ಒಟ್ಟು 11 ಕಡೆಗಳಲ್ಲಿ , 5 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಸೆನೀಗೋ ಹೇಸಿಮನವೆ ಕೇಶವನಂಘ್ರಿ ದಾಸನಾಗೊ ಪ ಸಕಲಭೋಗಭಾಗ್ಯ ಬರುವ ಅಖಿಲ ಸುಖದು:ಖಂಗಳೆಲ್ಲ ಭಕುತಿದಾರ್ಯಗರ್ಪಿಸಿ ಹರಿ ಭಕುತಿಯಿಂದಪಮೃತ್ಯು ಗೆಲಿಯೊ 1 ವಂದನೆ ಸ್ತುತಿ ಮಾನ ಮನ್ನಣೆ ಬಂದು ಕುಂದು ನಿಂದೆಯೆಲ್ಲ ಮಂದರಾದ್ರಿಯ ನಿಲಯಗೆಂದಾ ನಂದದಿಂ ಭವಬಂಧ ಗೆಲಿಯೊ 2 ಪೊಡವಿಸುಖಕೆ ಮೋಹಿಸದೆ ನೀ ಕೆಡುವಕಾಯಮೋಹ ತೊಡೆದು ಒಡೆಯ ಶ್ರೀರಾಮನಂಘ್ರಿ ಕಮಲ ಧೃಢದಿ ಭಜಿಸಿ ಮುಕ್ತಿ ಪಿಡಿಯೊ 3
--------------
ರಾಮದಾಸರು
ಕಲಿ ಹೆಚ್ಚಿ ಬಂದಿತಲ್ಲ, ರಂಗಯ್ಯ ಕಾಯೆನ್ನ ಸಿರಿಯ ನಲ್ಲ ಪ ಕಾಲ ವಿಪರೀತದಿ ಅ ಅತ್ತೆಯ ಸೊಸೆ ಬಯ್ವಳು - ಪುತ್ರರು ತಮ್ಮಹೆತ್ತ ತಾಯಿಯ ಬಿಡುವರುಉತ್ತಮ ಗರತಿಗೆ ಅಪವಾದ - ಅವಿವೇಕಿಗಳುಎತ್ತ ನೋಡಲು ಹೆಚ್ಚಿ ಹೆದರಿಸಿತುನ್ಮತ್ತತನದಲಿ ಮನೆಯ ರಚಿಸುವರುಭಕ್ತಿಯೆಂಬುದ ಬಯಸದಿರುವರುಕತ್ತಲಾಯಿತು ಕಲಿಯ ಮಹಿಮೆ 1 ನಿತ್ಯ ನೇಮವು ನಿಂತಿತು - ಹೋಯಿತಲ್ಪಜಾತಿಗೈಶ್ವರ್ಯ ಭೋಗಭಾಗ್ಯಧಾತರಾದವರಿಗೆ ಧಾರಣೆ ಪಾರಣೆಜಾತಿನೀತಿಗಳೆಲ್ಲ ಒಂದಾಗಿಪಾತಕದಿ ಮನವೆರಗಿ ಮೋಹಿಸುತಮಾತಾಪಿತೃ ಗುರು ದೈವ ದ್ರೋಹದಿಭೂತಳವು ನಡ ನಡುಗುತಿಹುದು 2 ಬಿನ್ನಣ ಮಾತುಗಳು ಮತ್ತೆ ಮತ್ತೆಘನ್ನ ಮತ್ಸರ ಕ್ರೋಧಗಳುಅನ್ಯಾಯದಿಂದ ಅರ್ಥವ ಗಳಿಸುವರುತನ್ನ ಕಾಂತನ ಬಿಟ್ಟು ಸ್ತ್ರೀಯರುಅನ್ಯರಿಗೆ ಮನವೆರಗಿ ಮೋಹಿಪರುಬಣ್ಣಗೆಟ್ಟಿತು ವರ್ಣ ತಪ್ಪಿತು ಪ್ರ-ಸನ್ನ ಶ್ರೀ ನೆಲೆಯಾದಿಕೇಶವನೆ 3
--------------
ಕನಕದಾಸ
ಕ್ಷೀರಸಾಗರ ಸಂಭವೆ ರಮೆ ಪಾಲಯಾಶು ಮಾಂ ದೇವಿ ಪ ಮಾರಜನಕ ಮೋಹನಾಂಗಿಯೆ ಸಾರಸಾಕ್ಷಿಯೆ ವರಲಕ್ಷ್ಮಿಯೆ ಅ.ಪ. ಪದ್ಮಗಂಧಿಯೆ ಪದ್ಮ ವದನೆಯೆ ಪದ್ಮನೇತ್ರೆಯೆ ಪದ್ಮಹಸ್ತಯೆ ಪದ್ಮನಾಭ ಸುಪದ್ಮಿನೀ ಭಾಮೆಯೆ 1 ಮಣಿ ಚಂದ್ರಮಂಡಲೆ ಮಧ್ಯಭಾಸುರೆ ಶ್ರೀ ಸಿಂಧುರಗಮನೆಯೆ 2 ಭೋಗಭಾಗ್ಯವನಿತ್ತು ನೀ ಪಾಲಿಸು ಶ್ರೀ ಧೇನುಪುರೀಶ್ವರಿ 3
--------------
ಬೇಟೆರಾಯ ದೀಕ್ಷಿತರು
ದೇವಕಿಯ ಗರ್ಭದಲಿ ಲೋಕವಕಾವ ಕೃಷ್ಣನು ಬಂದು ನಂದನಠಾವಿನಲಿ ತಾ ಬೆಳೆದು ಗೋವನುಕಾವ ನೆವದಲಿ ಗೋಪಗೋಪೀಭಾವವನು ನೆಲೆಗೊಳಿಸಿ ದುಷ್ಟರಜೀವವನು ನೆರೆ ತೆಗೆದ ಹಾಗೆಮಾವ ಕಂಸಗೆ ಮುಕ್ತಿುತ್ತಾಮಾತೃ ಪಿತೃ ಬಂಧನವ ಬಿಡಿಸಿದಭಾಗವತವೂ ಲಾಲಿಸಿದನೂ ದೇವದೇವಾ 1ನಡೆಯಲುಪನಯನಾಖ್ಯ ಕರ್ಮವದೊಡನೆ ವಿದ್ಯವನೋದಿ ದುಷ್ಟರಬಡಿದು ಪತ್ನಿಯರೆಂಟುಮಂದಿಯಪಡೆದು ದ್ವಾರಕಿಯಲ್ಲಿ ಯಾದವರೊಡನೆ ಭೋಗಿಸಿ ಭೋಗಭಾಗ್ಯವತಡುಕಿದರಿಗಳ ತರಿದು ಕೌರವಪಡೆಯ ಮರ್ದಿಸಿ ಪಾಂಡವರನಾಪೊಡವಿಪಾಲರ ಮಾಡಿದಂಥಾಭಾಗವತವೂ ಲಾಲಿಸಿದನೂ ದೇವದೇವಾ 2ಪರಿಹರಿಸಿ ಭಾರವನು ಭೂಮಿಗೆಪರಮ ಭಕತರ ಸಲಹಿ ಕಥೆಯನುಹರಹಿ ಮುಂದಣ ಜನರು ಸಂಸ್ಕ øತಿಶರಧಿಯನ್ನಿದರಿಂದ ದಾಂಟುವತೆರನ ಮಾಡಿಯೆ ಕಾಯ್ದ ಕರುಣಾಶರಧಿ ತಿರುಪತಿ ವೆಂಕಟೇಶನೆನಿರುಪಮಾಮಿತ ಮಹಿಮ ನೀನೇಚರಿಸಿದಂಥಾ ಚಾರುತರವಹಭಾಗವತವೂ ಲಾಲಿಸಿದನೂ ದೇವದೇವಾ 3ಓಂ ಧೇನುಕಾಸುರ ಭಂಜನಾಯ ನಮಃ
--------------
ತಿಮ್ಮಪ್ಪದಾಸರು
ಧನ್ಯತೆಯಾಂತೆನಿಂದು ದೇವಿಯಕಂಡು ಮಾನ್ಯತೆ ಪಡೆವೆನೆಂದು ಪ. ಚಿನ್ಮಯರೂಪನ ಚೆನ್ನೆ ಲಕ್ಷ್ಮಿಯ ಸಂ ಪನ್ನ ಮೂರ್ತಿಯ ಕಂಡಿನ್ನೆನಗೆಣೆಯಾರೆನೆ ಅ.ಪ. ನಾಗವೇಣಿಯರೆಲ್ಲರು ಪಾಡುತ ಶಿರ ಬಾಗಿ ವಂದಿಸುತಿರಲು ರಾಗದಿಂ ನಲವೇರೆ ಭೋಗಭಾಗ್ಯವನೀವ ಯೋಗೇಶ್ವರಿಯ ದಯಾಸಾಗರಿಯ ಕಂಡು 1 ಐದೆಯರತಿಮುದದಿ ವೈದೇಹಿಯೆ ಯೆಮ್ಮ ಆದರ್ಶ ಮಹಿಳೆಯೆಂದು ಆದಿಶಕ್ತಿಯೇ ಈ ಶ್ರೀದೇವಿ ನಿಜವೆಂದು ಆದರಿಸುತ್ತಿರಲಾಮೋದವಾಂತುದರಿಂ 2 ಅರಿದಾವುದೆಮಗಿಳೆಯೊಳು ಶೇಷಗಿರೀಶನ ಅರಸಿಯೆಮ್ಮವಳಾದಳು ದುರಿತರೋಗವು ದೂರ ಸರಿದುದು ಮನವಾರ 3
--------------
ನಂಜನಗೂಡು ತಿರುಮಲಾಂಬಾ
ನಿತ್ಯ ಶುಭಮಂಗಳಂ ಪ. ಹೃದಯವೆಂಬೀ ದಿವ್ಯ ಪದ್ಮಪೀಠದ ಮೇಲೆ ಪದ್ಮಾಕ್ಷಿ ಪದ್ಮೆಯನು ಕುಳ್ಳಿರಿಸಿ ಸದಮಲ ಭಾವದಿಂ ಮಧುಕೈಟಭಾಂತಕನ ಹೃದಯೇಶ್ವರಿಯ ಸೇವೆಗೈವೆ 1 ಜ್ಞಾನವೆಂಬುವ ದಿವ್ಯ ಜ್ಯೋತಿಯಂ ಮುಂದಿರಿಸಿ ಧ್ಯಾನವೆಂಬುವ ನಿಲುವುಗನ್ನಡಿಯ ನಿಲಿಸಿ ದಾನÀವಾಂತಕ ರಾಮಚಂದ್ರಮನ ಧ್ಯಾನಿಸುತ ಜಾನಕಿಯ ಬಲಗೊಂಬೆ ಭರದಿ 2 ನೇಮನಿಷ್ಠೆಯ ಶುದ್ಧ ಹೇಮಕಲಶದಿ ಮತ್ತೆ ಭಕ್ತಿರಸದ ಪನ್ನೀರ ತುಂಬಿ ನಾಮಸಂಕೀರ್ತನೆಯ ನಾರಿಕೇಳವ ಬೆರಸಿ ಶ್ರೀನಾರಿಗಭಿಷೇಕವ ಗೈವೆ 3 ಚಿತ್ತಶುದ್ಧಿಯ ಶುಭ್ರವಸ್ತ್ರದಿ ನೇವರಿಸಿ ಸತ್ವಗುಣದ ಪೀತಾಂಬರವನುಡಿಸಿ ಕಂಚುಕ ತೊಡಿಸಿ ಚಿತ್ತಜನ ಜನನಿಯರ ನೋಡಿ ನಲಿವೆ 4 ಅಂತಃಕರಣ ಶುದ್ಧಿಯ ಅರಿಸಿನವನು ಪೂಸಿ ಶಾಂತಗುಣದ ತಿಲಕ ತಿದ್ದಿ ನಂದಮಲ್ಲಿಗೆಯ ದಂಡೆಯನು ಮುಡಿಸುತ್ತ ಇಂದ್ರಿಯ ನಿಗ್ರಹದ ಗಂಧ ಹಚ್ಚುವೆನು 5 ಪಂಚಭೂತಾತ್ಮಕದ ಛತ್ರಿಯನು ಪಿಡಿದೆತ್ತಿ ಪಂಚನಾದಗಳೆಂಬ ವಾದ್ಯಗಳ ನುಡಿಸಿ ಪಂಚೇಂದ್ರಿಯಂಗಳೇ ಪಂಚಭಕ್ಷ್ಯಗಳಾಗಿನಿ ರ್ವಂಚನೆಯಿಂದಾರೋಗಿಸೆಂಬೆ 6 ರೇಚಕವೆಂಬ ವ್ಯಜನದಿಂ ಬೀಸಿ ತಾರಕ ಚಾಮರವ ಪಿಡಿದು ಕುಂಭಕವೆಂಬ ಪನ್ನೀರಿನಿಂ ತೋಯ್ಸಿ ತಾರಕ ಬ್ರಹ್ಮನರಸಿಯಂ ಸೇವಿಸುವೆ 7 ಭೋಗಭಾಗ್ಯವನೀವ ಭಾಗ್ಯಲಕ್ಷ್ಮಿಗೆ ವೈರಾಗ್ಯದ ತಟ್ಟೆಯನು ಪಿಡಿದು ಭಾವದೀವಿಗೆಯ ಕರ್ಪೂರದಾರಿತಯೆತ್ತಿ ಬಾಗಿವಂದಿಪೆ ತಾಯೆ ಕರುಣಿಸೆಂದು 8 ವರದಾತೆ ಭೂಜಾತೆ ಸುವಿನೀತೆ ಸುವ್ರತೆ ವರಶೇಷಗಿರಿವಾಸದಯಿತೆ ಮಹಿತೇ ಸೆರಗೊಡ್ಡಿ ಬೇಡುವೆನು ಕರಪಿಡಿದು ಸಲಹೆಂದು ನೆರೆನಂಬಿ ನೆನೆನೆನೆದು ನಲಿವೆನಿಂದು 9
--------------
ನಂಜನಗೂಡು ತಿರುಮಲಾಂಬಾ
ಪಾಲಿಸು ದಯಾಕರನೆ ನೀಲಮೇಘಶ್ಯಾಮ ಪಾಲಿಸು ದಯಾಕರನೆ ಪ ಪಾಲಿಸು ಎನ್ನ ಕರುಣಾಳು ವ್ಯಾಲಮಾಲ ಬಾಲನ ದಯದಿಂ ಮಾಲತುಲಸೀವನ ಅ.ಪ ಬಂದುಬಿದ್ದೆನಯ್ಯ ಸಂಸಾರ ದಂದುಗ ವೆಂಬ ಮಾಯಬಲೆಯೊಳು ನೊಂದು ಕಾಯ ಬಂಧನಿವಾರಿಸಯ್ಯ ನೊಂದಿಸಿ ಅರ್ಥವ ತಂದು ಸತಿಯು ಸುತ ರೆಂದು ಸಲಹಿ ಯಮ ಬಂಧಕೀಡಾದೆನು ಮುಂದೆ ಇಂಥ ಬವಣಿಂದೆ ತಾರದೆನ್ನ 1 ರಿಣವೆಂಬ ಸೂತಕಿದು ಎನ್ನಗೆ ಘನವಾಗಿ ಕಾಡುವುದು ಇನ್ನಿದು ಜನು ಜನುಮದಿ ಬಿಡದು ಬೆನ್ನತ್ತಿ ಬರ್ಪುದು ಗನ್ನಗತಕನಾಗಿನ್ನು ಭವಭವಂಗ ಬನ್ನ ಬಡಲಿಬೇಕೊ ಮನ್ನಿಸಿ ದಯದಿಂ ನಿನ್ನ ಕೃಪೋದಕ ವನ್ನು ತಳೆದು ಬೇಗೆನ್ನ ಶುದ್ಧಮಾಡು 2 ಆಗಿಹೋದದ್ದ್ಹೋಯ್ತು ಮುಂದಿಹ್ಯ ಭೋಗ ಬೇಡ ಜಗತ್ತು ಪಾಲನೆ ಬಾಗುವೆ ಮನವರಿತು ಚರಣಕೆ ಶಿರವಿತ್ತು ಭೋಗಭಾಗ್ಯದಾಸೆ ನೀಗಿಸಿ ಈ ಭವ ಸಾಗರ ದಾಂಟಿಸು ಯೋಗಿಗಳರಸನೆ ನಾಗಶಯನ ದಯಮಾಡಿ ದಾಸನ ದು ರ್ಭೋಗ ದೂರಮಾಡು ಜಗಮೋಹ ಶ್ರೀರಾಮ 3
--------------
ರಾಮದಾಸರು
ಮಾತ್ರೆ ತಾಳ ಇವು ಯಾತಕ್ಕೋ ಹರಿ ಖಾತ್ರಿ ತಾಳ ಶುದ್ಧಿರಬೇಕೊ ಪ ಧಾತ್ರಿ ಈರೇಳಕ್ಕೆ ಸೂತ್ರಧಾರ ಕೃಪಾ ಪಾತ್ರನಾಗ್ವ ತಾಳ ತಿಳೀಬೇಕೊ ಅ.ಪ ಕೃತಿ ಇವುಯಾತಕ್ಕೋ ಹರಿ ಪೂರ್ಣಮಹಿಮಸ್ಮøತಿ ಅರೀಬೇಕೊ ವರ್ಣಾಶ್ರಮ ಧರ್ಮ ಬಣ್ಣಿಪಗೂಡಾರ್ಥ ಕರ್ಣಕ್ಕೆ ಬಲು ತಾಳಿರಬೇಕೊ 1 ರಾಗಭೇದಗಳ ಬಲವ್ಯಾಕೋ ಹರಿ ಭೋಗಭಾಗ್ಯದಾಸೆ ನೀಗಿ ಸುಮನರನು ಬಾಗಿ ಒಲಿಸುವ ತಾಳಿರಬೇಕೊ 2 ಸಾಸಿರವಿದ್ಯದ ತಾಳ್ಯಕೋ ಹರಿ ಧ್ಯಾಸದ ಮಹ ತಾಳಿರಬೇಕೊ ಶ್ರೀಶ ಶ್ರೀರಾಮನದಾಸರ ಪ್ರೇಮನು ಮೇಷ ತನಗೆ ತಾಳಿದ್ದರೆ ಸಾಕೊ 3
--------------
ರಾಮದಾಸರು
ಯಾಕೊಲ್ಲ ಯಾಕೊಲ್ಲ ನಲ್ಲೆ ಸಂಪದ ಇವ ಯಾಕೊಲ್ಲ ಯಾಕೊಲ್ಲ ಪ ಅಲ್ಲಬೆಲ್ಲವನೊಲ್ಲ ನಲ್ಲೆಯಾದರವೊಲ್ಲ ಒಲ್ಲನ್ಯಾಕವ್ವ ನಲ್ಲ ಇಲ್ಲದದಕೆ ಒಲ್ಲ ಅ.ಪ ಮೇಲು ಮಾಲು ಒಲ್ಲ ನೀಲದುಪ್ಪರಿಗೊಲ್ಲ ಶಾಲು ಸಕಲಾತೊಲ್ಲ ಶೀಲಮಂಚವನೊಲ್ಲ ಅಮೃತ ಉಂಡು ವೀಳ್ಯ ಮೆಲ್ಲಲು ಒಲ್ಲ ಬಾಲೆ ಯಾಕೊಲ್ಲ ಕೈಯೊಳಿಲ್ಲದದಕೆ ಒಲ್ಲ 1 ರತ್ನದುಂಗುರ ಒಲ್ಲ ಮುತ್ತಿನ್ಹಾರ ಒಲ್ಲ ಪುತ್ಥಳೀ ಚಿನ್ನ ಒಲ್ಲ ಕಸ್ತೂರಿಗಂಧ ಒಲ್ಲ ಉತ್ತಮ ಹಯವನ್ನು ಹತ್ತಿ ಮರೆಯ ಒಲ್ಲ ಮಿತ್ರೆ ಯಾತಕೊಲ್ಲ ಹತ್ತಿರಿಲ್ಲದದಕೊಲ್ಲ2 ಸತಿಯ ಸುತರನೊಲ್ಲ ಅತಿಭಾಗ್ಯವನೊಲ್ಲ ಕ್ಷಿತಿ ಅಧಿಕಾರನೊಲ್ಲ ಛತ್ರ ಚಾಮರನೊಲ್ಲ ಸತತ ಸೌಭಾಗ್ಯನೊಲ್ಲ ಮತಿಮಾನ್ಯವನೊಲ್ಲ ಮತಿಯುತೆ ಯಾತಕೊಲ್ಲ ಗತಿಯಿಲ್ಲದದಕೊಲ್ಲ 3 ಭೋಗಭಾಗ್ಯ ಒಲ್ಲ ರಾಗರಚನೆಯೊಲ್ಲ ಭೋಗದಾಸೆಗೆ ತಲೆದೂಗಿ ಒಲಿಯ ಒಲ್ಲ ತೂಗುಮಂಚವೇರಿ ತೂಗಿಸಿಕೊಳ್ಳಲೊಲ್ಲ ಸುಗುಣೆ ಯಾಕೊಲ್ಲ ಕೈಸಾಗದದಕೆ ಒಲ್ಲ 4 ಜಾಣತನದಿ ಧನಧಾನ್ಯಗಳಿಸಲೊಲ್ಲ ಜಾಣ ಜನರ ಕೂಡಿ ಮಾನ ಪಡೆಯಲೊಲ್ಲ ಜಾಣೆ ಏನಾಶ್ಚರ್ಯ ಏನು ಯಾಕೆ ಒಲ್ಲ ಪ್ರಾಣೇಶ ಶ್ರೀರಾಮ ತ್ರಾಣಕೊಡದದಕೊಲ್ಲ 5
--------------
ರಾಮದಾಸರು
ವಂಚನೆಲ್ಲಿಹುದಯ್ಯ ವೈಕುಂಠಪತಿ ಗೊಂಚನೆಲ್ಲಿಹದಯ್ಯ ಪ ವಂಚನೆಲ್ಲಿಹ್ಯದು ವಿರಂಚಿತಾತನಿಗೆ ಕಿಂಚಿತ್ತು ಧ್ಯಾನಕ್ಕಾಗೊಂಚನಿಲ್ಲದೆ ಬಂದ ಅ.ಪ ಚರಣದಾಸರೆಂದು ಪಾಂಡವರ ತುರಗಕಾಯ್ದ ನಿಂದು ನರಗೆ ಬೆಂಬಲನಾಗಿ ತಿರುಗಿದ ಧುರದಲಿ ಜರ ಮರೆಯಾಗದೆ ಪರಮಕರುಣಾಕರ 1 ಜಾಗುಮಾಡುತಲಿವ ಭಕ್ತರ ಯೋಗಕ್ಷೇಮ ತಿಳಿವ ನೀಗದಂಥ ಮಹಾಭೋಗಭಾಗ್ಯವಿತ್ತು ಬಾಗಿಲ ಕಾಯ್ದನು ಸಾಗರನಿಲಯ 2 ಜಾರನೆನಿಸಿಕೊಂಡ ಒಲಿದು ಚೋರನೆನಿಸಿಕೊಂಡ ತೋರಿದವರ ಮನಸಾರ ವರವಿತ್ತು ಭೂ ಭಾರವಿಳುಹಿದ ನಮ್ಮ ಧೀರ ಶ್ರೀಗುರುರಾಮ 3
--------------
ರಾಮದಾಸರು
ವೈಕುಂಠನಾಯಕನೂ ಈ ಮಹಾತ್ಮನು ವೈಕುಂಠನಾಯಕನು ಪ. ಪಾಕಶಾಸನತ, ನಾಕಪಾಲಕ ಸರ್ವಲೋಕನಾಯಕ ಭಕ್ತರಕ್ಷಕ ಶ್ರೀಕಳತ್ರ ಸುಪವಿತ್ರನೀತನು ಅ.ಪ. ವೆಂಕಟಗಿರಿಯಿಂದ ಅಂಕನಶೆಟ್ಟಿಪುರಕೆ ಬಿಂಕದಿಂದೈತಂದ ಕಾಂಕ್ಷಿತಾರ್ಥವನೀವನು ಭಕ್ತರಮನಶಂಕೆಯ ಕಳೆಯುವನು ಕಂಕಣಕರ ಬದ್ಧನಾಗಿಹ ಪಂಕಜಾಸನ ಜನಕ ಲಕ್ಷ್ಮೀಕಾಂತ ಸರ್ವಾಂತರ್ಯಾಮಿಯಾಗಿಹ 1 ಬಂದವರೆಲ್ಲ ತಾವು ಬಂದಂತೆ ಮನನೊಂದು ಹಿಂದಿರುಗಿ ಪೋಗುವರೆಂಬ ಮಾತಿಲ್ಲ ಬಂದು ಬಂದವರಿಗೆಲ್ಲ ಬೇಡಿದುದಿತ್ತಾನಂದ ದಿಂದವರೀಯುವ ಕಾಣಿಕೆಗಳ ಚೆಂದದಿಂ ಸುರೇಂದ್ರ ವಂದ್ಯ ಕರೀಂದ್ರಪೂಜಿತ ನಂದ ಕಂದ ಮುಚುಕುಂದ ವರದನು 2 ಅಂಗವಿಹೀನರಿಗಂಗವ ಸರಿಗೈದು ಇಂಗದ ಭೋಗಭಾಗ್ಯಂಗಳ ನೀವನು ಕಂಗೆಟ್ಟಿಹರಕಾಯ್ವನು - ಬೇಡುತ್ತಿಹ ಬಂಜೆಗೆ ಮಕ್ಕಳನು ನೀಡುವನು ತನ್ನ ನಂಬಿದವರ ಕೈಬಿಡನು ಸತ್ಯಾತ್ಮನು ಮಂಗಳಾಂಗ ಯದುಪುಂಗವ ಸದಯಾಪಾಂಗ ಶ್ರೀ ರಂಗ ತುಂಗವಿಕ್ರಮ ಶೇಷಗಿರಿವರ 3
--------------
ನಂಜನಗೂಡು ತಿರುಮಲಾಂಬಾ