ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದುವೇ ಸಾಧಕ ವೃತ್ತಿಗಳು | ಇದೇ ಅಬಾಧಕ ಯುಕ್ತಿಗಳು ಪ ಸದ್ಗುರು ಪಾದಕ ಸದ್ಭಾವದಿ ನಂಬಿ | ಹೃದ್ಗತ ಗುಜವನು ಪಡೆದಿಹನು | ಸದ್ಗತಿಕಾಂಕ್ಷಿತ ಹರಿ ಕೀರ್ತನೆಗಳ | ಉದ್ಗಾರ ಪ್ರೇಮದ ಮಾಡುವನು 1 ಬಲ್ಲವನು ಕಂಡೆರಗಿ ಸಿದ್ಧಾಂತದಾ | ಉಳ್ಳಸದ್ಭೋಧವ ಕೇಳುವನು | ಮೆಲ್ಲನೆ ಮನನದಿ ಧ್ಯಾಸವು ಬಲಿಯುತ | ಕ್ಷುಲ್ಲರ ಮಾತಿಗೆ ಮನ-ವಿದನು 2 ಅನ್ಯರ ಸದ್ಗುಣ ವಾರಿಸಿ ಕೊಳುತಲಿ | ತನ್ನವಗುಣಗಳ ಜರಿಸಿದವನು | ಸನ್ನುಡಿ ಬಿರುನುಡಿಗಳಕದೆ ಕುಜನರ | ಮನ್ನಿಸಿ ಶಾಂತಿಯನು ಜಡಿದಿಹನು 3 ಬುದ್ಧಿಯ ಹೇಳಿದರೆ ನೀ ಹಿತ ಬಗೆಯದೆ | ತಿದ್ದುದರಂದದಿ ತಿದ್ದುವನು | ಇದ್ದಷ್ಟರೊಳಗೆ ಸಾರ್ಥಕದಲಿ ದಿನ | ಗದ್ದಿರ ಹೊರಿಯಲು ಉದರವನು 4 ಸರ್ವರೊಳಗೆ ಬಾಗಿ ಶಮೆ ದಮೆಯಿಂದಲಿ | ಗರ್ವವ ತ್ಯಜಿಸಿಹ ಜನರೊಳಗೆ | ಸರ್ವಭಾವದಿ ಗುರು ಮಹಿಪತಿ ಸ್ವಾಮಿಯು | ಅರ್ವವ ಜಗಸನ್ಮತನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುಬೋಧ ಪರಮಸುಖಕಾರಿ ಬಾರಿ ಬಾರಿಗೂ ಕೇಳೈ ಭವರೋಗೀ ಪ ಬಿಡು ಬಾಳಿನ ಭ್ರಮೆಯ ಸಂಸಾರಿ ದುಃಖದ ಬಾಳಿದು ವಿನಾಶಕಾರಿ ಇದರೊಳು ಸಿಗುತಿಹ ಸುಖವು ವಿಕಾರಿ ತಿಳಿಯೈ ಮುಕ್ತನಾಗಲಿದು ದಾರಿ 1 ಆರಿ ನಿನ್ನಯ ನಿಜವಾ ಸುವಿಚಾರಿ ಅರಿವೇ ನಿನ್ನಯ ಈ ಭವತಾರಿ ಬೇರಾವುದು ನಿನಗಾಗದು ದಾರಿ ಈ ನುಡಿ ಪೇಳುತಿಹುದು ಶೃತಿಸಾರಿ 2 ಜಾಗರಾ ಕನಸು ನಿದ್ರೆಯ ಮೀರಿ ಅಮರವಾಗಿರುವ ಪದವನೆ ತೋರಿ ಅದೆ ನೀನೆನ್ನುತ ಪರಿಪರಿ ಸಾರಿ ಶಂಕರಭೋಧವಿದುವೆ ಭವಹಾರಿ3
--------------
ಶಂಕರಭಟ್ಟ ಅಗ್ನಿಹೋತ್ರಿ
ನೋಡಿ ನೋಡಿ ನಿಮ್ಮೊಳು ಪ ನೋಡಿ ನೋಡಿ ನಿಮ್ಮೊಳು ನಿಜವಾ ನೋಡಿರ್ಯೋ | ಬ್ಯಾಡಿ ಬ್ಯಾಡಿ ಮೈಯ್ಯ ಮರಿಯ ಬ್ಯಾಡಿರ್ಯೊ | ಮಾಡಿ ಮಾಡಿ ಸ್ವಹಿತವನು ಮಾಡಿರ್ಯೋ | ಪಾಡಿ ಪಾಡಿ ಅಚ್ಚುತನ ನಾಮ ಪಾಡಿರ್ಯೋ 1 ಕೇಳಿ ಕೇಳಿ ಸದ್ಭೋಧವನೆ ಕೇಳಿರ್ಯೋ | ಬಾಳಿ ಬಾಳಿ ಸತ್ಸಂಗದಲಿ ಬಾಳಿರ್ಯೋ | ಕೇಳಿ ಕೇಳಿ ಮದಮತ್ಸರವಾ ಕೇಳಿರ್ಯೋ | ತಾಳಿ ತಾಳಿ ವಿವೇಕ ಗುಣವಾ ತಾಳಿರ್ಯೋ | 2 ಕೂಡಿ ಕೂಡಿ ತಂದೆ ಮಹಿಪತಿ ಕೂಡಿರ್ಯೋ | ನೀಡಿ ನೀಡಿ ತನುಮನಧನ ನೀಡಿರ್ಯೋ | ಬೇಡಿ ಬೇಡಿ ಗತಿ ಮುಕ್ತಿಗಳ ಬೇಡಿರ್ಯೋ | ಮಾಡಿ ಮಾಡಿ ಸಾರ್ಥಕ ಜನ್ಮ ಮಾಡಿರ್ಯೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮನುಜದನುಜ ರಿವರೆವೆ ನೋಡಿ | ದನುಜನು ದೈತ್ಯರೊಳೆನ ಬ್ಯಾಡಿ ಪ ಹರಿ ನೆನೆಯುತ ಹರಿಕಥೆಗಳ ಕೇಳುತ | ಹರಿ ಭಕುತಿಗೆ ಬೆರೆದವ ಮನುಜಾ | ನಿರುತ ಆಹಾರ ನಿದ್ರೆ ಚರಟ ಮಾತುಗಳಾಡಿ | ಬರಿದೆವೆ ದಿನಗಳೆವವ ದನುಜಾ 1 ಪರರ ಸದ್ಗುಣ ವಾಲಿಸಿಕೊಳುತಲಿ | ಸಕ | ಲರಿಗೆ ಮನ್ನಿಸುವವನೇ ಮನುಜಾ | ಗರುವ ಹಿಡಿದು ತನ್ನ ಹೊಗಳುತ ಅನ್ಯರ | ಬರಿದೆ ನಿಂದಿಸುವವನೆ ದನುಜಾ 2 ಪಥ | ಸರ್ಕನೆ ತಿಳಿದವ-ನೆವೆ ಮನುಜಾ | ಮೂರ್ಖತನ ಹಿಡಿದು ಸಾಧು ಸಂತರಲಿಕು | ತರ್ಕವ ಮಾಡುವವನೆ ದನುಜಾ 3 ಹುಟ್ಟಿದರಲಿ ಸಂತುಷ್ಟದಿ ಕವಳವ | ನಿಷ್ಠೆಗೆ ತಾರದವನೆ ಮನುಜಾ | ನೃಪರ ನಂಬಿ ಲಾಭಾ ಲಾಭ ಕೊಡುವ | ಸೃಷ್ಟೀಶನನು ಮರೆತವ ದನುಜಾ 4 ತಂದೆ ಮಹಿಪತಿ ಭೋಧವ ಮನದಲಿ | ತಂದು ಹರುಷವ ಪಡುವವ ಮನುಜಾ | ದಂದುಗ ಚಿತ್ತದಿ ಹೇಳಿದ ಮಾತಿಗೆ | ಸಂದೇಹ ಬಟ್ಟವನವ ದನುಜಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು