ಒಟ್ಟು 5 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೇಮವತಿಯ ತೀರವಾಸನೇ | ನಾರಸಿಂಹಪ್ರೇಮದಿಂದ ಕಾಯೋ ಬೇಗನೇ ಪ ನಾಮಮಾತ್ರ ಸಲಹುತಿರುವ | ಸ್ವಾಮಿ ನಿಮ್ಮ ಕಂಡು ಭಜಿಸೆಕಾಮಿತಾರ್ಥವಿತ್ತು ಪೊರೆವೆ | ಕಾಮ ಜನಕ ಕಮಲನಾಭ ಅ.ಪ. ಭವದೊಳಾನು ಬಳಲಿ ಬಂದೆನೋ | ಭವ್ಯರೂಪಿಹವಣೆ ತಿಳಿಸಿ ಭವವ ಕಳೆಯಲೋಪವನ ಮತದಿ ಉದಿಸಿಹೇನು | ಭುವನ ಧರಿಸಿ ಮೆರೆಯುವಾನರವಿಯ ಕಂಡು ಹಾರಿದವನ | ಪವನರಾಯನ ಕಾಣೆ ನಾನು 1 ತನುವು ಮನವು ಧನದ ಆಶೆಯೂ | ಪೋಗಲಿಲ್ಲಘನ ಸುಜ್ಞಾನ ಭಕ್ತ್ಯಿ ಭಾವವೂಕನಸಿಲಾದರೊಮ್ಮೆ ಎನ್ನ | ಮನಸ್ಸು ನಿಮ್ಮ ಚರಣ ದ್ವಂದ್ವವನಜದಲ್ಲಿ ನೆಲೆಸಲಿಲ್ಲ | ಅನಘ ನೀನೇ ದಯವ ಬೀರೊ 2 ವನಧಿ ಹರಿಯೆ | ಗುರು ಗೋವಿಂದ ವಿಠ್ಠಲಾನೆ 3
--------------
ಗುರುಗೋವಿಂದವಿಠಲರು
ಉರಗಗಿರಿವಾಸ ವಿಠಲ | ಪೊರೆಯ ಬೇಕಿವಳಾ ಪ ಪರಮಕರುಣಾಮೂರ್ತಿ | ಪ್ರಾರ್ಥಿಸುವೆ ಹರಿಯೇ ಅ.ಪ. ನಿರತ ನಿನ ಸ್ಮರಿಪರಘ | ಪರಿಹರಿಪೆ ನೆಂಬನುಡಿಪರಮ ಸಾರ್ಥಕ ಗೊಳಿಸೊ | ತರಳೇ ಇವಳಲ್ಲಿಕರುಣ ಸಾಗರ ನಿನ್ನ | ಬೇರೊಂದಪೇಕ್ಷಿಸದೆ |ಸರಸದಲಿ ತವರೂಪ | ಚಿಂತೆಯಲ್ಲಿಹಳೋ 1 ಮರುತ ಮತವನೆ ಪೊಂದಿ | ತರತಮದ ಸುಜ್ಞಾನ ಪರಪಂಚಬೇಧಗಳ | ಅರಿತು ಭಜಿಸುವಳೋನೆರೆನಂಬಿ ತವಪಾದ | ಹಾರೈಸುತಿರುತಿಹಳವರ ಸುಸಾಧನವನ್ನೆ | ಅಭಿದೃದ್ಧಿಗೊಳಿಸೊ 2 ಪತಿಸುತರು ಹಿತರಲ್ಲಿ | ವ್ಯಾಪ್ತ ಶ್ರೀಹರಿಯೆಂಬಮತಿಯಿಂದ ಸೇವಿಸುತ | ದ್ರವ್ಯ ವಿಭಮನಾಹತಗೈದು ಕತೃಪ್ವ | ಅಂತಕಾರಕ ಭ್ರಮವಕ್ಷಿತಿರಮಣ ಪರಿಹರಿಸಿ | ಆರ್ತಳುದ್ಧರಿಸೋ3 ಜ್ಞಾನ ಸದ್ವೈರಾಗ್ಯ | ಅನುವಂಶಿಕವಾಗಿನೀನಾಗಿ ಕರುಣಿಸಿಹೆ | ಜ್ಞಾನಾತ್ಮಹರಿಯೆಮೌನಿಕುಲ ಸನ್ಮಾನ್ಯ | ಜ್ಞಾನಿ ಜನಸಂಗವನುನೀನಾಗಿ ಕೊಟ್ಟಿವಳ ಉದ್ಧರಿಸೋ ಹರಿಯೆ 4 ಸರ್ವಜ್ಞ ಸರ್ವೇಶ | ಸರ್ವಾಂತಾರಾತ್ಮಕನೆದರ್ವಿ ಜೀವಿಯ ಹೃದಯ | ಗಹ್ವರದಿ ನಿನ್ನಾಭವ್ಯರೂಪವ ತೋರಿ | ಉದ್ದಾರ ಗೈ ಇವಳಾಶರ್ವವಂದ್ಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶ್ರೀನಿವಾಸ ಶ್ರೀಮನೋಲ್ಲಾಸ ಶ್ರೀನಿವಾಸ ಪ ಶ್ರೀನಿವಾಸ ಶುಭಮಾಮವ ಗಾನಲೋಲಿತ ಸನ್ಮಾನಿತಲೀಲಾ ಅ.ಪ ಭೂದೇವನಿವಹ ಸಂಭಾವಿತ ಭಾವ 1 ರಾಮರಾಮ ರಘುವಂಶ ಲಲಾಮ ರಾಮ ರಾಮ ರಮ್ಯಗುಣಧಾಮ ಮುನಿಜನಪ್ರೇಮ ದನುಜಸಂಗ್ರಾಮಭೀಮ2 ಕಂಜನಾಭ ಕಾಲಾಂಬುಧಾಭಾ ಕಂಜನಾಭ ರಿಪು ವಕ್ತ್ರ 3 ಸುಂದರಾಂಗ ಸುಕೃತಾಂತರಂಗ ಸುರಸುಂದರೀನಿಚಯ ನಂದಗೋಕುಲಾನಂದ ಮುಕುಂದ 4 ಭವ್ಯರೂಪ ಭಕ್ತಾಲಯ ದೀಪ ಭವ್ಯರೂಪ ಧೃತ ದಿವ್ಯಚಾಪ ಸುರಭಾವ್ಯಮಹಿಮ ಮಾಂಡವ್ಯಸುಸೇವ್ಯ 5 ವ್ಯಾಘ್ರಶೈಲಾವಾಸ ಸುಶೀಲಾಶೈಲಶಿಖ- ರಾಗ್ರಲೋಲ ದೇವಾಗ್ರಗಣ್ಯ ಭಕ್ತಾಗ್ರ ಶರಣ್ಯ 6 ದುರಿತದೂರಾ ದುಃಖಾಭ್ರಸಮೀರಾ ದುರಿತದೂರ ಘಣಿಗಿರಿವಿಹಾರ ಶ್ರೀವರದವಿಠಲಾ 7
--------------
ವೆಂಕಟವರದಾರ್ಯರು
ಶ್ರೀನಿವಾಸ-ಶ್ರೀಮನೋಲ್ಲಾಸ-ಶ್ರೀನಿವಾಸ ಪ ಶ್ರೀನಿವಾಸ ಶುಭಮಾಮವ ಗಾನಲೋಲಿತ ಸನ್ಮಾನಿತಲೀಲಾ ಅ.ಪ. ದೀಪಿತ ಭವದಾವ-ದೇವದೇವ ನಿವಹಸಂಭಾವಿತಭಾವ 1 ರಾಮ ರಾಮರಘುವಂಶಲಲಾಮ ರಾಮ ರಾಮ ದನುಜ ಸಂಗ್ರಾಮ ಭೀಮ 2 ಕಂಜನಾಭಕಲಾಂಬುಧಾಭ ಕಂಜನಾಭ ರಿಪು ವಕ್ತ್ರ 3 ಸುಂದರಾಂಗ ಸುಕೃತಾಂತರಂಗ ಸುರಸುಂದರೀ ನಿಚಯ ನಂದಗೋಕುಲಾನಂದ ಮುಕುಂದ 4 ಭವ್ಯರೂಪ ಭಕ್ತಾಲಯ ದೀಪ ಮಾಂಡವ್ಯ ಸುಸೇವ್ಯ 5 ವ್ಯಾಘ್ರಶೈಲಾವಾಸ ಸುಶೀಲಾ ಶೈಲ ಶಿಖರಾಗ್ರಲೋಲ ದೇವಾಗ್ರಗಣ್ಯ ಭಕ್ತಾಗ್ರ್ಯಶರಣ್ಯ 6 ದುರಿತದೂರಾ-ದುಃಖಾಭ್ರಸಮೀರಾ ದುರಿತದೂರ ಘಣಿಗಿರಿವಿಹಾರ ಶ್ರೀವರದ ವಿಠಲಾ 7
--------------
ಸರಗೂರು ವೆಂಕಟವರದಾರ್ಯರು