ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಭೇಧವಿಲ್ಲದವನೆ ನಿಜಜ್ಞಾನಿಯು ತನು ಭಾವವರಿತು ನಡೆಯುವನೆ ನಿಜ ಭಾಗವತನು ಪ ಮಾನ ಅಪಮಾನ ಸಮಕಾಣುವನೆ ಸಜ್ಜನನು ತಾನು ತನ್ನದೆಂಬ ಮಾಯವಳಿದವನೆ ಸಾಧು ಏನು ಕೊಟ್ಟರು ಒಲ್ಲೆನೆಂಬುವನೆ ಸನ್ಯಾಸಿ ದೀನರನು ಕಂಡು ಮನಮರುಗುವನೆ ಭಕ್ತ 1 ನಿಜಧರ್ಮವರಿಯದ ಪಾಮರನೆ ಶೂದ್ರನು ನಿಜವಾಕ್ಯಗಳ ಕೇಳಿ ಅಳಿವವನೆ ಭವಿಯು ಸುಜನರಿಗೆ ತಲೆಬಾಗಿ ನಡೆವವನೆ ಸಿದ್ಧಾಂತಿ ಕುಜನರ ಮಾತಿಗೊಳಪಡುವವನೆ ನರಕಿ 2 ಪಿಡಿದ ವ್ರತನೇಮಗಳ ಬಿಡದವನೆ ಕಡುಗಲಿ ಜಡದೇಹ್ಯಮೋಹವನು ತೊಡೆದವನೆ ಸತ್ಯ ಬಂಟ ಜಗದೊಳಗೆ ಒಡೆಯ ಶ್ರೀರಾಮನಡಿ ದೃಢಯುತನೆ ಮುಕ್ತ 3
--------------
ರಾಮದಾಸರು
ದಯಮಾಡೊ ಕಾಶಿ ಬಿಂದುಮಾಧವಮಾಡದಿರೆನಗೆ ತಂದೆ ಭೇಧವ ಪ. ಪಾಪನಾಶನ ಪಾಲಿಸೊ ಎನ್ನಸರ್ಪಭೂಷಣನತಾತನೆಂದೆನಿಸುವ ತವ ನಾಮಸ್ಮರಣೆಪಾರ್ವತಿಪತಿಯ ಧ್ಯಾನದೊಳಿರಿಸೊ 1 ಮೋಕ್ಷÀದಾಯಕ ಪಾಲಿಸೊ ಎನ್ನಲಕ್ಷ್ಮೀನಾಯಕಕುಕ್ಷಿಯೊಳೀರೇಳುಭುವನ ತಾಳಿದವನೆಭಿಕ್ಷಾಪಾತ್ರ ಶಿವನಧ್ಯಾನದೊಳಿರಿಸೊ 2 ಆದಿಮೂರುತಿ ವಿಶ್ವೇಶ್ವರಗೆ ವಿಷ್ಣುಪಾದವೆ ಗತಿಮೇದಿನಿಯೊಳು ಸೋದೆಪುರದಿ ನೆಲೆಸಿವಾದಿರಾಜವರದನೆ ಬಂದೆ ಹಯವದನನೆ 3
--------------
ವಾದಿರಾಜ
ರಾಮಚಂದ್ರ ಹರಿ ವಿಠಲ | ನೀನಿವನ ಸಲಹೋ ಪ ಕರ ಪಿಡಿದು | ಕಾಮಿತವನಿತ್ತುಅ.ಪ. ಕರ ಪಿಡಿಯಯ್ಯ | ಪ್ರಹ್ಲಾದ ವರದಾಮರುತ ಮತ ದೀಕ್ಷೆಯಲಿ | ದೃಢವಾದ ಮತಿಯಿತ್ತುವರಗಳನೆ ನೀಡುವುದು | ಮರುತಾಂತರಾತ್ಮಾ 1 ತಾರತಮ್ಯವ ತಿಳಿಸೊ | ಪಂಚ ಭೇಧವ ತಿಳಿಸೋಕಾರ್ಯ ಕಾರಣ ನೀನೇ | ಬೇಡುವೆನು ನಿನ್ನಾಹರಿಯು ಸರ್ವೋತ್ತಮನು | ಮರುತ ಜೀವೋತ್ತಮನುನಿರುತ ನೀ ಸುಜ್ಞಾನ | ಅರಿವನೀಯುತ ಸ್ವಾಮೀ2 ನಾನು ನನ್ನದು ಎಂಬ | ಸಂಸ್ಕಾರವನೆ ಕಳೆದುನೀನು ನೀನೇ ಎಂಬ | ಉಪಾಯ ಒಲಿಸೇಕಾಣಿಸೋ ಹೃದ್ಗುಹದಿ | ಗಾನಲೋಲನೆ ದೇವಕೊನೇರಿ ವಾಸ ಹರಿ | ಪ್ರಾರ್ಥಿಸುವೆ ನಿನ್ನಾ 3 ಪತಿ ಅದ್ವೈತ ಸಿರಿ ಜಾನಕೀ ಪತಿಯೇ 4 ಕರ | ಪಿಡಿದು ಉದ್ಧರಿಸುತಲಿಪೊರೆಯೊ ಗುರು ಗೋವಿಂದ | ವಿಠಲ ಕಾರುಣ್ಯ 5
--------------
ಗುರುಗೋವಿಂದವಿಠಲರು
ಹರಿಯೆ ಸರ್ವೋತ್ತಮ ಪರದೈವವೆಂತೆಂಬ ಮರುತ ಮತವ ಸಾರಿರೊ ಪ. ಗರುವಿಕೆಯನೆ ಬಿಟ್ಟು ಪರಮತವನೆ ಸುಟ್ಟು ಹರಿಯ ಸೇವಕರಾಗಿರೊ | ಈ ಜಗದೊಳು ಅ.ಪ. ಪಂಚ ಭೇಧವ ತಿಳಿದು ಪಂಚೇಂದ್ರಿಯವ ಸೆಳೆದು ಪಂಚ ಮೂರ್ತಿಯ ಭಜಿಸಿರೊ ಪಂಚ ಸಂಸ್ಕಾರದಿ ಪಂಚಯಜ್ಞವ ರಚಿಸಿ ಪಂಚ ಮಾರ್ಗವ ಸಾರಿರೊ | ವೈರಾಗ್ಯದಿ 1 ಎಂಟು ಮದಗಳನಳಿದು ಎಂಟು ಮೂರ್ತಿಯ ತಿಳಿದು ಎಂಟು ದಳದಿ ಕಾಣಿರೊ ಎಂಟು ಕರ್ತೃತ್ವವ ಎಂಟು ತತ್ವದಿ ಮಾಳ್ಪ ಎಂಟಕ್ಷರನ ಪಾಡಿರೊ | ಕೊಂಡಾಡಿರೊ 2 ಮೂರು ಗುಣಗಳಿಂದ ಮೂರು ಮಾಳ್ಪ ಜಗವ ಮೂರು ರೂಪವ ನೆನೆಯಿರೊ ಮೂರು ಮೂರು ಭಕ್ತಿ ಮೂರು ಮಾರ್ಗದಿ ರಚಿಸಿ ಮೂರು ಲೋಕವ ಸಾರಿರೊ | ಮೂರನೆ ಗೆದ್ದು 3 ಕಂಡ ದೈವಗಳಿಗೆ ಮಂಡೆಯ ಬಾಗಿಸುತ ಬೆಂಡು ಆಗಲಿ ಬೇಡಿರೊ ಹಿಂಡು ದೈವಗಳಿಗೆ ಗಂಡ ಹರಿಯ ಭಜಿಸಿ ಗಂಡುಗಲಿಯಾಗಿರೊ | ಧೈರ್ಯವ ತಾಳಿ 4 ಗುರುಗಳಿಂದಲಿ ತತ್ವ ಸರ್ವಕಾಲದಿ ತಿಳಿದು ಉರ್ವಿಯೊಳಗೆ ಬಾಳಿರೊ ಸರ್ವಾಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ ಸರ್ವಬಿಂಬನೆನ್ನಿರೊ | ಮೂಲರೂಪಿ 5
--------------
ಅಂಬಾಬಾಯಿ
ಶ್ರೀಪುರಂದರದಾಸಾರ್ಯ ಸ್ತೋತ್ರ133ಹರಿದಾಸ ಶ್ರೇಷ್ಠ ಶ್ರೀಪುರಂದರದಾಸಾರ್ಯರಸರಸೀರುಹಾಂಘ್ರಿಯಲಿ ಶರಣಾದೆ ಸತತ ||ವೈರಾಗ್ಯ ಯುಕ್‍ಜ್ಞಾನ ಭಕ್ತ್ಯಾದಿ ಸಂಪತ್ತುಕರುಣದಲಿ ಒದಗಿಸಿ ಶ್ರೀಕೃಷ್ಣ ನ್ನೊಲಿಸುವರು ||ಈ ಪುಣ್ಯತಮ ಭರತಖಂಡದಲಿ ಪ್ರಖ್ಯಾತ ||ಕೃಪಾಂಬುಧಿ ಜಗನ್ನಾಥವಿಠ್ಠಲ ರುಕ್ಮಿಣೀಶ ||ರೂಪಗುಣ ಭೇಧವಿಲ್ಲದ ಪೂರ್ಣನಿರ್ದೋಷಶ್ರೀಪ್ರಸನ್ನ ವೇಂಕಟನೇ ನಮೋ ಪದ್ಮಾವತೀಶ 1ಪುರುಷರೂಪತ್ರಯ ಕ್ಷರಾ ಕ್ಷರೋತ್ತಮ ಭೂಮ |ಅರದೂರಗುಣನಿಧಿ ನಾರಾಯಣಗೆ ಶರಣು |ಸುಪ್ರೇಮಾತಿಶಯದಲಿ ಸದಾ ಪತಿಯ ಸೇವಿಸುವನಿರಾಮಯಳು ಸುಖಪೂರ್ಣಲಕ್ಷ್ಮಿಗೆ ಶರಣು 2ದ್ವಿಷೋಡಶ ಲಕ್ಷಣದಿ ರಾಜಿಪವಿಧಿದಶಪ್ರಮತಿಗು ವಾಣಿ ಭಾರತಿಯರಿಗು ನಮಿಪೆಶ್ರೀಶನ ಪೂರ್ಣಾನುಗ್ರಹ ಪೂರ್ಣಪಾತ್ರರುಉತ್ಕøಷ್ಟರಜುಸ್ತೋಮಚರಣಕಾನಮಿಪೆ3ಉತ್ತಮ ಶ್ಲೋಕನ್ನ ಜಪಿಸಿ ಪೂಜಿಪ ಶಿವಹೊತ್ತು ಸೇವಿಪಗರುಡಪರ್ಯಂಕಶೇಷಭಕ್ತಾಗ್ರಣಿ ಈ ಸರ್ವರಿಗು ನಮಿಸುವೆನುಮಾಧವನ ಷಣ್ಮುಹಿಷಿಯರಿಗು ನಮಿಪೆ 4ವಿಮಲ ಚರಿತರು ಉಮಾಸೌಪರ್ಣಿ ವಾರುಣಿಗು |ಅಮರೇಂದ್ರ ಮನ್ಮಥಮುನಿಗು ನಮನಮಾಡಿನಮಿಸುವೆ ಅಹುಪ್ರಾಣದೇವನಿಗೆಗುರುಶಚಿಕಾಮಸತಿ ಸುತದತ್ತ ಸ್ವಾಯಂಭುವಗೆ 5
--------------
ಪ್ರಸನ್ನ ಶ್ರೀನಿವಾಸದಾಸರು