ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಸೋಧಿಸಿ ಭಕ್ತಿ ರಸÀ ಸ್ವಾದ ಮಾಡುವ ಸಾಧುಗಳೊಳಗಿಡೊ ಶ್ರೀಶಾ ರಮೇಶ ಪ ಬೋಧಿಸಿ ತತ್ತ್ವರಸ ಸ್ವಾದ ನೀಡುವ ಮಾಧವ ಶ್ರೀಶನೆ ಮೋದ ಬೀರುತ ನಿನ್ನ ಪಾದವ ತೋರುವ ಸಾಧುಗಳೊಳಗಿಡೊ ಅಗಾಧ ಮಹಿಮನೆ ಅ.ಪ ಭವÀಸಂಸಾರದೊಳಿರಲು ಸಜ್ಜನರು ಅರುಣೋದಯದೊಳೆದ್ದು ನಿನ್ನ ಚರಣಪಲ್ಲವವನ್ನು ಕೃಷ್ಣಾ ಸ್ಮರಿಸುತಲಿರುವರೊ ಪರಮಪುರುಷಕೇಳೊ ಅಂಥಾ ವರ ಭಾಗವತರನು ಕರುಣದಿ ತೋರೋ ಶ್ರೀಶಾ ವರ ನೂಪುರಗೆಜ್ಜೆ ಧರಿಸಿ ಮೆರೆವ ದೇವಾ ವರ ಭಕ್ತರು ಕರೆ ಕರೆದಲ್ಲಿಗೆ ಬಹ ಶರಧಿ ಶಯನ ನಿನ್ನ ಬಿರುದಲ್ಲವೆ ಕೃಷ್ಣಾ ತ್ಪರಿತದಿ ನಿನ್ನಡಿ ಸ್ಮರಿಸುವರನೆ ತೋರೊ 1 ಅಗರು ಚಂದನ ಗಂಧ ಸೊಗವಿಲಿ ಧರಿಸುತ ಮಿಗೆ ಪೀತಾಂಬರದುಡಿಗೆಯನುಟ್ಟು ಕೃಷ್ಣಾ ಸಿರಿ ಸಹಿತಿರೆ ಸೊಗವಿಲಿ ಕರಿರಾಜನ ಸ್ವರ ಆಲಿಸಿ ಅಗಹರ ಸಿರಿಗ್ಹೇಳದೆ ಬಂದೆ ಶ್ರೀಧರ ಝಗಝಗಿಸುತ ನಿನ್ನ ಪದರುಹಗಳನಿಟ್ಟು ಮಿಗೆ ವೇಗದಿ ಬಂದು ಕರಿಯನುದ್ಧರಿಸಿದೆ ಈಗ ಬೇಗ ನಿನ್ನ ಭಕ್ತರ ಸೊಗವಿಲಿ ತೋರೋ ಕೃಷ್ಣಾ 2 ಯತಿ ಮುನಿ ಹೃದಯಾನಂದ ಶ್ರೀಕೃಷ್ಣ ಸತತದಿ ನಿನ್ನ ನಾಮ ಜತನ ಮಾಡುತ ತಮ್ಮ ಮತಿಭ್ರಮಣೆಯಲು ನಿನ್ನಾಕೃತಿ ನೋಡುತ ಸ್ತುತಿಪ ಯತಿಕುಲ ತಿಲಕಾಗ್ರಣಿ ಶ್ರೀ ಶ್ರೀನಿವಾಸ ಎನ್ನ ಮತಿಭ್ರಮಣೆಯನು ನೀಗಿಸುವಂಥಾ ಸುಜನರ ಸತತದಿ ತೋರಿಸೋ ಕ್ಷಿತಿಯೊಳು ವೆಂಕಟ ಪತಿತ ಪಾಮರರನು ಗತಿಕಾಣಿಸೆ ಕೃಷ್ಣಾ3
--------------
ಸರಸ್ವತಿ ಬಾಯಿ
ಸ್ತುತಿಸಿ ಪ್ರಾರ್ಥಿಪೆ ನಿನ್ನನು ಸರಸ್ವತಿ ಸ್ತುತಿಸಿ ನಮಿಪೆ ನಿನ್ನನು ಪ. ಸ್ತುತಿಸಿ ನಮಿಸಿ ನಿನ್ನ ಜತನ ಮಾಡುತ್ತ ವದನದಿ ಸ್ತುತಿಸುವ ಭಾಗವತರನು ತೋರಮ್ಮಾ ಅ.ಪ. ಅಕ್ಷರಕ್ಷರ ರೂಪದಿ ಶ್ರೀಹರಿಯಾ ಅಕ್ಷಯ ನಾಮವನು ಸ್ತುತಿಯ ಮಾಳ್ಪ ಸುಕ್ಷೇಮ ಪಡೆದಿಹ ಮಾತೆ ಸರಸ್ವತಿ ಪ್ರತಿ ಅಕ್ಷರವನು ಅರಿವಾ ಭಾಗ್ಯವ ತೋರೆ 1 ರಾಗರಾಗದಿ ಭಜಿಪೆ ಶ್ರೀ ಹರಿಯಾ ಅನು ರಾಗಕೆ ಪಾತ್ರಳಾಗಿ ವಲಿಸಿಹೆ ಭಾಗವತಾಗ್ರಣಿ ಶ್ರೀಹರಿ ನಾಮವ ಶೀಘ್ರದಿ ಸ್ತುತಿಸುವ ಭಾಗವತರ ತೋರೆಂದು 2 ಅಗಣಿತ ಮಹಿಮೆಯನೂ ಬಲ್ಲವಳು ನೀ ಸುಗುಣಿ ಸರಸ್ವತಿಯೆ ಶ್ರೀ ಶ್ರೀನಿವಾಸನ ಅಗಣಿತ ಗುಣಗಳ ಪೊಗಳುವ ಮತಿಯಿತ್ತು ಅಘಹರ ಹರಿಭಕ್ತರಾ ಲಗುಬಗೆಯಲಿ ತೋರೆ 3
--------------
ಸರಸ್ವತಿ ಬಾಯಿ
ಆಳಬೇಕೈ ಸುಮತಿ ಪತಿವ್ರತೆಯಜಾಳಿಸಬೇಕೈ ಕುಬುದ್ಧಿಯ ಬುಧರು ಪ.ನಾಗರಕ್ಷಕನಪಾದಹೊಂದಿ ವಿಷಯ ಸ್ವಾರ್ಥನೀಗಿಹ ಮಡದಿಯ ಕೂಡಬೇಕೈಭಾಗವತರನು ಮಲಿನಿಪ ಮೋಹಿಯಮೂಗು ಮುಂದಲೆ ಮೊಲೆ ಕೊಯಿದಟ್ಟಬೇಕೈ 1ಶೀಲವಿಡಿದು ನವನಾರೇರ ಸಖ್ಯದಲಿಆಲಯನಡೆಸುವಳಿರಲಿಬೇಕಯ್ಯಆಲಿಕುಣಿಸಿ ನವ ಪುರುಷರ ಕಂಡು ತಾಮ್ಯಾಲೆ ಬೀಳುವಳಜಿಹ್ವೆಸೀಳಬೇಕೈ2ಷಂಡಗಂಡಗೆ ಹಿತ ಹೇಳಿ ಅಂಗವದಂಡಿಸಿ ಕೊಳುವಳ ನಂಬಬೇಕೈಕಂಡ ಬೀದಿಲಿ ಸಾಧು ಕೊಂಡೆಯಾಡುವಳಮಂಡೆಬೋಳಿಸಿ ಕತ್ತೆನೇರಿಸಬೇಕೈ3ಮನೆಗೆಲಸದಲಿಟ್ಟು ಮಹಾತ್ಮರ ಸೇವೆಗೆಂದೂದಣಿಯದ ರಂಭೆಯ ಒಲಿಸಬೇಕುಅಣಕಿಸಿ ಒಲಿದರ ನೀಚಾನುಕೂಲೆಯಾದತನಗಲ್ಲದವಳ ಹೊಳೆ ನೂಕಬೇಕೈ 4ಶಶಿರವಿರಾಶಿ ಮೈ ಹೊಳವಿಲಿ ಮೆರೆವಕುಶಲಗೆ ಮನವಿಟ್ಟ ಜಾಣೆ ಬೇಕೈಪ್ರಸನ್ನವೆಂಕಟಪತಿಯಾಕಾರ ನೋಡಿ ತಾಅಶರೀರನೆಂಬಳ್ಗೆ ವಿಷವಿಕ್ಕಿರೈ 5
--------------
ಪ್ರಸನ್ನವೆಂಕಟದಾಸರು