ಸಾರವೆಂದು ನಂಬಬ್ಯಾಡವೋ ಸಂಸಾರ
ಸಾರವೆಂದು ನಂಬಬ್ಯಾಡವೋ ಪ
ಸಾರವೆಂದು ನಂಬದೇ ಸಂಸಾರ ಸುಖವೆಲ್ಲ ಅ
ಕಂಸಾರಿ ಚರಣ ಸಾರಿರೋ ಅ.ಪ
ಇಂದ್ರಜಾಲ ದೊಡ್ಡವಣ ಗಂಧರ್ವ ಪುರದ ಮಾಟಾ
ಸಾಂದ್ರಜಲ ಪೂರಾ ಛಂದವಿದು ನೋಡಿರ್ಯೋ
ಕನಸಿನಲಿ ಕೆಂಯ್ಯಾ ಬೆಳೆಯ ಘನವಕಂಡು ನೆಚ್ಚಿ ತನ್ನ
ಮನಿಯೊಳಿಹ ಧಾನ್ಯವೆಲ್ಲಾ ಜಿನುಗು ಮಾಡಿದಂದದಿ 1
ತನುವುತನ್ನನಳಿದರೆ ತನು ಸಂಬಂಧಿಗಳಾರು
ಕ್ಷಣಿಕವಾದಾ ಸತಿಸುತ ಧನದ್ರವ್ಯ ಕಾಣಿರ್ಯೋ
ಮರ್ಕಟವು ಕೀಲುದೆಗೆದು ಪುಕ್ಕಟೆವೆಸಿಕ್ಕಿದಂತೆ
ಅಕ್ಕರದ ಸುಖವೆಲ್ಲಾ ದುಃಖ ರೂಪ ಕಾಣಿರ್ಯೋ 2
ಕುತ್ತಿನ ಮಡಹು ತಾಪತ್ರಯ ತಾರುಮನೆ
ಮೃತ್ಯುಬಾಯ ತುತ್ತುರೋಗ ಹುತ್ತವಿದು ಕಾಣಿರ್ಯೋ
ಮರಹು ನೀಗಿ ಹರಿಯಭಕ್ತಿ ಬೆರೆದು ನಿತ್ಯರಾಗಿರೆಂದು
ಗುರು ಮಹಿಪತಿ ಭೋದಗರೆದ ವಾಕ್ಯನೋಡಿರ್ಯೋ 3