತಿರಲು 23 ಕನ್ನಡ್ಯಂದದಿ ಗಲ್ಲ ಕಳೆಯ ಸುರಿಸುತಲಿ ಸಣ್ಣಮುತ್ತಿನ ಗೊಂಚಲು ಸರಗಳಲೆಯುತಲಿ 24 ಝಗಝಗಿಸುತ ಬಂದಳು ಜಗದ ಮೋಹಿನಿಯು ಮುಗುಳು ನಗೆಯಿಂದ ಮೂರ್ಜಗವ ಮೋಹಿಸುತ 25 25 ಗೆಜ್ಜೆ ಸರಪಳಿ ಅಂದಿಗೆ ಹೆಜ್ಜೆಸರಿಸಿಡುತ ನಿರ್ಜರೇಶನ ಮಾರ್ಗದ ನಿರೀಕ್ಷಣದಿಂದ 26 ಸುತ್ತ ಮುತ್ತೈದೇರು ಕತ್ತಿಕೈ ಭಟರು ತುತ್ತೂರಿ ವಾದ್ಯ ಭೇರಿ ತಮ್ಮಟೆ ಕಾ(ಕಹ?) ಳೆ 27 ನಡೆದು ರುಕ್ಮಿಣಿ ಹೊಕ್ಕಳು ಗುಡಿಯ ಮಹಾದ್ವಾರ ಮೃಡನರಸಿಯ ಪೂಜಿಸಿ ದೃಢಭಕ್ತಿಯಲಾಗ 28 ಹಿರಿಯ ಮುತ್ತೈದೇರಿಗೆ ಮರದ ಬಾಗಿನವ ಅರೆದರಿಷಿಣ ಕುಂಕುಮ ಕರದಲ್ಲಿ ಗಂಧ 29 ಕಡಲೆ ಕಬ್ಬು ಕಾಯಿ ಉಡಿಯ ತುಂಬುತಲಿ ಕಡಲಶಯನನ ಮಾರ್ಗವ ಬಿಡದೆ ನೋಡುತಲಿ 30 ಮಂಗಳಗೌರಿಯೆದುರಿಗೆ ಮುತ್ತೈದೇರು ಅಂಗನೆ ಭೈಷ್ಮಿ ಪೀಠದಲಿ ಕುಳ್ಳಿರಿಸಿ 31 ಮಂಗಳಾಂಗನು ನಿನ್ನ ಪತಿಯಾಗಲೆಂದು ಮಂಗಳಸೂತ್ರ ಬಂಧನ ಮಾಡಲು ನಗುತ 32 ಮಾರನಯ್ಯನ ಮೋರೆ ನೋಡಿದಾಕ್ಷಣದಿ ಮಹಾ- ದ್ವಾರದಿ ಮುತ್ತು ಸೂರ್ಯಾಡೇನೀಕ್ಷಣದಿ 33 ಹರನ್ವಲ್ಲಭೆ ತೋರೆ ಮುರಹರನ ಕರಿವರನ ಭಯ- ಹರನ ಶ್ರೀಧರನ ಕೊಡುವೆನೀ ದೇವರನು 34 ಮಚ್ಛಲೋಚನೆ ಧ್ಯಾನ ಅಚ್ಚ್ಯುತನಲ್ಲೇ ಇಡೆ ಭಕ್ತ- ವತ್ಸಲ ಬಂದನೆಂದೆಚ್ಚರಿಸಿದರು35 ಹತವಾದ ಪ್ರಾಣ ಬರಲತಿ ಹರುಷವ್ಹ್ಯಾಗೋ ರಥವ ಕಾಣುತ ರುಕ್ಮಿಣಿ ಕೃತಕೃತ್ಯಳಾಗ 36 ಸೃಗಾಲದ ಮಧ್ಯ ಒಂದು ಸಿಂಹ ಹೊಕ್ಕಂತೆ ಶ್ರೀನಾಥ ರುಕ್ಮಿಣಿಯ ಸ್ವೀಕಾರ ಮಾಡಿದನು 37 ರಥವು ಮುಂದಕೆ ಸಾಗೆ ಪಥವು ತೋರದಲೆ ಅಲೆ ಬಾಯ ಬಿಡುತ ಶ್ರೀಪತಿಯ ಬೆನ್ನ ್ಹತ್ತಿ 38 ಬಂದ ರುಕುಮನ ಗಡ್ಡ ಮಂಡಿ ಸವರುತಲಿ ಬಂಧನ ರಥಕೆ ಮಾಡಿದ ನಂದಸುತನು 39 ವಾರೆನೋಟದಿ ನೋಡಿ ಮೋರೆ ತಗ್ಗಿಸಿದ ನಾರಿ ರುಕ್ಮಿಣಿಯ ಮುಖ ನೋಡಿ ಶ್ರೀಕೃಷ್ಣ 40 ಕರುಣವಿರಲಿಕ್ಕೆ ನೀ ಬರೆದ್ಯಾತಕೆ ಓಲೆ ತಿಳಿಯಲಿಲ್ಲವೆ ಎಂದೀಪರಿ ಹಾಸ್ಯದಿ ನುಡಿದ41 ಒಡಹುಟ್ಟಿದವನಲ್ಲಿ ಕಡು ಮೋಹವಿನ್ನೂ ಹಿಡಿಯದೆನ್ನೊಳು ಕೋಪ ಬಿಡುರುಕ್ಮಿಣಿ ಎಂದ 42 <ಈಔಓಖಿ ಜಿಚಿಛಿe='ಓuಜ
--------------
ಹರಪನಹಳ್ಳಿಭೀಮವ್ವ
ಆರು ಬಂದರು ಸಖಿ ತೇರಿನ ಬೀದಿಲೆಮಾರಜನಕನ ಸಾರುತ ಹೊಗಳುವರಾರೆ ಕರಿಪುರದಲಿ ಬಂದವರಾರೆ ಪ. ದುಷ್ಟ ದೈತ್ಯರ ಶಿರವ ಕುಟ್ಟಿ ತಮಸ್ಸಿಗೆ ಹಾಕಿಅಟ್ಟಹಾಸದಿಂದ ಭೇರಿ ಘಟ್ಯಾಗಿ ಹೊಯಿಸುವರಾರೆ1 ಕ್ರೂರ ದೈತ್ಯರ ಶಿರವ ಸೇರಿಸಿ ತಮಸ್ಸಿಗೆ ಭೋರೆಂಬೊ ತುತ್ತೂರಿ ಕಾಳಿ ಹಿಡಿಸುವರಾರೆ 2 ವೆಂಕಟನ ದ್ವೇಷಿಗೆ ಸಂಕಟ ಬಿಡದೆಂದುಡಂಕರದಿಂದಲೆ ಡಂಕಿಯ ಹೊಯಿಸುವರಾರೆ 3 ಖೂಳ ದೈತ್ಯರ ಶಿರವ ಸೀಳಿ ತಮಸಿಗೆ ಹಾಕಿಭಾಳಾ ರೌಸದಿಂದ ಕಾಳಿಯ ಹಿಡಿಸುವರಾರೆ4 ಭಾಗವತರ ಸುಖ ಹೀಗೆ ಉನ್ನತ ಎಂದು ಈಗ ತೋರುತ ಭರದಿ ನಾಗಸ್ವರ ಹಿಡಿಸುವರಾರೆ5 ಅಂಬುಜನಾಭನ ನಂಬಲು ಸುಖವಿತ್ತು ಬಂಬಂಬೆನುತ ಶಂಖವ ಸಂಭ್ರಮದಿ ಹಿಡಿಸುವರಾರೆ 6 ನಿರ್ಜರ ಹಂಸನೀ ಹೌದೆಂದು ಸಂಶಯ ಬಿಡಿಸುತ ಕಂಸಾಳೆ ಹೊಯ್ಸುವರಾರೆ7 ಎಷ್ಟೆಷ್ಟು ಕಾಲಕ್ಕೂ ಕೃಷ್ಣಗೆ ದೊರೆ ಎಂದುಶ್ರೇಷ್ಠಾದ ಜಾಂಗುಟಿ ಫಟ್ಯಾಗಿ ಹೊಯಿಸುವರಾರೆ8 ಕಬ್ಬು ಬಿಲ್ಲಿನಯ ಒಬ್ಬ ಜಗದೀಶನೆಂದುಅಬ್ಬರದಿ ಕರಣೆ ನಿರ್ಭಯದಿ ಹಿಡಿಸುವರಾರೆ9 ಮಿತಿಯಿಲ್ಲದೆ ಶೃತಿ ಸಾರುವ ಮಧ್ವಮvವೆÉ ಅಧಿಕವೆಂದು ಶೃತಿಯನೆÉ ಹಿಡಿಸುವರಾರೆ 10 ತಂದೆ ರಾಮೇಶನ ಹೊಂದಲು ಸುಖವೆಂದು ಸುಂದರ ಕೊಳಲನೆ ಮುಂದೆ ಊದಿಸುವರಾರೆ 11
--------------
ಗಲಗಲಿಅವ್ವನವರು
ಈ ತನುವಿನೊಳಗೆ ಅನುದಿನವಿದ್ದು ಎನಗೊಂದು ಮಾತ ಹೇಳದೆ ಹೋದಿ ಹಂಸ ಪ. ಜಾಳಂಧರಯೆಂಬೊ ಮಾಳಿಗೆ ಮನೆಯಲ್ಲಿ ನೋಳ್ಪರೆ ಒಂಬತ್ತು ಬಾಗಿಲು ಬೇರಿಗೆ ಹೇಳಿ ಹೋಯಿತೆ ಒಂದು ಮಾತ 1 ಏರಿಯು ನೀರನು ತೆಗೆದುಕೊಂಡಿದ್ದೇನೊ ಭೋರೆಂಬೋ ಮಳೆ ಹೊಯ್ದು ಭೋರೆಂಬೊ ಮಳೆ ಹೊಯ್ದು ಬಣವೆದ್ದು ಹೋಗುವಾಗ ಈ ಏರಿಗೆ ಹೇಳಿಹೋಯಿತೆ ಒಂದು ಮಾತ 2 ಗಟ್ಟಿ ಬೆಟ್ಟಗಳಲ್ಲಿ ಅಟ್ಟಡವಿಯಲ್ಲಿ ಇಕ್ಕಿತ್ತು ಇಟ್ಟಿತ್ತು ಜೇನು ತನ್ನ ಸುಖಕಾಗಿ [ಇಟ್ಟ]ತುಪ್ಪವನುಂಡು ನೊಣ ಹಾರಿಹೋಗುವಾಗ ಈ ಬೆಟ್ಟಿಗೆ ಹೇಳಿ ಹೋಯಿತೆ ಒಂದು ಮಾತ 3 ಹೆಸರು ಹೇಳುವೆ ನಾನನುದಿನವು ರಸಭೋಜನವವುಂಡು ಜೋತಿತಾಹೋಗುವಾಗ ಪ್ರಣತಿಗೆ ಹೇಳಿ ಹೋಯಿತೆ ಒಂದು ಮಾತ 4 ಸಪರ್Àಶಯನ ಹಯವದನನಾಡಿದ ಮಾತು ಪಣೆ ಲಕ್ಷ್ಯವ ತೊಡೆದು ಮ್ಯಾಲಿರಲಾಗಿ ಸುಪ್ಪಾಣಿಮುತ್ತು ಬಾಯ್ಬಿಟ್ಟು ಹೋಗುವಾಗ ಈ ಚಿಪ್ಪಿಗೆÀ ಹೇಳಿ ಹೋಯಿತೆ ಒಂದು ಮಾತ 5
--------------
ವಾದಿರಾಜ
ಕೇಳೊ ಗೋವಿಂದ ಹೇಳಿದರಂತು ಬಲು ಚಂದ ಇಂದಿರೇಶನ ಗುಣ ಚಂದಿಲ್ಲಚಾರವಿಲ್ಲ ಅಂದರೆಭಾಳ ಬಲುಕೋಪ ಕೇಳೊ ಗೋವಿಂದ ಪ ಭೇರಿ ಬಾರಿಸಿ ಕೇಳುತ ಭೂರಿಜನರ ಕೂಡಿಭೋರೆಂಬೊ ಕಾಳಿ ಹಿಡಿಸುತ ಭೋರೆಂಬೊ ಕಾಳಿ ಹಿಡಿಸುತ ಖಳರ ಸಂಹಾರ ಮಾಡಿದ ಮಧುರೆಯಲಿ ಕೇಳೊ 1 ಹೊರಗಿಂದ ಬಂದಳು ತಿರುಗಲ ತಿಪ್ಪಿಯು ಹೆರವರಿಗುಪಕಾರಿ ಮನೆಗೆ ಮಾರಿ ಹೆರವರಿಗುಪಕಾರಿ ಮನೆಗೆ ಮಾರಿ ಮಕ್ಕಳ ಕೊರಳ ಹಿಚುಕಿ ಕೊಂದಳು2 ತಲೆಹೊೈಕ ಹಿರಿಯವ ಚಿಕ್ಕವ ಚಂಚಲ ಬಹು ಚಾಡಿಕೋರ ಇನ್ನೊಬ್ಬಬಹು ಚಾಡಿಕೋರ ಇನ್ನೊಬ್ಬ ಎನುತಲಿಫಲ್ಗುಣ ನಗುತ ನುಡಿದನು 3 ಸುರತರು ತರುವಾಗ ಇಂದ್ರ ಬಂದಿದ್ದ ಜಗಳಕ್ಕೆÀಇಂದ್ರ ಬಂದಿದ್ದ ಜಗಳಕ್ಕೆ ಆಗನಮ್ಮಕ್ಕನಿಂದ ಮಾನ ಉಳಿದೀತೊ4 ಒಗೆತನ 5 ಬಲು ಪತಿವ್ರತೆಯೆಂದು ಜನರೆಲ್ಲ ಹೊಗಳೋರು ತಲೆಯಲ್ಲಿ ಹೊತ್ತ ಮಹಾದೇವತಲೆಯಲ್ಲಿ ಹೊತ್ತ ಮಹಾದೇವ ಇಂಥವಳ ಬಲುಗುಣವಂತೆ ಎನಬಹುದೆ 6 ಒಗೆತನ ಕೇಳೊ ಗೋವಿಂದ7
--------------
ಗಲಗಲಿಅವ್ವನವರು
ಕೋಲ ಕೋಲೆನ್ನ ಕೋಲ ಕೃಷ್ಣಯ್ಯನ ನೆನೆದೇವ ಕೋಲ ಪ. ಶಿರವ ದೂಗಿದನೆ ಬ್ರಹ್ಮ ದೂಗಿದನೆಮಂದಗಮನೆಯರ ಭಾಗ್ಯ ಚಂದ್ರ ಸೂರ್ಯರಿಗಿಲ್ಲಇಂದ್ರಗೆ ಇಲ್ಲವೆಂದು 1 ಲೋಕನಾಯಕಗೆ ಏಕಾರತಿಯನೆತ್ತಿ ಗೋಕುಲಾಧೀಶ ಸಲುಹೆಂದುಗೋಕುಲಾಧೀಶ ಸಲುಹೆಂದು ಕೈಮುಗಿದುಏಕೋಭಾವದಲಿ ಕೆಲದೆಯರು2 ಭೂಮಂಡಲಪತಿ ಮುಂದೆ ಮಂಡಲ ಮಾಡಿಅನ್ನಭಾಂಡವ ತಂದು ಇಟ್ಟಾರುಅನ್ನಭಾಂಡವ ತಂದಿಟ್ಟು ಕೈಮುಗಿದಾರುಪುಂಡರಿಕಾಕ್ಷ ಕೈಕೊಳ್ಳೊ 3 ತುಪ್ಪ ಸಕ್ಕರಿಯಲಿ ಪಕ್ವಾದ ಭಕ್ಷ್ಯಮಿತ್ರೆಯರು ತಂದು ಇಡುವೋರುಮಿತ್ರೆಯರು ತಂದಿಟ್ಟು ಕೈಮುಗಿದಾರುಭಕ್ತವತ್ಸಲನೆ ಕೈಕೊಳ್ಳೊ4 ಯಾಲಕ್ಕಿ ಕಸಕಸಿ ಮೇಲಾದ ಪಾಯಸ ಬಾಲೆಯರು ತಂದು ಇಡುವೋರುಬಾಲೆಯರು ತಂದಿಟ್ಟು ಕೈಮುಗಿದಿಹರುಬಾಲಗೋಪಾಲ ಕೈಕೊಳ್ಳೊ5 ಕರ ಮುಗಿದಿಹರುಸುಲಭ ಮೂರುತಿಯೆ ಕೈಕೊಳ್ಳೊ6 ಭೇರಿ ಮೊದಲಾದ ಭೋರೆಂಬೊ ತುತ್ತೊರಿವಾರುಜ ಗಂಟೆ ಮೊದಲಾಗಿವಾರುಜ ಗಂಟೆ ಮೊದಲಾಗಿ ರಂಗನಸಾರುತಲಿವೆ ಸಭೆಯೊಳು 7 ಪಟ್ಟಿದರಸಿಯರು ಇಟ್ಟ ಪದಾರ್ಥವದೃಷ್ಟಿಲಿನೋಡಿ ಸುಖಿಸುತದೃಷ್ಟಿಲಿನೋಡಿ ಸುಖಿಸುತ ಅವರಿಗೆಕೊಟ್ಟಾನು ಬ್ಯಾಗ ಕೈವಲ್ಯ8 ನಿತ್ಯ ಪ್ರಕಾಶಗೆ ಮುತ್ತಿನಾರುತಿಯಸತ್ಯಭಾಮೆಯರು ಮೊದಲಾಗಿಸತ್ಯಭಾಮೆಯರು ಮೊದಲಾಗಿ ಬೆಳಗಿದರುಮತ್ತ ರಾಮೇಶ ಸಲುಹೆಂದು9
--------------
ಗಲಗಲಿಅವ್ವನವರು
ಕೋಲ ನವರಂಗದ ಕೋಲ ನಳನಳಿಸುವಕೋಲಶ್ರೀಲೋಲನೆಂದು ಹೊಗಳುವ ಕೋಲ ಪ. ಛsÀತ್ರ ಚಾಮರ ವಿಚಿತ್ರದ ಬಾಣ ಬಿರಸುನೃತ್ಯವಾದ್ಯಗಳು ಹೊಗÀಳುವನೃತ್ಯವಾದ್ಯಗಳು ಹೊಗÀಳುವ ಬಂಧಿಗಳಿಂದ ಅರ್ಥಿಲೆ ನಿಮ್ಮ ಕರೆಸುವ ಕೋಲ 1 ಶಂಕಿನಿ ಪದ್ಮಿನಿಯರು ಕುಂಕುಮ ಅರಿಷಿಣವಪಿಡಿದು ಪಂಕÀಜನಾಭನೆದುರಿಗೆ ಕೋಲಪಂಕಜನಾಭನೆದುರಿಗೆ ಕರೆಯಲುಅಲಂಕಾರವಾಗಿ ಬರುತಾರೆ ಕೋಲ2 ಗಂಧ ಕೇಶರದ ಚಂದದೋಕುಳಿ ತುಂಬಿಮಂದಗಮನೆಯರು ಹಿಡಕೊಂಡುಮಂದಗಮನೆಯರು ಹಿಡಕೊಂಡು ಐವರಿಗೆಬಂದು ನಿವಾಳಿ ತೆಗಿಸುವೆವು ಕೋಲ 3 ಚಿತ್ತಜನಯ್ಯಗ ಮಿತ್ರೆಯರು ಕರೆಯಲುಮುತ್ತಿನಾರತಿಯ ಹಿಡಕೊಂಡುಮುತ್ತಿನಾರತಿಯ ಹಿಡಕೊಂಡು ಐವರಿಗೆ ಎತ್ತಬೇಕೆಂಬೊ ಭರದಿಂದ ಕೋಲ4 ಅರಳು ಅರಳು ಫಲಗಳು ಐವರಿಗೆ ಭರದಿಂದ ಸೂರ್ಯಾಡಿ ಬರತೇವ ಕೋಲ 5 ರಥ ಕುದುರೆಗಳೆಷ್ಟು ರಥಿಕರು ಸೊಬಗೆಷ್ಟು ರತಿಯಿಟ್ಟು ನೋಡೊ ಜನರೆಷ್ಟು ಕೋಲರತಿಯಿಟ್ಟು ನೋಡೊ ಸೊಬಗೆಷ್ಟು ಸಖಿಯೆನಮ್ಮ ಅತಿಶಯವಾದ ಸೊಬಗೆಷ್ಟು ಕೋಲ6 ವೀರ ರಾಮೇಶನು ಭೇರಿ ದುಂಧುಭಿ ಹೊಯ್ಸಿಭೋರೆಂಬೊ ಕಾಳಿ ಹಿಡಿಸುತ ಭೋರೆಂಬೊ ಕಾಳಿ ಹಿಡಿಸುತ ಐವರವಾರಿಜನಾಭ ಕರೆಸುವ ಕೋಲ7
--------------
ಗಲಗಲಿಅವ್ವನವರು
ಪರರ ಮನೆಗೆ ಪೋಗಿ ತಿರುಗುವೆ ಯಾತಕೆ ಸುರತರುವಿರುವದ ಅರಿಯದೆ ಮನುಜ ಪ. ವರದಿಹ ಸುರಮುನಿ ಗುರುವರ ನಾರದ ಪೊರೆವ ಹರಿ ಎಂದ ಪುರಂದರದಾಸರ ಅ.ಪ. ವರ ದಿವಕರನೇಳದ ಮುನ್ನ ಸ್ಮರಿಸುತ ಹರಿಯ ನೀನೇಳೆಂದು ಕರುಣಸಾಗರ ಹರಿಚರಣಕೆ ನಿನ್ನಯ ಹರಣವ ಬಾಗುತೆ ಪೊರೆವ ನಿನ್ನ ಜೀವವೆಂದರುಹಿದ ಮರೆತು ನೀನನುದಿನ 1 ಅಂಗನೆ ದ್ರೌಪದಿ ಗಂಗ ಸ್ನಾನಕೆ ಪೋಗೆ ರಂಗನ ಚರಣವ ಸ್ಮರಿಸುವಂಥ ಶುಕರು ಹೆಂಗಳೆಯನು ಮಾನಂಗಳ್ವಸ್ತ್ರವ ಬೇಡೆ ಮಂಗಳೆ ಕೈಯಿಂದ ರಂಗನ ಕೊಡಿಸಿರೆಂದು ಮರೆತುನೀನನುದಿನ2 ತೋರಿದ ಜಗಕೆ ಕೃಷ್ಣನೆಂಬೋ ನಾರಿ ಸೊಲ್ಲ ಕೇಳಿ ಭೋರೆಂಬೊ ಸಭೆಗೆ ತಾ ಕೋರಿದಕ್ಷಯ ಶೀರೆ ಶ್ರೀ ಶ್ರೀನಿವಾಸನು ಮರೆತು ನೀನನುದಿನ3
--------------
ಸರಸ್ವತಿ ಬಾಯಿ
ಯಾರು ಬಂದರೊನಮ್ಮ ದ್ವಾರಕೆಯೊಳಗಿಂದುಭೋರೆಂಬೊ ಕಾಳಿ ಹಿಡಿಸುತ ರಮಣಿ ಪ. ಮುತ್ತಿನ ತುರಾಯಿಯವರು ಹತ್ತಿವಾಜಿಮ್ಯಾಲೆ ಚಿತ್ತ ಚಲಿಸದಲೆ ಬರತಾರೆಚಿತ್ತ ಚಲಿಸದಲೆ ಬರತಾರೆರುಕ್ಮಿಣಿ ಅಚ್ಯುತನ ನೋಡೊ ಭರದಿಂದ ರಮಣಿ1 ರಥಿಕಾ ರಥಿಕರು ತಮ್ಮ ರಥವ ಮುಂದಕ್ಕೆ ಹಾಕಿ ಅತಿ ವೇಗದಿಂದ ಬರುತಾರೆ ರಮಣಿಅತಿ ವೇಗದಿಂದ ಬರುತಾರೆ ದೇವಕಿಯಸುತ ನಂಘ್ರ್ರಿನೋಡೊ ಭರದಿಂದ ರಮಣಿ2 ನಲ್ಲೆಯರು ಮುತ್ತಿನ ಪಲ್ಲಕ್ಕಿ ಮಂದಕೆ ಹಾಕಿನಿಲ್ಲದಲೆ ಬೇಗ ಬರತಾರೆನಿಲ್ಲದಲೆ ಬೇಗ ಬರತಾರೆ ಲಕ್ಷ್ಮ್ಮಿವಲ್ಲಭನ ನೋಡೊ ಭರದಿಂದ 3 ತೇರಿನ ಬೀದಿಲೆ ಭೋರೆಂಬೊ ರಭಸಿಗೆಊರಜನವೆಲ್ಲ ಬೆರಗಾಗಿಊರಜನವೆಲ್ಲ ಬೆರಗಾಗಿಉಪ್ಪರಗಿ ಏರಿ ನೋಡುವವರು ಕಡೆಯಿಲ್ಲ4 ಬೀಡುಬಿಟ್ಟಿದ್ದ ಬೈಲು ಗಾಡಿ ಏರಿದವರು ಓಡಿಸಿ ಬೇಗ ಬರತಾರೆಓಡಿಸಿ ಬೇಗ ಬರತಾರೆಹರಿಪಾದ ನೋಡಬೇಕೆಂಬ ಭರದಿಂದ5 ಮದ್ದು ಬಾಣಬಿರಸು ರಥಿಣಿರಭಸಿಗೆ ಎದ್ದು ಜನೆರೆಲ್ಲ ಬೆರಗಾಗಿಎದ್ದು ಜನೆರೆಲ್ಲ ಬೆರಗಾಗಿ ಮುಯ್ಯದ ಸುದ್ದಿ ಕೇಳುವರು ಹರುಷದಿ 6 ಮಿತ್ರಿ ತಿಲೋತ್ತಮಾ ಮತ್ತೆಮೇನಕೆಯರುಥೈ ಥೈ ಎಂದು ಕುಣಿಯುತಥೈ ಥೈ ಎಂದು ಕುಣಿಯುತ ಬರುವಾಗಹತ್ತು ದಿಕ್ಕುಗಳು ಬೆಳಗೋವೆ7 ರಂಭೆ ಊರ್ವಸಿಯರು ಸಂಭ್ರಮದಿ ಕುಣಿಯಲುತುಂಬಿತು ನಾದ ಧರೆಯೊಳುತುಂಬಿತು ನಾದ ಧರೆಯೊಳುರುಕ್ಮಿಣಿ ಬಂದವರಾರೆಂದು ಬೆರಗಾಗಿ ರಮಣಿ8 ವಜ್ರ ಹಚ್ಚಿದ ಮನೆಗಳುಜತ್ತು ದೀವಿಗೆಯ ಸೊಬಗಿನ ಜತ್ತು ದೀವಿಗೆಯ ಸೊಬಗಿನ ಮನೆಯೊಳುಮಿತ್ರೆಯರು ನೋಡಿ ಬೆರಗಾಗಿ 9 ಕುಂದಣ ರಚಿಸಿದ ಅಂದಣವನೇರಿಕೊಂಡುಸಂದಣಿಸಿ ಬೇಗ ಬರುತಾರೆಸಂದಣಿಸಿ ಬೇಗ ಬರುತಾರೆ ನಮ್ಮ ಮುಕುಂದನ ಮನೆ ಎದುರಿಗೆ 10 ಧೀರ ಧೀರರು ತಮ್ಮ ತೇರು ವಾಜಿಯ ಇಳಿದುವೀರ ರಾಮೇಶನ ಮನೆ ಮುಂದೆವೀರ ರಾಮೇಶನ ಮನೆ ಮುಂದೆ ಹೇಳಲಿನಾರಿ ಒಬ್ಬಳನ ಕಳುಹೆಂದ ರಮಣಿ 11
--------------
ಗಲಗಲಿಅವ್ವನವರು