ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿ ತುತಿಸಿರೋ ರಾಘವೇಂದ್ರ ಧ್ವರಿಯಾ ಸನ್ಮುನಿ ಕುಲವರಿಯಾ ಪ ಅಂಬುಜನಾಭನಿಗತಿ ಪ್ರೀಯಾ ಸಜ್ಜನರಿಗೆ ಸಹಾಯ ಅ.ಪ ಕನಕಶಯ್ಯನ ತನುಜನಾಗಿ ಜನಿಸಿ ನರಹರಿಯನ್ನೆ ಒಲಿಸಿ ಅನುಜರಿಗನುದಿನ ತತ್ತ್ವವ ತಾಕಲಿಸಿ ಮನದಲಿ ಶ್ರೀಹರಿ ಪದವನ್ನೇ ಭಜಿಸಿ ವರ ಕರುಣವನೇ ಸಲಿಸಿ ವನಜಭವಾಂಡದಿ ಬಹು ಬಲ್ಲಿದನೆನಿಪ ನತಜನರಿಗೆ ಸುರÀ 1 ಕಾಮಧೇನು ಸುರತರುವಿಗೆ ಸಮನೀತ ಕಾಮಿತ ಫಲ ದಾತಾ ರಾಮ ನರಹರಿ ಕೃಷ್ಣರ ಪದ ದೂತ ಲೋಕದಿ ಬಹು ಖ್ಯಾತ ಕಾಮಿನಿ ಸುತ ಧನ ಧಾನ್ಯದ ವ್ರಾತ ನೀಡುವೊನತಿ ಪ್ರೀತ ಪ್ರೇಮದಿ ನಿಜಜನಸ್ತೋಮಕೆ ಬಹು ದಾತ ಯತಿವರ ಕುಲನಾಥ 2 ಪಾತಕವನಕುಲ ವೀತಿಹೋತ್ರನೆನಿಸಿ ಭೂತಪ್ರೇತ ಮಹ ಭೀತಿಯನೇ ಬಿಡಿಸಿ ರೋಗವಪರಿಹರಿಸಿ ಮಾತಪಿತರ ತೆರ ದೂತರ ರಕ್ಷಿಸಿ ಮನೋಚಿಂತೆಯನೆ ಬಿಡಿಸಿ ದಾತಗುರುಜಗನ್ನಾಥವಿಠÀಲ ಪದದೂತ ದಾತ 3
--------------
ಗುರುಜಗನ್ನಾಥದಾಸರು
ಬಾ ಬಾ ಬಾರೈಯ್ಯಾ ಶ್ರೀ ಗಿರಿದೊರೆಯೆ ಸಿರಿ ಹರಿಯೆ ಚಿ ಪ ನೀ ಬರುವೆಂದಬುಜಾಭವಾದೀ ಸುರರು ಕಾದೂಕೊಂಡಿಹರು ಶ್ರೀ ಭೂಮಿ ಸಹಿತದಿ ಶ್ರೀ ಗಿರಿಯಿಳಿದು ಈ ಭವನವನು ನೀ ಪಾವನ ಮಾಡಲು ಅ.ಪ ಕರೆದರೆ ಬರೆ ಯಾಕೊ ಬಡವರೊಳೀಪರಿಯ ಪಂಥವು ಸಾಕೊ ಸುಲಭನಾಗಿರಬೇಕೊ ಕೊಡುವ ದೊರೆಯೆಂದು ದೃಢದಿ ತಿಳಿದು ನಿ ನ್ನಡಿ ಬಿಡದೆ ಬಲು ಕಾಡದೆ ಬಿಡುವರೆ 1 ಭವ ಶರಧಿಗೆ ನಾವೆ ಬಡವರಾದರೀಯೂ ನೀನಲ್ಲವೆ ಕೊಡೆನಗೆ ನಿನಸೇವೆ ಒಡೆಯ ನೀನಲ್ಲದೆ ಬಡದೇವತೆಗಳು ಕೊಡಬಲ್ಲವೆ ಪೇಳು ತಡಮಾಡದೆ ನೀ 2 ಹದಿನಾಲ್ಕು ಲೋಕದೊರೆಯು ನೀನು ಎನುತ ತಿಳಿದು ನಾನು ಪದುಳದಿ ನಿನ್ನ ಸೇವಿಸ ಬಂದೆನು ಕೇಳಯ್ಯಾ ಇನ್ನು ಪದುಮನಾಭನೆ ನೀ ಸದಯದಿ ನೋಡಿ ಇದನೆ ಕರುಣಿಸು ನಿನ್ನ ಪದಸೇವೆಯನು 3 ಸಿರಿ ಧರೆ ನಾರಿಯರ ನಾ ಕೇಳಲಿಲ್ಲಾ ಕೊಟ್ಟರು ಬೇಕಿಲ್ಲ ದೊರೆತನ ಬಯಸಿ ನಾ ಬೇಡ ಬಂದಿಲ್ಲ ಕೇಳೆನ್ನೆಯ ಸೊಲ್ಲ ಪರಿ ಬೇಡುವೆ ನಿನ್ನ ಪದಸೇವಕರ ಪರಿಚಾರಕರನೆನಿಸೊ ಪರಮ ದಯಾಳೊ 4 ಮಾತಿದು ಪುಸಿಯಲ್ಲ ನೀರಜ ಭವಾಂಡದಿ ನಿನಗೆದುರ್ಯಾರಿಲ್ಲ ರಂಗೇಶವಿಠಲ ದೂರ ನೋಡುತಲಿ ಘೋರಪಾತಕರೊಳು ಸೇರಿಸದೆನ್ನನು ಪಾರುಮಾಡಲು ಬೇಗ5
--------------
ರಂಗೇಶವಿಠಲದಾಸರು