ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೋಗÀಣೆಯ ನೀ ಮಾಡಯ್ಯಾ ಯದುಕುಲ ವಾರಿಧಿ ಚಂದ್ರಮನೆ ಪ ಸಾರಸನಯನ ಅಪಾರಮಹಿಮ ಕರು ಣಾರಸ ಪರಿಪೂರ್ಣಸಾರ ಭೋಕ್ತನೆ ಸ್ವಾಮಿ ಅ.ಪ. ಬಡವನು ನಾ ನಿನಗೆ ಕೊಡಲರಿಯೆನೊ ಸ್ವಾಮಿ ಪೊಡವಿಗೊಡೆಯ ನಿನ್ನ ಅಡಿಭಕ್ತ ನಾನಯ್ಯ ಕಡಲಶಯನ ಒಂದು ಕುಡಿತೆ ಪಾಲನು ನಿನಗೆ ಕೊಡುವೆನು ನಿತ್ಯತೃಪ್ತ ಒಡನೆ ಸ್ವೀಕರಿಸಯ್ಯಾ ಮೃಡವಂದಿತ ಪದಜಡಜಯುಗಳದಲಿ ದೃಢಭಕ್ತಿಯ ನೀ ಕೊಡು ಕೈ ಬಿಡದಲೆ ನುಡಿಗೆ ನುಡಿಗೆ ನಿನ್ನ ನಾಮವ ನುಡಿಸಯ್ಯ ಬಡವರ ಬಂಧುವೆ ಕರಿಗಿರೀಶನೆ 1
--------------
ವರಾವಾಣಿರಾಮರಾಯದಾಸರು
ಕಾಲಕಾಲದಲಿ ಕೇಶವನೆನ್ನಿರೊ ಬಾಲ ಮುಕುಂದ ಮಾಧವನೆನ್ನಿರೊ ಧ್ರುವ ಉದಯಕಾಲದಲಿ ಅನಂತಮಹಿಮನೆನ್ನಿ ಮಧ್ಯಾಹ್ನದಲಿ ಪದ್ಮನಾ¨sನೆನ್ನಿ ಸಂಧ್ಯಾಸಾಯಂಕಾಲದಲಿ ಶ್ರೀಧರನೆನ್ನಿ ಸದಾ ಕಾಲದಲಿ ಶ್ರೀ ಹರಿಯೆನ್ನಿರೊ 1 ಏಳುತ ಮಚ್ಛಾವತಾರ ಅಚ್ಯುತನೆನ್ನಿ ಮಲಗುತ ಶೇಷಶಯನನೆನ್ನಿರೊ ಹೇಳುತ ವಿಷ್ಣುವರಾಹವತಾರನೆನ್ನಿ ಕೇಳುತ ಕೃಷ್ಣಾವತಾರನೆನ್ನಿ 2 ನಡೆಯುತ ಸುಗುಣ ನಿರ್ಗುಣ ಸರ್ವೋತ್ತಮನೆನ್ನಿ ನುಡಿಯುತ ನಾರಯಣನೆನ್ನಿರೊ ಮಾಡುತ ಕೃಷ್ಣನಿರ್ಮಿತ ದಾಮೋದರನೆನ್ನಿ ಕೂಡುತ ಕೂರ್ಮಾವತಾರನೆನ್ನಿ3 ಆಡುತ ಗರುಡವಾಹನ ತ್ರಿವಿಕ್ರಮನೆನ್ನಿ ಬೇಡುತ ಸ್ವಾಮಿ ವಾಮನನೆನ್ನಿರೊ ನೋಡುತ ವಾರಿಜನೇತ್ರ ಪ್ರಸಿದ್ದನೆನ್ನಿ ಪಾಡುತ ಪರಮಾತ್ಮನೆನ್ನಿರೊ 4 ಉದ್ಯೋಗದಲಿ ಸಹಕಾರನಿರುದ್ದನೆನ್ನಿ ಉದರ ಕಾಯದಲಿ ಉಪೇಂದ್ರನೆನ್ನಿ ಮೇದಿನೊಯೊಳು ಹರಿಮಧುಸೂದನನೆನ್ನಿ ಆದಿ ಅಂತಿಮ ಅಧೋಕ್ಷಜನೆನ್ನಿರೊ 5 ಹೃದಯಕಮಲದೊಳು ಹೃಷೀಕೇಶನು ಎನ್ನಿ ಶಬ್ದಜಿಹ್ವೆಲಿ ಜನಾರ್ಧನನೆನ್ನಿರೊ ಬುದ್ಧಿಯಲಿ ಸಿದ್ಧಬೌದ್ದಾವತಾರನೆನ್ನಿ ಅದಿಅನಾದಿ ಗೋವಿಂದನೆನ್ನಿ 6 ಅನುದಿನ ಮನದೊಳು ಘನಮಹಿಮನು ಎನ್ನಿ ತನುವಿನೊಳು ಪುರುಷೋತ್ತಮ ನಾನೆನ್ನಿ ಅನ್ನವುದಕ ಸೇವಿಸುವ ಹರಿಭೋಕ್ತನೆನ್ನಿ ಘನಭೂಷಣದಿ ಸಂಕರುಷಣನೆನ್ನಿ 7 ಸತಿಪತಿ ಸಂಯೋಗದಲಿ ಪ್ರದ್ಯುಮ್ನನೆನ್ನಿ ಪತಿತಪಾವನ ಪರಬ್ರಹ್ಮನೆನ್ನಿ ಭಕ್ತವತ್ಸಲ ನರಸಿಂಹಾವತಾರನೆನ್ನಿ ಮುಕ್ತಿದಾಯಕ ದೇವೋತ್ತಮನೆನ್ನಿರೊ 8 ಪಾವನಮೂರುತಿ ಪರಶುರಾಮನೆನ್ನಿ ಜೀವಸಂಜೀವ ಶ್ರೀ ರಾಮನೆನ್ನಿ ಭವಭಯನಾಶ ಕಲ್ಕ್ಯಾವತಾರನೆನ್ನಿ ಮಹಿಪತಿಗುರು ವಾಸುದೇವನೆನ್ನಿ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಾರಾಯಣ ನರಸಿಂಹ ಲ- ಕ್ಷ್ಮೀರಮಣನೆ ಪರಬ್ರಹ್ಮ ಪ. ಸಾರಭೋಕ್ತನೆ ಸ್ವತಂತ್ರನೆ ದೋಷವಿ- ದೂರ ಪರಿಪೂರ್ಣಕಾಮ ಅ.ಪ. ಸತ್ವಾದಿಗುಣಾತೀತ ವಿತತ ಸ- ರ್ವೋತ್ತಮ ನಿರುಪಮ ಮಹಿಮ ಪ್ರತ್ಯಗಾತ್ಮ ನಿಗಮಾಗಮವೇದ್ಯ ಸು- ಹೃತ್ತಮ ಮಂಗಲಧಾಮ 1 ವಿಧಿಭವೇಂದ್ರಾದಿ ವಿಬುಧಾಶ್ರಿತಪದ- ಪದುಮ ನೀಲಾಂಬುದಶ್ಯಾಮ ಹೃದಯಾಬ್ಜಮಧ್ಯಸದನ ಸಾಮಜವ- ರದ ಯದುವಂಶಲಲಾಮ 2 ಮಾಯಾತೀತ ಮಹೋನ್ನತ ಸುರಜನ- ಪ್ರಿಯ ದ್ಯೆತ್ಯೇಯನಿರ್ನಾಮ ವಾಯುವಾಹನ ಜನಾರ್ದನ ಲಕ್ಷ್ಮೀನಾ- ರಾಯಣ ತೇ ನಮೋ ನಮಃ 3
--------------
ತುಪಾಕಿ ವೆಂಕಟರಮಣಾಚಾರ್ಯ
ಬಾರೋ ಶ್ರೀ ಕೃಷ್ಣವಿಠಲ ಮನ್ಮನ ದೈವ ಪ ಮೆಲ್ಲಮೆಲ್ಲನೆ ಪದ ಪಲ್ಲವ ವಿಡುತಲಿ ಗುಲ್ಲು ಮಾಡದೆ ಭವ ದಲ್ಲಣಗೊಳಿಸು ವಲ್ಲಭ ಸಿರಿಸಹ ನಿಲ್ಲದೆ ಮನೆಯೊಳು ಬಲ್ಲಿದರಿಗೆ ಬಹು ಬಲ್ಲಿದನೆನಿಸಿಹ ಅ.ಪ. ನೆಗೆಯುವ ನಿಲ್ಲುತೆ ಚಿಗರಿಯ ತೆರೆದನು ರಾಗದಿನೋಡುತ ಬಗೆ ಬಗೆ ಹರ್ಷದ ನಗೆಮೊಗಹಾಸದಿ ಬಿಗಿಯುತ ಮನ ಅಗಣಿತ ಗುಣನಿಧಿ 1 ಸಾಗರನಳಿಯನೆ ಸಾಗರಶಯನನೆ ಯಾಗ ಸುಭೋಕ್ತನೆ ಯೊಗಿಗಳರಸನೆ ಬಾಗುವೆ ಚರಣದಿ ಸಾಗುತ ಮನ ಬಡ ಬಡ ನೀಗಿಸಿ ಮಲಮನದಾಗಸಗೀಗಲೆ 2 ಕುಣಿಸುತ ಹುಬ್ಬನು ಉಣಿಸುತ ಭಕ್ತಿಯ ತನುಮನವೆಲ್ಲವ ಮಿನುಗಿಸಿ ಜ್ಞಾನವÀ ಧಣಧಣ ತಾಳಕೆ ಅಭಿನಯಸಹಿತದಿ ಕುಣಿಯುತ ಕುಣಿಸುತ ದಣಿಸದೆ ಕರುಣದಿ 3 ಕರ್ಜಿಸಿ ರಾಮದ ಕಜ್ಜಿಯಮನದಿಂ ಮಜ್ಜನಗೈಸುತ ಭಕ್ತಿಯಕಡಲಲಿ ಗೆಜ್ಜೆಯಕಟ್ಟಿಸಿ ಹೆಜ್ಜೆಹೆಜ್ಜೆಗೆ ಪೂ- ರ್ವಾರ್ಜಿತವೆಲ್ಲವ ಭರ್ಜನೆ ಗೈಸಲು 4 ಇಂದಿರೆಯರಸನೆ ಚಂದ್ರನ ಹಳಿವನೆ ಛಂದಸುವೇದ್ಯನೆ ಬಂಧ ಸುಮೋಚಕ ಬಂಧುವೆ ಸರ್ವರ ಮಂದಜಭವಪಿತ ತಂದೆಯೆ ವಿಶ್ವದ ನಂದವ ನೀಡಲು 5 ವೇದವ ತಂದವ ವೇದನ ಪೊರೆದವ ಭೂಧರ ಪೊತ್ತವ ಮಾಧವನಾದವ ಮೋದವ ತಂದವ ಖೇದವ ತರಿದವ ಮೇದಿನಿ ಪೊರೆದವ ಛೇದಿಸಿ ಬಂದವ 6 ಮೇದಿನಿ ಇತ್ತವ ಮೇದಿನಿಸುತೆಯಳ ಮೋದದಲಾಳ್ದವ ಮೇದಿನಿಸುತಹರ ವೇದವ ಕಾಯ್ದವ ಛೇದಿಸಿ ಕಲಿಗಣ ಹಾದಿಯ ತೊರುವ 7 ನಂದನಂದ ಅರವಿಂದ ನಯನ ಬಹು ಸುಂದರತಮಶ್ರೀ ಮಂದಿರ ಗೋಕುಲ ಚಂದಿರ ಶುಭಗುಣಸಾಂದ್ರ ಮಹೋಜಸ ಇಂದ್ರನ ಹಳಿದ ಮಹೇಂದ್ರ ಪರಾತ್ಪರ8 ಗೋಪಿಕಂದ ಬಹು ಗೋಪಿಕಾಮಸ್ತ್ರೀ ರೂಪಧಾರಿ ನಗಚಾಪವರದ ಶಿವ ಭಂಗ ಹರಣ ನಿ- ರ್ಲೇಪ ದುಃಖ ಸುಖಲಾಪ ಚರಿತ ಭಗ 9 ವಾಸುದೇವ ಸಂತೋಷದಾತ ಗೋಕೇಶವೇದ್ಯ ವಾಗೀಶ ಜನಕ ನಿಜದಾಸಪೋಷ ಖಳ- ದಾತ ಮಹಿ- ದಾಸಪೂರ್ಣವಿಭು 10 ವೈರಿ ಕುರುವಂಶ ಧ್ವಂಸ ನಿಜ ಹಂಸರೂಪ ಯದುವಂಶ ಚಂದ್ರ ನೀ- ಲಾಂಶುಧಾಮ ಗರುಡಂಸಗಮನ ಭವ ದಮನ ದೇವಾಂಶಗಣಪೋಷ 11 ತುಂಬಿರೆಜಯಜಯ ದುಂಧುಭಿನಾದವು ಅಂಬರಸುರಗಣ ವರ್ಷಿಸೆಕುಸುಮವ ಸಂಭ್ರಮದಾರತಿ ಎತ್ತಲ್ ಸ್ತ್ರೀಗಣ ಕಂಬು ಚಕ್ರಾಂಕಿತ ಪಾಣಿಯೆಸರಸರ 12 ಮಂಗಳಮೂರ್ತಿಯೆ ಮಂಗಲ ದಾತನೆ ಅಂಗಜರಿಪುಗಳ ಭಂಗವ ಹರಿಸುತ ತಿಂಗಳು ಬೆಳಕಿನ ತುಂಗ ಸುರೂಪವ ಕಂಗಳು ಮನಸಿನ ಸಂಗದಿ ತೋರುತ13 ಸಾಸಿರ ಶಿರಮುಖ ಸಾಸಿರ ನೇತ್ರನೆ ಸಾಸಿರ ಬಾಹುವೆ ಸಾಸಿರನಾಮಕ ಸಾಸಿರಕೀರ್ತಿನಿರ್ದೋಷ ಸುಖಪೂರ್ಣ ಶ್ವಾಸವಿನುತ ವಿಶ್ವಾಸವ ಬೀರುತ 14 ಜಯಮುನಿ ಹೃದಯಗ ವಾಯು ವಿನಾಯಕ ಜೀಯ ಶ್ರೀ ಕೃಷ್ಣವಿಠಲ ಮಹಾಂತನೆ ಪ್ರೇಮದ ಮನವಳಿದ ಹೇಯದು ನಿನ್ನಯ ಧೇಯವೆ ನಡೆಸುತ ಶ್ರೀ ಯವ ನೀಡಲು 15
--------------
ಕೃಷ್ಣವಿಠಲದಾಸರು
ನಾರಾಯಣ ನರಸಿಂಹ ಲ-ಕ್ಷ್ಮೀರಮಣನೆ ಪರಬ್ರಹ್ಮ ಪ.ಸಾರಭೋಕ್ತನೆ ಸ್ವತಂತ್ರನೆ ದೋಷವಿ-ದೂರ ಪರಿಪೂರ್ಣಕಾಮ ಅ.ಪ.ಸತ್ವಾದಿಗುಣಾತೀತ ವಿತತ ಸ-ರ್ವೋತ್ತಮ ನಿರುಪಮ ಮಹಿಮಪ್ರತ್ಯಗಾತ್ಮ ನಿಗಮಾಗಮವೇದ್ಯ ಸು-ಹೃತ್ತಮ ಮಂಗಲಧಾಮ 1ವಿಧಿಭವೇಂದ್ರಾದಿ ವಿಬುಧಾಶ್ರಿತಪದ-ಪದುಮ ನೀಲಾಂಬುದಶ್ಯಾಮಹೃದಯಾಬ್ಜಮಧ್ಯಸದನ ಸಾಮಜವ-ರದ ಯದುವಂಶಲಲಾಮ 2ಮಾಯಾತೀತ ಮಹೋನ್ನತ ಸುರಜನ-ಪ್ರಿಯ ದ್ಯೆತ್ಯೇಯನಿರ್ನಾಮವಾಯುವಾಹನ ಜನಾರ್ದನ ಲಕ್ಷ್ಮೀನಾ-ರಾಯಣ ತೇ ನಮೋ ನಮಃ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ