ನರನೆನಬಹುದೆ ಸದ್ಗುರು ವರನಾತರುವೆನಬಹುದೆ ಸುರತರುವನ್ನ ಪ
ಆಸನವನೆಹಾಕಿ ಕುಳ್ಳಿರಿಸಿದವನನಾಸಿಕ ಕೊನೆದೃಷ್ಟಿ ಇರಿಸಿದವನಬೀಸುವ ವಾಯುವ ಕುಂಭೀಸೀದವನಸೂಸುವ ಮುತ್ತಿನ ಮಳೆ ಸುರಿಸಿದವನ 1
ಆರು ಮಂಟಪ ನೆಲೆ ಅಡರಿಸಿದವನಭೇರಿ ಘಂಟವು ಶಂಖವು ಭೋರಿಡಿಸಿದವನಬೀರುವ ದ್ವಿದಳ ಸದರಕಾಶಿಸಿದವನನೂರು ಕೋಟಿಯ ರವಿ ಬೆಳಕ ಚೆಲ್ಲಿದವನ 2
ಸಾವಿರ ದಳದ ಮನೆಯ ಜೈಸಿದವನಈವ ಬ್ರಹ್ಮರಂದ್ರ ಸುಖವುಣಿಸಿದವನಕೇವಲ ಶಿಂಶುಮಾರಕೆ ಸೇರಿದವನದೇವ ಚಿದಾನಂದನ ಮಾಡಿದವನ 3