ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾಜಗದಯ್ಯಾ ಪ ಅಯ್ಯಾ ಜಗದಯ್ಯಾ ಜೀಯಾನಂದ ನಿಮ್ಮ ಮಹಿಮೆಯ ಅಜ ಭವಾದಿಗಳಿಗೆ ತಾಯಿಯ ಮರೆವ ಶಿಶುವಿನ ಪರಿದಣಿದೆನಾ ಪ್ರೀಯದಲಿ ಸಲಹವು ಅವಗುಣ ನೋಡದೇ 1 ಧರೆಯೊಳಗ ಸಕಲಪತಿತರನ್ನು ಉದ್ಧರಿಸಲ್ಕೆ ಪರಬೊಮ್ಮತಾನೊಂದು ರೂಪನಾಗಿ ಕರುಣದಿಂದಲಿ ಅವತರಿಸಿದನೆಂದೆನ್ನದೆ ನರನೆಂದು ಬಗೆವವನು ಗುರುತಲ್ಪಕಾ2 ಸಾಕಾರ ನಿಮೈಲನಾಗಿ ಕ್ರೀಡಿಸಿದರೆಯು ಏಕ ಮೇವಾದ್ವಿತಿಯು ಶೃತಿಯೆನುತಿರೇ ಕಾಕು ಬುದ್ದಿಯಲಿ ಪರತರ ವಸ್ತು ನಿಮಗೆಂದ ಧಿಕ ಉಂಟೆಂಬುವ ಸುರಾಪಾನಿಯು 3 ಗಗನದಂದಲಿ ಸಕಲಾತೀತನಾಗಿನೀ ಮಿಗಿಲೆನಿಸಿ ಸಂಸಾರ ಸ್ಥಿತಿಯಲಿರಲು ಅಗಣಿತತೆ ಗುಣಬಂದನವ ಕಲ್ಪಿಸುವ ಜಗದೊಳಗ ಬ್ರಹ್ಮತ್ಯಕಾರನವನು 4 ಎನಗ ತಾರಕ ವಸ್ತು ಇದೆಯೆಂದು ನಿಶ್ಚೈಸಿ ತನು ಮನರ್ಪಿಸಿ ನಿಮ್ಮ ಚರಣಾಬ್ಜಕೆ ಘನನಂಬಿ ಶರಣವನು ಪೊಕ್ಕುನೆಲೆಗೊಂಬುದಕೆ ಅನುಮಾನ ವಿಡಿವವನ ಸ್ವರ್ಣಸ್ತೇಯಾ5 ಇಂತು ಪರಿಯಾದಾ ನಾಲ್ವರ ಸಂಗಡದಲಿ ಅ ತ್ಯಂತ ಹರುಷದ ತಾವ ಬಾಳುತಿಹನು ಅಂತಿಜನ ಸಮನಾದ ಸರ್ವದ್ರೋಹಿಯವನು ಸಂತತ ಬುಧ ಜನರು ಯನುತಿರುವರು 6 ಎಂದೆಂದು ಈ ಪಂಚ ಮಹಾಪಾತಕಿಳಗಳ ಮುಖ ತಂದೆ ತೋರಿದಿರೆನ್ನ ನಯನಗಳಿಗೆ ಎಂದು ಬಿಡದೇ ಕಾಯೋ ಮಹಿಪತಿ ಸುತ ಪ್ರಾಣ ಛಂದದಲಿ ಮಂದಮತಿ ತನ ಹರಸಿಯನ್ನಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀನೆ ಮಾಡಿದ ಲೀಲೆ ಬಲು ಸುಖವೊ | ಆನೇನು ದು:ಖವನು ಬಡುವುದಿಲ್ಲವೋ ಜೀಯ |ಪ ತೋಟವನು ಮಾಡಿಸಿ ಅದರೊಳಗೆ ಒಂದು ಫಲ | ನಾಟಿಸಲು ಬೆಳೆದ ಫಲ ಪಕ್ವವಾಗೆ | ನೀಟಾದ ಫಲವೆಂದು ಅರಸು ಕೊಯ್ ತರಿಸಲು ತೋಟಿಗಾಗೇನು ದು:ಖ ಅರಸಿನಿಂಗೇನೈಯ1 ನಿನ್ನ ಸಂಕಲ್ಪನೆ ಸ್ಥಿರವಾಗಿ ಇದೆ ಇದೆ ಅನಂತ ವೇದಗಳು ಪೊಗಳೂತಿವಕೊ ಪನ್ನಗಶಯನನೆ ನೀನು ಮಾಡಿದ ಕ್ಲುಪ್ತ ಅನ್ಯಥಾವಾಗುವದೆ ಅನುಭವಾದಿಗಳಿಗೆ 2 ಸುಖ ದು:ಖವೆ ಎರಡು ನಿನ್ನ ವಶವಾಗಿದೆ ಸಖನಾಗಿ ಸುಖ ಉಣಿಸಲು ಹಿಗ್ಗುವೆ ದು:ಖ ತಂದಿತ್ತರೆ ಅಳಲಿ ಬಳಲುವದ್ಯಾಕೆ ಅಖಿಳ ನೀನಾವದಿತ್ತದೇ ಬಲು ಲೇಸು 3 ನೀನೆ ಕಲ್ಪಿಸಿದರೆ ಸೈರಿಸಲಾರದೆ ವೇಗ | ನಾನು ವ್ಯಧಿಕರಣ ಪೇಳಿದರಾಯಿತೆ | ಆನಂದಕೆ ಹ್ರಾಸ ಬರುವುದೆ ಶಾಶ್ವತ | ಏನಾದರೇನು ನೀನಾಡಿದಾಟವೆ ಸಮ್ಮತ | 4 ಸತ್ಪಾತ್ರರಾ ನೋಡಿ ದಾನವಿತ್ತರೆ ಅವಗೆ | ಉತ್ತಮಾ ಪದ ಉಂಟು ಪುಶಿಯಲ್ಲವೋ | ಸತ್ಪಾತ್ರ ನೀನೆಂದು ಪುತ್ರಾಖ್ಯ ಧನವಿತ್ತೆ | ಉತ್ತುಮಾ ಗತಿ ನೀಯೋ ವಿಜಯವಿಠ್ಠಲ ಕರುಣಿ 5
--------------
ವಿಜಯದಾಸ
ಬಂದು ನಿಲ್ಲೋ | ಕಣ್ಣ ಮುಂದೆ ಪ ಬಂದು ನಿಲ್ಲೋ ನಿನ್ನ ಪಾದಕ್ಕೆ ವಂದಿಪೆ ಇಂದಿರೆಯರಸಾ ಗೋವಿಂದ ಮುಕುಂದಾ ನೀ ಅ.ಪ. ಅರಳಿದ ಕೆಂದಾ | ವರೆಯ ಧಿಕ್ಕರಿಸುವ ಚರಣಾರವಿಂದವ | ನಿರುತ ತೋರು ನೀನು 1 ಭ್ರಮರ ಕುಂಡಲ ಮಂಡಿತ || ಮೇಲಾದ ರಾಕೇಂದು | ಮುಖವ ತೋರಿಸುತಲೀ2 ಪದುಮನೇತ್ರನೆ ನಿನ್ನ | ಸದನವೆನುತಯೆನ್ನ || ಹೃದಯದೊಳಗೆ ನಿಂತು ನಾ | ಮುದದಿ ಭಜಿಸುವಂತೇ 3 ಕರಿಯ ಮೊರೆಯ ಕೇಳಿ | ಕರುಣದಿಂ ಬಂದಂತೆ || ಕರೆದಾಗ ನಿನ್ನ ದಿವ್ಯ | ಚರಣಾವ ತೋರಿಸುತಾ4 ಅಜಭವಾದಿಗಳಿಗೆ | ನಿಜಪದವನಿತ್ತಂತೆ || ಭಜಿಪ ಭಕ್ತರಿಗೊಲಿವ | ವಿಜಯವಿಠ್ಠಲರೇಯಾ5
--------------
ವಿಜಯದಾಸ
ಲಕ್ಷ್ಮೀದೇವಿಯ ಪ್ರಾರ್ಥನೆ ಶ್ರೀನಿವಾಸನ ಕರುಣಾನು ಸಂಸರಣಿ ಜ್ಞಾನ ಭಕ್ತಿಗಳನ್ನು ಪಾಲಿಸಂಭರಣಿ ಪ. ಅಜಭವಾದಿಗಳಿಗೆ ನಿಜಪದದಾಯಿನಿ ವೃಜಿನ ಸಮೂಹ ನಿವಾರಿಣಿ ಕುಜನ ಕುಠಾರಿಣಿ ಕುಂಜರ ಗಮನೆ ಪಾಲು ದಧಿವಾಸನ ಕೂಡಿ ಸದನದಿ ನೆಲೆಗೊಳ್ಳೆ 1 ಆರಿಗೆ ನಿನ್ನ ಕರುಣಾರಸ ದೊರೆವದೊ ನೀರಜಾಲಯೆ ನಿನ್ನ ಸೇರಿಕೊಂಡಿಹ ಎನ್ನ ವೈರಿ ಜನರು ಬೇಗ ಗಾರಾಗದುಳಿವರೆ 2 ನೀನೊಲಿಯಲೂ ಸರ್ವ ಮಾನವರೊಳಗತಿ ಮಾನ ಮಹತ್ವಾದಿ ಸದ್ಗುಣವೂ ತಾನಾಗಿ ಬರುವವಿಂನೇನೆಂದು ನಿನ್ನ ಮಹಿ- ಮಾನು ವರ್ಣನೆ ಮಾಳ್ಪೆ ದೀನ ದಯಾಕಲೆ 3 ಮಂದಿರದೊಳಗೆ ನೀ ನಿಂದು ನಗುತ ನಲಿ ವಂದ ನೋಡುತ ಮಿತ್ರ ಬಂಧುಗಳು ಮಂದರಧರ ತಾನೆ ನಿಂದು ರಕ್ಷಿಸನೆಂದಾ ನಂದ ಪೂರಿತ ಮನದಿಂದ ಸೇರಿರುವರು 4 ಸರಸಿಜನಾಭ ಶ್ರೀಹರಿಯು ನಿನ್ನನ್ನೆ ಮುಂ ದಿರಿಸಿ ಚತುರ್ವಿಧ ಪುರುಷಾರ್ಥವಾ ಕರುಣಿಪೆನೆಂದು ಕಂಠಸರದ ಮಧ್ಯೂರದಲಿ ಧರಿಸಿ ಶೋಭಿಪ ಶೇಷಗಿರಿವರ ಶಿಖರದಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಸಂಕಟ ಪರಿಹರಿಸಿ ಸಂಪದವಿಯ ಕೊಡುವ ಪ ಬಲನ ಭೂಸುರಹತ ಪೋಗಾಡಿದ ಮಂತ್ರ | ಬಲಿಯ ಕನಕ ಸ್ತೇಯ ಕಳದ ಮಂತ್ರಾ || ಬಲವಂತ ವೃಷಭನ್ನ ಸಂಹರಿಸಿದ ಮಂತ್ರಾ | ಕಲಿಯುಗದೊಳಗಿದೆ ಸಿದ್ಧ ಮಂತ್ರಾ || 1 ವೃದ್ಧ ಬ್ರಾಹ್ಮಣಗೆ ಪ್ರಾಯವನು ಕೊಟ್ಟ ಮಂತ್ರಾ | ಶುದ್ಧನ್ನ ಪರಿಶುದ್ದ ಮಾಳ್ಪ ಮಂತ್ರಾ | ಉದ್ಧರಿಸಿ ಕಾವ್ಯನ್ಯೊಂಚಿ ? ಮಾಡಿದ ಮಂತ್ರಾ | ಶ್ರದ್ಧೆಯನು ಪಾಲಿಸುವ ಸುಲಭ ಮಂತ್ರಾ2 ಗುರು ತಲ್ಪಕನ ದೋಷ ನಾಶನ ಮಾಡಿದ ಮಂತ್ರಾ | ಹರನ ಸುತ ಬರಲವನ ಪೊರೆದ ಮಂತ್ರಾ | ಸ್ಮರಿಸಲಾಕ್ಷಣ ಒಮ್ಮೆ ಮುಂದೆ ನಿಲುವ ಮಂತ್ರಾ | ಅರಸರಿಗೆ ವಲಿದಿಪ್ಪ ಆದಿ ಮಂತ್ರಾ 3 ಅಜ ಭವಾದಿಗಳಿಗೆ ಪಟ್ಟಗಟ್ಟಿದ ಮಂತ್ರಾ | ಗಜ ಮೊದಲಾದವರ ಕಾಯ್ದ ಮಂತ್ರಾ | ರಜ ದೂರವಾಗಿದ್ದ ರಮ್ಯವಾದ ಮಂತ್ರಾ | ಕುಜನ ಕುಲವನಕೆ ಕುಠಾರ ಮಂತ್ರಾ 4 ಪ್ರಣವ ಪೂರ್ವಕದಿಂದ ಜಪಿಸಲು ವೊಲಿವ ಮಂತ್ರಾ | ಅಣು ಮಹದಲೀ ಪರಿಪೂರ್ಣ ಮಂತ್ರಾ | ಸಿರಿ ವಿಜಯವಿಠ್ಠಲನ ಮಂತ್ರಾ | ಕ್ಷಣ ಕ್ಷಣಕೆ ಬಲ್ಲವರಿಗೆ ಪ್ರಾಣ ಮಂತ್ರಾ 5
--------------
ವಿಜಯದಾಸ