ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದು ಮೂರುತಿಯಲ್ಲಿ ಹರಿಹರದೇವರಿಬ್ಬರು ಬಂದು ನೆಲೆಗೊಂಡುದನ ಕಂಡೆನದ್ಭುತವ ಪ. ಭಾವಜನಪಿತನೊಬ್ಬ ಅವನ ಕೊಂದವನೊಬ್ಬ ಹಾವ ತುಳಿದವನೊಬ್ಬ ಧರಿಸಿದವನೊಬ್ಬ ಗೋವ ಕಾಯಿದನೊಬ್ಬ ಅದನೇರಿದವನೊಬ್ಬ ಭಾವಿಸಲು ವಿಪರೀತಚರಿತರಂತಿರ್ದು1 ಬಾಣನ ಗೆಲಿದವನೊಬ್ಬ ಬಾಗಿಲ ಕಾಯಿದವನೊಬ್ಬ ದಾನವರ ರಿಪುವೊಬ್ಬ ವರವೀವನೊಬ್ಬ ಏನನೆಂಬೆನೊ ಜಗವ ಕಾವುತಿಹನೊಬ್ಬ ನಿ- ಧಾನಿಸಲು ಸಂಹರಿಸಿ ಕೊಲ್ಲುತಿಪ್ಪನೊಬ್ಬ 2 ಯಾಗ ಪಾಲಕನೊಬ್ಬ ಯಾಗಭಂಜನನೊಬ್ಬ ನಾಗರಕ್ಷಕನೊಬ್ಬ ನಾಗಶಿಕ್ಷಕನು [ಒಬ್ಬ] ಈಗ ನಲ್ಲಳಿಗÀರ್ಧದೇಹವನಿತ್ತ ಶಿವನಂತೆ ಭೋಗದೊಳು ಹೊಂದಿಹ ಹಯವದನ ಬಲ್ಲ 3
--------------
ವಾದಿರಾಜ
ಕೋಪದೊಳು ಜಮದಗ್ನಿ ತಾಪದೊಳು ಮಾರ್ತಾಂಡ ಭೂಪರೊಳು ರಘುನಾಥನೆನ್ನ ನಾಥ ದ್ವೇಷದೊಳು ಭಾರ್ಗವನು ರೋಷದೊಳು ದೂರ್ವಾಸ ಮೋಸದೊಳ್ ಶ್ರೀಕೃಷ್ಣ ಮುದ್ದು ಕೃಷ್ಣ ಭೋಗದೊಳು ದೇವೇಶ ರಾಗದೊಳು ಗಿರಿಜೇಶ ತ್ಯಾಗದೊಳು ಶಿಬಿರಾಯ ಮದನಕಾಯ ಜ್ಞಾನದೊಳು ಜನಕನು ಧ್ಯಾನದಲಿ ದತ್ತರ್ಷಿ ಸೂನೃತದಿ ಹರಿಶ್ಚಂದ್ರ ಮಾನನಿಧಿಯು ಧನಿಕನೆಂದೆನಲಷ್ಟಸಿದ್ಧಿದಾತಂದೆ ಘನವಂತನೆನೆ ಪ್ರಣವಸ್ವರೂಪಗೆ ಧಣಿಯೆನಲು ಮೂಜಗಕ್ಕೊಡೆಯನಿವÀನೆ ಎಣೆಯುಂಟೆ ಶೇಷಾದ್ರಿವಾಸನಿವಗೆ
--------------
ನಂಜನಗೂಡು ತಿರುಮಲಾಂಬಾ
ಲೋಕನೀತಿಯ ಪದಗಳು 448 ಅನ್ನದಾನವನ್ನೆ ಮಾಡು ಕನ್ಯದಾನವನ್ನೆ ಮಾಡುನಿನ್ನ ನಂಬಿದರ ಪೊರೆದುನ್ನತ ಹರ್ಷದಿ ಬಾಳುಸನ್ನುತ ಸರ್ವಲೋಕಗಳನ್ನು ರಕ್ಷಿಸುವನಾಗ ಪ್ರ-ಸನ್ನ ಮೂರುತಿಯಾಗುರನ್ನದ ರಾಶಿಗಳನ್ನು ಚಿನ್ನದ ಆಭರಣಗಳನ್ನುಭೂಸುರರಿಗಿತ್ತು ಮನ್ನಿಸು ಉದಾರನಾಗುಮನ್ನೆಯರೆಲ್ಲರು ಬಂದುನಿನ್ನನೋಲೈಸಲೆಂದು ಅಪರ್ಣೆಪರಿಸಿದಳು 1 ಕೋಟಿ ಗೋದಾನವ ಮಾಡು ಸಾಟಿಯಿಲ್ಲದಂಥಾ ಪಂಚಕೋಟಿ ಗಜದಾನ ಶತಕೋಟಿಯಶ್ವದಾನಗಳಮೀಟಾದ ಬ್ರಾಹ್ಮರಿಗಿತ್ತು ಕೀರ್ತಿವಂತನಾಗು ಕಿ-ರೀಟ ಶೌರ್ಯದೊಳಾಗು ಮೀಟಾದ ಮಂತ್ರಿಗಳ ಕಿ-ರೀಟ ರತ್ನಕಾಂತಿಗಳ ಕೋಟಿ ನಿನ್ನ ಪಾದದಲ್ಲಿಧಾಟಿಯಾಗಿರುವನಾಗುಲೂಟಿಸಿ ವೈರಿಗಳನು ಗೋಟುಗೊಳಿಸುವ ಶಶಿಜೂಟ ಭಕ್ತನಾಗು 2 ಇತ್ತೆರದೆ ಬೀಸುತಿಹ ಮುತ್ತಿನ ಚಾಮರ ಶ್ವೇತಛ್ಛತ್ರ ಸೀಗುರಿಗಳ ಮೊತ್ತದ ಸಾಲೊಳಗೆ ಒ-ಪ್ಪುತ್ತಲಿರುವವನಾಗು ಸತ್ಯವಂತನಾಗು ಸುವ್ರತ ನೀನಾಗುಪೆತ್ತವರ ನೋಡಿ ನಲಿವುತ್ತಿರಲು ಭೂಸುರರುಮುತ್ತಿನಕ್ಷತೆಯನಾಂತುಪೃಥ್ವಿಯ ವೊಳಗೆಲ್ಲಾ ಸ-ರ್ವೋತ್ತಮ ಪುರುಷನಾಗೆನುತ್ತಮಸ್ತಕದಿ ತಳಿವುತ್ತ ಪರಸಿದರು 3 ಇಂದ್ರನಾಗು ಭೋಗದೊಳು ಸತ್ಯವಾಕ್ಯದೊಳು ಹರಿ-ಶ್ಚಂದ್ರನಾಗು ಪಾಲನೆಯ ಮಾಡುವುದರೊಳಗೆ ಉ-ಪೇಂದ್ರನಾಗು ಬುದ್ಧಿ ಕೌಶಲದೊಳು ತಿಳಿಯಲು ನಾ-ಗೇಂದ್ರ ನೀನಾಗುಚಂದ್ರನಾಗು ಶಾಂತಿಯೊಳಗೆಂದು ವಂದಿಮಾಗಧರವೃಂದ ಕರವೆತ್ತಿ ಜಯವೆಂದು ಪೊಗಳುತ್ತಿರಲಾ-ಚಂದ್ರಾರ್ಕವು ಸೌಖ್ಯದಿ ಬಾಳೆಂದು ಸಾನಂದದೊಳಾಗಇಂದಿರೆ ಪರಸಿದಳು4 ಧೀರನಾಗುದಾರನಾಗು ಸೂರಿಜನವಾರಕೆ ಮಂ-ದಾರನಾಗು ಸಂಗರ ಶೂರನಾಗು ವೈರಿ ಜ-ಝ್ಝೂರನಾಗು ಮಣಿಮಯ ಹಾರನಾಗುವೀರಾಧಿವೀರ ನೀನಾಗುಭೂರಮಣನಾಗು ಮಂತ್ರಿವಾರ ಸಂರಕ್ಷಕನಾಗುಕಾರುಣ್ಯಸಾಗರನಾಗು ಕಾಮಿತಫಲಿದನಾಗುಶ್ರೀ ರಾಮೇಶನಪಾದಾಬ್ಜ ವಾರಿಜ ಭಕ್ತನಾಗೆಂದುಶಾರದೆ ಪರಸಿದಳು5
--------------
ಕೆಳದಿ ವೆಂಕಣ್ಣ ಕವಿ