ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯರಾಯ ಭವಹರಣ ಪಾಲಿಸೆಮ್ಮ ಪ ಜಯದೇವಿಪ್ರತಿ | ರೂಪ ಗುಣಕ್ರಿಯ ರತಯತಿಯೆ ಅ.ಪ. ಅಮರೇಶ ಸ್ವರ್ಗಪದ ತೃಣಮಾಡಿ ಕ್ಷಿತಿಯಲಿ ಪಾದ ಸೇವೆಗಾಗಿ ಅಮಿತ ಭಾಗ್ಯವಿದೆಂದು ಪಶುವಾಗಿ ನೀನಿಂದು ಕಮಲ ಮಧು ಸೇವಿಸಿದೆ 1 ತೃತಿ ಈಶರೆನಿಸುವ ಅಗ್ನಿ ಗರುಡ ಮಹರುದ್ರ ಪ್ರತಿ ಕ್ಷಣದಿ ಅತಿ ಭಕುತಿ ಭಾರದಿಂದ ನತಿಸಿ ಸೇವಿಪ ಪರಮ ಗುರುಚರಣವಾಶ್ರೈಸಿ ದತಿ ಸುಕೃತನಿಧಿ ನಮ್ಮ ಅತಿದಯದಿ ಈಕ್ಷಿಪುದು 2 ಶ್ರೀ ಭೂಮಿ ದುರ್ಗೇಶನ ಮತ ಮಂಗಳ ಮೂರ್ತಿ ಶೋಭನಾಂತ ಗುಣಕ್ರಿಯ ನಿವಹಗಳನು ಅದ್ಭುತದಿ ಧರಿಸಿಹಾ ಮಧ್ವಕೃತ ಗ್ರಂಥಗಳ ಸದ್ಭಕ್ತಿಯಲಿ ಪೊತ್ತೆ ಸೌಭಾಗ್ಯನಿಧಿ ಗುರುವೆ 3 ಪವಮಾನರಾಯನಾ ಕೃಪೆಯೆಷ್ಟೊ ನಿನ್ನಲ್ಲಿ ಅವನಿಯೊಳು ಸಿದ್ಧಾಂತ ಗ್ರಂಥಗಳ ಟೀಕೆ ಕವಿಶ್ರೇಷ್ಠನಿರಲಾಗಿ ನಿನ್ನಿಂದ ರಚಿಸಿದ ತ್ರಿ ಭುವನ ಮಾನ್ಯನೆ ಧನ್ಯ ಧನ್ಯತೆಲಿ ಪೊರೆ ಎಮ್ಮ 4 ಪಾರ್ಥನಾದಂದು ಶ್ರೀ ಯದುಪತಿಯ ಸಖ್ಯವನು ಪೂರ್ತಿಪೊಂದಿದೆ ಸರ್ವ ಪುರುಷಾರ್ಥವೆಂದು ಸ್ವಾರ್ಥಮತಿಯ ಹರಿಯ ಒಲಿಸಿದಾ ಮಹಾನಿಪುಣ ಪಾದ ಪಾಂಶು ರಕ್ಷಿಸಲೆನ್ನ 5 ದೇವಕೀಸುತ ನಿನ್ನ ಸಖನೆಂದು ಪವಮಾನ ದೇವ ನಿನ್ನಲ್ಲಿ ಮಾಡಿದ ಪರಮ ಪ್ರೀತಿ ಪತಿ ದಾಸ್ಯ ಪೂರ್ಣಪ್ರದ ಆರೂಢ ಕೇವಲಾ ಕೃಪೆ ಮಾಡು ಹರಿದಾಸ ಮಣಿಗುರುವೆ 6 ಭಾರತೀಪತಿಗೊಡೆಯ ಜಯೇಶವಿಠಲನ ವೈರಾಗ್ಯ ಸಿದ್ಧಿಯಲಿ ಏಕಾಂತ ಪೊಂದಿ ಭವ ತರಣ ಸತ್ಪಾತ್ರ ವೃಷ್ಟಿ ಹರಿಗುರುಗಳೊಲಿವಂತೆ 7
--------------
ಜಯೇಶವಿಠಲ
ನಂಬಿದೆ ತವ ಚರಣ ಸಲಹೋ | ಅಂಬುಧಿಸುತೆ ರಮಣ ವಿನುತ ಮನ | ದ್ಹಂಬಲವನು ಸಲಿಸೆಂದು ನಿರುತ ನೆರೆ ಪ ತಾವರೆದಳನಯನಾ ಭವಹರಣ ತವಕದಿ ಸುಜ್ಞಾನವಗರೆಯೋ 1 ತಂದೆ ನಾ ಜನಿಸುತ ಭೂಸುರ ಜನ್ಮದಿ ಹಿಂದಿನ ಸುಕೃತದಲಿ ಬಂದೆನೊ ಭುವಿಯೊಳ್ ನೊಂದೆನೋ ಕರುಣಿಸು 2 ಹೇಸಿ ಸಂಸಾರದ ಪಾಶÀವ ಬಿಡಿಸುತ ಶ್ರೀಶಾಮಸುಂದರವಿಠಲನೆ ದೋಷವ ನೋಡದೆ | ಪೋಷಿಸು ಮರೆಯದಲೆ ವಾಸುಕಿಶಯನನೆ 3
--------------
ಶಾಮಸುಂದರ ವಿಠಲ
ಭವದ ಬಂಧವಿನ್ನೆನಗೆ ಯಾಕೆ ಭವಹರಣ ನಾಮ ಎನ್ನ ಜಿಹ್ವೆಯೊಳಗೆ ಇರುತಿರಲು ಪ ದುರಿತ ಭೀತಿ ಯಾಕೆ ಎನಗೆ ಕರ್ಮದ ಲೇಪವ್ಯಾಕೆ ಎನಗೆ ಕುಲ ಚಲಗಳ್ಯಾಕೆ ಎನಗೆ ಮಡಿಯು ಮೈಲಿಗ್ಯಾಕೆ ಅನುದಿನದಿ ಪಾವನಾತ್ಮಕನ ನೆನವು ಎನ್ನ ಮನದೊಳಿರಲು 1 ನಷ್ಟ ಪ್ರಪಂಚಂಟಿನ್ನ್ಯಾತಹೆÉ ಬಿಟ್ಟ ಬಡತನ ತಂತಿನಗ್ಯಾಕೆ ಹುಟ್ಟು ಸಾವು ಕಷ್ಟ ಮತ್ತ್ಯಾಕೆ ಕೆಟ್ಟ ಯಮನ ಅಂಜಿಕಿನ್ನ್ಯಾಕೆ ಸೃಷ್ಟಿ ಕರ್ತನ ಶಿಷ್ಟಪಾದ ನಿಷ್ಠೆಯೆನ್ನೊಳು ಗಟ್ಟಿಯಿರಲು 2 ನಿತ್ಯ ನೇಮ ಪೂಜೆ ಯಾಕೊ ಮತ್ತೆ ಜಪ ತಪವು ಯಾಕೊ ನಿತ್ಯ ನಿರ್ಮಲಾನಂದ ರೂಪಿ ಸತ್ತು ಚಿತ್ತನಂದದಾತ ಮುಕ್ತಿದಾಯಕ ಶ್ರೀರಾಮ ಪಾದ ಭಕ್ತನಾಗಿ ನಾ ಮೆರೆಯುತಿರಲು 3
--------------
ರಾಮದಾಸರು