ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಪೂಜೆಯೊ-ರಾಮ ಪ ನಿನ್ನ ಪೂಜೆ ಹೊರತಿಲ್ಲಎನ್ನ ವ್ಯಾಪಾರವೆಲ್ಲ ಸ್ನಾನ ಸಂಧ್ಯಾವಂದನ ಹೋಮ ಮೌನ ಜಪ ಸದ್ಗ್ರಂಥ ವ್ಯಾ-ಖ್ಯಾನ ಯಜ್ಞಸಾಧನ ಸಂಪಾದನ ಅಧ್ಯಯನನಾನಾ ರಸ ನೈವೇದ್ಯ ಭೋಜನ ತಾಂಬೂಲಚರ್ವಣಮಾನಿನಿ ಮೊದಲಾದ ಸ್ಯಂದನ ಗಾನದ ಭೋಗಗಳೆಲ್ಲ1 ಸರ್ವೇಂದ್ರಿಯಗಳಲಿಹ ಶರ್ವಾದಿ ದೇವರ್ಕಳಿಗೆಸರ್ವಚೇಷ್ಟಾಪ್ರದನಾದ ಪ್ರಾಣಗೆ ನಿರ್ವಾಹಕನಾಗಿಸರ್ವ ಜೀವರ ಕೈಯಿಂದ ಸರ್ವಜ್ಞಾನ ಕರ್ಮಗಳನುಸರ್ವದಾ ಮಾಡಿಸಿ ಅವರ ಸರ್ವಶುಭಭೋಕ್ತನಹೆ 2 ಸುರರು ಕಂಗಳಲ್ಲಿ ಭಾಗ್ಯಲಕ್ಷ್ಮಿಉಂಗುಷ್ಠದಿ ಲೋಕಪಾವನೆ ಗಂಗಾದೇವಿಯುಹಿಂಗದೆ ನಿನ್ನಲ್ಲಿರಲು ತುಂಗಗುಣ ಪರಿಪೂರ್ಣರಂಗವಿಠಲ ನೆಲೆಯಾಗಿ ಮಂಗಳಾಂಗನೆ ಮನ್ನಿಸುವೆಯೊ3
--------------
ಶ್ರೀಪಾದರಾಜರು
ಭೋಗ ಬೇರಿಹುದಣ್ಣ ಭವ ಭೋಗಗಳೆಲ್ಲವು ರೋಗಗಳಣ್ಣ ಭೋಗವ ಪೊಂದುವ ಯೋಗವ ಮರೆಸುವ ರೋಗಗಳಿಗೆ ಗುರಿಯಾಗದಿರಣ್ಣ 1 ಬಗೆ ಬಗೆ ಭಕ್ಷಗಳ ಭೋಗವು ಸೊಗಸೆಂದರಿಯದಿರು ಹಗರಣದಲಿ ತನು ದುಗುಡಕೆ ಸಿಲುಕಲು ಸೊಗಸುಗಳೆಲ್ಲವು ಹಗೆಯಾಗುವುವು 2 ಅಂಗನೆಯರ ಸರಸ ಎಳೆಯ ಭು ಜಂಗನ ಸಹವಾಸ ಅಂಗಗಳಲಿ ಬಲ ಸಡಲಲು ನಿನ್ನಯ ಹಂಗಿಲ್ಲದೆ ಮಾನಭಂಗ ಮಾಡುವರು 3 ಉಡಿಗೆ ತೊಡುಗೆ ಯೋಗ ಜಗದಲಿ ಹುಡುಗುತನದ ಭೋಗ ಗಿಡಗ ಗಿಳಿಮರಿಯನೊಯ್ಯುವ ತೆರದಲಿ ಪಿಡಿಯಲು ದೂತರು ತಡೆ ಮಾಡುವರೇ 4 ಪ್ರಕೃತಿಯೊಳ್ ಸಿಲುಕಿರಲು ಭೋಗಕೆ ಶಕುತಿ ಸಾಲದಣ್ಣ ಭಕುತ ಪ್ರಸನ್ನನು ಭಕುತಿಯೆಂಬೊ ನಿನ್ನ ಯುಕುತಿಗೆ ನೀಡುವ ಮುಕುತಿಯೆಂಬ ದಿವ್ಯ 5
--------------
ವಿದ್ಯಾಪ್ರಸನ್ನತೀರ್ಥರು
ಸಾಧನದ ಚಿಂತೆ ಎನಗ್ಯಾಕೊ ದೇವ ಮಾಧವನೆ ನಿನ್ನ ನಾಮ ಧರಿಸಿಕೊಂಡಿರುವವಗೆ ಪ ನಿನ್ನ ಚಿತ್ತಕೆ ಬಂದ ಅನುಭವವೆ ಸಾಧನವೊ ಅನ್ಯಥಾ ಬೇಕಿಲ್ಲ ದೋಷರಹಿತ ಎನ್ನ ಮನ ತನು ಕರಣತ್ರಯಗಳನು ನೀ ಮಾಳ್ಪೆ ಅನ್ಯಸಾಧನವ್ಯಾಕೊ ಪಾವನ್ನ ಸಚ್ಚರಿತ 1 ನಡೆವುದೇ ಯಾತ್ರೆಗಳು ನುಡಿವುದೇ ಸ್ತೋತ್ರಗಳು ಬಿಡದೆ ನೋಡುವುದೆಲ್ಲ ನಿನ್ನ ಮೂರ್ತಿ ಒಡನೆ ಕೇಳುವ ಶಬ್ದ ನಿನ್ನ ಮಂಗಳ ಕೀರ್ತಿ ಪಡುವ ಭೋಗಗಳೆಲ್ಲ ನಿನ್ನ ಉಪಚಾರ 2 ಪಾಪ ತೊಳೆವುದಕಿನ್ನು ದುಃಖ ಪ್ರಾಯಶ್ಚಿತ್ತ ತಾಪ ಯೋಚನೆಗಳೆಲ್ಲ ತಪಸು ವಿಭುವೆ ಗೋಪ ಚೂಡಾರತ್ನ ಜಯೇಶವಿಠಲ ಈ ಪಾತ್ರದೊಳಗಿದ್ದು ನೀ ಮಾಳ್ಪ ಸಾಧನವೊ 3
--------------
ಜಯೇಶವಿಠಲ