ನೀನೆ ಸರ್ವ ಸೂತ್ರಧಾರನು ಪ
ಕರ್ತು ನೀನೆ ಆದಿಶಕ್ತಿ ವಸ್ತು ಅ.ಪ
ಮೂರು ಗುಣಗಳಲ್ಲಿ ನಿಲ್ಲಿಸಿ||
ಸಾರ ಮೂರು ಆರು ದೋಷದೂರ | ಮೂರು ಸುಖಕ್ಕೈಕ್ಯನೆನಿಸೊ 1
ತರಳ ಧ್ರುವನ ಮನವ ಪರಿಕಿಸಿ | ಮೇಲ್ ಲೋಕವಿತ್ತೆ |
ನಿರತ ಭಕ್ತಿ ಪಾಲಿಸಿದ | ದುರಿತಹರನೆ ಶರಣು ಶರಣು 2
ಕರೆದು ಪತ್ನೀಸುತರನಿತ್ತು | ನಿಲದೆ ಮೋಕ್ಷದೊಳಗೆ ಪೊರೆದೆ 3
ಭೋಗದೀಶರಾಗಿ ಸುಖದ | ಸಾಗರದೊಳು ಮೆರೆದರಯ್ಯ 4
ತಂದೆ ಶ್ರೀನಿವಾಸ ನಿನ್ನ | ಮಂದಿರದೊಳೆನ್ನ ಸಲಹೊ 5