ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಪಕಾರವ ನೋಡೋ ಮಾಡಿದ ಪ ಕೃಪೆ ಬೇಡುವುದತಿಶಯವೇ ಪೇಳೊ ಅ.ಪ ಪಾಲಕ ನೀ ಹದಿನಾಲ್ಕು ಜಗಂಗಳಿಗೆ ಮೂಲೆಯ ಗ್ರಾಮದಲಡಗಿ ಬೇಸರದಿ ಕಾಲಕಳೆಯುವುದ ನೋಡಿ ಮರುಕದಲಿ ಬಾಲ ಮೂರುತಿಯ ಜಗಕೆ ತೋರಿಸಿದ 1 ಅಡಕು ಮಣೆಗಳಲಿ ಪೂಜೆಯಗೊಳ್ಳುತ ಒಡಕು ತೊಗರಿ ಹುಳಿಯನ್ನವ ಮೆಲ್ಲುತ ಬಡತನದಲಿ ಜೀವನ ಕಳೆಯುತಿರೆ ಪೊಡವೀಶನ ಭೋಗಗಳನು ಉಣಿಸಿದ 2 ಮಣಿ ಮಂದಿರ ವಿಧ ವಿಧ ಅಂದದ ಮುತ್ತಿನ ಹಾರ ಪದಕಗಳು ತಂದೆ ಪ್ರಸನ್ನನೇ ಸಾಸಿರ ಸಾಸಿರ ಮಂದಿಗಳಿಗೆ ವೈಭವಗಳ ತೋರಿದ 3
--------------
ವಿದ್ಯಾಪ್ರಸನ್ನತೀರ್ಥರು
ಕರುಣ ವಂದಿರೆ ಸಾಕಿನ್ನು ಪ. ಕರುಣ ವಂದಿರೆ ಸಾಕು ಸಿರಿಯರಸನೆ ನಾನಾ ಪರಿಯೊಳನ್ಯರ ಬೇಡಿ ತಿರುಗಲಾರೆನು ಕೃಷ್ಣ ಅ.ಪ. ಪರಮಾಣು ತ್ರುಟಿಲವ ನಿಮಿಷ ಮಾತ್ರ ಯುಗ ಗುರು ಪ್ರಾಣ ಒಳನಾಡಿ ಮುಹೂರ್ತ ಪ್ರಹರ ಮಾಸ ಋತ್ವಯನ ವ- ತ್ಸರಯುಗ ಮಾನವೆಂಬ ಉಪಾದಿಗ ಳಿರಿಸಿ ಭೋಗಗಳನುಂಬ ಮಹಾಕಾಲ ಧುರವಹ ತಾನೆಯೆಂಬಾ ಧೀರತೆಯಿಂದ ಲಿರುವಿ ಲೋಕದಲಿ ತುಂಬಾ ಪಾದ ಪದ್ಮ 1 ತೃಣತರು ಕ್ರಿಮಿಪಕ್ಷಿ ಪಶುನರ ದೇವಕ್ಕ ಳೆಣಿಕಿಯಿಲ್ಲದ ದಿತಿಜಾರಿ ಜೀವರನೆಲ್ಲ ಕುಣಿಸುವ ಬೊಂಬೆಯಂದದಲಾಡಿಸುತ ಲೇಶ ದಣಿವಿಲ್ಲದೆ ಭಕ್ತ ಜನರಿಗೆ ಸುಖಸಾರ ಉಣಿಸಿ ಮದಾಂಧರ ಹಣಿದು ಹಣಿದು ಕುಟ್ಟಿ ಒಣಗಿಸಿ ಬಿಸುಟು ತಿನ್ನುವತ್ತಿದುವಿ ಮೇಲಣ ದುರ್ಗಪತಿಗಳನು ಮನ್ನಣೆಯಿಂದ ತಣಿಸಿ ಕಾಪಾಡುವನು ನೀನಹುದೆಂದು ಮಣಿದು ಬೇಡುವೆ ನಿನ್ನ ಮುರಹರ ಸಲಹಿನ್ನು 2 ಮಾಧವ ಮಂಗಲದಾಯಕ ತವ ಪದ್ಮ ಪಾದ ಸೇವೆಯ ಮಾಡುವಲ್ಲಿಗೆ ಜಾಹ್ನವಿ ಗೋದಾವರಿ ತುಂಗ ಕಾವೇರಿ ಕಲುಷಾವ ನೋದದಿ ಕೃಷ್ಣ ಸರಸ್ವತಿ ಗೋಮತಿ ವೇದವತಿ ಮೊದಲಾದ ನದಿಗಳೆಲ್ಲ ಸಾದರದಲಿ ಸೇರುತ ಬಂದಿಹರೆಂಬ ಗಾಧವಚನ ನಂಬುತ ನಿಂದಿಹೆನು ಕ್ಷೀ ರೋದಧಿ ಗೃಹನಿರತ ಸಾಕಿದೆ ಮುಂದಿ- ನ್ಹಾದಿ ತೋರಿಸು ಸ್ವರತ ಶ್ರೀದ ವೆಂಕಟರಾಜ ಸೇವಕನಾನೆಂದು 3
--------------
ತುಪಾಕಿ ವೆಂಕಟರಮಣಾಚಾರ್ಯ
ಕೃಷ್ಣತಾತ ಮ'ಪತಿರಾಯರ ಭಜಿಸೊಅಭಿಮಾನವ ತ್ಯಜಿಸೊ ಅನುಮಾನವ ತ್ಯಜಿಸೊ ಪರಾಜವೈಭವದ ಭೋಗಗಳನುಭ'ಸಿ ಶ್ರೀ ಹರಿಯ ಸ್ಮರಿಸಿಭೋಗದೊಳಗೆ ತ್ಯಾಗದ ಪಾಠವ ಕಲಿಸಿ ಕೊಡುಗೈದೊರೆಯೆನಿಸಿಯೋಗಬಂದತಕ್ಷಣ ವೈಭವ ತ್ಯಜಿಸಿ ಯೋಗಿಯನಾಶ್ರೈಸಿಯೋಗಾಭ್ಯಾಸದಿ ಬೇಗ ಹರಿಯ ಒಲಿಸಿ ಅವನೊಳು ಮನಬೆರೆಸಿ 1ಹರಿಯಧ್ಯಾನಕನುಕೂಲವಾದ ಮೆಟ್ಟಾ ಹುಡಕುತುತಾಹೊರಟಾವರಕಾಖಂಡಿಕಿ ಕ್ಷೇತ್ರದಿ ಕಾಲಿಟ್ಟಾ 'ಶ್ರಾಂತಿಗೆ ಕುಳಿತಾಅರೆನಿ'ುಷದಿ ಹರಿಧ್ಯಾನದಿ ಮೈಮರೆತಾ ಸಮಾಧಿ ಇಳಿಯುತಾವರೃಮುನಿಗಳು ತಪವಗೈದಮೆಟ್ಟಾ ಎನುತಲಿಯೆ ನಿಂತಾ 2ಹಗಲು ಇರಳು ಹರಿಧ್ಯಾನದಿ ತಾ ಮುಳುಗಿ ಅಲ್ಲಿರುತಿರಲಾಗಿ ನಗೆ ಮುಖದಲಿ ಝಗಝಗ ಕಾಂತಿಯು ಬೆಳಗಿ ಸುತ್ತಲು ಬೆಳಕಾಗಿಜಗದಜನಕೆ ಅದು ಅತಿ ಅಚ್ಚರಿಯಾಗಿ ಯೋಗಿಗೆ ಶಿರಬಾಗಿಬಗೆ ಬಗೆ ಭಕುತರು ಬಂದರು ತಾವಾಗಿ ಮ'ಪತಿಮಹಾಯೋಗಿ 3ಅಷ್ಟಸಿದ್ಧಿಗಳು ನೆಲೆಸಿದವಾಗಲ್ಲಿ ಆಶ್ರಮ ಬಾಗಿಲಲಿಎಷ್ಟು ಭಕುತಿಜನ ಬಂದರು ಸ'ತಲ್ಲಿ ಇಷ್ಟಾರ್ಥ ಕರದಲಿಮೃಷ್ಟಾನ್ನ ಭೋಜನ ಪ್ರತಿದಿನದಲ್ಲಿ ನಡೆುತು ಸಮತೆಯಲಿಇಷ್ಟವಾದ ಆಧ್ಯಾತ್ಮಿಕ ಮಾರ್ಗದಲಿ ಉಪದೇಶ ಪಡೆಯುತಲಿ 4
--------------
ಭೂಪತಿ ವಿಠಲರು
ದೀನ ಪಾಲನೆ ಗಾನಲೋಲನೆ ಸುಜನ ಪ್ರಿಯನೇ ಪ ಈ ನರಜನ್ಮದ ಕಾನನದಲಿ ಬಲು ದೀನನಾಗಿ ಗುಣಗಾನ ಮಾಡುವೆನೊ ಅ.ಪ ದುಷ್ಟಭೋಗಗಳನುಭವಿಸುತ ಸದಾ ಭ್ರಷ್ಟನಾದೆ ನಾನು ಅಷ್ಟಿಷ್ಟಲ್ಲದೆ ಮರುಗುತಿರುವೆ ಪರ ಮೇಷ್ಟಿ ಜನಕ ಎನ್ನ ನಿಷ್ಠನ ಮಾಡೊ 1 ಜಪವ ಮಾಡಲಿಲ್ಲ ತಪವ ಮಾಡಲಿಲ್ಲ ಉಪವಾಸವ ಕಾಣೆ ತಪಿಸುತಿರುವೆ ಎನ್ನ ಅಪರಾಧಗಳಿಗೆ ಕುಪಿತನಾಗದಿರೊ ದ್ವಿಪ್ರವರ ವರದ 2 ಧರ್ಮವ ಬಿಟ್ಟು ಸತ್ಕರ್ಮವ ತ್ಯಜಿಸುತ ದುರ್ಮಾರ್ಗದಲಿ ಬಲು ಹೆಮ್ಮೆ ಮಾಡಿದ ನನ್ನ ಹಮ್ಮು ಮುರಿದಿಹುದು ಬೊಮ್ಮ ಜನಕ ಸುಪ್ರಸನ್ನನಾಗೆಲೊ 3
--------------
ವಿದ್ಯಾಪ್ರಸನ್ನತೀರ್ಥರು
ಭೀಮಾನದೀ ತೀರಾವಾಸ ಪಾಹಿ ಪಾಹಿ ಪಾಂಡುರಂಗ ಪ ಜಾರಚೋರನೆಂಬರೆಂದು ಜಾರಚೋರನೆಂದು ನಿನ್ನ ಪುಂಡರೀಕ ಮುನಿಕರೆದ ||ಪಾಂಡುರಂಗ|| 1 ಅನ್ಯ ಭೋಗಗಳನು ಬಿಟ್ಟು ನಿನ್ನ ಪಾದವ ಧ್ಯಾನಿಸುವರ ತೋರಿಸುವೇ ಚಿಹ್ನೆಯಿಂದ ||ಪಾಂಡುರಂಗ|| 2 ರಾಜೇಶ ಶ್ರೀಹಯಮುಖ ಜ್ಞಾನಶೂನ್ಯಾರ್ತರ್ಗೆ ಸಾಯುಜ್ಯವಿತ್ತು ಪೊರೆವ ವಿಠಲ- ನೆಂದು ಭೂಮಿಯೊಳು ಮೆರೆವ ||ಪಾಂಡುರಂಗ|| 3
--------------
ವಿಶ್ವೇಂದ್ರತೀರ್ಥ
ವ್ಯರ್ಥವಲ್ಲವÉ ಜನ್ಮ ವ್ಯರ್ಥವಲ್ಲವÉ ಪ ತೀರ್ಥಪಾದರ ಭಜಿಸಿ ಕೃತಾರ್ಥನಾಗದವನ ಜನ್ಮಅ.ಪ. ಅರುಣ ಉದಯದಲ್ಲಿ ಎದ್ದು ಸರಿತದಲಿ ಸ್ನಾನವ ಮಾಡಿಅರಳುಮಲ್ಲಿಗೆ ಮಾಲೆ ಹರಿಯ ಚರಣಕರ್ಪಿಸದವನ ಜನ್ಮ1 ಒಂದು ಶಂಖ ಉದಕ ತಂದು ಚಂದದಿಂದ ಹರಿಗೆ ಎರೆದುಗಂಧ ಪುಷ್ಪದಿಂದ ಹರಿಯ ವಂದನೆ ಮಾಡದವನ ಜನ್ಮ 2 ಕರವ ಮುಗಿದು ಸ್ತುತಿಸದವನ ಜನ್ಮ 3 ಭೋಗಿಶಯನನ ದಿನದಿ ಸಕಲ ಭೋಗಗಳನು ತಾನು ತೊರೆದುಭಾಗವತರ ಮ್ಯಾಳದಿಂದ ಜಾಗರಣೆ ಮಾಡದವನ ಜನ್ಮ 4 ಜಂಗಮರೊಳಗಧಿಕವೆನಿಪ ಭಂಗುರ ಮನುಷ್ಯದೇಹ ಪಡೆದುರಂಗವಿಠಲನೆನಿಪ ಪಶ್ಚಿಮರಂಗಗರ್ಪಿಸದವನ ಜನ್ಮ 5
--------------
ಶ್ರೀಪಾದರಾಜರು