ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸು ಬೇಗ ಸಿರಿವರ ಕರುಣಿಸು ಬೇಗ ಪ. ಲಕ್ಷ್ಮಾಶ್ರಯ ವಕ್ಷಸ್ಥಳ ಪಕ್ಷೇಂದ್ರ ವಿಹಾರಿ ಅಕ್ಷಾರಿ ಪ್ರಿಯ ಪೂರ್ಣ ಕಟಾಕ್ಷದಿ ನೋಡುತಲಿ 1 ಕಂಠೇಧೃತ ಕೌಸ್ತುಭ, ವೈಕುಂಠಾಲಯವಾಸಿ ಶುಂಠಾಶಯ ಧೂವನ ನರ ಕಂಠೀರವ ಕಮಠಾ 2 ದೂರೀಕೃತ ಘೋರಾಮಯ ಧೀರಾಖಳ ಸಾರಾ ನಾರಾಯಣ ನರಕಾರ್ಣವ ತಾರಣ ರಘುವೀರ 3 ಭಕ್ತಾವನಶಕ್ತಾಮೃತ ರಕ್ತಾಧರ ಶ್ರೀದ ಪಾದ 4 ವಾಗೀಶ ವೃತಾನುಗ ಸಕಲಾಗಮನುತ ಚರಣ ಭೋಗೀಶ ಧರಾಲಯ ದಯವಾಗು ಸದಾಶರಣ 5
--------------
ತುಪಾಕಿ ವೆಂಕಟರಮಣಾಚಾರ್ಯ
ನಾಕಾಧಿಪ ಮುನಿಜನವರದಾಮೆಯಾ ಪ ಲೋಕೇಶನುತ ಕಂಜಲೋಚನಾಮೆಯಾ ಸಾಕಾರ ಭೋಗೀಶ್ವರ ಮಂಜುಳಚರಣಾ ಅ.ಪ ಉದಿತ ಭಾಸ್ಕರಹಿತನಾಥನಾಧಾರೇ 1 ವರವೇಲಾಪುರವಾಸ ವೈಕುಂಠ ಸರ್ವೇಶಾ2
--------------
ಬೇಲೂರು ವೈಕುಂಠದಾಸರು
ಮಗನೆಂದಾಡಿಸುವಳು ಮೊಗ ನೋಡಿ ನಗುವಳು ಪ ಜಗದುದ್ಧಾರನ ಮೊಗ ಮೊಗದೊಳಿರಿಸಿಕೊಂಡು ಅ ಕಾಲಲಂದುಗೆ ಗೆಜ್ಜೆ ತೋಳ ಮಣಿಯ ದಂಡೆಫಾಲದ ಅರಳೆಲೆಯು ಕುಣಿಯೆನೀಲದುಡುಗೆಯುಟ್ಟ ಬಾಲನೆ ಬಾರೆಂದುಪಾಲುಣಿಸುವ ಪುಣ್ಯವೆಂತು ಪಡೆದಳಯ್ಯ 1 ಬಣ್ಣ ಸರವಲ್ಲಾಡೆ ವರ ರನ್ನ ನೇವಳದಹೊನ್ನ ಗಂಟೆಯು ಘಣ ಘಣರೆನಲುಪನ್ನಗಶಯನನೆ ಕುಣಿಯೊಮ್ಮೆ ಕುಣಿಯೆಂದುಕುಣಿಸಿ ನಗುವ ಪುಣ್ಯವೆಂತು ಪಡೆದಳಯ್ಯ 2 ಪೊಡವಿಯ ಈರಡಿ ಮಾಡಿದ ದೇವನಕುಡಿಬೆರಳನೆ ಕರದಲಿ ಪಿಡಿದುಅಡಿಯಿಡು ಮಗನೆ ಮೆಲ್ಲಡಿಯಿಡು ಎನುತಲಿನಡೆಗಲಿಸುವ ಪುಣ್ಯವೆಂತು ಪಡೆದಳಯ್ಯ 3 ಕುಕ್ಷಿಯೊಳು ಈರೇಳು ಜಗವನ್ನು ಸಲಹುವನರಕ್ಷಿಪರು ಉಂಟೆ ತ್ರೈಜಗದೊಳಗೆಪಕ್ಷಿವಾಹನ ನೀನು ಅಂಜಬೇಡ ಎನುತಲಿರಕ್ಷೆ ಇಡುವ ಪುಣ್ಯವನೆಂತು ಪಡೆದಳಯ್ಯ 4 ಶಂಖ ಚಕ್ರ ಗದಾ ಪದುಮಧಾರಕನಪಂಕಜ ಮಿತ್ರ ಶತಕೋಟಿ ತೇಜನಸಂಖ್ಯೆಯಿಲ್ಲದಾಭರಣಗಳ ತೊಡಿಸಿಯಲಂಕರಿಸುವ ಪುಣ್ಯವೆಂತು ಪಡೆದಳಯ್ಯ 5 ಸಾಗರಶಯನನ ಭೋಗೀಶನ ಮೇಲೆಯೋಗ ನಿದ್ರೆಯೊಳಿಪ್ಪ ದೇವನನುಆಗಮ ನಿಗಮಗಳರಸಿ ಕಾಣದ ವಸ್ತುವನುತೂಗಿ ಪಾಡುವ ಪುಣ್ಯವೆಂತು ಪಡೆದಳಯ್ಯ 6 ವಾಹನ ದೇವರ ದೇವನಹಚೆನ್ನಾದಿಕೇಶವನನೆಂತು ಪಡೆದಳಯ್ಯ7
--------------
ಕನಕದಾಸ
ಸಾಗರ ಸ್ಥಿತನಿಲಯ ಭೋಗೀಶ ಕೃತಶಯ್ಯ ವಾಗೀಶಸಂಸೇವ್ಯ ಭಜಕಭಾವ್ಯ ಅನಘ ಕರುಣಾಪಾಂಗ ಮಂಗಳಾಂಗ ಆದಿನಾರಾಯಣಾ ಆನಂದ ಪರಿಪೂರ್ಣ ಆಪನ್ನಿವಾರಣಾ ಅಪ್ರಮೇಯ ಸುರವಿರೋಧಿಕೃತಾಂತ ಸುರರಾಜವÀಂದಿತ ಧರಣೀ ಸುರಾರ್ಚಿತ ದಿವ್ಯಚರಿತ ಮುರಾರಿ ವಿನುತಾದ್ಭುತ ಪ್ರಭಾವ ಸ್ಮರತಾತ ಸ್ಥಿತಿಕರ್ತ ನಿತ್ಯವಿಭವ ವರಶೇಷಗಿರಿವಾಸ ಶ್ರೀನಿವಾಸ
--------------
ನಂಜನಗೂಡು ತಿರುಮಲಾಂಬಾ
ಹರಿಮನದಂಬೇ ಪರಮ ಕದಂಬೇ ಸುರಪನುತೆ ಮಾಂಗಿರೀಶ ಸೌರಭೇ ಪ ಸಿರಿಮಧುರಭಾಷಿಣೆ ಶ್ರೀಮಣಿ ಸರಸಿಜನೇತ್ರರಮಣೀ ಸುವಾಣಿ ವರ ಭೋಗೀಶವೇಣಿ ಸದ್ಗುಣಿ ಸುರುಚಿರ ಸುಮಪಾಣಿ ಭಾಮಿನಿ 1 ವನಜಭವ ಪೂಜಿತೇ ವಂದಿತೇ ಮನಸಿಜಮಾತೆ ಮಹಿತೇ ವಿನೀತೇ ವೈನತೇಯಾದಿ ಸಂತಾನಕೆ ಜನಗಣನುತೆ | ರಂಗ ಮೋಹಿತೇ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಗನೆಂದಾಡಿಸುವಳು | ಮೊಗ ನೋಡಿ ನಗುವಳು ಪಜಗದುದ್ಧಾರನ ಮೊಗ ಮೊಗದೊಳಿರಿಸಿಕೊಂಡು ಅ.ಪಕಾಲಲಂದುಗೆ ಗೆಜ್ಜೆ ತೋಳ ಮಣಿಯು ದಂಡೆಫಾಲದ ಅರಳೆಲೆಯು ಕುಣಿಯೆನೀಲದುಡುಗೆಯಿಟ್ಟ ಬಾಲನೆ ಬಾರೆಂದುಪಾಲುಣಿಸುವ ಪುಣ್ಯವೆಂತು ಪಡೆದಳಯ್ಯ 1ಬಣ್ಣದ ಸರಗಳಿಡೆ ರನ್ನದ ನೇವಳಹೊನ್ನ ಘಂಟೆಯು ಘಣ ಘಣರೆನಲುಪನ್ನಗಶಯನನೆ ಕುಣಿಯೊಮ್ಮೆ ಕುಣಿಯೆಂದುಕುಣಿಸಿ ನಗುವ ಪುಣ್ಯವೆಂತು ಪಡೆದಳಯ್ಯ 2ಕುಕ್ಷಿಯೊಳೀರೇಳು ಜಗವನು ಸಲಹುವರಕ್ಷಿಪರುಂಟೆ ತ್ರೈಜಗದೊಳಗೆಪಕ್ಷಿವಾಹನ ನೀನು ಅಂಜಬೇಡೆನುತಲಿರಕ್ಷೆಯಿಡುವ ಪುಣ್ಯವೆಂತು ಪಡೆದಳಯ್ಯ 3ಶಂಕ ಚಕ್ರಗದಾ ಪದುಮಧಾರಕನಪಂಕಜಮಿತ್ರಶತಕೋಟಿ ತೇಜನನುಸಂಖ್ಯೆಯಿಲ್ಲದ ಆಭರಣಗಳ ತೊಡಿಸಿ ಅಲಂಕರಿಸುವ ಪುಣ್ಯವೆಂತು ಪಡೆದಳಯ್ಯ 4ಸಾಗರಶಯನು ಭೋಗೀಶನ ಮೇಲೆಯೋಗನಿದ್ದೆಯೊಳಿಪ್ಪ ದೇವನನುಆಗಮನಿಗಮಗಳರಸ ಕಾಣದ ವಸ್ತುತೂಗಿ ಪಾಡುವ ಪುಣ್ಯವೆಂತು ಪಡೆದಳಯ್ಯ 5ಪನ್ನಗಶಯನ ಉನ್ನಂತ ಮಹಿಮನಸನ್ನುತಭಕುತರ ಸಲಹುವನಪನ್ನಗಾರಿವಾಹನದೇವರ ದೇವಚೆನ್ನಕೇಶವನ ಪಡೆದಳಯ್ಯಾ * 6
--------------
ಪುರಂದರದಾಸರು