ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿರುಮಲೇಶವಿಠಲಾ | ಪೊರೆಯ ಬೇಕಿವಳಾ ಪ ನಿರುತ ನಿನ್ನಯ ನಾಮ | ಸ್ಮರಣೆ ಸುಖ ಕೊಡುತಾ ಅ.ಪ. ಸ್ವಪ್ನದಲಿ ತವರೂಪ | ಕನ್ಯೆತಾ ಕಾಣುತ್ತಾಉನ್ನಂತ ಹರ್ಷದಲಿ | ಭಿನ್ನವಿಸಿ ಇಹಳೋ |ಪನ್ನಗಾರಿಧ್ವಜನೆ | ಮನ್ನಿಸುತ ಮನ್ಮಾತಕನ್ಯೆಗಭಯದನಾಗಿ | ನನ್ನೆಯಿಂ ಸಲಹೋ 1 ಶೂನ್ಯ | ಭೋಧಾತ್ಮ ಶ್ರೀ ಹರಿಯೆಭೇದಪಂಚಕ ವರುಹಿ | ಮಧ್ವಮತ ದೀಕ್ಷಾ |ಸಾಧಿಸುವುದಿವಳಲ್ಲಿ | ಹೇದಯಾಂಬುದೆ ಪೂರ್ಣಭೋದಮುನಿಯ ಸನ್ನುತನೆ | ವೇದಾಂತ ವೇದ್ಯಾ 2 ವ್ರಾತ ಸಮತೆಲಿಯುಂಬಭೂತಿಕರುಣಿಸು ಹರಿಯೆ | ವಾತಾಂತರಾತ್ಮಾ |ಧಾತಾಂಡ ಸೃಜಿಸಿ ಹರಿ | ಓತ ಪ್ರೋತನು ಇರಲುಮಾತನೊಪ್ಪಿಸೆ ನಿನಗೆ | ಏತರವ ನಾನೂ 3 ಹರಿಗುರೂ ಸದ್ಭಕ್ತಿ | ಹಿರಿಯರಾ ಸತ್ಸೇವೆಕರುಣಿಸುತ ಸಾಧನದ | ವರಮಾರ್ಗ ತೋರೋ |ಶರಣಜನ ವಾತ್ಸಲ್ಯ | ಬಿರಿದು ಪೊತ್ತಾಮೇಲೆಕರುಣಾಬ್ಧಿಪೂರ್ಣೆಂದು | ಕರಪಿಡಿಯೊ ಇವಳಾ 4 ಸಾಮಗಾನವಿಲೋಲ | ಭಾಮೆರುಕ್ಷ್ಮಿಣಿಲೋಲಸಾಮಾಜಾವರವರದ | ಭೂಮಗುಣಪೂರ್ಣ |ಕಾಮಾರಿಸನ್ನುತನೆ | ಕಾಮಿತಪ್ರದನಾಗೊಕಾಮನಯ್ಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವಂದಿಪೆ ಗುರುವೆ ನೀ ಕಲ್ಪತರುವೇ ಬಂಧನ ಕಳೆಯುವ ಭೋಧಾತ್ಮ ಗುರುವೆ ಅಗಣಿತ ಮಹಿಮಾ ಜಗದಾಧಾರ ಬಗೆಗೆ ನಿಲುಕದಿಹ ಘನನಿರ್ವಿಕಲ್ಪ ಮಾನವ ರೂಪದಿ ಸ್ವಾನುಭವವ ತೋರ್ದ ಮುಕುತಿದಾಯಕನೇ ಪರಮಾತ್ಮ ನೀನೆಂದು ಪರಶೃತಿ ಪೇಳೆ ಸರಿಯಾಗಿ ಬೋಧಿಸಿ ಕರುಣೆದೋರುವನೇ ಜಗವೆಲ್ಲ ಪುಸಿಯೆಂದು ಜಗಕೆಲ್ಲ ಪೇಳುವ ಭಗವಂತ ದಯದೋರಿ ಪೊರೆವುದು ದೇವಾ ಚಿನುಮಯರೂಪನೆ ಸ್ವಾನಂದರೂಪಾ ಮನವು ನಿನ್ನೊಳಗಿರಲಿ ಶಂಕರರೂಪಾ
--------------
ಶಂಕರಭಟ್ಟ ಅಗ್ನಿಹೋತ್ರಿ