ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ವಾದಿರಾಜ ರವಿಕೋಟಿ ತೇಜಾ ಶರಣೆಂಬೆನಯ್ಯಾ ಸತತಗೇಯಾ ಪ ನಂಬಿದೆನು ನಿನ್ನ ದಯ ಸಂಪನ್ನ ಸಂಭ್ರಮದಲ್ಲೆನ್ನ ಪೊರೆಯೊ ಪ್ರಸನ್ನ 1 ವೇದಶಾಸ್ತ್ರ ಬಲ್ಲ ಭಳಿರೆ ಮಲ್ಲ ಭೇದ ಜ್ಞಾನವೆ ಎಂಬೊ ನಿಜವೆಂಬ ಫಲ 2 ಮಾಯಿಗಳ ವದ್ದ ಮಮತಾ ಗೆದ್ದ ಗಾಯನ ಪ್ರಸಿದ್ಧ ಗುಣದಲಿ ಇದ್ದ 3 ನಾನಾ ಚಾರಿತ್ರ ತೋರಿದ ಮಿತ್ರ ಸಿರಿ ಹರಿಯ ಗಾತ್ರದೊಳಿಟ್ಟ ಪಾತ್ರ4 ಸಂತತ ವಿರಕ್ತ ಜೀವನ ಮುಕ್ತಾ ಸಂತಾರಿ ಸುಶಕ್ತಾ ಹರಿನಾಮ ಭೋಕ್ತಾ 5 ಸ್ವಾದಿಪುರವಾಸ ಸಾಧುಗುಣ ಭಾಸಾ ಸದ್ಭಕುತ ಪೋಪ ಮಧ್ವಮುನಿಯ ದಾಸಾ 6 ವಿಜಯವಿಠ್ಠಲನ್ನ ನೆನೆಸುವ ಘನ್ನ ಹರಿ ತ್ರಿಜಗ ಹಯವದನನ್ನ ಪರನೆಂಬೊ ಪೂರ್ಣಿ7
--------------
ವಿಜಯದಾಸ
ಧ್ಯಾನಿಸುವ ಸುಜನರಿಳೆಯೊಳೇನು ಧನ್ಯರೊ ಪ ಶ್ರೀನಿಧಿ ನಮ್ಮ ನಾರಾಯಣನ ಚರಣಕಮಲವ ಅ.ಪ ಬ್ರಹ್ಮ ರುದ್ರ ಪ್ರಮುಖ ಸುರರಿಗೇನು ಮೂಲವೊ ಸಮ್ಮತಿ ವೇದ ಶಾಸ್ತ್ರ ಪುರಾಣವೇನು ಪೇಳ್ವುದೊ 1 ಕಾಲಕರ್ಮ ಜೀವ ಮಾಯ ಯಾರಧೀನವೊ ಮೇಲೆ ಅನುಭವದಲಿ ತಿಳಿವುದದುವೆ ಜ್ಞಾನವೊ 2 ಅರ್ಥ ಚತುಷ್ಠಯವ ಕೊಡುವ ಪಾರ್ಥಸಾರಥಿ ಕರ್ತಾ ಭೋಕ್ತಾ ಗುರುರಾಮವಿಠಲ ಮೂರುತಿ3
--------------
ಗುರುರಾಮವಿಠಲ
ಪಾಲಿಸೆನ್ನ ಗೋಪಾಲ ಕೃಷ್ಣ ಪ ಪಾಲಿಸೆನ್ನ ದಧಿಪಾಲ ಮುಖರ ಗೋ ಪಾಲಬಾಲ ಕೃಪಾಲಯ ಹರಿಯೇ ಅ.ಪ. ಭವ ರುಂಡಮಾಲ ಮೇ ಷಾಂಡ ಪ್ರಮುಖ ಸುರಷಂಡ ಮಂಡಿತನೆ 1 ಗೋಪಿ ಗೋಪಾಲ ವೃಷ್ಣಿಕುಲ ದೀಪ ಶ್ರೀಪಶಿವಚಾಪ ಭಂಜನಾ 2 ಅಂಡಜಾಧಿಪ ಪ್ರಕಾಂಡ ಪೀಠ ಕೋ ದಂಡಪಾಣಿ ಬ್ರಹ್ಮಾಂಡ ನಾಯಕ 3 ವ್ಯಾಪ್ತ ಗೋಪ್ತ ಜಗದಾಪ್ತ ದೋಷ ನಿ ರ್ಲಿಪ್ತ ಪ್ರಾಪ್ತಗತಸುಪ್ತ ಸುಷುಪ್ತಾ 4 ವೇದವೇದ್ಯ ಬ್ರಹ್ಮಾದಿವಂದ್ಯ ಸುಖ ಬೋಧಪೂರ್ಣ ಬ್ರಹ್ಮೋದನ ಭೋಕ್ತಾ 5 ಅಧ್ವರೇಶ ಲೊಕೋದ್ಧಾರÀ ಪಾಣಿ ಸ ರಿದ್ವರ ಪಿತಗುರು ಮಧ್ವವಲ್ಲಭಾ6 ಪೋತ ವೇಷದರ ಪೊತನಾರಿ ಪುರು ಹೂತ ಮದಹ ಜಗನ್ನಾಥ ವಿಠ್ಠಲ 7
--------------
ಜಗನ್ನಾಥದಾಸರು
ಮನ್ನಿ ಮನ್ನಿಗೆ ಉಣ್ಣ ಬಂದಾ | ತನ್ನವರೊಳಗಿದ್ದ ಸರ್ವ ಸಾರಭೋಕ್ತಾ ಪ ಭಕುತರಗೋಸುಗ ಭಕುತಿಯ ಕೈಕೊಂಡು ಇಂದು 1 ಭೂವದರೊಳಗಿದ್ದು ದೈತ್ಯರ ಗೆದ್ದಂತೆ | ಆವಿಷ್ಣುವಾಗಿ ಮನ್ನಣೆಯ ಕೈಕೊಳುವಲಿ 2 ನಂಬಿದ ದಾಸರ್ಗೆ ಪ್ರಾರಬ್ಧ ಕರ್ಮವು | ಉಂಬೋದು ಬಿಡದಂದು ತದಾಕಾರ ರೂಪದಿ3 ದಿವಿಜರ ಒಡಗೂಡಿ ದಿನ ಪ್ರತಿದಿನದಲ್ಲಿ 4 ತನ್ನ ಸಂಕಲ್ಪವು ಸಿದ್ಧಿ ಮಾಡುವೆನೆಂದು ಘನ್ನತೆಯಲಿ ನಮ್ಮ ವಿಜಯವಿಠ್ಠಲಸ್ವಾಮಿ 5
--------------
ವಿಜಯದಾಸ
ಸವಿದುಣ್ಣ ಬಾರಯ್ಯ ಸಾರಾಭೋಕ್ತಾ ಪವನಾಂತರ್ಗತ ಕಪಿಲಾತ್ಮ ನರಸಿಂಗಾ ಪ ಉಪ್ಪು ಉಪ್ಪಿನಕಾಯಿ ಪತ್ರ ಶಾಖ ಸೂಪ ಒಪ್ಪುವ ಸಂಡಿಗೆ ವ್ಯಂಜನಗಳು ಇಪ್ಪವು ನಿರುಋತಿ ಪ್ರಾಣ ಮಿತ್ರ ಶೇಷ ಸರ್ಪವೈರಿ ದಕ್ಷ ಲೋಕೇಶನಲ್ಲಿಗೆ 1 ಅನ್ನ ಮಂಡಿಗೆ ತೈಲ ಪಕ್ವಂಗಳು ಪರ ಮಾನ್ನ ಭಕ್ಷ ತುಪ್ಪ ಹುಳಿ ಪದಾರ್ಥ ಬೊಮ್ಮ ಜಯಂತರೈ ಸೂರ್ಯ ಕನ್ಯ ಲಕುಮಿದೇವಿ ಪರ್ವತ ಸುತಿ ಇರೆ2 ಕ್ಷೀರ ನವನೀತಧಿಕಾರಣಾಮ್ಲ ಚಾರು ಉದ್ದಿನ ಭಕ್ಷ ಕಟು ದ್ರವ್ಯ ಪಾ ವಾರಿಜಾಸನ ರಾಣಿ ವಾಯು ಸೋಮ ವೈರಿ ಧರ್ಮ ಸ್ವಾಯಂಭುವಂಗಳು ಅಲ್ಲಿ ಹಾಕಿರೆ 3 ಇಂಗು ಯಾಲಕ್ಕಿ ಸಾಸಿವೆಯಿಂದ ವೊಪ್ಪುತಾ ಬಂಗಾರ ಪಾತ್ರಿಯೊಳಗೆ ತಂದಿಡೆ ಸ್ವಾದೋದಕ ಇಡೆ ಅಂಗಜಾ ದುರ್ಗಿಯ ಚಂದ್ರಮಸುತನಿರೆ 4 ವೀಳ್ಯವ ಕೈಕೊಳೊ ಗಂಗಾಜನಕ ಹರಿ ಅಲ್ಲಲ್ಲಿಗೆ ನಿನ್ನ ರೂಪವುಂಟು ಬಲ್ಲಿದಾ ವಿಜಯವಿಠ್ಠಲರೇಯ ಎನಗಿದೆ ಸಲ್ಲೊದೆ ಸರಿ ಲೇಶವಾಪೇಕ್ಷದವನಲ್ಲ5
--------------
ವಿಜಯದಾಸ
ವೆಂಕಟಾದ್ರಿವರದ ಶಂಕರನುತಪಾದ ಪ.ಶಂಖಾರಿ ಅಹಿಪರಿಯಂಕಶಾಯಿ ಉದಾರಿಕಿಂಕರಕೋಶ ಸಂಕಟನಾಶಪಂಕಜನಾಭಾಸಂಖ್ಯಾತ ರವಿಭಾ 1ಗಜಬಂಧನ ನಿವಾರಿ ಕುಜಮಸ್ತಕವಿದಾರಿಅಜಮಿಳರಕ್ಷ ನಿಜಜನಪಕ್ಷಕುಜನ ವಿಶಿಕ್ಷಾಂಬುಜ ಪತ್ರಾಕ್ಷ 2ಕಂಸ ಮಥನಕಾರಿ ಹಂಸಡಿಬಿಕವೈರಿಸಂಶಯಹರ ಗೋಪಾಂಸು ಲಿಪ್ತಾಂಗ ಹಿಮಾಂಶುಕುಲೇಶ ಭವಶರಧಿನಾಶ 3ಭೈಷ್ಮೀ ಸತ್ಯಾರಮಣ ಭೂಷಿತ ಅಖಿಳಾಭರಣದ್ವೇಷಕೃತ ದಮಘೋಷಜಹರ ಮಹೀಶೆಜÕ ಭೋಕ್ತಾಗ್ರೇಸರ ಶಕ್ತ 4ಸ್ವಾಮಿ ತೀರ್ಥಕರ್ತ ಕಾಮಿತ ಫಲದಾತಸ್ವಾಮಿ ಪ್ರಸನ್ವೆಂಕಟಾಮಲಮೂರ್ತಿನಾ ಮೊರೆಹೊಗುವೆ ಪ್ರೇಮದ ಪ್ರಭುವೆ 5
--------------
ಪ್ರಸನ್ನವೆಂಕಟದಾಸರು
ಶ್ರೀ ರಾಮಕಪಿಲ36ಸೋಮರವಿ ಭಾಸಕನೆ ರಾಮ ಕಪಿಲನೆ ನಿನ್ನತಾಮರ ಸಪದಯುಗಳಕಾ ನಮಿಪೆ ಕಾಯೊ ಪಹೇಮಗರ್ಭನತಾತಭಾಮೆ ಭೈಷ್ಮಿಯ ರಮಣವಾಮ ಚಿತ್ಸುಖಕಾಯ ಅಮರಗುಣಪೂರ್ಣ ಅಪಶ್ರೀಕರನೆ ಸುಖಮಯನೆ ಲೋಕಪಾಲಕ ಸ್ವಾಮಿಸ್ವೀಕರಿಸೊ ಈ ಸೇವೆ ಭಕುತಜನಪ್ರಿಯನಾಕಭುವಿ ಪಾತಾಳ ಲೋಕಂಗಳಲಿ ವ್ಯಾಪ್ತಏಕಕಾರಣ ಸಾಕ್ಷಿಸುಖ ಸಾರಭೋಕ್ತಾ 1ಭೂರಮಣ ಸಾರಾತ್ಮ ನೀ ರಮಿಪೆ ನಿನ್ನೊಳಗೆಮಾರಕಮಲಜತಾತ ಶರಣು ಶರಣಾದೆಹಾರ ಅರಿಶಂಖಾಬ್ಜ ಭಾರಿಗದೆ ಚಾಪಧರಘೋರತರ ಭಯಹಾರಿ ನಾರಸುರಸೇವ್ಯ 2ನೋಡಬೇಕೆಲೊ ನಿನ್ನ ಮೂಢಮನೋತಿಮಿರಾರ್ಕಬಾಢವೆನ್ನುತ ಬೇಗ ನೋಡೆನ್ನ ದಯದಿಪಾಡಿ ಪೊಗಳುವೆ ನಿನ್ನಈಡುಇಲ್ಲದವಿಶ್ವಮೂಡಲ ಸುನಗವಾಸ ಪ್ರಸನ್ನ ಶ್ರೀನಿವಾಸ 3
--------------
ಪ್ರಸನ್ನ ಶ್ರೀನಿವಾಸದಾಸರು