ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಕಿತ-ತಾತ ಮಹಿಪತಿ ದಯಾಕರಾ | ಶ್ರೀಕರಾ | ಭಯ ಪರಿಹಾರಾ | ಜಗದೋದ್ಧಾರಾ ಪ ವನಜನಯನ ಪಾವನ ಕೃತಲೀಲಾ | ವನ ನಿಧಿ ಶಯನ ಸುವನ ಜಾಲೋಲಾ | ವನಜ ಸುಚರಣಾ ವನನರಪಾಲಾ | ವನಜ ಭವಾರ್ಚಿತ ವನಶುಭ ಮಾಲಾ1 ಹರಿಕೇಶವ ನರಹರಿ ಸರ್ವೇಶಾ | ಕರಿ ಹರಮುನಿ ಪೋಷಾ | ಹರಿಕುಲ ತಿಲಕ ವಿಹರಿಜಿತ ಭಾಸಾ | ಹರಿಚರರಿಪು ಸಂಹರ ಜಗದೀಶಾ2 ಗಿರಿಧರ ವಾಮನ ಗಿರಿರಿಪು ತಾತಾ | ಗಿರಿಧರ ಪರಿಶತ ಗಿರಿವರ ಪ್ರೀತಾ | ಗಿರಿಧರ ತನುಭವ ಗುರುವಿಖ್ಯಾತಾ | ಗಿರಿಮಾ ವೆಂಕಟ ಗಿರಿಧರ ದಾತಾ 3 ಅಂಕಿತ-ವೆಂಕಟ ಗಿರಿಧರ (?)
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆತ್ಮ ನಿವೇದನೆ ಅನಾಥ ಬಂಧೋ ಆದಿ ಪುರುಷ ಪ. ಅನಾಥ ಬಂಧೋ ಗುಣ ಗಣ ಸಿಂಧೋ ಮನಸಿಜ ಜನಕನೆ ಮರೆಯದಿರೆಂದೂ ಅ.ಪ. ಅನುಚಿತ ಕರ್ಮದ ಬಲೆಯಲಿ ಸಿಕ್ಕಿ ದಿನಗಳ ಕಳೆದನು ಮನೆಯಲ್ಲಿ ತನುವಿನ ಸ್ಥಿತಿಯನು ಪೇಳಲೇನು ಶ್ರೀ- ವನಜ ಭವಾರ್ಚಿತ ಒದಗುವಿ ಸಮಯದಿ 1 ವಿಧಿ ನಿಮಯಗಳನುಸರಿಸದೆ ಕ- ಣ್ಣಿದಿರಲಿ ಕಾಂಬುದ ಗ್ರಹಿಸದೆ ಮಧುಮಥನನೆ ತ್ವತ್ಪರ ಪದ್ಮವ ನಂ- ಬಿದೆ ಕರುಣೋದಧಿ ಕಾಯೊ ಬೇಗದಲಿ 2 ಸರ್ವಭಾರವು ನಿನ್ನ ಮೇಲಿಹುದು ಮ ತ್ತೋರ್ವಗುಂಟೆ ನಿನ್ನಯ ಬಿರುದು ಮರ್ವನೀಯದೆ ಮನದಲ್ಲಿರು ವೆಂಕಟ ಪರ್ವತೇಂದ್ರ ಪೂರ್ಣಾನಂದಪ್ರದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಪರಮ ಕೃಪಾನಿಧೆ ಗೋಪಾಲದೇವ ಪ ಪರಿಪಾಲಿಸೋ ಎನ್ನ ಶ್ರೀಲೋಲ ಹರಿ ಅ.ಪ. ಪತಿತಪಾವನಾಶ್ರಿತ ಜನ ಪಾಲನ ಗತಿ ನೀನಲ್ಲದೆ ಕಾಣೆ ನಾ1 ಮಾನಾಭಿಮಾನ ನಿನ್ನಾಧೀನ ದೀನ ಜನಾವನ ನಿನ್ನವ ನಾ 2 ಅಜಭವಾರ್ಚಿತ ಆನಂದಾಚ್ಯುತ ನಿಜಪಥ ತೋರಿಸೊ ಶ್ರೀಕಾಂತ 3
--------------
ಲಕ್ಷ್ಮೀನಾರಯಣರಾಯರು
ಲಾಲಿಪುದೆನ್ನ ಸೊಲ್ಲ ಲಕುಮಿಯ ನಲ್ಲ ನೀಲ ನೀರದ ನಿಭ ನಿರುಪಮ ಮಲ್ಲ ಪ. ಉದಯದೋಳೇಳುತ ಉಚಿತ ಕರ್ಮಗಳ ಸದರದಿ ಮಾಡದೆ ಸಾಧುಪೂಜೆಗಳ ಮದ ಮುಖತನದಿಂದ ಮನೆಯಲ್ಲಿ ತಿರುಗುವೆ- ನಿದನು ನಿನ್ನಯ ಸೇವೆಯೆಂಬ ಭಾವನೆಯಿತ್ತು 1 ಕೀಟಕೆ ಸಾಮ್ರಾಜ್ಯ ಪದವಿಯನಿತ್ತಿ ಹಾಟಕಕಶಿಪನ ಮಗನ ಮೇಲೆತ್ತಿ ಆಟದ ನೆವದಿಂದ ಶಕಟನ ತರಿದಿ ಕಿ- ಭವ ದಾಟುವಂದದಿ ತೋರಿ2 ಪಾದ ವನರುಹಗಳನು ನೆನೆದು ಪೂಜಿಸುವದಕನುಕೂಲಗಳನು ಮನೆಗಧಿಪತಿ ನೀನು ಮಾಡಿ ರಕ್ಷಿಪುದಿನ್ನು ವನಜ ಭವಾರ್ಚಿತ ವೆಂಕಟಾಚಲನಾಥ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀವಧೂ ಮನೋಹರಾ ನಮೋ ನಮೋ ಪ. ದೇವದೇವ ದೇವರೇ ವಸುದೇವನಂದನ ಭಾವಾತೀತ ವಿಧಿಭವಾರ್ಚಿತ ಅ.ಪ. ವಾಸವಾರ್ಚಿತಾಂಘ್ರಿಯುಗ ನಮೋ ನಮೋ ಶ್ರೀಸಮೇತ ಭೂಸಹಿತ ನೀಳಾಸಮನ್ವಿತ ಶೇಷಾದ್ರೀಶ ಜಯಲೀಲಾಮಾನುಷ 1 ರಾಜೇಂದ್ರಪುರೀನಾಥ ನಮೋ ನಮೋ ರಾಜರಾಜ ದ್ವಿರಾಜತೇಜ, ರಾಮಚಂದ್ರ ಭೂಪತಿ ಜಯರಾಜೇಂದ್ರ ರಾಜರಾಜ ಪೂಜಿತ 2
--------------
ನಂಜನಗೂಡು ತಿರುಮಲಾಂಬಾ
ಸ್ವಾಮಿ ಸೀತಾರಾಮ ಪತಿತ ಪಾವನ ನಾಮ ಧ್ರುವ ಅಮಿತವಾದ ಗುಣ ನಿರ್ಮಳಾಚರಣಿ ಕಮಲಭವಾರ್ಚಿತ ಕಾರ್ಮುಕಪಾಣಿ ನೇಮದಿಂದಾಡುವ ಅಮೃತವಾಣಿ 1 ಸಮಸ್ತ ಹೃದಯಾಂತ್ರ ವಿಮಲಸುಚರಿತ್ರ ಸುಮನ ಸುಗಾತ್ರ ಅಮರಜ ನೇತ್ರ ಸೋಮಶೇಖರಪ್ರಿಯ ಪುಣ್ಯಪವಿತ್ರ 2 ಸಾಹ್ಯಸಹಕಾರ ಬಾಹ್ಯಾಂತ್ರ ಸ್ಥಿರ ಸ್ವಹಿತದಾಗರ ಮಹಿಪತಿ ಮನೋಹರ ಮಹಾಮಹಿಯನ್ನುಳ್ಳನಹುದೋ ಉದಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು