ಒಟ್ಟು 11 ಕಡೆಗಳಲ್ಲಿ , 10 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣೆಂಬೆ ನಾ ಶರ್ವಾಣಿ ವರನ | ಸಿರಿಪತಿ ಶಾಙ್ರ್ಗಧರನ ವರಸಿಂಧು ನಗರದೊಳು |ಸ್ಥಿರ ಭೋಗಗೊಂಬ ಸಂಗಮನ ಪ ಬಾಲೇಂದು ಮುಡಿದ ಭಸಿತಾಂಗ | ಕಾಳಿಗರ್ಧಾಂಗಾ |ಪಾಲಿಸಿ ಕೊಡುವರೆ ದೊರೆಯ ಪೇಳಲಿಕಿನ್ನಾರನೈದಾರೆ |ಭಾಲಾಕ್ಷನ ಲೀಲಾ ವಿಲಾಸ ಭೋಳಾ ದೇವೇಶ | ಕಾಲಿ ಗೆರಗಿ ಬ್ರಹ್ಮಾದಿಕರು ಕಾಲಾಂತಕನ ವರ ಪಡೆವರು |ನೀಲಕಂಧರನ ನಿಗಮೋದ್ಧಾರನ ಸ್ಥೂಲ ಶರೀರನ ಸುಖಸಂಚಾರನ ಶೀಲಕ ದೂರನ | ಶಾಂತಾಕಾರನ |ಮಾಲಾಧರನ ಮಹಾ ಗುರುಹರನ1 ಕಳೇವರ ತಾಪ ಪಾವಕ ನೇತ್ರನ ಸುರಮುನಿ ಸ್ತೋತ್ರನ ಸುಂದರ ಗಾತ್ರನ ನರಹರಿ ಮಿತ್ರನಹಿಗಳ ಸೂತ್ರನ ಶಿರಕರ ಪಾತ್ರನ ಶಿವಸ್ವತಂತ್ರನ 2 ಅಮಿತ ಭಕ್ತರು ಇಳೆಯೋಳ್ ಇಹರು ನಮಿಸಲು ಸಲಹಿಕಾವನು |ಅಮರರ ಹೊರೆವನ ಅಧಿಕ ಪ್ರಭಾವನ ತಿಮಿರವ ಕಳೆವನ ತೀರದಲಿವನ ಹಿಮಸುತೆ ಜೀವನ ಹಿಡಿದಿಹ ತ್ರಿಭುವನನ | ಶ್ರಮಗಳನಳಿವನ ಶಂಕರ ಭೀಮಾ ಶಂಕರನ 3
--------------
ಭೀಮಾಶಂಕರ
ಗಂಗಾಧರ ಸ್ಮರತ್ರಿಪುರಹರ ದೇವಪ ಅಂಗಜಹರ ಭಸಿತಾಂಗ ಮಹಾಲಿಂಗ ತುಂಗಮಹಿಮ ಮೃಗಾಂಶಮೌಳಿ ಶಿವ ಅ.ಪ ಭೂತೇಶ ಸದ್ಯೋಜಾತ ಪ್ರದ್ಯುಮ್ನಸುತೆಯಸುತ ಮತಿಯ ಪ್ರದಾತ ಸದಮಲಮೂರುತಿ ಹೃದಯಸದನದೊಳು ವಿಧಿಪಿತನಂಘ್ರಿಯ ಸ್ಮರಣೆಯ ಕರುಣಿಸು 1 ಪ್ರಮಥಶ್ರೇಷ್ಠರ ಸಂಸೇವಿತ ಸುಮನಸರ ಪ್ರೀತ ಹೈಮವತಿಯ ಪ್ರೀತಾ ರಮಾರಮಣಗೆ ಅತಿಭಕುತಾ ನೀ ಮನೋಭಿಮಾನಿಯೆ ಖ್ಯಾತಾ ತಾಮಸರೊಳು ತಮಸಾಧನ ಮಾಡಿಸಿ ನೀ ಮೋಹಿಪ ದೇವ ಶೂಲಿ ಕಪಾಲಿ 2 ಶುಕದೂರ್ವಾಸಸ್ವರೂಪ ಜೈಗೀಷರೂಪ ವೈಕಾರಿಕಾದಿ ತ್ರೈರೂಪ ಲೋಕನಾಥÀ ಶ್ರೀವೆಂಕಟೇಶನ ಹೃತ್ಕಮಲದಿ ನಲಿಸುವ ಫಾಲನೇತ್ರ ಶಿವ 3
--------------
ಉರಗಾದ್ರಿವಾಸವಿಠಲದಾಸರು
ಜಯ ಜಯ ಶ್ರೀ ಮಹಾಲಿಂಗ ಗೋಪತುರಂಗ ಜಯ ಜಯ ಶ್ರೀ ಮಹಾಲಿಂಗ ಪ. ಜಯರಹಿತಾಚ್ಯುತಪ್ರಿಯ ಬುಧಾರ್ಚಿತ ದಯಾಸಾಗರ ಭಸಿತಾಂಗ ನಯನತ್ರಯ ನಮಿತಾಮರಸಂಘಾ- ಮಯಹರ ಗಂಗೋತ್ತುಮಾಂಗ 1 ಭೂತೇಶ ಭೂರಿಭೂತಹೃದಿಸ್ಥಿತ ಭೂಷಣೀಕೃತಭುಜಂಗ ಪೂತಾತ್ಮ ಪರಮಜ್ಞಾನತರಂಗ ಪಾತಕತಿಮಿರಪತಂಗ2 ಲಂಬೋದರಗುಹಪ್ರಮುಖಪ್ರಮಥನಿಕು- ರುಂಬಾಶ್ರಿತ ಜಿತಸಂಗ ಗಂಭೀರಗುಮಕದಂಬೋತ್ತುಂಗ- ಸಂಭೃತ ಹಸ್ತಕುರಂಗ 3 ಸೋಮಶೇಖರ ಮಹಾಮಹಿಮ ವಿಜಿತ- ಕಾಮ ಕಲಿಕಲುಷಭಂಗ ರಾಮನಾಮ ಸ್ಮರಣಾಂತರಂಗ ವಾಮಾಂಕಾಸ್ಥಿತ ಪಿಂಗ 4 ದೇವ ಲಕ್ಷ್ಮೀನಾರಾಯಣ ಪದರಾ- ಜೀವನಿರತ ವನಭೃಂಗ ಪಾವಂಜಾಖ್ಯ ಗಿರೀಶ ಶುಭಾಂಗ ಕೇವಲ ಸದಯಾಪಾಂಗ5
--------------
ತುಪಾಕಿ ವೆಂಕಟರಮಣಾಚಾರ್ಯ
ನಾಟ್ಯಕಲಾವಿದ ಶಿವನೋ ಕೇಶವನೋ ನಾಟ್ಯಕೆ ನಲಿವನಾ ಭವನೋ ಮಾಧವನೋ ಪ ನಾಟ್ಯಾಪ್ಸರಗಣವೇಷ್ಟಿತನಿವನು ನ್ಯಾಟ್ಯದಿಸಕಲರಾಭೀಷ್ಟದನವನು ಅ.ಪ ಝಣ ಝಣ ಝಣರವ ರಣಿಪನಿವನು ಕಿಣಿ ಕಿಣಿ ಕಿಣಿರವ ಚೆಲ್ಲುವನವನು ಗಣ ಗಣ ನಾದದಿ ವರ್ತಿಪನಿವನು ಮಣಿಗಣನಾದದಿ ನರ್ತಿಪನವನು 1 ಮುರಳಿಯಗಾನವ ಪಾಡುವನಿವನು ನಿರುಪಮ ದಿವಿಜಾ ನರ್ತಕನವನು ಭರತನಾಟ್ಯ ಕಲಾ ಕೋವಿದನಿವನು [ವರ ನಾಟ್ಯ ನಟನಾ ನಿಪುಣನವನು] 2 ಭೇರಿನಗಾರೀ ತುತ್ತೂರಿ ಡಮರುಗ ಕರಿಮುಖ ಷಣ್ಮುಖಯುತ ಭಸಿತಾಂಗ ನಾರದ ತುಂಬುರ ವೀಣೆ ಮೃದಂಗ ಸಾರಗಾನಯುತ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೆರೆನಂಬಿದೆನು ನಾನಿನ್ನ ಪಾದಾಂಬುಜವನು ಕರುಣದಿ ಸಲಹೋ ಎನ್ನಾ ಪ ಹರನದೊಡೆಯ ಗೌರಿ ವರನಾಗಿ ಮೆರೆದಿಹ ಸ್ಮರಹರ ಕರ್ಪೂರ ಧವಳಾಂಗಾ ರಿಪುಭಂಗಾ ದೇವತುಂಗಾ ಮೃಢೇಶ್ವರಲಿಂಗಾ ದೇವರದೇವ ನೀನೆಂದು ರಾವಣ ಬಂದು ದೇವಾ ನೀ ಸಲಹೋ ಇಂದು ಭಾವಕಿ ಬೇಡಿಕೊಂಡರೆ ಭಾವಜೆಯವಗೆ ನೀ ಪಾರ್ವತೀಶ್ವರನೇ ನೆರೆ ಹರಿಧರಹರನೀನೆಂದು ಹರಿಯುತಾ ಬಂದು ಹರನೆ ರಕ್ಷಿಸೋ ನೀ ಎಂದು ಕರದು ಹರಿಮಿತ್ರನ ಕರುಣದಿ ವರವಿತ್ತ ಕರಿಗೊರಳನೆ ಅಮಿತಸರ್ವೇಶಾ ನೆರೆ ಪಡುಗಡಲೊಡೆಯನೆಂದು ಪಾಡುತಬಂದು ಪೊಡವಿಯೊಳ್ ಸ್ತುತಿಪನೆಂದೂ ಒಡೆಯ ಲಕ್ಷ್ಮಣನಿಗೆ ಒಡನೆ ಅಭಯವಿತ್ತ ರಿಪುಭಂಗಾ ಹರನೆ ಭಸಿತಾಂಗಾ
--------------
ಭಟಕಳ ಅಪ್ಪಯ್ಯ
ಪಂಪಾತೀರದ ಲಿಂಗಾ ಭವಭಸಿತಾಂಗಾ ಸಂಪುಲ್ಲಾಕ್ಷನ ತೋರೋ ಭಕ್ತ ಕೃಪಾಂಗ ಪ ನೀನೆ ಗತಿಯೆಂದು ನಿದಾನದಿಂದ ಧ್ಯಾನವ ಮಾಡಲು ದೈನ್ಯದಲಿಂದ ಮಾನಾಭಿಮಾನದೊಡಿಯನೆ ಆನಂದ 1 ಗಜಚರ್ಮಾಂಬರ ಗಂಗಾಧರ ಪುರವೈರಿ ಭಜಿಸಿದೆನೊ ನಿನ್ನ ಭಕ್ತಿಯಲಿ ಸಾಕಿರೆ ಕುಜನರೊಳಿಡದೆ ಉತ್ತಮವಾದ ದಾರಿ ನಿಜವಾಗಿ ತೋರಯ್ಯ ದೀನರುಪಕಾರಿ2 ಹೇಮಗಿರಿಯ ವಾಸಾ ಈಶನಿರೀಶಾ ಸೋಮಶೇಖರನೆ ಪಾರ್ವತಿಯ ವಿಲಾಸಾ ರಾಮ ಶ್ರೀ ವಿಜಯವಿಠ್ಠಲನೆ ನಿರ್ದೋಷಾ ಸ್ವಾಮಿಯ ನೆನೆವಂತೆ ಕೊಡು ಎನಗೆ ಮನಸಾ3
--------------
ವಿಜಯದಾಸ
ಶಂಕರ ಕೃಪಾಸಾಗರ ಶಿವ ಮೃಗಾಂಕಾ ಶಶಿಶೇಖರಾ ಪ ಕಿಂಕರರಿಗೆ ಬಂದ ಸಂಕಟವ ಬಿಡಿಸುವ ಅ.ಪ ಭವ ರೋಗಗಳ ಕಳೆವ ಭೋಗ ನಂಜುಂಡದೇವ 1 ಕಂದರ್ಪ ಸಂಹಾರನೆ 2 ಸಂಗರಹಿತ ಭಸಿತಾಂಗಲೇಪಿತ ಶಿವ 3 ಗರಳಪುರದಿ ನೆಲೆಸಿರುವ ಶ್ರೀಕಂಠೇಶ ಶರಣಾಗತರ ಸುರತರುವೆ ಮದ್ಗುರುವೆ | ಶಿವ 4 ಲಕ್ಷ್ಮೀಶನಾದ ಗುರುರಾಮವಿಠಲನ ಸಖ5
--------------
ಗುರುರಾಮವಿಠಲ
ಶರಣು ಶರಣು ಲಿಂಗಾ | ಶರಣು ಶ್ರೀ ಭಸಿತಾಂಗಾ | ಶರಣು ಗಗನ ಗಂಗಾಧರ ಗೋರಾಜ ತುರಂಗ | ಗುರುಕುಲೋತ್ತುಂಗಾ ಪ ಪುರಹರ | ಸಂತರ ಮನೋಹರ | ಅಂತಕನ ಗೆದ್ದೆ | ದಂತಿ ಚರ್ಮವ ಪೊದ್ದೆ | ಕಂತು ಮುನಿಯ ಗೆಲಿದೆ ಮಂತ್ರಿವಂದಿತ ಶೀಲ | ಸಂತತಿಗಳ ಪಾಲ | ಅಂತರಂಗದಲೆನ್ನ ಗ್ರಂಥಿಯ ಹರಿಸಿ ನಿರಂತರ ಸಂತರಿಸೋ 1 ಶುಕ ಯತಿಯೆ | ವನದೊಳು ರಾಯನ | ವನುತಿಯ ಮಾಡಿದ | ಘನ ಶೌರ್ಯನ ಶಿವನೆ || ಸನಕಾದಿಗಳ ಪರಿಯ | ಅನುದಿನದಲಿ ಗಿರಿಯ | ಫಣಿಭೂಷಣ ಶಂಭೋ 2 ಅಹಂಕಾರಾತ್ಮನೆ ಶರ್ವ | ಮಹಾಕೇಶ ವಿಷಗ್ರೀವ | ಬಹುದೂರ ಕೂಟ | ಮಹಿಧರ ನಿವಾಸನೆ | ಮಹಿಧರ ತೀರದಿ || ಮಹಿಮೆಯ ಬೀರುತ್ತ | ರಹಸ್ಯದಲಿ ಮೆರೆವ | ಶ್ರೀಹರಿ ವಿಜಯವಿಠ್ಠಲ ಸವೋತ್ತಮ | ನಹುದೆಂದು ಧೇನಿಪನೆ3
--------------
ವಿಜಯದಾಸ
ಶ್ರೀ ರುದ್ರ ದೇವರ ಸ್ತುತಿ ಪಾಲಿಸೆನ್ನ ಕಾಪಾಲಿಯೆ ನೀನು ಪ ವಾಲಗ ಕೊಟ್ಟು ಅ.ಪ ನೀ ಮಹದೌಷಧಿ ಕಾಮಾದಿಗಳೆಂಬಾಮಯ ಸ್ತೋಮಕೆ ಹೇ ಮಮಸ್ವಾಮಿ 1 ನೀ ಕಾಯದೆ ಬಿಡೆ ಕಾಯಜ ಭಯ ನೂಕೆಯನ್ನ ಕಡೆಗ್ಹಾಕುವರ್ಯಾರೈ 2 ತಿಂಗಳಚೂಡ ತ್ರಿಗಂಗಳ ಶೋಭಿತ ಅಂಗಜ ರಿಪು ಭಸಿತಾಂಗನೆ ಲಿಂಗಾ 3 ನಾಕರಮುಗಿಯುವೆನು ನಾಕಪನುತ ರ ತ್ನಾಕರ ಸುತೆವರನಾ ಕರತಾರೋ 4 ಕಂದನು ಇವನೆಂತೆಂದು ಎನ್ನ ನೀ ಮುಂದಕೆ ಕರೆಯೈ ನಂದಿಶ್ಯಂದನಾ 5 ಅರ್ಧಂಗನ ವಪುಸ್ವರ್ಧುನಿಧರಾ ಅಘ ಮರ್ದನ ಕಾಯೋ ಕಪರ್ದಿಯೆ ನಿರುತಾ 6 ಪತಿ ಮಹರುದ್ರನೆ ನಮಿಸುವೆ ಕ್ಷುದ್ರ ಮನಸಿನ ಉಪದ್ರವ ಬಿಡಿಸಿ 7 ದುರ್ಜನರರಿ ಖತಿವರ್ಜಿತ ಪಾಲಿಸೋ ನಿರ್ಜರನುತನ ಗುರು ಅರ್ಜುನ ವರದಾ 8 ನೀನೊಲಿಸಿದ ಸಿರಿಗೋವಿಂದವಿಠಲನ ಪಾವನ ಮೂರುತಿ ಕೋವಿದರೊಡೆಯ 9
--------------
ಅಸ್ಕಿಹಾಳ ಗೋವಿಂದ
ಜಯ ಜಯ ಶ್ರೀ ಮಹಾಲಿಂಗ ಗೋಪತುರಂಗಜಯ ಜಯ ಶ್ರೀ ಮಹಾಲಿಂಗ ಪ.ಜಯರಹಿತಾಚ್ಯುತಪ್ರಿಯ ಬುಧಾರ್ಚಿತದಯಾಸಾಗರ ಭಸಿತಾಂಗನಯನತ್ರಯ ನಮಿತಾಮರಸಂಘಾ-ಮಯಹರ ಗಂಗೋತ್ತುಮಾಂಗ 1ಭೂತೇಶಭೂರಿಭೂತಹೃದಿಸ್ಥಿತಭೂಷಣೀಕೃತಭುಜಂಗಪೂತಾತ್ಮ ಪರಮಜ್ಞಾನತರಂಗಪಾತಕತಿಮಿರಪತಂಗ 2ಲಂಬೋದರಗುಹಪ್ರಮುಖಪ್ರಮಥನಿಕು-ರುಂಬಾಶ್ರಿತ ಜಿತಸಂಗಗಂಭೀರಗುಮಕದಂಬೋತ್ತುಂಗ-ಸಂಭೃತ ಹಸ್ತಕುರಂಗ 3ಸೋಮಶೇಖರ ಮಹಾಮಹಿಮ ವಿಜಿತ-ಕಾಮ ಕಲಿಕಲುಷಭಂಗರಾಮನಾಮ ಸ್ಮರಣಾಂತರಂಗವಾಮಾಂಕಾಸ್ಥಿತ ಪಿಂಗ 4ದೇವ ಲಕ್ಷ್ಮೀನಾರಾಯಣ ಪದರಾ-ಜೀವನಿರತ ವನಭೃಂಗಪಾವಂಜಾಖ್ಯ ಗಿರೀಶ ಶುಭಾಂಗಕೇವಲ ಸದಯಾಪಾಂಗ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಹರನೆ ನಾ ನಿನ್ನ ಪರಿಸರನಯ್ಯಾ77 ಅಸುರವರ ಸ್ಮರಮುಖ ನುರಗಣಸೇವ್ಯನೆ ಪನರವರನಿಗೆ ನೀ ಹರಿಮಹಿಮೆಯ ಪೇಳಿದೆ ಅ.ಪಅಂಬಾಧವ ಹೇರಂಬನತಾತಶರಜನ್ಮನ ಪಿತನಂಬಿದೆ ನಿನ್ನನು ತ್ರ್ಯಂಬಕ ಪಾಲಿಸೊ 1ತಂದೂತಂದರ ಚಂದ್ರದ್ಯುಮಣಿಪಾವಕನೇತ್ರ ತ್ರೀಣಿಇಂದುಶೇಖರಭವಕಂಧರಮಾಲಿಯೆದಂದಶೂರ ನಿಜಛಂದ ಕಲಾಪನೆ 2ತುಂಗಮಹಿಮ ಭಸಿತಾಂಗ ಶುಭಾಂಗ 3ಧನವನು ಪಾಲಿಸು ಧನಪÀನ ಸಖನೆ 4ದಾತಾಗುರುಜಗನ್ನಾಥಾ - ವಿಠಲದೂತಾಪಾತಕಕಾನನವೀತಿಹೋತ್ರಶುಭವ್ರಾತವ ಪಾಲಿಸ್ಯನಾಥನ ಪೊರಿಯೋ 5
--------------
ಗುರುಜಗನ್ನಾಥದಾಸರು