ಮಾವಿನಕೆರೆ 3
ನಮ್ಮೂರ ದ್ಯಾವರೇ ಬೊಮ್ಮನಪ್ಪನು ಎಂದು
ಹೊಯ್ಸಿರೋ ಡಂಗುರವನು ಪ
ನಿಮ್ಮ ನೆಂಟರಿಗೆಲ್ಲ ನಿಮ್ಮ ಮಕ್ಕಳಿಗೆಲ್ಲಾ
ರಂಗಪ್ಪನವನೆಂದು ಸಾರಿಸಾರಿ ಅ.ಪ
ಭೋರಪ್ಪನೆಂದರೂ ತಿಮ್ಮಪ್ಪನೆಂದರೂ
ಈರಪ್ಪನೆಂದರೂ ಒಬ್ಬನಣ್ಣ
ಸಾರಿ ಡಂಗುರವನು ಹೊಯ್ಸಿರಣ್ಣ 1
ಕುರಿಕೋಳಿ ಕೋಣಗಳ ಶಿರವ ತರಿಯಲು ಬೇಡಿ
ನರರಂತೆ ಜೀವಿಗಳು ಅವುಗಳಣ್ಣ
ಬರಿಯ ಭಕ್ತಿಯೇ ಸಾಕು ಗುರುಡವಾಹನನವನು
ಪರಮಾತ್ಮನವನೆಮ್ಮ ಕಾಯ್ವನಣ್ಣ 2
ರಂಗ ನರಶಿಂಗನು ಗಂಗೆಯನು ಹೆತ್ತನೂ
ಗಂಗೆಯನು ಹೊತ್ತವನೂ ಒಬ್ಬನಣ್ಣ
ಶಿಂಗರದ ಗೋಪಾಲ ಮಾಂಗಿರಿಯ ರಂಗನೂ
ಒಬ್ಬನೇ ತಾನೆಂದು ತಿಳಿಯಿರಣ್ಣ3