ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಮಾಡಿದರೇನು ಹೀನಮಾನವನು ಧಿನದಯಾಸಿಂಧು ಹರಿ ನೀನೊಲಿಯದಿರಲು ಪ ಸ್ನಾನ ಮಾಡಿದರೇನು ನಾನಾತೀರ್ಥವ ತಿರುಗಿ ಮೌನ ಮಾಡಿದರೇನು ನಯನಗಳು ಮುಚ್ಚಿ ದಾನ ಮಾಡಿದರೇನು ಧ್ಯಾನ ಮಾಡಿದರೇನು ಧ್ಯಾನದಾಯಕ ನಿನ್ನ ದಯವಾಗದಿರಲು 1 ಜಪವ ಮಾಡಿದರೇನು ಅಪರೂಪ ಮಡಿಯುಟ್ಟು ತಪವ ಮಾಡಿದರೇನು ವಿಪಿನವನು ಸೇರಿ ಗುಪಿತಶಾಸ್ತ್ರವ ಕಲಿತು ನಿಪುಣನೆನಿಸಿದರೇನು ಸುಫಲದಾಯಕ ನಿನ್ನ ಕೃಪೆಯಾಗದಿರಲು 2 ತತ್ವವನು ವಿಂಗಡಿಸಿ ಅರ್ಥಮಾಡಿದರೇನು ಪೃಥ್ವಿಬಿಡದ್ಯಾವತ್ತು ಸುತ್ತುಗಟ್ಟಿದರೇನು ಕುತ್ತಿಗೆಯ ಕೊಯ್ದಿಟ್ಟು ಮತ್ತೆ ಕಲೆಸಿದರೇನು ಚಿತ್ತಜಪಿತ ನಿನ್ನ ಚಿತ್ತಕ್ಕೆ ಬರದಿರಲು 3 ಯೋಗವನು ಕಲಿತು ಬಲುಯೋಗ ಮಾಡಿದರೇನು ಭಾಗವತವೋದಿ ಬಲು ಯಾಗ ಮಾಡಿದರೇನು ಭೋಗವನ್ನು ತ್ಯಜಿಸಿ ಬಲು ಜಾಗರಣ ಮಾಡಲೇನು ನಾಗಶಯನನೆ ನಿನ್ನ ನಿಗ ಬೀಳದಿರಲು 4 ಒಪ್ಪಿಡಿ ಅವಲಕ್ಕಿಗೊಪ್ಪಿ ಸಂಪದ ಕೊಟ್ಟು ತಪ್ಪುಗಾರನ ಕ್ಷಮಿಸಿ ಅಪ್ಪಿ ಪದವಿತ್ತಿ ಒಪ್ಪುಗಾರನೆ ನೀನು ಒಪ್ಪಿದ ಬಳಿಕಾವ ತಿಪ್ಪುಳದ ಗೋಜಿಲ್ಲೆನ್ನಪ್ಪ ಶ್ರೀರಾಮ 5
--------------
ರಾಮದಾಸರು
ಕಲಿಯುಗದೊಳು ಕಂಡೆನು ನಿನ್ನೊಬ್ಬನ | ಕಲಿವಾಳದನಿಂಗಪ್ಪ || ಕಲಿತ ಬುದ್ಧಿಯು ಕಡೆಯಲಿ ನಿನ್ನ |ಕೆಲಸಕೆ ಏನೂ ಬಾರದಪ್ಪ ಪ ಎತ್ತು ಎಮ್ಮಿ ಆಕಳ ಹೋರಿ | ಜತನ ಮಾಡೀದೆಪ್ಪ || ಮೃತ್ಯು ದೇವತೆಗೆ ತುತ್ತು ಇದರೊಳು | ಮುಕ್ತಿ ನಿನಗಿಲ್ಲಪ್ಪಾ 1 ಹೊಲಮನಿಯೆಂದು ನಲಿನಲಿದಾಡುತ | ಒಲಒಲ ಗುಟ್ಟುವಿಯಪ್ಪಾ || ಹೊಲಮನಿ ಸಾಧಿಸಿ ಸಂಗಡ |ಒಯ್ದಿಲ್ಲಾ ನಿಮ್ಮಪ್ಪಾ 2 ಶುದ್ಧವಾಗಿ ನೀ ಕೋಶವ ಕಲಿತು | ಬದ್ಧವ ತಿಳಕೋಳಪ್ಪಾ || ಬುದ್ಧಿವಂತನು ನೀ ಸ್ವರ್ಗದ ಸುದ್ದಿಯು | ಸ್ವಲ್ಪವು ನಿನಗಿಲ್ಲಪ್ಪಾ 3 ರೋಗವ ನೀಗಿಸಿ ಜನರಿಗೆ ಭೋಜನ | ಭೋಗವನ್ನು ನೀ ಪಡೆದೆಪ್ಪಾ || ಹೋಗದು ಕರ್ಮವು ಇದರಲಿ ಮುಂದಿನ | ಆಗಮ ಮಹಿಮೆಯ ತಿಳಕೋಳಪ್ಪಾ 4 ಅಪರೂಪದ ನರದೇಹಕೆ ಬಂದು | ವಿಪರೀತ ವಿದ್ಯಾಕಪ್ಪ || ಗುಪಿತದಿ ಭವತಾರಕನ ಭಕ್ತರ |ಕೃಪೆಯನು ನೀ ಸಂಪಾದಿಸಪ್ಪಾ 5
--------------
ಭಾವತರಕರು