ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನರಸಿಂಗಪುರ ವಾಸ | ಕಯಾಧು ಶಿಶುಪೋಷಕರುಣಾಮಯ ಸುವಪುಷ | ಪರಿಪಾಲಿಸು ಮೇಶ ಪ ಶರಧಿಜೆ ಲಕುಮೀಶ ಮೃತ್ಯುಂಜಯಗೆ ಬಿಂಬಶರಣ ಜನಾಬ್ದಿ ಭೇಶ | ಸರಸಿಜ ಭವಾದೀಶ ಅ.ಪ. ಕೃಷ್ಣಾತೀರ ವಾಸ | ಕೃಷ್ಣೆಯ ಮಾನ ಪೋಷಜಿಷ್ಣು ಸಾಹಸ ಭಾಸ | ವೃಷ್ಣಿ ಕುಲಕೆ ಭೂಷ 1 ಕೋಳ ನೃಹರಿ ಕಾಯಿ 2 ಶುಭ ಕಾಯ ಹೇಮ ಕಶಿಪು ಕಾಯನೇಮದೊಳಗೆ ಶೀಳ್ದ | ಕಾಮಿತ ಫಲಪ್ರದ 3 ಕಾಡುವ ರಕ್ಕಸನ | ಒಡಲ ಶೀಳಲು ಬಾಹುಷೋಡಶ ಧರಿಸಿದ | ಗಾಢ ಕಾರಣವೇನೊ 4 ದರ್ಶದಿನದೊಳಾ | ದರ್ಶ ದಾಸರ ದಿನ ದರ್ಶನ ನೀನಿತ್ತು | ಸ್ಪರ್ಶ ಪೂಜೆಯ ಕೊಂಡೆ5 ಜ್ವಾಲಾ ನೃಕೇಸರಿ | ಹಾಲಾಹಲವು ಭವಜಾಲ ದೊಳ್ಹಾಕದಿರು | ಕೇಳುವೆ ವರ ನಿನ್ನ 6 ಗೋವರ್ಧನೋದ್ದರ | ಗೋವ್ಗಳ ಪಾಲ ಗುರುಗೋವಿಂದ ವಿಠಲನೆ | ಭಾವದೊಳಗೆ ತೋರೊ 7
--------------
ಗುರುಗೋವಿಂದವಿಠಲರು
ಬದರೀ ಪ್ರಸನ್ನವಿಠಲ | ಮುದದಿ ಪೊರೆ ಇವನಾ ಪ ವಿಧಿ ಭವಾದೀ ವಂದ್ಯ | ಸಕಲ ಜಗತ್ರಾಣಅ.ಪ. ಬುದ್ಧಿಯಲಿ ನೀ ಸ | ದ್ಭುದ್ಧಿ ಪ್ರೇರಕನಾಗಿಮಧ್ವಮತ ದೀಕ್ಷೆಯಲಿ | ಬದ್ಧವೆನಿಸಿವನಾಹೆದ್ದಾರಿ ಮೀರದಲೆ | ಶುದ್ಧ ಸಾಧನಗೈಸಿಉದ್ಧಾರ ಮಾಡೋಹರಿ | ಬದರೀ ನಿವಾಸ 1 ಗುರುಹಿರಿಯನುಸರಿಪ | ವರಮತಿಯ ಕರುಣಿಸುತತರಳನನು ಕೈಪಿಡಿದು | ತೋರೋ ಸನ್ಮಾರ್ಗಅರಹುಲೇನಿಹುದಿನ್ನು | ಸರ್ವಜ್ಞ ನೀನನ್ನುದರ್ವಿ ಜೀವನ ಕಾವ | ಹವಣೆ ನಿನದಲ್ಲೇ 2 ಸತ್ಸಂಗ ಇವಗಿತ್ತು | ಕುತ್ಸಿತವ ಹೊರದೂಡಿವತ್ಸಾರಿ ಶ್ರೀಹರಿಯೆ | ವತ್ಸನ್ನ ಪೊರೆಯೇ |ಮತ್ಸಕೇತನ ಜನಕ | ಉತ್ಸವದಿ ಮೆರೆವಂಥಸತ್ಸ್ವಭಾವನೆ ದೇವ | ಭಿನ್ನವಿಪೆ ನಿನಗೆ 3 ಜ್ಞಾನ ಭಕ್ತಾದಿಗಳ | ನೀನಾಗಿ ಕೊಟ್ಟವಗೆಮಾನನಿಧಿ ಪೊರೆಇವನ | ಧೀನಜನಬಂದೊಕಾಣೆ ಮೂರ್ಲೋಕದೊಳು | ನಿನ್ನಂಥ ಕರುಣಿಗಳಶ್ರೀನಿವಾಸನೆ ತೋರೋ | ಹೃದ್ಗುಹದಿ ಇವಗೇ 4 ಸುಪ್ತೀಶ ನೀನಾಗಿ | ಗೊತ್ತು ಮಾಡ್ಡಂಕಿತವಇತ್ತಿಹೆನೊ ತರಳನಿಗೆ | ವ್ಯಾಪ್ತ ಮೂರುತಿಯೇಇತ್ತು ಮನದಿಪ್ಟವನಾ | ಎತ್ತು ಭವದಿಂದೆಂದುಗೋಪ್ತ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 5
--------------
ಗುರುಗೋವಿಂದವಿಠಲರು
ಬಾ ಬಾ ಬಾರೈಯ್ಯಾ ಶ್ರೀ ಗಿರಿದೊರೆಯೆ ಸಿರಿ ಹರಿಯೆ ಚಿ ಪ ನೀ ಬರುವೆಂದಬುಜಾಭವಾದೀ ಸುರರು ಕಾದೂಕೊಂಡಿಹರು ಶ್ರೀ ಭೂಮಿ ಸಹಿತದಿ ಶ್ರೀ ಗಿರಿಯಿಳಿದು ಈ ಭವನವನು ನೀ ಪಾವನ ಮಾಡಲು ಅ.ಪ ಕರೆದರೆ ಬರೆ ಯಾಕೊ ಬಡವರೊಳೀಪರಿಯ ಪಂಥವು ಸಾಕೊ ಸುಲಭನಾಗಿರಬೇಕೊ ಕೊಡುವ ದೊರೆಯೆಂದು ದೃಢದಿ ತಿಳಿದು ನಿ ನ್ನಡಿ ಬಿಡದೆ ಬಲು ಕಾಡದೆ ಬಿಡುವರೆ 1 ಭವ ಶರಧಿಗೆ ನಾವೆ ಬಡವರಾದರೀಯೂ ನೀನಲ್ಲವೆ ಕೊಡೆನಗೆ ನಿನಸೇವೆ ಒಡೆಯ ನೀನಲ್ಲದೆ ಬಡದೇವತೆಗಳು ಕೊಡಬಲ್ಲವೆ ಪೇಳು ತಡಮಾಡದೆ ನೀ 2 ಹದಿನಾಲ್ಕು ಲೋಕದೊರೆಯು ನೀನು ಎನುತ ತಿಳಿದು ನಾನು ಪದುಳದಿ ನಿನ್ನ ಸೇವಿಸ ಬಂದೆನು ಕೇಳಯ್ಯಾ ಇನ್ನು ಪದುಮನಾಭನೆ ನೀ ಸದಯದಿ ನೋಡಿ ಇದನೆ ಕರುಣಿಸು ನಿನ್ನ ಪದಸೇವೆಯನು 3 ಸಿರಿ ಧರೆ ನಾರಿಯರ ನಾ ಕೇಳಲಿಲ್ಲಾ ಕೊಟ್ಟರು ಬೇಕಿಲ್ಲ ದೊರೆತನ ಬಯಸಿ ನಾ ಬೇಡ ಬಂದಿಲ್ಲ ಕೇಳೆನ್ನೆಯ ಸೊಲ್ಲ ಪರಿ ಬೇಡುವೆ ನಿನ್ನ ಪದಸೇವಕರ ಪರಿಚಾರಕರನೆನಿಸೊ ಪರಮ ದಯಾಳೊ 4 ಮಾತಿದು ಪುಸಿಯಲ್ಲ ನೀರಜ ಭವಾಂಡದಿ ನಿನಗೆದುರ್ಯಾರಿಲ್ಲ ರಂಗೇಶವಿಠಲ ದೂರ ನೋಡುತಲಿ ಘೋರಪಾತಕರೊಳು ಸೇರಿಸದೆನ್ನನು ಪಾರುಮಾಡಲು ಬೇಗ5
--------------
ರಂಗೇಶವಿಠಲದಾಸರು