ಮುತ್ತಿ ಎನಗೆ ಬಡಿತವ್ವ ಹರಿ
ಭಕ್ತರ ಮನಿಯನ ದೆವ್ವ ಪ
ಅತ್ತಿತ್ತಮಾಡಿ ಬೆನ್ನ್ಹತ್ತಿ ಬಿಡದೆ ಎನ್ನ
ನೆತ್ತಿಕೊಂಡು ಓಡ್ಹೋಯ್ತವ್ವ ಅ.ಪ
ಬಿದ್ದರೆ ಬೀಳಗೊಡಲಿಲ್ಲವ್ವ ಸುಮ್ಮ
ನಿದ್ದರೆ ಇರಗೊಡಲಿಲ್ಲವ್ವ
ಬುದ್ಧಿಭ್ರಮಿಸಿ ಬಲುಗದ್ದಲಮಾಡೆನ್ನ
ಮುದ್ದಿಟ್ಟೆಬ್ಬಿಸಿಕೊಂಡ್ಹೋಯ್ತವ್ವ 1
ಉಟ್ಟದಟ್ಟಬಿಡಿಸೊಗಿತವ್ವ ಬಂದ
ಎರವು ಮಾಡಿತವ್ವ
ವೊಷ್ಟು ಬಿಡಿಸಿ ಎನ್ನ ಗಟ್ಟ್ಯಪ್ಪಿ ತಿರುಗದ
ಬೆಟ್ಟಕ್ಕೆ ಎಳಕೊಂಡ್ಹೋಯ್ತವ್ವ 2
ಭೋರಿಟ್ಟತ್ತರು ಎನ್ನ ಬಳಗವ್ವ ಸಮೀ
ಪಾರನು ಬರಗೊಡಲಿಲ್ಲವ್ವ
ಸಾರಸೌಖ್ಯಕ್ಕಾಧಾರ ಶ್ರೀರಾಮಪಾದ
ಸೇರಿಸಾನಂದಪದವೇರಿಸಿತವ್ವ 3