ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆರೆನಂಬಿದೆನು ನಾನಿನ್ನ ಪಾದಾಂಬುಜವನು ಕರುಣದಿ ಸಲಹೋ ಎನ್ನಾ ಪ ಹರನದೊಡೆಯ ಗೌರಿ ವರನಾಗಿ ಮೆರೆದಿಹ ಸ್ಮರಹರ ಕರ್ಪೂರ ಧವಳಾಂಗಾ ರಿಪುಭಂಗಾ ದೇವತುಂಗಾ ಮೃಢೇಶ್ವರಲಿಂಗಾ ದೇವರದೇವ ನೀನೆಂದು ರಾವಣ ಬಂದು ದೇವಾ ನೀ ಸಲಹೋ ಇಂದು ಭಾವಕಿ ಬೇಡಿಕೊಂಡರೆ ಭಾವಜೆಯವಗೆ ನೀ ಪಾರ್ವತೀಶ್ವರನೇ ನೆರೆ ಹರಿಧರಹರನೀನೆಂದು ಹರಿಯುತಾ ಬಂದು ಹರನೆ ರಕ್ಷಿಸೋ ನೀ ಎಂದು ಕರದು ಹರಿಮಿತ್ರನ ಕರುಣದಿ ವರವಿತ್ತ ಕರಿಗೊರಳನೆ ಅಮಿತಸರ್ವೇಶಾ ನೆರೆ ಪಡುಗಡಲೊಡೆಯನೆಂದು ಪಾಡುತಬಂದು ಪೊಡವಿಯೊಳ್ ಸ್ತುತಿಪನೆಂದೂ ಒಡೆಯ ಲಕ್ಷ್ಮಣನಿಗೆ ಒಡನೆ ಅಭಯವಿತ್ತ ರಿಪುಭಂಗಾ ಹರನೆ ಭಸಿತಾಂಗಾ
--------------
ಭಟಕಳ ಅಪ್ಪಯ್ಯ
ಪಂಪಾತೀರದ ಲಿಂಗಾ ಭವಭಸಿತಾಂಗಾ ಸಂಪುಲ್ಲಾಕ್ಷನ ತೋರೋ ಭಕ್ತ ಕೃಪಾಂಗ ಪ ನೀನೆ ಗತಿಯೆಂದು ನಿದಾನದಿಂದ ಧ್ಯಾನವ ಮಾಡಲು ದೈನ್ಯದಲಿಂದ ಮಾನಾಭಿಮಾನದೊಡಿಯನೆ ಆನಂದ 1 ಗಜಚರ್ಮಾಂಬರ ಗಂಗಾಧರ ಪುರವೈರಿ ಭಜಿಸಿದೆನೊ ನಿನ್ನ ಭಕ್ತಿಯಲಿ ಸಾಕಿರೆ ಕುಜನರೊಳಿಡದೆ ಉತ್ತಮವಾದ ದಾರಿ ನಿಜವಾಗಿ ತೋರಯ್ಯ ದೀನರುಪಕಾರಿ2 ಹೇಮಗಿರಿಯ ವಾಸಾ ಈಶನಿರೀಶಾ ಸೋಮಶೇಖರನೆ ಪಾರ್ವತಿಯ ವಿಲಾಸಾ ರಾಮ ಶ್ರೀ ವಿಜಯವಿಠ್ಠಲನೆ ನಿರ್ದೋಷಾ ಸ್ವಾಮಿಯ ನೆನೆವಂತೆ ಕೊಡು ಎನಗೆ ಮನಸಾ3
--------------
ವಿಜಯದಾಸ
ಶರಣು ಶರಣು ಲಿಂಗಾ | ಶರಣು ಶ್ರೀ ಭಸಿತಾಂಗಾ | ಶರಣು ಗಗನ ಗಂಗಾಧರ ಗೋರಾಜ ತುರಂಗ | ಗುರುಕುಲೋತ್ತುಂಗಾ ಪ ಪುರಹರ | ಸಂತರ ಮನೋಹರ | ಅಂತಕನ ಗೆದ್ದೆ | ದಂತಿ ಚರ್ಮವ ಪೊದ್ದೆ | ಕಂತು ಮುನಿಯ ಗೆಲಿದೆ ಮಂತ್ರಿವಂದಿತ ಶೀಲ | ಸಂತತಿಗಳ ಪಾಲ | ಅಂತರಂಗದಲೆನ್ನ ಗ್ರಂಥಿಯ ಹರಿಸಿ ನಿರಂತರ ಸಂತರಿಸೋ 1 ಶುಕ ಯತಿಯೆ | ವನದೊಳು ರಾಯನ | ವನುತಿಯ ಮಾಡಿದ | ಘನ ಶೌರ್ಯನ ಶಿವನೆ || ಸನಕಾದಿಗಳ ಪರಿಯ | ಅನುದಿನದಲಿ ಗಿರಿಯ | ಫಣಿಭೂಷಣ ಶಂಭೋ 2 ಅಹಂಕಾರಾತ್ಮನೆ ಶರ್ವ | ಮಹಾಕೇಶ ವಿಷಗ್ರೀವ | ಬಹುದೂರ ಕೂಟ | ಮಹಿಧರ ನಿವಾಸನೆ | ಮಹಿಧರ ತೀರದಿ || ಮಹಿಮೆಯ ಬೀರುತ್ತ | ರಹಸ್ಯದಲಿ ಮೆರೆವ | ಶ್ರೀಹರಿ ವಿಜಯವಿಠ್ಠಲ ಸವೋತ್ತಮ | ನಹುದೆಂದು ಧೇನಿಪನೆ3
--------------
ವಿಜಯದಾಸ