ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೃತ್ಯವನವಧರಿಸು ನಿರುಪಮ ನೃತ್ಯವನವಧರಿಸು ಪ ನರ್ತನಕರ್ತುವು ನೀನೆಯಾಗಲು ಅ.ಪ ಪ್ರಥಮದಿ ಸ್ವರವುಂ ಹೊರಡಲು ತಾಳವು ಮಿಥುನದಿ ನಾಂದಿಯ ಮಾಡಲು ವಿಧಿಯಿಂ1 ಮರ್ದಳನಾದವು ಮೂಡಲು ಹಾಗೆ ಮಾನಿನಿ ನಿಲಲು 2 ರಂಗವು ರಂಜಿಸಿ ರಾಗಗಳಿಂದಲು ಮಂಗಳನಾಟ್ಯವು ಮುಂಗುಡಿಸಾಗಲು 3 ರಾಗದ ಭೇದಗಳ್ ರೂಢಿಗಳಾಗುತ ಸಾಗಲು ಲಯಗತಿಸಹಿತದಿ ಬೆಳೆದು 4 ಆಡುವ ನೃತ್ಯವರ್ನರ್ಪಿಪೆ ತಿರುಪತಿನಾಡಿನ ವೆಂಕಟನಾಥನೆ ಲಾಲಿಸು 5
--------------
ತಿಮ್ಮಪ್ಪದಾಸರು
ಸಾರ ತಿಳಿಯದೆ ಭೇದಾಭೇದ ವಿದ್ಯಾತಕೆ ಸೂಸುವದ್ಯಾತಕೆ ಹರಿಭಕುತಿಗೆ ಧ್ರುವ ಬಲಮುಣುಗುವದಿದ್ಯಾಕೆ ಬಲುವ ಭಾವದ ಕೀಲ ತಿಳಿಯದೆ ಮಾಲಿಜಪಕೈಯಲ್ಯಾತಕೆ ತಲೆ ಮುಸಕ್ಯಾತಕೆ ಹಲವು ಜನ್ಮ ಹೊಲಿಯು ತೊಳಿಯದೆ ಶೀಲಸ್ವಯಂಪಾಕ್ಯಾತಕೆ 1 ಹರಿಯ ಚರಣಾಂಬುಜನವರಿಯದೆ ಬರಿಯ ಮಾತಿನ್ಯಾತಕೆ ಗುರುವಿನಂಘ್ರಿಯ ಗುರುತವಿಲ್ಲದೆ ಶರಣಸಾವಿರವ್ಯಾತಕೆ ತುರಿಯಾವಸ್ಥೆಯೊಳರಿತು ಕೂಡದೆ ತೋರಿಕೆಯ ಡಂಭವ್ಯಾತಕೆ ತರಣೋಪಾಯದ ಸ್ಮರಣಿ ಇಲ್ಲದೆ ತರ್ಕಭೇದಗಳ್ಯಾತಕೆ 2 ಅಂತರಾತ್ಮದ ತಂತುವಿಡಿಯದೆ ಗ್ರಂಥಪಠಣಗಳ್ಯಾತಕೆ ಕಂತುಪಿತನಾರ್ಚನೆಯನರಿಯದೆ ತಂತ್ರ ಮಂತ್ರಗಳ್ಯಾತಕೆ ಪಂಥವರಿಯದೆ ಪರಮಯೋಗದಾನಂತ ವ್ರತವಿದುವ್ಯಾತಕೆ 3 ಸೋಹ್ಯವರಿಯದೆ ಶ್ರೀಹರಿಯ ನಿಜಬಾಹ್ಯರಂಜನೆವ್ಯಾತಕೆ ಗುಹ್ಯಮಹಾಮಹಿಮೆಯು ತಿಳಿಯದೆ ದೇಹ ಅಭಿಮಾನ್ಯಾತಕೆ ಸಾಹ್ಯವಿಲ್ಲದೆ ಶ್ರೀಹರಿಯ ದೇಹದಂಡದ್ಯಾತಕೆ ಮಹಾವಾಕ್ಯದಿತ್ಯರ್ಥವರಿಯದೆ ಸಾಯಸಬರುವದ್ಯಾತಕೆ 4 ಭಾಗ್ಯಭಕುತಿ ವೈರಾಗ್ಯವಿದು ನಿಜಯೋಗಾನಂದದ ಭೂಷಣ ಶ್ಲಾಘ್ಯವಿದು ತಾ ಇಹಪರದೊಳು ಸುಗಮ ಸುಪಥಸಾಧನ ಸಾರ ಯೋಗಿ ಮಾನಸಜೀವನ ಬಗೆಬಗೆಯಲನುಭವಿಸಿ ಮಹಿಪತಿಯೋಗ್ಯನಾಗೋ ಸನಾತನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯನರಿಯದಿಹ್ಯ ನರಜನ್ಮಾವ್ಯಾಕೆ ಪರಬ್ರಹ್ಮವರಿಯದ ಬರೆ ಬ್ರಾಹ್ಮಣವ್ಯಾಕೆ ಧ್ರುವ ಹರಿಃ ಓಂ ತತ್ಸದಿತಿಯೆಂಬ ಶ್ರೀ ಹರಿ ವಾಕ್ಯವರಿಯದೆ ಬರುದೆ ಶ್ರೀ ಹರಿ ಶ್ರೀ ಹರಿಯಂದೊದರುವದ್ಯಾಕೆ 1 ಏಕಾಂಶೇನ ಸ್ಥಿತೋ ಜಗತ ಎಂಬ ವಾಕ್ಯವರಿಯದೆ ನಾಲ್ಕಾರು ವೇದಶಾಸ್ತ್ರವೋದಿ ಕೇಳುವದ್ಯಾಕೆ 2 ಎಂಬ ವಾಕ್ಯವರಿಯದೆ ಹದಿನೆಂಟು ಪುರಾಣ ಕೇಳಿ ಹೇಳುವದ್ಯಾಕೆ 3 ಮಮೈವಾಂಶೋ ಜೀವಲೋಕೇ ಜೀವಭೂತ:ಸನಾತನ ಎಂಬ ವಾಕ್ಯವರಿಯದೆ ನಾನಾವ್ರತಾಚಾರ ಸಂನ್ಯಾಸ ಕೈಕೊಂಬುದ್ಯಾಕೆ 4 ಸುದರ್ಶನ ಮಹಾಜ್ವಾಲಾ ಕೋಟಿಸೂರ್ಯ ಸಮಪ್ರಭ ಎಂಬ ವಾಕ್ಯವರಿಯದೆ ಸೀಳಿ ಸುದರ್ಶನಗಳ ಪೂಜಿ ಮಾಡುವದ್ಯಾಕೆ 5 ಮಂತ್ರ ಪ್ರಣಮ್ಯವರಿಯದೆ ತಂತ್ರ ಮಂತ್ರಸರವ್ಯಾಕೆ ಅಂತರಾತ್ಮವರಿಯದೆ ತರ್ಕಭೇದಗಳ್ಯಾಕೆ 6 ವಿಶ್ವವ್ಯಾಪಕ ಗುರು ಭಾಸ್ಕರಮೂರ್ತಿ ಶ್ರೀಪಾದ ವಿಡದಿಹ ಮಹಿಪತಿಗೆ ಭವಪಾಶದಂಜಿಕಿನ್ಯಾಕೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು