ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕನೀತಿ ಮತ್ಸರಿಸುವವರಲ್ಲಿ ಮಾನ್ಯವಿರಲೀ ಪ ಬಚ್ಚಲಿಲ್ಲದ ಮನೆಯು ಸ್ವಚ್ಛತಾನಾಗಿಹುದೆ ಅ.ಪ ಅರಿಷಡ್ವರ್ಗಗಳು ತುಂಬಿಕೊಂಡಿಹ ದೇಹ ಪರಿಶುದ್ಧವಹುದೇನೊ ಆವಾಗಲೂ ಪರಿಪರಿಯಿಂದಲಿ ಪರಿವಾರ ಜನಗಳು ಪರಿಹಾಸ್ಯಮಾಡಿ ಅಘವ ಕದ್ದೊಯ್ವರಯ್ಯ 1 ಗುಣತ್ರಯಗಳಿಂದಲಿ ನಿಬಿಡವಾದೀದೇಹ ಗುಣಕಾರ್ಯ ಮಾಡದೇ ಬಿಡದೆಂದಿಗೂ ಅಣಿಯಾಗಿ ದುರ್ಗುಣಗಳೊಕ್ಕಣಿಸಿ ಪೇಳುವಡೆ ಗುಣವ ತಿದ್ದಲು ತಾವು ಋಣಿಯಾಗುವರಯ್ಯ2 ಅಭಿಮಾನವೆಂಬುದು ನಭೋಮಂಡಲವರೆಗಿಹುದು ಶುಭವೆಂತೊ ಡಾಂಭಿಕದ ಹೇ ಮಾನವಾ ತುಂಬಿತುಳುಕುವ ದುರಭಿಮಾನವನೆ ತೊಲಗಿಸಿ ಇಂಬು ತೋರುವರಯ್ಯ ಮನಸ್ಥೈರ್ಯಕೇ3 ಕಕ್ಕುಲತೆ ಪಡದೆ ನಕ್ಕುಸಂತೈಸಿಲಾಲಿಸುವ ತೆರದಿ ಅಕ್ಕರದಿ ತನ್ನ ಅಪರಾಧಗಳನೆಲ್ಲ ಲೆಕ್ಕಿಸದೆ ಪೇಳ್ವರದು ಉಪಕಾರವಯ್ಯ 4 ಮಚ್ಚರದಿ ನಿಂದಿಸೆ ಅಚ್ಚುತನ ಭಕುತರಿಗೆ ನಿಚ್ಚದಲಿ ಸ್ವಚ್ಛಭಕುತಿ ಇಹುದು ಮಚ್ಚರಕೆ ಸ್ವೇಚ್ಛೆಯಿಂದೆದುರು ಉಚ್ಚರಿಸದಿರೆ ಮೆಚ್ಚಿ ಕಾಯುವನಯ್ಯ ಶ್ರೀ ವೇಂಕಟೇಶ 5
--------------
ಉರಗಾದ್ರಿವಾಸವಿಠಲದಾಸರು
ಶ್ರೀ ಪಾರ್ವತಿ ಸ್ತುತಿಗಳು ಶಂಭೋಮಹಾನಂದ ಸಂದಾಯಕ ಪ ಕುಂಭೋದ್ಭವಾನತ ಜಂಭಾರಿವಂದಿತ ಅಂಭೋಜ ಭವನುತ ತ್ರಿಲೋಚನಾ ಜಗದಂಬಾ ಅ.ಪ ಈಶ ಪರೇಶ ಗಿರೀಶ ಮಹೇಶಾ ಕ್ಲೇಶವಿನಾಶಾ ದಿನೇಶಪ್ರಕಾಶಾ ಪಾಶ ತ್ರಿಶೂಲಾಲಂಕಾರ ಕಲುಶವಿನಾಶಾ ನಮಿಪೆ ಮಾಂಗಿರೀಶ ಶಿವ ಜಗದಂಬಾ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ಯುವನಾಮ ಸಂವತ್ಸರ ಸ್ತೋತ್ರ 152 ಉಗ್ರಂ ವೀರಂ ಮಹಾ ವಿಷ್ಣು ಅನುಪಮ ಮಹಾಜಾಜ್ವಲ್ಯ ಸರ್ವತೋಮುಖ ಭೀಷಣ ಭದ್ರ ಮೃತ್ಯು ನರಸಿಂಹ ದೇವ ದೇವ ದೇವೋತ್ತಮನಲಿ ಶರಣಾದೆ ಯುವನಾಮ ಸಂವತ್ಸರ ಅಸಮ ನಿಯಾಮಕನಲ್ಲಿ ಪ. ಬಾಲಿಶತನ ಕಳಿದು ಪ್ರೌಢಿಮೆಯಲಿ ಬರುವ ಯುವಕ ಯುವತಿಯರು ಸಾರ ಅಸಾರ ವಿವೇಕದಿ ಇಹಪರ ಸಾರ್ಥಕ ಆಗುವ ಜೀವನ ಕ್ರಮದಿ ಚರಿಸಲು ಯೋಗ್ಯವಾಗಿರುವದು ಈ ಯುವನಾಮ ವರ್ಷ 1 ಹರಿರೇವ ಪರೋ ಹರಿರೇವ ಗುರುರ್ ಹರಿರೇವ ಜಗತ್ಪಿತೃ ಮಾತೃಗತಿಃಯೆಂಬ ಪರಮೋತ್ತಮ ಬಲು ಆಪ್ತ ವಾಕ್ಯವ ಪ್ರತಿಕ್ಷಣ ಸಂಸ್ಮರಿಸಿದರೆ ಇಷ್ಟ ಸಿದ್ಧಿ ಅನಿಷ್ಟ ನಿವಾರಣ ದಿನ ದಿನ ವಿಹಿತ ಸಾಧು ಕರ್ಮ ಆಚರಿಪರಿಗೆ 2 ವಿಷ್ಣು ಪುರಾಣದಿ ಪರಾಶರ ಮಹರ್ಷಿ ಉಪದೇಶಿಸಿದಂತೆ ಪಾಷಂಡಿಗಳಲ್ಲಿ ಪಾಷಂಡ ಮತ ಪ್ರವರ್ತಕರಲಿ ಮೋಹ ಕೂಡದು ಸಾತ್ವಿಕ ಪುರಾಣಧಿಕ್ಕರಿಸುವ ಸ್ತ್ರೀ ಪುರುಷರ ಕ್ರೌರ್ಯಕ್ಕೆ ಬಾಗಿ ಸ್ನೇಹಿಸುವ ಜನರು ವಿಪತ್ತಿಗೆ ಗುರಿ ಜನ್ಮ ಜನ್ಮಕ್ಕೂ 3 ಯುವ ವರ್ಷ ರಾಜನು ಸಾಧು ಸಜ್ಜನಪ್ರಿಯ ಶನಿಮಹಾರಾಜನು ಹರಿಭಕ್ತರು ಸಜ್ಜನರುಗಳಿಗೆ ಸಹಾಯಕನು ಗೋಚಾರದಿ ಸ್ವಕ್ಷೇತ್ರಿ ಮೂಲ ತ್ರಿಕೋಣದೆ ಚಾರ ಶ್ರೀಹರಿ ನಿಯಮನದಿ ಮಂತ್ರಿ ಶುಕ್ರಚಾರ್ಯರು ಗೋಜನ ಪ್ರಿಯರು ಲೋಕ ಹಿತಕರರು 4 ಶನೈಶ್ಚರ ಕೃತ ಲಕ್ಷ್ಮಿ ಭೋಮ ನರಸಿಂಹ ಸ್ತೋತ್ರ ಅವಶ್ಯಪಠನೀಯ ಧಶರಥ ಕೃತ ಮತ್ತು ಪ್ರಸನ್ನ ಶ್ರೀನಿವಾಸೀಯ ಶನಿ ಸ್ತೋತ್ರ ಈ ನುಡಿಗಳು ಸಂವತ್ಸರ ಸ್ತೋತ್ರ ಯತಿವರ್ಯರು ಪಂಡಿತರು ಮತ್ತೆಲ್ಲರಿಂಪಠನೀಯ ಭಕ್ತಿ ಪೂರ್ವದಿ ಪಠಿಸಿ ಮನನ ಮಾಳ್ಪರಿಗೆ ವನರುಹಾಸನ ಪಿತ ಪ್ರಸನ್ನ ಶ್ರೀನಿವಾಸ ರಕ್ಷಿಸುವ ಪ್ರತಿಕ್ಷಣದಿ 5
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಹರಿ ಸ್ತವನ ಅರ್ಜುನಗಾನಂದಾ ಮಾಡಿದ ಗೋವಿಂದಾ ಪ ರಥದಿ ಮಂಡಿಸಿ ಚತುರತನದಲಿಂದಾ ಚತುರ ಹಸ್ತದಿಂ ವಾಜಿಯಂ ಪಿಡಿದು ರಥಕನ ಬೆನ್ಹಿಂದಿಟ್ಟುಕೊಂಡು ಸಾ- ರಥಿಯು ತಾನೆ ಅಶ್ವವ ನಡಿಸುತಲಿ ರತಿಪತಿಪಿತನತಿಚಮತ್ಕಾರದಿಂ ಪೃಥಿವಿಯ ಮೇಲೆ ನರನಟನ ತೋರುತಲಿ ಪತಿತ ಪಾವನನು ಫಲ್ಗುಣ ಸಖನು ನುತಿಸಿದವರ ನೆರೆ ಪಾಲಿಸುತಿಹನು ಅತುಳ ಶಂಖದಿಂ ಭೌಂ ಭೌಂ ಎನಿಸುತ ರಥದ ಗಾಲಿ ಛಿಟ್ ಛಿಟ್ ಛಿಟಿಲೆನುತ ಕುದುರೆ ಖುರಪುಟಧ್ವನಿ ಫಳ್ ಫಳ್ ಫಳ್ಳೆ ಗೋವಿಂದನು ರಭಸದಿ ಭಕ್ತನೂಳಿಗಾ1 ಮಂದಜಭವ ಮುಖ್ಯಾಮರ ವೃಂದವು ನಂದತನುಜನಾರಂದಲೀಲೆಯಂ ಛಂದದಿ ನೋಡುತ ನಭೋಮಾರ್ಗದೊಳ್ ಬಂದು ಕುಸುಮಗಳ ವೃಷ್ಟಿಯ ಸುರಿದು ಸಿಂಧುಶಯನ ನಾಮಾಮೃತ ಸುರಿದು ಬೃಂದಾರಕ ನಿಕರವು ಕೈಯೆತ್ತಿ ಇಂದುಕಲಾಧಿಪ ಪ್ರಾರ್ಥನೆ ಸೈ ಸೈ ಎಂದು ದೇವದುಂದುಭಿ ಧೋಂ ಧೋಂ ಕಂಸಾ- ಳದರವ ಖಿಣಿಖಿಣಿ ಖಿಣಿ ಭೇರಿ ನಾದ ಖಡ್ ಖಡ್ ಖಡಲ್ ಭಾರಿ ತಾ- ಹತಜಂತರಿಧೂಂ ನರ್ತನಗೈವುತ ತೆರಳುತ 2 ಮಂಗಳ ರವದಿಂ ಜಯಜಯ ಎನಿಸುತ ಮಂಗಳಾಂಗಿ ರುಕ್ಮಿಣಿ ವಲ್ಲಭನು ರಂಗಿನಿಂದ ರಥವಿಳಿದು ಗೆಳೆಯನ ಮುಂಗೈಯನೆ ಪಿಡಿದು ಅಂಗಜನಯ್ಯ ರಂಗುಮಣಿಯ ಉಂಗುರದಿ ಒಪ್ಪುತಲಿ ಭಂಗಾರಕೆ ಮಿಗಿಲೆನಿಪ ದುಕೂಲದಿ ಶೃಂಗರದಲ್ಲಿ ಉತ್ತುಂಗ ಪರಾಕ್ರಮ ಅಂಗಳದೋಳ್ ನಲಿದಾಡುತ ರಂಗನು ತಿಂಗಳ ಕುಲದೀಪನ್ನ ನೋಡುತಲಿ ರಂಗ ಕದರುಂಡಲಗೀಶನ ಒಡೆಯನು ತಾ 3
--------------
ಕದರುಂಡಲಗೀಶರು
ಪಾದವ ತೋರೋ ಪಾವನಮಹಿಮೆ ಪಪಾದವ ತೋರೋ ರಂಗಯ್ಯಪಾದಕೆ ಬಿದ್ದು ಪಾವನನಾಗುವೆ ಪಾದವ ತೋರೋ ಅ.ಪಥಳಥಳ ಹೊಳೆಯುತ ಜಲದಿ ಸಂಚರಿಸಿದಪಾದವ ತೋರೋ ಎನ್ನಯ್ಯಬಲುಗೌಪ್ಯದಿ ಒಳಗೆಳೆದು ಮುದುರಿಕೊಂಡಪಾದವ ತೋರೋಬಲಿಯಮೆಟ್ಟಿ ರಸಾತಳಕಿಳಿಸಿದಘನಪಾದವ ತೋರೋ ಎನ್ನಯ್ಯಇಳೆಯ ಮೇಲೆ ಬಿದ್ದ ಶಿಲೆಯ ತುಳಿದಮಹಪಾದವ ತೋರೋ 1ಗಾಬರಿಯಿಂದ ಭರತ ಬಂದೆರಗಿದಪಾದವ ತೋರೋ ಎನ್ನಯ್ಯಶಬರಿ ಭಕ್ತಿಯಿಂದ ಮುಟ್ಟಿ ಪೂಜಿಸಿದ ಪಾದವ ತೋರೋಪ್ರಭು ಹನುಮಂತನ ಹೃದಯದೋಳ್ಹೊಳೆಯುವಪಾದವ ತೋರೋ ಎನ್ನಯ್ಯನಭೋಮಾರ್ಗದಿನಿಂದುವಿಭೀಷಣ ನಮಿಸಿದಪಾದವ ತೋರೋ 2ಕರಿರಾಜ ಸ್ಮರಿಸಲು ಸರಸಿಗೆ ಇಳಿದಪಾದವ ತೋರೋ ಎನ್ನಯ್ಯಉರಗನ ಶಿರಮೆಟ್ಟಿ ಪರಿಪರಿನಲಿದ ಪಾದವ ತೋರೋಗರುಡನ ಏರಿ ಗಮಿಸುವ ಪರತರಪಾದವ ತೋರೋ ಎನ್ನಯ್ಯಪರಮಪಾವನೆ ಸುರಗಂಗೆಯನು ಪೆತ್ತ ಪಾದವ ತೋರೋ 3ಸದಮಲ ರಾಧೆ ತನ್ನ್ವದನದಿಂ ಚುಂಬಿಸಿದಪಾದವ ತೋರೋ ಎನ್ನಯ್ಯವಿದುರನ ಸದನವ ಸುದಯದಿಂದ ಪೊಕ್ಕ ಪಾದವ ತೋರೋಅಧಮಪೂತನಿಯ ಕೊಂದೊದೆದಪಾದವ ತೋರೋ ಎನ್ನಯ್ಯವಿಧವಿಧದೆಶೋದೆ ತೊಡೆಯ ಮೇಲಾಡಿದಪಾದವ ತೋರೋ 4ಧರೆಯನು ಮೀಂಟಿ ಕುರುಪನ ಕೆಡಹಿದಪಾದವ ತೋರೋ ಎನ್ನಯ್ಯಧುರದಲಿ ನರನ ವರೂಥ ನೆಲಕೊತ್ತಿದ ಪಾದವ ತೋರೋಚರಣದಾಸರಿಗೆ ಪರಮಮುಕ್ತಿನೀಯ್ವಪಾದವ ತೋರೋ ಎನ್ನಯ್ಯವರದ ಶ್ರೀರಾಮನ ಮರೆಯಬಿದ್ದ ನಿಜ ಪಾದವ ತೋರೋ 5
--------------
ರಾಮದಾಸರು