ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣದಿ ಒಲಿಯೆನಗೆ ಹೇ ಜನನಿ ನಿರಭಿಮಾನದ ದೇವಿಯೇ ಕರುಣಿಸು ಪ ಎನ್ನ ಬಂಧುಗಳೆಲ್ಲ ಕಣ್ಣೆತ್ತಿ ನೋಡದಿರಲಿ ಪನ್ನಂಗಶಯನನ ನೆನೆವೊಂದೆ ಎನಗಿರಲಿ 1 ಅವನಿಪರೆನ್ನನು ದಯೆದಪ್ಪಿ ನೋಡಲಿ ಭವಹರನಂಘ್ರಿಯ ಭಜನೆಸವಿಯೊಂದಿರಲಿ 2 ಭೂಷಣವಾಗಲಿ ದೂಷಣವಾಗಲಿ ಶ್ರೀಶ ಶ್ರೀರಾಮನೆನ್ನ ಧ್ಯಾನದೊಳೊಂದಿರಲಿ 3
--------------
ರಾಮದಾಸರು
ದಯವಾಗೋ ದಯವಾಗೋ ಪ ಹಯಮುಖ ಭಯಕೃದ್ಭಯನಾಶನ ಹರಿ ಅ ದ್ರೌಪದಿ ಮೊರೆ ಕೇಳ್ಯಾಪದ್ಬಾಂಧವ ನೀ ಪೊರೆದಯ್ ರಮಾಪತಿ ನಿರುತ 1 ಖರಮುರ ನರಕಾದ್ಯರ ಸಂಹರಿಸಿದೆ ಪರಮ ಪುರುಷ ಸಂಹರಭವಹರನೆ 2 ಶತ್ರುತಾಪಕ ಜಗತ್ರಯ ವ್ಯಾಪ್ತ ಪ ವಿತ್ರ ಪಾಣಿ ಸರ್ವತ್ರದಿ ಎಮಗೆ 3 ಎಷ್ಟೆಂದುಸುರಲಿ ದುಷ್ಟಜನರು ಬಲು ಕಷ್ಟ ಬಡಿಪ ಬಗೆ ಜಿಷ್ಣು ಸಾರಥಿಯೆ 4 ಗೋಭೂಸುರರಿಗೆ ಭೂಭುಜರ ಭಯ ಪ ರಾಭವಗೈಪುದು ಶ್ರೀ ಭೂರಮಣನೆ 5 ಅಪ್ರಮೇಯ ನೀ ಕ್ಷಿಪ್ರದಿ ಒಲಿದು ಜ ಯಪ್ರದನಾಗು ಸುಪ್ರಹ್ಲಾದವರದನೆ 6 ಯಾತಕೆ ಎಮ್ಮನು ಭೀತಿಗೊಳಿಪೆ ಪುರು ಹೂತವಿನುತ ಜನಗನ್ನಾಥವಿಠ್ಠಲಾ 7
--------------
ಜಗನ್ನಾಥದಾಸರು
ಮೂರ್ತಿ ದೇವರ ದೇವ ಕೃಪಾಕರನ ಪಾವನ ಚರಿತ ಪುಣ್ಯೋದಯನ ಭಾವಕಿ ಗಿರಿಜೆಯ ವರಸುತನ ಚೆಲುವ ಭಾವದಿಂದೊಪ್ಪುವ ಗಜಮುಖನಾ 1 ಚಂದ್ರಗೆ ಶಾಪ ನಿತ್ತಿಹನಾ ಚಂದಿಂದೊಪ್ಪುವ ಶುಭಕರನ ಕುಂಕುಮಚಂದನ ಲೇಪಿತನ ಕೃಪೆಯಿಂದ ಸದ್ಭಕ್ತರ ಪೊರೆವವನ 2 ಸುರಮುನಿ ನಮಿತ ಸರ್ವೇಶ್ವರನ ಭರಿತ ಸಿಧ್ಧಿಯ ನೀವ ಭವಹರನ ಭಾವಜ ವಿಷಯಕೆ ಸಿಲುಕದನ ಚೆಲುವ ಭಾವದಿಂದೊಪ್ಪುವ ಶುಭಕರನ 3
--------------
ಕವಿ ಪರಮದೇವದಾಸರು
ಶ್ರೀ ಮಹಾದೇವರು ಅಂಬಿಕಾಪತಿ ಶಂಭು ರಕ್ಷಿಸೆನ್ನಶಂಬರಾರಿ ಹರನೆ ನಂಬಿದೆನೊ ನಿನ್ನ ಪ ಭವ ಭ್ರಕುಟ ಭವಹರನೆ ನೀಎನ್ನಅವಗುಣಗಳೆಣಿಸದಿರು ಕವಿಗೇಯನೆ ||ಅವನಿಯೊಳು ಎನಗೀಗ ಸುವಿವೇಕಿಗಳ ಸಂಗಜವದಿ ಪಾಲಿಸು ಮುದದಿ ಜವನಾರಿ ಶಿವನೆ 1 ವಿನುತ ಇಳೆವರೂಥನೆ ನಿರುತತಲೆವಾಗಿ ಬೇಡುವೆನು ಸಲಹೆಂದು ನಾಎಲರುಣಿ ಭೂಷಣೆನೆ ಒಲಿದು ಪಾಲಿಸುದಯದಿಛಳಿಗಿರೀಶನ ಅಳಿಯ ನಳಿನಾರಿ ಧರನೆ 2 ಸಿರಿರಮಣ ಶಾಮಸುಂದರ ವಿಠಲ ಸಖನೆಮೊರೆ ಹೊಕ್ಕೆ ಮರೆಯದಿರು ಗರಗೊರಳನೆಕರುಣದಿಂದಲಿ ನಿನ್ನ ಚರಣ ಸೇವೆಯನಿತ್ತುಕರವಿಡಿದು ಕಾಪಾಡೊ ಕರಿಚರ್ಮಧರನೆ 3
--------------
ಶಾಮಸುಂದರ ವಿಠಲ
ಸುಮ್ಮನೆ ಹೋಗುತಾದಲ್ಲೋ ಇಷ್ಟಾರ್ಥಪಡಿದೇ ಸುಮ್ಮನೆ ಹೋಗುತಾದಲ್ಲೋ ಪ ಸುಮ್ಮನೆ ಹೋಗುತಾದೆ ಹೆಮ್ಮಾರಿಗೀಡಾಗಿ ಮರ್ಮವರಿತು ಪರಬ್ರಹ್ಮನ ಕೂಡದೆ ಅ.ಪ ಎಷ್ಟೋ ಸುಕೃತವಡೆದು ಈ ನರಜನ್ಮ ತೊಟ್ಟು ಸೃಷ್ಟಿಗೆ ಇಳಿದು ಹುಟ್ಟಿ ಬಂದಂಥ ಕಾರ್ಯ ಬಿಟ್ಟು ಮರವೆಗೂಡಿ ಕೆಟ್ಟು ಹೋಗ್ಯಾದೋ ವಯ ಕೃಷ್ಣಾರ್ಪಣೆನದೆ ಸುಟ್ಟು 1 ವಯವೆಂಬ ಧನ ಪಡೆದು ಈ ಮಹದನು ಭವದ ಸಂತೆಗೆ ಇಳಿದು ಭವದ ಜಯೆಂಬ ಅನುಭವದ ವ್ಯಾಪಾರ ಮಾಡಿ ಭವಹರನ ಕಾಣದೆ ಜವನಗೀಡಾಗಿ ತಾನು 2 ಅರಿವಿನಾಲಯ ಪೊಕ್ಕು ಸಂಸಾರವೆಂಬ ಮರೆವಿನ ಬಲೆಯೊಳ್ ಸಿಕ್ಕು ಪರಮಪುರುಷ ಸಿರಿಯರಸ ಶ್ರೀರಾಮನ ಚರಣಕಮಲಕ್ಕೆ ಸಲ್ವ ವರಮೋಕ್ಷ ಪಡೆಯದೆ ಲ
--------------
ರಾಮದಾಸರು
ಹರಿಯೆನ್ನೋ ಹರಿಯೆನ್ನೋ ಹರಿಯೆನ್ನೋ ಖೋಡಿ ಹರಿಯದಾಸರ ಸಿರಿಸಂಪದ ನೋಡಿ ಪ ಎರವಿನ ಸಿರಿಗೆ ನೀ ಮರುಳಾದಡಿ ಹರಿಯೆಂದು ನುಡಿಲಿಕ್ಕೆ ನೀನಗೇನು ಧಾಡಿ ಧರೆಯೊಳಾರಿಲ್ಲ್ಹರಿದಾಸರ ಜೋಡಿ ಮರುಳ ಯಮದೂತರಂಜಿ ಹೋಗುವರೋಡಿ 1 ಭವಚಕ್ರದೊಳುಬಿದ್ದು ಬೆಂಡಾದೆ ಕಾಗಿ ಅವನಿಸುಖ ನೀನಿನ್ನು ತಿಳಿವಲ್ಲಿ ಗೂಗಿ ಭವಹರನರ್ಚಿಸಿ ನೋಡೋ ದೃಢಮಾಗಿ ಭವತಾಪ ನಿನಗೆಂದಿಗಿರದೋ ನಿಜವಾಗಿ 2 ಮತಿಶೂನ್ಯನಾಗಧೋಗತಿ ಕಾಣಬೇಡೋ ಮತಿಯಿಂದ ನಿಜಸ್ಥಿತಿ ವಿಚಾರಮಾಡೋ ಕೃತಕೃತ್ಯರೆನಿಪ ಹರಿದಾಸರೊಳಾಡೋ ಪತಿತ ಶ್ರೀರಾಮನರಸಿ ಮುಕ್ತಿಯ ಕೂಡೋ 3
--------------
ರಾಮದಾಸರು