ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೈವಲ್ಯ ಮನದ ವೈಶಾಲ್ಯ ಧ್ರುವ ಅದ್ವೈತಾಗಮ್ಯಗೋಚರನದ್ವಿತೀಯ ಅಧ್ಯಾತ್ಮ ವಿದ್ಯದಾಗರ ಸಿದ್ಧರಪ್ರಿಯ ಸದ್ಗತಿ ಸುಖಸಾಗರ ಸದ್ಗುಣಾಲಯ ಬೋಧ ಪೂರ್ಣೋದಯ 1 ಆದಿತ್ಯಕೋಟಿ ಪ್ರಕಾಶ ಸದೋದಿತ ಸಾಧು ಹೃದಯನಿವಾಸ ಭೇದಾತೀತ ಶುದ್ಧಾತ್ಮ ಸುಖಸಂತೋಷ ಸದಾ ಸುಶಾಂತ ಸದಮಲಾನಂದಘೋಷ ಆದಿದೇವ ಸಾಕ್ಷಾತ2 ಕೈವಲ್ಯನಿಧಿ ನಿಶ್ಚಯ ದೇವಾಧಿದೇವ ಅಕ್ಷಯ ಶ್ರೀವಾಸುದೇವ ಭವಾತ್ಮ ಭಜಕಹೃದಯ ಸರ್ವರೊಳಿ ಹ್ಯ ಬಾಹ್ಯಾಂತ್ರ ಭಾಸುತಿಹ್ಯ ಮಹಿಪತಿ ಮನದೈವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಿಳಿ ಸತ್ಯರೂಪವÀ ಪರಮಾನುಭವವ ಸುವಿಚಾರದಿಂದ ಯೋಚಿಸು ಜೀವಾ ಪ ನಾ ನೀನು ಎನುವಾ ಇದು ಅದು ಎನುವ ನಾನಾತ್ಮಭಾವಾ ಪುಸಿಯಿದು ಜೀವಾ ಏನೊಂದು ಮಿಲ್ಲದೆ ತಾನುಳಿದಿರುವ ಸ್ವಾನುಭವಾತ್ಮಾ ಸತ್ಯನಾಗಿರುವ 1 ಕರ್ತೃವೆನಿಸದ ಭೋಕ್ತøವೆನಿಸದ ಅನಿಸಿಕೆಯಳಿದಾ ನಿತ್ಯನಿರಂಜನ ಮಾಯಾವಿಲಾಸದಿ ತೋರುವನೀಪರಿ ಕನಸಿನೊಲಿದುವೇ ಪುಸಿ ಈ ಜಗವು 2 ಅವಿಚಾರಗಳಿಗೆ ಬೇರಾಗಿ ತೋರೇ ಸುವಿಚಾರದಿಂ ನೋಡೇ ತಿಳಿವುದು ಇದುವೇ ಅದೇ ಪರಮಾತ್ಮನೇ ನೀನಿರುವಿಯಿದೋ ಗುರು ಶಂಕರರಾರ್ಯನ ವರಬೋಧವಿದೋ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಹ್ಯಾಗೆ ಕಾಂಬೆ ನಿನ್ನ ಪಾದವ ಶ್ರೀನಿವಾಸ ಯೋಗಿ ಗಮ್ಯ ರೂಪ ಮಾಧವಾ ರಾಗ ರೋಗ ಸಾಗರಸ್ತನಾಗಿ ಮುಳುಗಿ ಬಾಯ ಬಿಡುವೆ ನಾಗರಾಜಗೊಲಿದ ತೆರದಿ ಬೇಗಲೊದಗಿ ಬಂದು ಕಾಯೊ ಪ. ಮನಸು ಎನ್ನ ವಶಕೆ ಬಾರದೆ ಭಕ್ತಿ ಸಾ- ಧನಗಳೆನಗೆ ಸೇರಿ ಬಾಹದೆ ನೆನಸಿಕೊಳುವ ಕಾರ್ಯ ದೊರೆಯದೆ ಸರ್ವಕಾಲ ತನುವ ಕೆಡಿಸಿ ವ್ಯರ್ಥಮಾಡಿದೆ ಕನಲಿ ಕೂಗುತಿರುವ ಶಿಶುವ ಜನನಿ ಕರದೊಳೆತ್ತುವಂತೆ ಮೂರ್ತಿ ದೋರೊ 1 ಕಲಿಯ ಬಾಧೆಯಿಂದ ನೊಂದೆನು ಮಲಿನ ಮೋಹದೊಳಗೆ ನಿಂದೆನು ತ್ಯಾಜ್ಯವಾದ ಫಲಗಳೆಲ್ಲ ತಂದು ತಿಂದೆನು ಗಾಳಿಗೆ ಸಿಲುಕಿದೆಲೆಯ ತೆರದಿ ಹೊರಲುಗಾಣೆನೀ ದೇಹ ಪಾದ ನೆಳಲ ಬಯಸಿ ಬೇಡಿಕೊಳುವೆ 2 ಗಣನೆಯಿಲ್ಲವಾದ ಮರಗಳು ಇರಲು ಪುರು ತನುವಿನಂತೆ ಮುಖ್ಯವಾವದು ಅನುಭವಾತ್ಮ ಸುಖವನೀವದು ಆದರೇನು ಕನಸಿನಂತೆ ಕಾತಿರುವುದು ಪಾದ ವನಜಯುಗವನಿತ್ತು ಎನ್ನ ಮನದೊಳದಯವಾಗು ಮಾರಜನಕ ಮೂಡಲದ್ರಿವಾಸ3
--------------
ತುಪಾಕಿ ವೆಂಕಟರಮಣಾಚಾರ್ಯ