ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡು ಬ್ಯಾಗಭೀಷ್ಟವ ತ್ವರದೀ - ನೀ ಸನ್ಮನದೀ ಪ ಕೊಡುವೊದೆನುತ ನಿನ್ನಡಿಯನು ಭಜಿಸುವ ಬಡವನ ಕರವನು ಪಿಡಿದೀ ಕಾಲದೀ ಅ.ಪ ವಡೆಯ ನೀನೆನುತತಿ ಹರುಷದಲಿ ನಂಬಿದೆ ನಿನ್ನಾ ಬಿಡದಲೆ ಪೊರೆ ಎನ್ನ ಕರುಣದಲಿ ಎನ್ನಯ ಕರವ ಪಿಡಿದು ಭವಶ್ರಮ ಕಳಿಯುತಲಿ - ಬಹು ತೋಷದಲೀ ನುಡಿದ ವಚನವ ಚಿತ್ತಕೆ ತಂದು ಪತಿ ಗುರುರಾಯನೆ ನೀ 1 ನಮಿಪ ಜನರಿಗೆ ಸುರಧೇನು ಭಜಿಸುವ ಜನಕೆ ಸುಮನಸೋತ್ತಮ ವರತರು ನೀನು - ಚಿಂತಿಪ ಜನಕೆ ಅಮರೋತ್ತಮ ರತುನವು ನೀನು - ಎನುತಲಿ ನಾನು ಅಮಿತ ಮಹಿಮವ ತೋರುತಲೀಗ ಶ್ರಮವ ಕಳೆದು ಸುಖಸುರಿಸುತ ನೀ 2 ಭೂತಳ ಮಧ್ಯದಲತಿ ಖ್ಯಾತ - ನೆನಿಸಿದ ನಾಥ ಪಾತಕ ಕುಲವನ ನಿರ್ಧೂತಾ - ಮಾಡುತ ನಿಜಪದ ದೂತಜನ ತತಿಮನೋರಥ - ಪೂರ್ತಿಪ ದಾತಾ ವಾತ ಗುರುಜಗನ್ನಾಥ ವಿಠಲಗತಿ ಪ್ರೀತಿಪಾತ್ರ ಸುಚರಿತ್ರ ಸುರಮಿತ್ರ3
--------------
ಗುರುಜಗನ್ನಾಥದಾಸರು
ನಿತ್ಯ ಪ ಭಾರತಿ ಭಾಸ್ವರಕಾಂತೆ ನಿನ್ನ ಸಾರುವೆ ಸತತ ನಿಶ್ಚಿಂತೆ ಆಹಾ ವಾರಿಜಸಮಪಾದ ತೋರಿಸು ಮಮ ಸುಹೃ - ನಿತ್ಯ ಗಾರುಮಾಡದೆ ಜನನಿ ಅ.ಪ ಹರಿಯ ಪಟ್ಟದ ನಿಜರಾಣಿ ಎನಗೆ ಹರಿಯ ತೋರಿಸೆ ಹೇ ಕಲ್ಯಾಣಿ ನಿನಗೆ ಕರುಣಿಯೆ ಕೋಕಿಲವಾಣಿ ಆಹಾ ಹರಿಹರಾದ್ಯನಿಮಿಷ ಕರಕಮಲಪೂಜಿತೆ ವರಭಾಗವತರಗ್ರೇಸಳೆಂದು ನಮಿಸುವೆ 1 ಮೂರೇಳು ತತ್ತ್ವಾಭಿಮಾನಿ ಎನಿಸಿ ಮೂರಾರು ಭಕುತಿಯಿಂದಲಿ ನೀ ಸತತ ಮೂರು ಜೀವರೊಳು ಪ್ರೇರಣಿಯಾಗಿ ಮೂರೊಂದು ಮೊಗನ ಕಲ್ಯಾಣಿ ಆಹಾ ಮೂರು ಬಗೆಯ ಜನಕೆ ಮೂರು ವಿಧದಿ ಗತಿ ಮೂರು ಕಾಲಕೆ ಇತ್ತು ಮೂರುಮಾಡುವಿ ದೇವಿ 2 ಮಾತರಿಶ್ವನ ಪಾದಕಮಲ ಯುಗಕೆ ನೀತಷಟ್ಟದಳೆ ನಿರ್ಮಲ ಮನಸು ಆತುರದಲಿ ಮಾಡು ವಿಮಲೆ ನಮಿಪೆ ಕಾತರಭವಶ್ರಮಶಮಲಾ ಆಹಾ ಜಾತರೂಪೋದರತಾತ ಶ್ರೀ ಗುರುಜಗ - ನ್ನಾಥವಿಠಲಗೆ ನೀ ದೂತನೆನಿಸು ಎನ್ನ 3
--------------
ಗುರುಜಗನ್ನಾಥದಾಸರು
ಬಂದು ಸಂಸಾರದಿ ನೊಂದು ತಾಪತ್ರಯದಿ ಬೆಂದು ಕಂದಿ ಕುಂದಿದೆ ದೇವಾ ಪ ಪರಮ ಕರುಣಿಯೆ ನಿನ್ನ ಶರಣು ಪೊಕ್ಕಾ ಜನರ ಪರಿಪಾಲಿಪನೆಂಬ ಬಿರಿದೊ ಅರಿದೂ ನೀನೆ ಮೆರೆಯದಲೆ ಸಲಹÀಬೇಕೆನ್ನ ನಿನ್ನ ಚರಣನೀರಜಯುಗ್ಮವನ್ನಾ ತೋರಿ ಹರುಷವನೆ ನೀಡೆಲೋ ಮುನ್ನಾ ಘನ್ನ ಪರಮಭಕುತಿ ವಿರಕುತಿ ನೀನೆ ಎನಗಿತ್ತೆನ್ನ ಹರುಷದಲಿ ಪಾಲಿಸೈಯ್ಯಾ ಜೀಯಾ 1 ಮಾನುಷಾಧಮ ನಾನು ಹೀನಮತಿಯಲಿ ನಿನ್ನ ಧ್ಯಾನವನು ಮಾಡದಲೆ ಬರಿದೆ ಜರಿದೆ ಇಂಥ ಹೀನಭವದೊಳಗೆ ಬಾಯಿದೆರದೆ ದಿವ್ಯ ಜ್ಞಾನಿಜನರನ್ನು ನಾ ಜರಿದೆ ಙÁ್ಞನ ಹೀನನಾಗಿ ಕಾಲಕಳೆದೆ ಇನ್ನು ಶ್ರೀನಿವಾಸನೆ ನಿನ್ನ ಧ್ಯಾನ ಮಾಡುವೆನೋವಿ - ಜ್ಞಾನವನೆ ಪಾಲಿಸಯ್ಯಾ ಜೀಯಾ 2 ಈಸುವತ್ಸರ ನಿನ್ನುಪಾಸನವ ಮಾಡದಲೆ ರಾಸಭಾನಂತೆ ಬದುಕಿದೆ ದೇವಾ ಈಗ ವಾಸವಾಗೆಲೋ ಮನದಿ ಸ್ವಾಮೀ ನಾನು ಈಸಲಾರೆನು ಭವದಿ ಪ್ರೇಮೀ ಎನ್ನ ಆಸೆ ಪೂರ್ತಿಸೊ ಅಂತರ್ಯಾಮಿ ಇನ್ನು ಎಸುವಿಧದಲಿ ಸರ್ವೇಶ ಪೇಳಲಿ ಮುನ್ನೆ ಈಶ ಭವಶ್ರಮ ಕಳಿಯೋ ಈಗಾ ವೇಗಾ 3 ಆವ ಕರ್ಮದಲಿಂದ ಈ ವಸುಮತಿಯಲ್ಲಿ ಈ ವಿಧಾದಿಂದ ಬಂದೆ ನಿಂದೆ ನಿನ್ನ ಸೇವಕಾನಲ್ಲವೆ ತಂದೆ ಎನ್ನ ಆವಾಗ ನೋಡುವಿಯೊ ಮುಂದೆ ಈಗ ಕಾವವನಾರು ನಾ ಎಂದೆ ವೇಗ ದೇವ ನಿನ್ನಯ ಪಾದಸೇವೆ ಸುಖವನು ಇತ್ತು ಆವ(ಅವ)ರಂತೆ ಪೊರೆಯೊ ಎನ್ನಾ ಚೆನ್ನಾ 4 ಉರಗಾದ್ರಿ ನಿಲಯನೆ ವರಭೋಗಿಶಯನನೆ ಪರಮಪುರುಷನು ಎಂದು ಮೊರೆಯಾ ಇಡುವೆ ನಿನ್ನ ಪರಿಪರಿಯ ಜನರನ್ನು ಪೊರೆವೆ ಎನ್ನ ತಿರಸ್ಕಾರ ಮಾಡುವುದು ಥsÀರವೇ ನಿನ್ನ ಮರಿಯಾದೆಯಲ್ಲಮರತರುವೇ ಕೃಪಾ ಕರನೇ ಸರ್ವರಿಗು ಸರಿಯಾಗಿ ಇರುತಿರುವಿ ಗುರುಜಗನ್ನಾಥ ವಿಠಲಾ ವತ್ಸಲಾ 5
--------------
ಗುರುಜಗನ್ನಾಥದಾಸರು