ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆ ಚಂದಿರವದನೆ ಮಂದಗಮನೆ ಕಂದರ್ಪ ಕೋಟಿ ಲಾವಣ್ಯೆ ಪ ಮಂದನಾಗಿ ಭವಸಿಂಧುವಿಲಿ ಪೊಂದಿದೆ ಬಂದು ನೀ ಕರಪಿಡಿದು ಮುಂದಕೆ ಕರೆಯೆ ಅ.ಪ. ನಾಗವೇಣಿಯೆ ಸುರಶ್ರೇಣಿ ಅಗಣಿತಗುಣಮಣಿಯ ಹೊಗಳುವ ಮತಿ ನೀಡೆ ಕಲ್ಯಾಣಿ ಹಗಲಿರುಳು ನಡೆಯುವ ಬಗೆ ಬಗೆ ಕ್ರಿಯೆಗಳು ನಗಧರನೆ ಮಾಳ್ಪಾನೆಂಬ ಮಿಗೆ ಜ್ಞಾನ ಪಾಲಿಸೆ 1 ಸರಸಿಜೋದ್ಭವ ಮಾತೆ ವಿಖ್ಯಾತೆ ನಿಕರ ಸನ್ನುತೆ ಕಂಕಣಾಭರಣ ಭೂಷಿತೆ ಕರೆ ಕರೆಗೊಳಿಸುವ ಅಹಂ ಮಮತೆ ಶರಧಿಯು ತೆರೆಯಂತೆ ಬರುವುದು ಮರೆಸಿ ನೀ ಪೊರೆಯೆ 2 ಹರಿಗುಣ ಮಣಿಯೆಣಿಸುವ ಧೀರೆ ಪರಿಪರಿ ಅಲಂಕಾರೆ ಸ್ಮರಿಸದವರಿಗೆ ದೂರೆ ಅರಿದೂರ ವಿಜಯ ರಾಮಚಂದಿರವಿಠಲನ ನಿರುತ ಧೇನಿಸುವಂತೆ ಮರೆಯದೆ ಮಾಡೆ ತಾಯೆ 3
--------------
ವಿಜಯ ರಾಮಚಂದ್ರವಿಠಲ
ನೀನಲ್ಲದನ್ಯವೆನಗಿಲ್ಲ ನಾರದ ವರದಏನೆಂಬೆ ಸರ್ವರಿಗು ನೀನೆಯಹುದಾದಡೆಯು ಪಧನದ ಬಲವುಳ್ಳವರು ಧರ್ಮಗಳ ಮಾಡುವರುಮನದ ಮೇಧಾವಿಗಳು ಮಂತ್ರಿಸುವರು ತನುವಿನಲಿ ತ್ರಾಣಿಗಳು ತೀರ್ಥಗಳ ಪಡೆಯುವರುಅನುವದಿಸಿ ವೇದಗಳನವರಾಢ್ಯರಹರು 1ತನುವ ದಂಡಿಸಿ ಪೂಜ್ಯ ತನುವಾದರವರ್ಗುಂಟುಧನದ ತ್ಯಾಗದಿ ಮುಂದೆ ದೈನ್ಯ ಹರವುಮನವ ನಿಗ್ರಹಿಸಿದರೆ ಮುಖ್ಯ ಜ್ಞಾನವುಬಹುದುಇನಿತಾದರವರ್ಗಿರುವದೇನುಂಟು ನನಗೆ 2ಇತರ ಮಾತುಗಳಾಡದೀ ವಾಕನೊಳಗಿರಿಸಿಮಿತವಾಗಿ ಸತ್ಯಯುತಮಾಗಿ ನುಡಿಸಿಅತಿದೋಷಗಳು ಹೋಗಿಯವರ್ಗೆ ಮುಂದಣ ಭವದಿವಿತತವಾಹದವಿದ್ಯೆ ವಿವರಿಸಲಿದುಂಟೆ 3ಸತತವೂ ಧನವಿಲ್ಲ ಸಾಧು ಸಮ ತನುವಿಲ್ಲವ್ರತತೀರ್ಥಗಳಲಾಡಿದೊಡಲಿದಲ್ಲಮತಿಯಲ್ಲಿ ನೋಡಿದರೆ ಮಂತ್ರ ಮನನಗಳಿಲ್ಲಸ್ತುತಿ ಮಾಳ್ಪ ಸೂಕ್ತಗಳ ಸೊಲ್ಲು ತಾನಿಲ್ಲ 4ಹಿಂದಾದ ಮುಂದೆ ಬಹ ಹೊಂದಿದೀ ಭವ ಸಹಿತತಂದೆ ಕಣ್ದೆರಪಾಗಿ ತಾ ತೋರಿತುಬಿಂದು ಸಾಧನವಿಲ್ಲದೊಡಲೊಂದು ಲಭಿಸಿರಲುಬಂಧವನು ಬಿಡಿಸುವರೆ ಬಂದೆ ಗುರುವಾಗಿ 5ಪರಮ ಕರುಣಾಸಿಂಧು ಪತಿತ ಪಾವನ ಶೀಲದುರಿತಾಂಧಕಾರಕ್ಕೆ ದಿವಸಕರನುಹರಿ ದೀನವತ್ಸಲನು ಹಾಗನಾಥರ ತಾನುಹೊರೆವನೆಂಬೀ ಮಾತು ಹುಸಿಯಾಗಲಿಲ್ಲ 6ನನ್ನನೀಪರಿಯಲ್ಲಿ ನೋಡಿ ಸಲಹಿದ ಮೇಲೆುನ್ನೇಕೆ ಸಂದೇಹವಿದೆ ಚೋದ್ಯವುಸನ್ನುತನೆ ತಿರುಪತಿಯ ಸ್ವಾಮಿ ವೆಂಕಟರಮಣನಿನ್ನಡಿಯ ಸ್ಮರಣೆಯನು ನನಗಿತ್ತೆಯಾಗಿ 7ಕಂ|| ಭೃಗುವಾರದರ್ಚನೆಯನಿದಭೃಗುಸುತೆ ಸಹ ನೀನು ಕೊಳುತೆ ರಕ್ಷಿಸುಯೆನ್ನಂಹೊಗಲಾರೆನು ಭವಸಿಂಧುವನಿಗಮಾರಾಧಿತನೆ ದೇವ ವೆಂಕಟರಮಣಾಓಂ ಯಜ್ಞ ಭೋಕ್ತ್ರೇ ನಮಃ
--------------
ತಿಮ್ಮಪ್ಪದಾಸರು
ಭೋರನೆ ನಿಜಪರಿವಾರವೆಲ್ಲವೂ ಸೇರಿ ಪ. ಮಕರಕುಂಡಲಧರ ವಿಕಸಿತ ಮುಖಪದ್ಮ ಕೌಸ್ತುಭ ಶುಭ ವನಮಾಲಿ ಭಕುತ ವತ್ಸಲನೆಂಬ ಬಿರುದು ತೋರುತ ನಮ್ಮ ಶಕುತಿಗೆ ಸರಿಯಾದ ಸೇವೆ ಕೊಳ್ಳುವೆನೆಂದು 1 ಒಡೆಯನೀ ಗತಿಯೆಂಬ ಬಡವ ಭಕ್ತರನೆಲ್ಲು ಬಿಡನೆಂದು ಭವಸಿಂಧು ಪೊತ್ತನಿಂದು ತಡವ ಮಾಡದಲೆ ಸಂಗಡ ಬಂದೀ ನಿಲಯದಿ ನಡು ಮನೆಯಲಿ ನಿಂದು ಕೊಡುವೆ ಸೌಖ್ಯವನೆಂದು 2 ತುಳಸಿಧಾಮ ಸುಶೋಭಿತ ನಮಗೆ ಬೆಂ- ಬಲವಾಗಿರುವ ಸರ್ವ ಸ್ಥಳಗಳಲಿ ಅಲಸನಾಗದೆ ಶೇಷಾಚಲವಾಸನು ಶ್ರೀಭೂ- ಲಲನೆಯರೊಡಗೂಡಿ ನಲಿವ ಸಂಭ್ರಮದಿಂದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮನದಧಿಪ ಮಹದೇವ ಮೊರೆಯೆ ಕೇಳೊ ಪ ತಿಮಿರ ಸ್ಥಿತಿಯಲ್ಲಿ ಎದೆ ಒಡೆದು ನಿಂದಿಹೆನು ಅ.ಪ. ಮನಕರಣಗಳು ಎನ್ನ ತಮ್ಮ ಸೆರೆಯಲಿ ಇಟ್ಟು ಘನ ಯಾತನೆಯ ಪಡಿಸಿ ಮೂರ್ಛೆಗೊಳಿಸಿ ಕ್ಷಣ ಬಿಡದೆ ದಣಿಸುವುವು ಮೊರೆ ಇಡಲು ಮುಖವಿಲ್ಲ ಪ್ರಣಿತ ಪಾಲಕರಲ್ಲಿ ಸರಿ ಇಲ್ಲ ನಿನಗೆಂದು 1 ಪವಮಾನ ಪದಕಮಲ ಮಧು ಮತ್ತ ಮಹಭೃಂಗ ಹರಿದಾಸ ಶಿರೋರತ್ನ ಅಭಯದಾಯಿ ಶಿವತಮನೆ ನಿನ್ನಂಘ್ರಿ ರಜಲಕ್ಷ್ಮಿಯನ್ನು ಶಿರ ನಿತ್ಯ ಮಾಡೆನ್ನ ಕೃತಕೃತ್ಯ 2 ಗೌರೀಶ ಗುಣನಿಧಿಯೆ ಗುಪ್ತ ಮಂಗಳ ಮಹಿಮ ಶೌರಿ ಜಯೇಶವಿಠಲ ಧ್ಯಾನಲೋಲ ತಾರಕನೆ ಭವಸಿಂಧು ದಾಟಿಸುವ ಅಂಬಿಗನೆ ಕಾರುಣ್ಯಗರೆದೆನ್ನ ಹರಿಪಾದ ದಡಕೊಯ್ಯೊ 3
--------------
ಜಯೇಶವಿಠಲ
ಶುಕಮುನಿ ಕರ್ಣಾಧಾರನ ಕೂಡಿ ಅನುಗತ ಭವಸಿಂಧು ಭಯವ ದೂಡಿ ಪ. ಅಂತಪಾರವೆಂದಿಗಿಲ್ಲವು ನಾನಾ ಭ್ರಾಂತಿ ಸುಳಿಗಳು ತುಂಬಿರುವವು ಚಿಂತಾಪರಾಕ್ರಾಂತಿಯಳವು ಪೋಕ ತಿಮಿರ ಬಾಧೆ ಬಹಳವು ಅಂತರಂಗದಿ ಲಕ್ಷ್ಮೀಕಾಂತನೆಂಬ ನಾವೆ ಯಂತಾದರು ತಂದು ಪಂತರಗೊಳಿಸುವ 1 ಸ್ವರ್ಗಾದಿ ಸುಖವೆಂದು ದ್ವೀಪವು ನಾನಾ ಕರ್ಮ ಕಲಾಪವು ನಿರ್ಗಮಗೊಳುವ ಸಂತಾಪವು ವೈರಿ ಜನಿತ ಮತಿಲೋಪವು ಇಂತು ದೀರ್ಘವಾದ ದುಃಖ ವರ್ಗ ತಪ್ಪಿಸಿ ಶ್ರೀ ಭೂ ದುರ್ಗಾವರ ಸಂಸರ್ಗವಿತ್ತು ಕಾವ 2 ತಾನೆ ಕರ್ತುವೆಂದು ಪೇಳದೆ ಮೋಹ ಧಾನೀ ಕೂಪದ ಮಧ್ಯ ಬೀಳದೆ ಹೀನ ಕರ್ಮಗಳನ್ನು ಬೆಳಸದೆ ಸವ ಮಾನ ಜನ ವಿರೋಧ ಮಾಡದೆ ದೀನಬಂಧು ಸರ್ವದಾನವಾರಿ ಲಕ್ಷ್ಮಿ ಪ್ರಾಣನಾಯಕ ವೆಂಕಟೇಶನ ನೆನೆಯಿಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬಾವಸುದೇವ ಸುತನ ಕಾಂಬುವೆನು ಪ ಭವ ವಿಷಯ ವಾರುಧಿಯೊಳಗೆಶಶಿಮುಖಿಯೆ ಕರುಣದಿ ಕಾಯೆ ಅ.ಪ. ಚಾರು ಚರಣಗಳ ಮೊರೆ ಹೊಕ್ಕೆಕರುಣದಿ ಕಣ್ಣೆತ್ತಿ ನೋಡೆ 1 ಮಂದಹಾಸವೇ ಭವಸಿಂಧುವಿನೊಳಗಿಟ್ಟುಚಂದವೇ ಎನ್ನ ನೋಡುವುದುಕಂದನಂದದಿ ಬಾಲ್ಯದಿಂದ ಸೇರಿದೆ ನಿನ್ನಮಂದರಧರನ ತೋರಮ್ಮ 2 ಅಂದಚಂದಗಳೊಲ್ಲೆ ಬಂಧು ಬಳಗ ಒಲ್ಲೆಬಂಧನಕೆಲ್ಲ ಇವು ಕಾರಣವುಇಂದಿರೇಶನ ಪಾದದ್ವಂದ್ವವ ತೋರಿ ಹೃನ್ಮಂದಿರದೊಳು ಬಂದು ಬೇಗ 3
--------------
ಇಂದಿರೇಶರು