ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನನಾದರೂ ಬರೆಯೋ ಎನ್ನ ಪಣೆಯೊಳಗೆನೀನಿಷ್ಟ ಬರೆಯಬೇಡವೋ ಮೂಢ ವಿಧಿಯೇ ಪ ಬಾಲತನದಲಿ ಬಹಳ ಭಾಗ್ಯ ಸಂಪದಗಳನುಮೇಲೆ ಯೌವನ ಬರಲು ಬಡತನವನುಲೋಲಾಕ್ಷಿಯರಿಗೆ ಮರುಳಾಗಿ ಸಂಚರಿಪುದನುಹಾಲು ಅನ್ನವನಿಕ್ಕಿದವರಿಗೆ ಮುನಿವುದನು1 ಮುಪ್ಪಿನಲಿ ಯೌವನದ ಸ್ತ್ರೀಯ ಸಂಭೋಗವನುತುಪ್ಪವಿಲ್ಲದ ಭೋಜನದ ರುಚಿಯನುಅಪ್ಪುತಿಹ ಮಕ್ಕಳಿಲ್ಲದ ಕುಸಂಸಾರವನುಕಪ್ಪುಗೊರಲನ ನೆನೆಯದೇ ದಿನವ ಕಳೆವುದನು 2 ಪರರೊಡವೆಯನು ತಿಂದ ಶರೀರವನೆ ಪೊರೆವುದನುಪರರ ನಿಂದೆಯ ಮಾಡಿ ಬಾಳುವುದನುವರ ಕೆಳದಿ ರಾಮೇಶ ನಿನ್ನ ಪಾದಾಂಬುಜವಸ್ಮರಿಸಿದಂತನ್ಯಮತದಲ್ಲಿ ಸಂಭವಿಪುದನು 3
--------------
ಕೆಳದಿ ವೆಂಕಣ್ಣ ಕವಿ
ಕಲಿರಾಯ ಬಂದಿಹನು ಕಾಣಿಕೆಯ ಪಿಡಿದು ಚೆಲುವಿನಿಂದನುಸರಿಸಿ ಕುಲವನುದ್ಧರಿಸಿ ಪ ಮೂರು ಯುಗದೊಳು ತಾನು ಸೇರಿಕೊಂಡನು ವನವ ಚೋರರಾಯರ ಸಂಗ ಬೇಡವೆನುತ ವೀರನಾಗಿಯೆ ಬಂದ ನಾಲ್ಕನೆಯ ಯುಗದೊಳಗೆ ಸಾರಿ ಬನ್ನಿರೊ ನಮ್ಮ ದೊರೆಯ ಮನ್ನಿಸಲು 1 ಮದಮುಖರ ಕಾಣುತಲೆ ಮುದದಿಂದ ಮನ್ನಿಸುತ ಕದನಕರ್ಕಶರನ್ನು ಕಾಮಿಸುವನು ಒದಗಿದನ್ಯಾಯಗಳನೊಲಿಸಿಕೊಂಬನು ತಾನು ಬೆದರಿಕೆಯು ಬೇಡ ನೀವಿದಿರುಗೊಳ ಬನ್ನಿ 2 ಸತ್ಯವೆಂಬುದನೆಲ್ಲ ಹತ್ತಿಸಿದ ಬೆಟ್ಟವನು ಮಿಥ್ಯ ನಿರ್ಮಳಕೆಲ್ಲ ಕುತ್ತಿಗೆಗೆ ಬಂತು ಒತ್ತಿಯಾಳುವ ಧರ್ಮ ಸತ್ತು ಹೋದನು ಹಿಂದೆ ಮೃತ್ಯು ಭಯ ನಮಗಿಲ್ಲ ಹತ್ತಿರಕೆ ಬನ್ನಿ 3 ತಪ್ಪಿ ಹೋಯಿತು ಶಾಸ್ತ್ರ ತಪ್ಪಾಯ್ತು ಪೌರಾಣ ಮುಪ್ಪು ಬಂದುದು ವೇದ ಕಪ್ಪಾದನಗ್ನಿ ತುಪ್ಪನ್ನ ಬೇಡವಗೆ ಇಪ್ಪ ಭಯಗಳು ಹೋಯ್ತು ಒಪ್ಪಿ ಕಾಣಿಸಿಕೊಂಡು ಸುಖಿಯಪ್ಪ ಬನ್ನಿ 4 ಸ್ನಾನವೆಂಬುದು ಯೆಲ್ಲ ಮಾನಿನಿಯ ಅಡಿಗೆಯೊಳು ಮೌನ ಜಪಗಳನೆಲ್ಲ ಕೃಷಿಕೊಂಡನು ಹಾನಿಯಾದರು ಯಜ್ಞಹೀನರಾದರು ಪಿತೃಗ ಳೇನ ಮಾಡುವರಿವರು ಅನುಮಾನ ಬೇಡೆನುತ 5 ದಯಯೆನಿಪವನು ಹೋಗಿ ಕೊಯ್ಸಿಕೊಂಡನು ಕೊರಳ ಭಯವಿಲ್ಲ ಹಿರಿಯರೂ ವ್ಯಯವ ಸೇರಿದರು ನಯನೀತಿ ಹೇಳುತಿಹ ಗುರುವಿನೊಳು ಕಣ್ಣಿಲ ್ಲ ಜಯವಾಯ್ತು ದೇಶದೊಳು ಹೊಯ್ಸಿ ಡಂಗುರುವ 6 ಶಿವನು ದುರ್ಗವ ಬಲಿದ ಜವನು ದಂಡವನಿಟ್ಟ ಬವಣೆಬಡುವನು ಕಮಲಭವನು ತನ್ನೊಳಗೆ ಹವಣನರಿಯದೆ ವಿಷ್ಣು ತವಕಿಸುವ ಮನದೊಳಗೆ ಕವಲು ಮನ ಬೇಡಿರಲು ಬಹುದು ಇವನೊಳಗೆ 7 ಪತಿಯ ಮರೆತಳು ಸತಿಯು ಸುತ ಮತಿಯ ತಪ್ಪಿದನು ಯತಿ ಸತತ ಮನದೊಳಗೆ ಖತಿಗೊಂಬನು ಚತುರವರ್ಣಾಶ್ರಮವ ಜೊತೆಯಾಗಿ ನಡೆಸುತಿಹ ಮತಿಯುತನು ದೃಢವೆಂದು ಕಾಯವನುಸರಿಸಿ8 ತಾಯಿ ತಂದೆಯ ಕೊಂದು ಜೀವ ಹಾನಿಯ ಮಾಡಿ ಬಾಯ ಹೊಯ್ದರು ಕೇಳ ಬಡವರನ್ನು ಮಾಯವಾದಿಯ ಮಾತು ಕೂಡಿಸುವ ಜೀವವನು ರಾಯರಾಯರ ಮುಂದೆ ನಡೆಸುತ್ತಲಿಹರು 9 ಆಡಿಗಾರರ ತಂದು ನಾಡ ಊಳಿಗಕಿಡುವ ನೋಡಿದನ್ಯಾಯ ಮಾತುಗಳ ಹಿಡಿತರುವನು ಕೂಡಿಸುವ ಜೀವವನು ಎಳೆನೀರು ಸಕ್ಕರೆಯು ಬೇಡಿದಿಷ್ಟಾರ್ಥದೊಳು ನೋಡಿ ನಡೆಸುವನು 10 ಕೆಟ್ಟನೀತಿಯ ಒಳಗೆಯಿಟ್ಟುಕೊಂಡರೆ ನಿಮ್ಮ ಗಟ್ಟಿಬಡಿಸುವ ದೊರೆಯು ದೃಷ್ಟಿಯಲಿ ನೋಡ ಕಷ್ಟವಿಲ್ಲದೆ ಸುಖದಿ ಹೊಟ್ಟೆಯನು ಹೊರಕೊಂಡು ಸೃಷ್ಟಿಯೊಳು ವರಪತಿಯ ಮುಟ್ಟಿ ಸೇವಿಪುದು 11 ಕಾಲದರಸಿನ ನೋಡಿ ಮೂಲ ಪಡಕೊಂಬುವರು ಆಲಸ್ಯವನು ಬಿಟ್ಟು ಸೇವಿಸುವುದು ಶಾಲು ಸಕಲಾಭರಣ ತೋಲಾಗಿ ಬರುತಿಹುದು ಜಾಲರೂಪವದಾಗಿ ಮನಕೆ ತೋರುವುದು 12 ತಾಯಿ ತಂಗಿಯರನ್ನು ಮೋಹಿಸಲು ದೊರೆರಾಯ ಬಾಯಹೊಯಿಯೆಂದೆನುತ ನೋಯನುಡಿ ಪೇಳ ಆಯವಾಗಿಹ ಪುರುಷ ಸಾಯಲಾಕ್ಷಣ ಬಂದು ಕಾಯವನು ಬಳಸುವನು ಮೋಹವನು ತೋರಿ13 ಹೀಗೆಂದು ಚರನೋರ್ವ ಕೂಗಿ ಕರೆಯಲು ಬಂದು ಅಗಲೇ ಎದ್ದು ಇದಿರಾಗಿ ಪರಿಜನವು ಬೇಗದೊಳಗನುಸರಿಸಿ ಭೋಗವನು ಕೈಕೊಂಡು ರಾಗದೊಳಗಿದ್ದರಾ ಭವಜಲದ ನಡುವೆ 14 ಹೇಡಿಗಳು ಬರಬೇಡಿ ಮೂಡ ಗುಡ್ಡೆಯ ಸೇರಿ ಕಾಡಫಲವನು ಮೆದ್ದು ಕೋಡಗಲ್ಲಿನೊಳು ಆಡುತಿಹ ವರಾಹತಿಮ್ಮಪ್ಪನ್ಹತ್ತಿರದಿ ಬೇಡಿಕೊಳ್ಳಿರೊ ಎನುತ ನೋಡಿ ನಗುತಿಹರು 15
--------------
ವರಹತಿಮ್ಮಪ್ಪ
ಕೂಗಳತಿ ಎಂಬೊ ಸಂಶಯಸಲ್ಲಾಪ ಸಮಚಿತ್ತದಲ್ಲಿ ಇದ್ದು | ಸಮ ವಿಷಮ ತಿಳಿದೆದ್ದು | ಕುಮತ ಮತವನು ವದ್ದು | ಬಲು ಉಬ್ಬೆದ್ದು | ಕಮಲ ಪೀಠನ ಹೊದ್ದು | ಕ್ರಮಣಿ ಯೋಪಾದಿಯಲಿದ್ದು | ತಮಕ್ಕೆ ಹರಿನಾಮ ಮದ್ದು | ಶ್ರಮ ಕಳುಕದವಗೆ1 ಭಾಗವತರ ನೋಡಿ | ವೇಗ ಮನಸನು ಮಾಡಿ | ಬಾಗಿ ಸಿರವನೆ ನೀಡಿ | ನಲಿದು ಪಾಡಿ | ಯೋಗವಾಗದೆ ಕೂಡಿ | ಭೋಗವನು ಈಡಾಡಿ | ತೂಗಿ ಮೈಯಲಾಡಿ ಪುಣ್ಯದನವನಿಗೆ 2 ಹರಿ ಭಕುತಿಯ ಬೇಕು | ನರಹರಿಯ ಸ್ಮರಣೆ ಬೇಕು | ಹರಿಕಥಾ ಬೇಕು | ಹರಿ ಎನಲಿ ಬೇಕು | ಹರಿಯ ಭಜಿಸಲಿ ಬೇಕು | ಹರಿವೊಲಿಮೆ ಇರಬೇಕು | ಹರಿಯಲ್ಲದಿಲ್ಲೆಂದು ಹರಿದು ನುಡಿದವನಿಗೆ 3 ಆಸಿಯನು ಕಳೆದು | ದುರ್ವಾಸನೆ ಹಮ್ಮು ಕಳೆದು | ಕ್ಲೇಶವನು ಅಳಿದು | ತೋಷದಲಿ ಬೆಳೆದು | ದೋಷರಾಶಿಗೆ ಮುಳಿದು | ದೂಷಕರನೆ ಅಳಿದು | ಭೇಷಜವನೆ ಅಳಿದು | ದಾಸರ ಬಳಿಗೆ ಸುಳಿದವಗೆ 4 ಆಚಾರವನು ಪಿಡಿದು | ಸೂಚನೆ ಅರಿತು ನಡೆದು | ವಾಚಗಳ ಮಿತಿ ನುಡಿದು | ನಾಮಗುಡಿದು | ಸಿರಿ ವಿಜಯವಿಠ್ಠಲರೇಯನ | ಯೋಚನಿಂದಲಿ ಬಿಡದೆ | ದಿನವ ಹಾಕುವನಿಗೆ 5
--------------
ವಿಜಯದಾಸ
ನಿನಗಿನಿತು ಮಮಕಾರವಿರಲೆನಗೆ ಭಯವೇನು ಚಿನುಮಯನೆ ಧನ್ಯ ನಾನು ಪಜನಕ ನೀನೆನಗಾದೆ ತನುಜ ನಾ ನಿನಗಾದೆ ಘನಮಹಿಮ ಕಾಮಧೇನು ನೀನು ಅ.ಪಜನ್ಮಕೋಟಿಗಳಲ್ಲಿ ಪುಣ್ಯಕರ್ಮಗಳನ್ನು ಮುನ್ನ ಮಾಡಿಸಿದೆ ನೀನುಮುನ್ನಿನಾ ದೇಹಗಳು ಭಿನ್ನವಾಗಲು ಕರ್ಮವಿನ್ನುಳಿವ ಬಗೆಯದೇನುಚಿನ್ಮಯನೆ ತನುಕರಣ ಭಿನ್ನವಾದರು ಸಾಕ್ಷಿ ನಿನ್ನೊಳಿಂಬಿಟ್ಟೆಯವನುಸನ್ನುತನೆ ಬಾಲಕನಿಗುಣ್ಣ ಕಲಿಸುವ ತೆರದಿ ನಿನ್ನನಿತ್ತುದೇನೆಂಬೆನು ನಾನು 1ದುಷ್ಟಸಂಗವ ಬಿಡಿಸಿ ದುರ್ಬುದ್ದಿಯನು ಕೆಡಿಸಿ ಶಿಷ್ಟರೊಳು ತಂದು ನಿಲಿಸಿಕಷ್ಟಸಾಧನಗಳನು ಮುಟ್ಟಲೀಸದೆ ಸುಲಭ ನಿಷ್ಠೆಯಲಿ ಚಿತ್ತವಿರಿಸಿಹುಟ್ಟುಹೊಂದುಗಳನ್ನು ಕೊಟ್ಟು ಮೋಹಿಸುತಿರುವ ಪುಟ್ಟ ಫಲಗಳ ತೇಲಿಸಿಮುಟ್ಟಿ ನಿನ್ನಯ ಪದವನಿಟ್ಟು ಹೃದಯಾಂಬುಜದಲಿಷ್ಟಮೋಕ್ಷವ ತೋರಿಸಿ ನಿಲಿಸಿ 2ವಿದ್ಯವಿಸ್ತರವಾದರದ್ದುವದು ಗರ್ವದಲಿ ಬುದ್ಧಿ ನಿಲ್ಲದು ನಿನ್ನಲಿಇದ್ದು ವೃದ್ಧರ ಪಥದಿ ಹೊದ್ದಿ ಶುದ್ಧತ್ವವನು ಶ್ರದ್ಧೆ ಸೇರದು ನಿನ್ನಲಿಉದ್ದುರುಟುತನದಿಂದ ಬಿದ್ದು ವಾದದ ಮಡುಹವದ್ದು ಸುಕೃತವ ಕಾಲಲಿಇದ್ದ ನಿಜಸ್ಥಿತಿುವಗೆ ಸಿದ್ಧವಾಗದುಯೆಂದು ನಿರ್ಧರಿಸಿ ನೀನೆ ದಯದಿ ಇಲ್ಲಿ 3ಅನಿಮಿತ್ತ ಬಂಧು ನೀನೆಂಬುದನು ಫಲುಗುಣನು ಮನದೊಳೆಣಿಸಿದುದಿಲ್ಲವೆಅಣುಮಾತ್ರದುಪಕಾರ ಜನರಿಂದ ನಿನಗುಂಟೆ ಮನಕೆ ದೂರ ನೀನಲ್ಲವೆವನಜಭವ ದಿಕ್ಪಾಲ ಮನುಗಳೈಶ್ವರ್ಯಗಳು ನಿನಗೆ ಗಣನೆಗೆ ಬರುವವೆಇನಿತು ಬ್ರಹ್ಮಾಂಡಗಳ ನೆನದು ನಿರ್ಮಿಸಿ ಬಳಿಕ ಕ್ಷಣದೊಳಳಿಸುವದಿಲ್ಲವೆ ನಿಜವೆ 4ನಿನ್ನ ಭಜಿಸುವ ಭಾವವಿನ್ನುಂಟೆ ಜಡಮತಿಗೆ ಅನ್ಯವಿಷಯದಿ ಮೋಹಿಸೆತನ್ನ ಮರೆದತಿದುಃಖದುನ್ನ ತದ ಸಂಸಾರ ವೆನ್ನದೆನ್ನುತ ದುಃಖಿಸೆನಿನ್ನ ನೆನಯದೆ ಬಹಳ ಜನ್ಮವೇಗದ ನದಿಯಲುನ್ನಿಸುವ ಕರ್ಮ ಹೊದಿಸೆಭಿನ್ನ ಬುದ್ಧಿಯಲೊಂದಿ ತನ್ನ ತಾನರಿಯದಿರೆ ನಿನ್ನಿಂದ ಮುಕ್ತನೆನಿಸೆ ನಿಲಿಸೆ 5ಚಲಿಸದಂದದಿ ಮನವ ನಿಲಿಸಿ ನಿನ್ನೊಳು ಬಾಹ್ಯವಳಿವ ಬಗೆುಲ್ಲವಲ್ಲನಳಿನನಾಭನೆ ನೀನು ಸುಲಭನೇ ಯೋಗಿಗಳು ಬಳಲುವರು ಕಾಣರಲ್ಲನಿಲುವೆ ಮನದಲಿ ನೀನೆ ಸಲಹೆಂದು ಭಜಿಸಿದರೆ ಗೆಲರೆ ಸಂಸೃತಿಯನೆಲ್ಲತಿಳುಹಿ ಸುಲಭದ ದಾರಿಯೊಳಗೆನ್ನ ನೀನಿರಲು ಬಳಲುವಿಕೆುಲ್ಲವಲ್ಲಾ ಲಲ್ಲಾ 6ಬಿನುಗು ಭೋಗವನುಂಡು ಜುಣುಗಿ ಮತ್ತದರಲ್ಲಿ ಮನವೆರಗಿ ಮುಳುಗುತಿಹುದುತನುವಿನಭಿಮಾನದಲಿ ನೆನಹು ತಗ್ಗದು ಮತ್ತೆ ಕನಲಿ ಮುರಿದೇಳುತಿಹುದುಅನುವರಿಯದಂಧತಮದಲಿ ತಾನು ನೆರೆಹೊಕ್ಕು ಘನದುಃಖಬಡುತಲಿಹುದುಇನಿತವಸ್ಥೆಯಲಿರುವ ಮನಕೆ ಸಿಕ್ಕಿರಲೆನ್ನ ದಿನಕರನೆ ಕೈವಿಡಿವುದು ಸೆಳೆದು 7ಧ್ಯಾನ ಧಾರಣೆುಂದ ನಿನ್ನ ಮೂರ್ತಿಯ ನಿತ್ಯ ಮಾನಸದಿ ನಿಲಿಸಬೇಕುಧ್ಯಾನಾಂಗ ನಿಯಮಗಳನಭ್ಯಾಸವಂ ಮಾಡಿ ತಾನು ತಾನಾಗಬೇಕುಏನೊಂದ ಕಂಡರೂ ನಾಮರೂಪವ ಬಿಟ್ಟು ನೀನೆಂದು ನಿಲ್ಲಬೇಕುಏನೆಂಬೆನಿವನೆಲ್ಲ ನೀನೆ ಸಾಧಿಸಿಕೊಟ್ಟು ದೀನನನು ಸಲಹಬೇಕು ಸಾಕು 8ಪರಮ ಕರುಣಾನಿಧಿಯೆ ಪರಿಪೂರ್ಣ ಪರಮೇಶ ಪರಮಸಂವಿದ್ರೂಪನೇಶರಣಜನಸುರಧೇನು ದುರಿತಭೂಧರಕುಲಿಶ ಕರಿವರನ ರಕ್ಷಿಸಿದನೇಮರೆಯೊಕ್ಕೆ ನಿನ್ನಡಿಯ ಮರವೆಯನು ಪರಿಹರಿಸು ಅರಿವಿನೊಳು ಪೊಗಿಸು ನೀನೆತಿರುಪತಿಯ ನೆಲೆವಾಸ ವರದ ವೆಂಕಟರಮಣ ಅರವಿಂದದಳನೇತ್ರನೆ ಅಜನೆ 9ಓಂ ಜಲಕ್ರೀಡಾಸಮಾಸಕ್ತಗೋಪೀವಸ್ತ್ರಾಪಹಾರ ಕಾಯ ನಮಃ
--------------
ತಿಮ್ಮಪ್ಪದಾಸರು
ಬೀಗಮುದ್ರೆಗಳಹವು ಬಹು ಬಾಗಿಲುಗಳಾಗಿಸಾಗರಾತ್ಮಜೆಯರಸ ಸುಖದಿ ಪವಡಿಸಲು ಪಪುರದ ಮುಂಭಾಗದಲಿ ಹೊಳೆವ ದ್ವಾರಗಳೈದುಹೊರಗುಭಯಪಾಶ್ರ್ವದಲಿ ಹೊಂದಿರುವವೆರಡುತೆರೆದು ಮುಚ್ಚುತಲಿರುವ ತತ್ಪಶ್ಚಿಮದಲೆರಡುಗುರಿಕಾರರೊಳಸರಿದು ಗೋಪ್ಯರಾಗುವರಿಂತು 1ಮೊದಲ ಜಾವದಲಿವನು ಮುಚ್ಚಿ ಮುದ್ರಿಸುತಿಹರುಹುದುಗಿದೊಳ ದ್ವಾರಗಳ ಹಾಗೆ ತೆರೆದಿಹರುಅದರೊಳರಸೆಡೆಯಾಡಿಯಾ ಭೋಗವನುಭವಿಸಿಕದಲಂತಃಪುರಕೆ ಕಡು ಮುದ್ರಿಸುವರು 2ಅಂತರದೊಳಿಹ ದ್ವಾರವವು ನಾಲ್ಕು ಬಳಿಕಲ್ಲಿಅಂತರಿಸದಧಿಪತಿಗಳವರು ನಾಲುವರುಸಂತತವು ಕಾದಿರುತ ಸರಿವರೊಳಮುಖವಾಗಿನಿಂತು ದೊರೆಯೊಡನಿವರ್ಗೆ ನಿದ್ರೆಯಾಗುವದಿಂತು 3ದ್ವಾರ ನಾಲ್ಕರೊಳೊಂದೆ ದೊಡ್ಡದದರಲಿ ದೊರೆಯುಸೇರಿ ನಿರತವು ತಾನು ಸಂಚರಿಪನಾಗಿಮೂರುಳಿದ ದ್ವಾರಗಳು ಮುಖ್ಯವಹುದಾದಡೆಯುತೋರುವೊಂದು ದ್ವಾರದಲಿ ತಾವೇಕವಾಗಿಹವು 4ಸಣ್ಣ ದ್ವಾರಗಳಿನ್ನು ಸಾವಿರಗಳುಂಟೊಳಗೆಕಣ್ಣಿ ಯೊಂದಿವಕೆಲ್ಲ ಕಟ್ಟಿರುವದದನುಪಿಣ್ಣವಾಗಿಯೆ ದೊರೆಯು ಪಿಡಿದೆಚ್ಚರದೊಳಿದ್ದುಕಣ್ಣಾಗಿ ತಾ ಕಾಯ್ವ ಕೋಟೆುದನೊಳಗಿದ್ದು 5ಯೋಗನಿದ್ರೆಯದೆಂದಡಿದು ಪರಮ ಪುರುಷನಿಗೆರಾಗವಿಲ್ಲದೆ ದೇವರಾಜಿಯಲಿ ನಿಂದುಭೋಗವನ್ನಿವರ್ಗೆಲ್ಲ ಬಹಿರಂಗದೊಳಗಿತ್ತುಭೋಗಾವಸಾನದಲಿ ಬಳಿಕೊಟ್ಟುಗೂಡಿಸಲು 6ಏಕನದ್ವಯನಮಲನೀಶ್ವರನು ಪರದಲ್ಲಿಪ್ರಾಕೃತದ ಪದ್ಧತಿಯ ಪರಿಪಾಲಿಸುತಲುಲೋಕೇಶ ತಿರುಪತಿಯ ಲೋಲ ವೆಂಕಟರಮಣನೀ ಕಳೇಬರದಲಿರಲಿಂದಿರೆಯನೊಳಕೊಂಡು 7ಓಂ ಸರ್ವಗ್ರಹರೂಪಿಣೇ ನಮಃ
--------------
ತಿಮ್ಮಪ್ಪದಾಸರು
ಭ್ರಮೆ ಬೇಡಲೆ ಮನ ತಿಳಿ ಜವದಿ ಹರಿ ವಿಮಲಚರಣಕಮಲ್ಹಿಡಿ ದೃಢದಿ ಪ ಸುಮನಸರಗೂಡಿ ನೀ ಸುಮಶರ ಪಿತನಂ ಸಮಯ ತಿಳಿದು ಭಜಿಸನುದಿನದಿ ಅ.ಪ ಸಾರವಿಲ್ಲದ ಸಂಸಾರ ಇದು ಮೇರೆನಿಲ್ಲದ ಸಾಗರ ಆರಿಗೆ ನಿಲುಕದೆ ಮೂರುಲೋಕವದ್ದಿ ಮೀರಿಬಡಿಸುವುದು ಬಲುಘೋರ 1 ಹೆಂಡರು ಮಕ್ಕಳೆಂದು ನಂಬಿದಿ ನಿನ್ನ ಹಿಂಡಿನುಂಗುವುದು ಅರಿಯದ್ಹೋದಿ ಕಂಡಕಂಡವರಿಗೆ ಮಂಡೆಬಾಗಿಸಿ ನಿನ್ನ ದಂಡನೆಗೆಳಪುದು ಅಂತ್ಯದಿ 2 ಕಾಕುಜನರ ಸಂಗ್ಹಿಡಿದಿದ್ದಿ ನೀ ಲೋಕನೆಚ್ಚಿ ನೂಕುನುಗ್ಗಾದಿ ಲೋಕಗೆಲಿದು ಭವನೂಕಿ ನಲಿಯುವರ ಸಾಕಾರಗಳಿಸದೆ ಕೆಟ್ಟ್ಹೋದಿ 3 ಧರೆಯ ಭೋಗವನು ಸ್ಥಿರ ತಿಳಿದಿ ನೀ ಹರಿದು ಹೋಗುವದಕೊಲಿತಿದ್ದಿ ಮರೆಮೋಸದಿ ಬಿದ್ದರು ಮೈಯಮರೆದು ಸ್ಥಿರಸುಖ ಪಡೆಯದೆ ದಿನಗಳೆದಿ 4 ಭೂಮಿಸುಖಾರಿಗೆ ನಿಜವಲ್ಲ ಇದು ಕಾಮಿಸಬೇಡೆಲೊ ಶೂಲ ಕಾಮಿತಗಳನಿತ್ತು ಕ್ಷೇಮದಿ ಸಲಹುವ ಸ್ವಾಮಿ ಶ್ರೀರಾಮನ ತಿಳಿಮಿಗಿಲ 5
--------------
ರಾಮದಾಸರು
ವ್ಯರ್ಥವಾಯಿತೆನ್ನಿ ಜನ್ಮ ಸ್ವಾರ್ಥವಿಲ್ಲದೆ ಪರ ಕೃತ್ತಿ ವಾಸನ ಪೂಜೆಯನ್ನು ಮಾಡದೆ ಪ ಹಿಂದೆ ಜನನಿ ಗರ್ಭವಾಸದಿಂದ ಹೊರಟು ಬಂದ ಮೇಲೆ ಕೊಂದು ದಿವಸನಾನು ನಿಷ್ಠೆಯಿಂದ ಲಿರ್ದು ಆಗಮೋಕ್ತ ದಿಂದ ಶಿವಗೆ ಜಲದಿ ರುದ್ರದಿಂದ ಜಳಕ ಗೈದು ಶ್ರೀ ಗಂಧ ಪುಷ್ಪ ಪತ್ರೆಯಿಂದ ಪೂಜೆಯನ್ನು ಮಾಡದೆ 1 ಪುಣ್ಯನದಿಯು ಪುಣ್ಯಕ್ಷೇತ್ರ ಪುಣ್ಯ ಭೂಮಿಯಲ್ಲಿ ವಾಸ ಪುಣ್ಯಕಥೆಯು ಪುಣ್ಯತೀರ್ಥ ಸ್ನಾನವಿಲ್ಲದೆ ಪುಣ್ಯ ಮೂರ್ತಿಯಲ್ಲಿ ಧ್ಯಾನ ಪುಣ್ಯಪುರುಷರೊಡನೆ ಸಂಗ ಪುಣ್ಯ ಕಾಲದಲ್ಲಿ ಶಿವನ ಪೂಜೆಯನ್ನು ಮಾಡದೆ 2 ಮಂಡೆ ಜುಟ್ಟ ಸೂತ್ರವನ್ನು ಖಂಡಿಸಿರ್ದುಯತಿಎನುತ್ತ ದಂಡವನ್ನು ಧರಿಸಿ ಪೀತ ಕೌಶೇಯ ವಸನವನ್ನು ಪೊದ್ದು ಮೊಂಡತನದಿ ಸಕಲ ವಿಷಯ ಭೋಗವನು ಭೋಗಿಸುತ್ತ ಮಂಡೆ ಬೋಳನಾದರೇನು ಮನವ ಬÉೂೀಳಮಾಡದೆ 3 ಕಾಮಾರಿಯನ್ನು ಆಗಮೋಕ್ತದಿಂದ ಪೂಜೆಯನ್ನು ಮಾಡಿ ಘೋರಪಾತಕಂಗಳನು ಸುಟ್ಟುಸೂರೆಮಾಡದೆ 4 ಬೆಟ್ಟದೊಳಗನಂತ ವ್ಯಕ್ಷ ಹುಟ್ಟಿಮಡಿದ ವೊಲು ಜನ್ಮ ನಷ್ಟ ವಾಯ್ತು ವಿಧಿಯು ಬರೆದಿಟ್ಟ ದುರ್ಲಿಖಿತವೆಲ್ಲ ತುಟ್ಟಿಸಿತ್ತು ತಿಳಿದು ಶಿವನ ಮುಟ್ಟಿ ಪೂಜಿಸಾದರಿನ್ನು ಕೆಟ್ಟು ಹೋಗ ಬೇಡ ಲಕ್ಷ್ಮೀಪತಿಯ ಸ್ಮರಣೆಮಾಡದೆ 5
--------------
ಕವಿ ಪರಮದೇವದಾಸರು